ಬೆಂಗಳೂರು ಗಲಭೆ ಪ್ರಕರಣ
‘ಬೆಂಗಳೂರು ಹಿಂಸಾಚಾರ ಮತಾಂಧರು ಮಾಡಿದರು’, ಇದು ಬಹಿರಂಗವಾಗಿದ್ದರಿಂದ ಒಬ್ಬಾನೊಬ್ಬ ಪ್ರಗತಿ(ಅಧೋಗತಿ)ಪರ ಅಥವಾ ಜಾತ್ಯತೀತರು ಈ ರೀತಿಯಲ್ಲಿ ಕಾನೂನುಮಾರ್ಗದಿಂದ ಸತ್ಯವನ್ನು ಕಂಡುಹಿಡಿಯಲು ಪ್ರಯತ್ನಿಸಲಿಲ್ಲ ! ರಾಜ್ಯ ಸರಕಾರವು ಆಳವಾಗಿ ಹೋಗಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುವುದು ಅಗತ್ಯವಿದೆ ! |
ಬೆಂಗಳೂರು – ಪಟ್ಟಣದ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿಯಲ್ಲಿ ಆಗಸ್ಟ್ ೧೧ ರಂದು ಮತಾಂಧರು ಮಾಡಿದ ಗಲಭೆಯು ಹಿಂದೂಗಳನ್ನು ಹಾಗೂ ಅವರ ನಾಯಕರನ್ನು ಗುರಿಯಾಗಿಟ್ಟುಕೊಂಡು ನಡೆಸಿದ ಸಂಘಟಿತ ಹಾಗೂ ಪೂರ್ವನಿಯೋಜಿತ ಗಲಭೆ ಎಂದು ‘ಸಿಟಿಝನ್ ಫಾರ್ ಡೆಮೊಕ್ರಸಿ’ ಎಂಬ ಸಂಘಟನೆಯು ನಡೆಸಿರುವ ಸತ್ಯಶೋಧನಾ ಸಮಿತಿಯು ತಮ್ಮ ವರದಿಯಲ್ಲಿ ಹೇಳಿದೆ. ನಿವೃತ್ತ ಜಿಲ್ಲಾ ನ್ಯಾಯಧೀಶ ಶ್ರೀಕಾಂತ ಡಿ. ಬಬಲಾಡಿ ನೇತೃತ್ವದ ಸತ್ಯಶೋಧನಾ ಸಮಿತಿಯಲ್ಲಿ ನಿವೃತ್ತ ಐ.ಎ.ಎಸ್. ಅಧಿಕಾರಿ ಮದನ್ ಗೋಪಾಲ, ನಿವೃತ್ತ ಅಧಿಕಾರಿ ಡಾ. ಆರ್. ರಾಜು, ಡಾ. ಪ್ರಕಾಶ, ಅದೇರೀತಿ ನಿವೃತ್ತ ಪೊಲೀಸ್ ಮಹಾಸಂಚಾಲಕರಾದ ಎಂ.ಎನ್. ಕೃಷ್ಣಮೂರ್ತಿ, ಪತ್ರಕರ್ತ ಆರ್. ಕೆ. ಮ್ಯಾಥ್ಯೂ, ಸಂತೋಷ ತಮಯ್ಯ, ಪ್ರಾ. ಡಾ. ಎಮ್. ಜಯಪ್ಪಾ, ಡಾ. ಎಚ್.ಟಿ. ಅರವಿಂದ, ಸಾಮಾಜಿಕ ಕಾರ್ಯಕರ್ತ ಮುನಿರಾಜು, ಜರೋಮ ಆಯಂಟೊ ಹಾಗೂ ನ್ಯಾಯವಾದಿ ಕ್ಷೆಮನರಗುಂದ ಅವರು ಈ ಸಮಿತಿಯಲ್ಲಿದ್ದರು. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾದ ಸಮಿತಿಯ ಸದಸ್ಯರು ೪೯ ಪುಟಗಳ ವರದಿಯನ್ನು ಹಸ್ತಾಂತರ ಮಾಡಿದರು.

A fact-finding committee on the Bengaluru Riots formed by Citizens for Democracy has said in its report that the riots were pre-planned and organised and specifically targeted certain Hindus in the areahttps://t.co/RY7XS9TGaV
— OpIndia.com (@OpIndia_com) September 4, 2020
ಸಮಿತಿಯ ಸದಸ್ಯರು ಮುಂದಿನಂತೆ ಹೇಳಿದರು,
೧. ಬೆಂಗಳೂರು ಗಲಭೆಯ ಘಟನೆ ಆಕಸ್ಮಿಕವಾಗಿ ನಡೆದಿರದೇ ಇದು ಪೂರ್ವಭಾವಿ ಸಿದ್ಧತೆ ಹಾಗೂ ಹಿಂದೂಗಳನ್ನು ಗುರಿಯಾಗಿಟ್ಟುಕೊಂಡು ನಡೆಸಿರುವ ಕೃತ್ಯವಾಗಿದೆ. ಇದು ಕೇವಲ ಧಾರ್ಮಿಕ ಗಲಭೆಯಾಗಿರದೇ ಇದು ವ್ಯವಸ್ಥೆಯ ವಿರುದ್ಧ ಗಲಭೆ ಮಾಡುವ ಪ್ರಯತ್ನವಾಗಿದೆ. ಸ್ಥಳೀಯರು, ಅದೇರೀತಿ ಬಂಧಿಸಲ್ಪಟ್ಟವರು ಸೇರಿ ಈ ಕೃತ್ಯವನ್ನು ಮಾಡಿದ್ದಾರೆ. ಸ್ಥಳೀಯರು ಈ ಗಲಭೆಯಲ್ಲಿ ಶಾಮೀಲಾಗಿದ್ದಾರೆ. ಅವರ ಪಾಲ್ಗೊಳ್ಳುವಿಕೆ ಇಲ್ಲದಿದ್ದರೆ ಇಷ್ಟು ದೊಡ್ಡ ಮಟ್ಟದಲ್ಲಿ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಒಂದು ನಿರ್ಧೀಷ್ಟ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ನಡೆಸಿರುವ ಕೃತ್ಯವಾಗಿದೆ. ಈ ಗಲಭೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಇಡೀ ದೇಶದ ಅರ್ಥವ್ಯವಸ್ಥೆಯನ್ನು ಹಾಳು ಮಾಡುವ ವ್ಯರ್ಥ ಪ್ರಯತ್ನ ಇದಾಗಿದೆ ಎಂದು ಹೇಳಬಹುದು.
೨. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಾಗೂ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದವರು ದೇಶದ ವಿವಿಧ ಭಾಗಗಳಲ್ಲಿ ನಡೆಸಿರುವ ಗಲಭೆಯಂತೆ ಬೆಂಗಳೂರಿನಲ್ಲಿಯೂ ಗಲಭೆ ಮಾಡಿದ್ದಾರೆ.
೩. ಸಮಾಜದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿ ಗಲಭೆ ನಡೆಸಲಾಗಿದೆ. ಉತ್ತರಪ್ರದೇಶದಲ್ಲಿ ನಡೆದ ಘಟನೆಯಂತೆ ಇಲ್ಲಿಯೂ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾಳು ಮಾಡಿದ್ದಾರೆ. ಸಣ್ಣ ಘಟನೆಯನ್ನು ನಡೆಸಿ ಸ್ಥಳೀಯರಲ್ಲಿ ಭಯದ ವಾತಾವರಣವನ್ನು ನಿರ್ಮಾಣ ಮಾಡುವ ಉದ್ದೇಶವಾಗಿತ್ತು. ಒಂದು ವೇಳೆ ಭಯದ ವಾತಾವರಣ ನಿರ್ಮಾಣ ಮಾಡಿದರೆ ಜನರಿಗೆ ದೇಶದ ವ್ಯವಸ್ಥೆಯ ಮೇಲಿನ ನಂಬಿಕೆ ಹೋಗಬಹುದು. ಈ ಕಾರಣದಿಂದಾಗಿಯೇ ಈ ಕೃತ್ಯ ನಡೆಸಲಾಯಿತು.
೪. ರಾಷ್ಟ್ರೀಯ ಮೌಲ್ಯಗಳ ವಿರುದ್ಧ ಜನರನ್ನು ಸಂಘಟನೆ ಮಾಡುತ್ತದೆ. ಈ ಬಗ್ಗೆ ನಾಗರಿಕರು ತಕ್ಷಣವೇ ಜಾಗೃತರಾಗುವುದು ಅಗತ್ಯವಿದೆ. ಇನ್ನು ಮುಂದೆ ಗುಪ್ತಚರ ವಿಭಾಗವನ್ನು ಆಧುನಿಕತೆಗೆ ತಕ್ಕಂತೆ ಬಲಪಡಿಸಬೇಕಾದ ಅಗತ್ಯವಿದೆ. ನಾವು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ವರದಿಯನ್ನು ಸಿದ್ಧಪಡಿಸಿದ್ದೇವೆ. ಸರಕಾರ ಈ ಬಗ್ಗೆ ಅಗತ್ಯಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ಹೇಳಿದರು.