ಚೀನಾದೊಂದಿಗಿನ ‘ಹಂಬನಟೊಟಾ’ ಒಪ್ಪಂದ ಮಾಡಿಕೊಂಡಿರುವುದು ನಮ್ಮ ದೊಡ್ಡ ತಪ್ಪು !

‘ಭಾರತಕ್ಕೇ ಆದ್ಯತೆ’ ಈ ನೀತಿಯಿಂದ ಹಿಂದೆ ಸರಿಯದಿರಲು ಶ್ರೀಲಂಕಾ ನಿರ್ಧಾರ

ಭಾರತವು ಅನೇಕ ದೇಶಗಳಲ್ಲಿರುವ ಚೀನಾವಿರೋಧದ ಅಸಮಾಧಾನದ ಲಾಭವನ್ನು ಪಡೆದು ಆ ದೇಶಗಳನ್ನು ಸಂಘಟಿಸಿ ಚೀನಾಗೆ ಪಾಠ ಕಲಿಸಬೇಕು !

ಕೋಲಂಬೊ – ಶ್ರೀಲಂಕಾ ಸಾಲವನ್ನು ತೀರಿಸಲಾಗದೇ ತನ್ನ ‘ಹಂಬನಟೊಟಾ ಬಂದರ್’ಅನ್ನು ೯೯ ವರ್ಷಗಳ ಕಾಲ ಬಾಡಿಗೆಗೆ ನೀಡಬೇಕಾಯಿತು. ಚೀನಾದೊಂದಿಗಿನ ಈ ಒಪ್ಪಂದ ಮಾಡಿಕೊಂಡಿರುವುದು ನಮ್ಮ ದೊಡ್ಡ ತಪ್ಪಾಗಿತ್ತು ಎಂದು ಶ್ರೀಲಂಕಾದ ವಿದೇಶಾಂಗ ಸಚಿವ ಜಯನಾಥ ಕೋಲಂಬಗೆ ಇವರು ಒಂದು ವಾರ್ತಾವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇನ್ನುಮುಂದೆ ಶ್ರೀಲಂಕಾವು ‘ಭಾರತಕ್ಕೇ ಆದ್ಯತೆ’ (ಇಂಡಿಯಾ ಫಸ್ಟ್) ಈ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎಂದು ನಿರ್ಧರಿಸಿದೆ ಎಂದು ಹೇಳಿದರು.
ಕೊಲಂಬಗೆಯವರು ತಮ್ಮ ಮಾತನ್ನು ಮುಂದುವರಿಸುತ್ತಾ, “ಶ್ರೀಲಂಕಾ ತನ್ನ ಅಲಿಪ್ತವಾದಿ ನಿಲುವನ್ನು ಬಿಡುವುದಿಲ್ಲ. ಅದರೊಂದಿಗೆ ‘ಇಂಡಿಯಾ ಫಸ್ಟ್’ ಈ ನಿಲುವನ್ನೂ ಬಿಡುವುದಿಲ್ಲ. ರಣನೀತಿ ಭದ್ರತೆಯ ಸಂದರ್ಭದಲ್ಲಿ ‘ಇಂಡಿಯಾ ಫಸ್ಟ್’ನ ನೀತಿಯನ್ನು ಅವಲಂಬಿಸುವಂತೆ ರಾಷ್ಟ್ರಪತಿ ಗೊಟಬಯಾ ರಾಜಪಕ್ಷೆಯವರು ಆದೇಶವನ್ನು ನೀಡಿದ್ದಾರೆ. ನಮಗೆ ಭಾರತದಿಂದ ಯಾವುದೇ ರೀತಿಯ ಅಪಾಯವಿಲ್ಲ. ತದ್ವಿರುದ್ದ ಭಾರತದಿಂದಲೇ ನಮಗೆ ಹೆಚ್ಚು ಲಾಭವನ್ನು ಪಡೆಯಲಿಕ್ಕಿದೆ” ಎಂದು ಹೇಳಿದರು.

ಸದ್ದಿಲ್ಲದೆ ಶ್ರೀಲಂಕಾವನ್ನು ತನ್ನ ಬಲೆಗೆ ಸಿಲುಕಿಸಿದ ಚೀನಾ !

ಚೀನಾದಿಂದ ಶ್ರೀಲಂಕಾಗೆ ೫೦೦ ಮಿಲಿಯನ್ ದಶಲಕ್ಷ ಸಾಲ

ಚೀನಾದ ‘ಇಂಡೋ ಫೆಸಿಫಿಕ ಎಕ್ಸ್‌ಪೆಂಶನ್’ ಹಾಗೂ ‘ಬೆಲ್ಟ್ ಆಂಡ್ ರೋಡ್ ಇನಿಶಿಯೇಟಿವ್’ ಯೋಜನೆಗಳಲ್ಲಿ ಚೀನಾವು ಶ್ರೀಲಂಕಾವನ್ನೂ ಸೇರಿಸಿಕೊಂಡಿತು. ಶ್ರೀಲಂಕಾವು ಚೀನಾದಿಂದ ಸಾಲವನ್ನೂ ಪಡೆದಿತ್ತು. ಈ ಸಾಲವನ್ನು ತೀರಿಸಲು ಆಗದ್ದರಿಂದ ಶ್ರೀಲಂಕಾವು ತನ್ನ ಹಂಬನಟೊಟಾ ಬಂದರನ್ನು, ಅದೇರೀತಿ ೧೫ ಸಾವಿರ ಎಕರೆ ಭೂಮಿಯನ್ನು ಚೀನಾದ ‘ಮರ್ಚೆಂಟ್ ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ ಕಂಪನಿ’ಗೆ ೧.೧೨ ಅಬ್ಜ ಡಾಲರ್‌ಗೆ ೨೦೧೭ ರಲ್ಲಿ ೯೯ ವರ್ಷಗಳ ಕಾಲ ಒಪ್ಪಂದವನ್ನು ಮಾಡಿಕೊಂಡಿತ್ತು. ಈಗ ಶ್ರೀಲಂಕಾ ಈ ಬಂದರನ್ನು ಪುನಃ ತನ್ನಕಡೆ ತೆಗೆದುಕೊಳ್ಳಬೇಕಿದೆ. ಹಿಂದೂ ಮಹಾಸಾಗರದಲ್ಲಿ ಪ್ರಾಬಲ್ಯವನ್ನು ಇಡಲು ಈ ಬಂದರು ಯುದ್ಧದ ದೃಷ್ಟಿಯಲ್ಲಿ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತದೆ.