|
ನವದೆಹಲಿ – ಭಾರತದಲ್ಲಿ ಹಿಂದುಗಳ ಜನಸಂಖ್ಯೆ ಶೇಕಡ ೮ ರಷ್ಟು ಇಳಿಕೆ ಆಗಿದೆ ಹಾಗೂ ಮುಸಲ್ಮಾನರ ಶೇಕಡಾ ೪೩.೨ ರಷ್ಟು ಏರಿಕೆ ಆಗಿದೆ. ೧೯೫೦ ರಲ್ಲಿ ಹಿಂದುಗಳ ಜನಸಂಖ್ಯೆ ಶೇಕಡ ೮೪.೮೮ ರಷ್ಟು ಇತ್ತು , ಅದು ೨೦೧೫ ರಲ್ಲಿ ಕಡಿಮೆಯಾಗಿ ಶೇಕಡ ೭೮.೦೬ ರಷ್ಟು ಆಗಿತ್ತು. ಇನ್ನೊಂದೆಡೆ ಇದೇ ಕಾಲಾವಧಿಯಲ್ಲಿ ಮುಸಲ್ಮಾನರ ಜನಸಂಖ್ಯೆ ಶೇಕಡಾ ೯.೮೪ ರಷ್ಟಿತ್ತು ಅದು ಹೆಚ್ಚಾಗಿ ಶೇಕಡ ೧೪.೦೯ ರಷ್ಟು ಆಗಿದೆ. ಈ ಅಂಕಿ ಸಂಖ್ಯೆಯು ಪ್ರಧಾನ ಮಂತ್ರಿಯ ಆರ್ಥಿಕ ಸಲಹೆಗಾರ ಪರಿಷತ್ತಿನ ವರದಿಯಿಂದ ಬೆಳಕಿಗೆ ಬಂದಿದೆ. ಈ ಪರಿಷತ್ತು ಜಗತ್ತಿನಲ್ಲಿನ ೧೬೭ ದೇಶಗಳಲ್ಲಿನ ಧರ್ಮದ ಆಧಾರದಲ್ಲಿ ಜನಸಂಖ್ಯೆ ಅಧ್ಯಯನ ನಡೆಸಿ ವರದಿ ಮಂಡಿಸಿದೆ.
ವರದಿಯಿಂದ ಬೆಳಕಿಗೆ ಬಂದಿರುವ ಮಹತ್ವಪೂರ್ಣ ಮಾಹಿತಿ !
೧ . ಅಂಕಿ ಸಂಖ್ಯೆಯ ಪ್ರಕಾರ ಈ ೬೫ ವರ್ಷಗಳ ಕಾಲಾವಧಿಯಲ್ಲಿ ಭಾರತದಲ್ಲಿ ಪಾರಸಿ ಮತ್ತು ಜೈನ ಧರ್ಮ ಬಿಟ್ಟರೆ ಇತರ ಅಲ್ಪಸಂಖ್ಯಾತ ಸಮುದಾಯದ ಜನಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
೨. ಇನ್ನೊಂದು ಕಡೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿನ ಬಹು ಸಂಖ್ಯಾತ ಮುಸಲ್ಮಾನರ ಸಂಖ್ಯೆ ಹೆಚ್ಚಾಗಿದ್ದು, ಅಲ್ಪಸಂಖ್ಯಾತ ಹಿಂದುಗಳ ಜನಸಂಖ್ಯೆಯಲ್ಲಿ ಬೃಹತ್ ಪ್ರಮಾಣದಲ್ಲಿ ಇಳಿಕೆ ಆಗಿದೆ.
೩. ಭಾರತದಲ್ಲಿ ಕ್ರೈಸ್ತ ಜನಸಂಖ್ಯೆಯ ಪಾಲು ಶೇಕಡಾ ೨.೨೪ ರಿಂದ ಶೇಕಡ ೨.೩೬ ರಷ್ಟು ಹೆಚ್ಚಾಗಿದೆ , ಹಾಗೂ ಸಿಖ್ ಸಮುದಾಯದ ಜನಸಂಖ್ಯೆ ಶೇಕಡ ೧.೨೪ ರಿಂದ ಶೇಕಡ ೧.೮೫ ರಷ್ಟು ಆಗಿದೆ .
೪ .೨೦೨೨ ರಲ್ಲಿ ಪಾಕಿಸ್ತಾನದಲ್ಲಿನ ಸೆಂಟರ್ ಫಾರ್ ಫೀಸ್ ಅಂಡ್ ಜಸ್ಟೀಸ್ ಈ ಸಂಸ್ಥೆಯು ಅಲ್ಲಿನ ಅಲ್ಪಸಂಖ್ಯಾತರ ಜನಸಂಖ್ಯೆಯ ಬಗ್ಗೆ ಒಂದು ವರದಿ ಪ್ರಸಾರ ಮಾಡಿತ್ತು. ಆ ವರದಿ ಪ್ರಕಾರ, ಪಾಕ್ ನಲ್ಲಿ ಅಲ್ಪಸಂಖ್ಯಾತ ಹಿಂದೂ ಸಮಾಜದ ೨೨ ಲಕ್ಷದ ೧೦ ಸಾವಿರದ ೫೬೬ ಜನರು ವಾಸಿಸುತ್ತಿದ್ದಾರೆ. ಇದು ಪಾಕಿಸ್ತಾನದ ಒಟ್ಟು ಜನಸಂಖ್ಯೆಯ ಶೇಕಡ ೧.೧೮ ರಷ್ಟಾಗಿದೆ. ಪಾಕಿಸ್ತಾನದಲ್ಲಿ ಕ್ರೈಸ್ತರು ೧೮ ಲಕ್ಷ ೭೩ ಸಾವಿರದ ೩೪೮, ಸಿಖ್ ರು ೭೪ ಸಾವಿರದ ೧೩೦, ಬೌದ್ಧ ಧರ್ಮದ ೧ ಸಾವಿರ ೭೮೭ ಮತ್ತು ಜೈನ ಧರ್ಮದ ಕೇವಲ ೬ ಅನುಯಾಯಿಗಳು ವಾಸವಾಗಿದ್ದಾರೆ.
೫. ಪಾಕಿಸ್ತಾನದಲ್ಲಿನ ಹಿಂದೂ ಅಲ್ಪಸಂಖ್ಯಾತರು ಎಲ್ಲಕ್ಕಿಂತ ಹೆಚ್ಚಿನ ಜನಸಂಖ್ಯೆ ಸಿಂಧಪ್ರಾಂತದಲ್ಲಿ ನೆಲೆಸಿದ್ದಾರೆ. ಅಲ್ಲಿ ಬಹುತೇಕ ಹಿಂದುಗಳು ಬಡವರಾಗಿದ್ದಾರೆ ಮತ್ತು ದೇಶದಲ್ಲಿನ ಸರಕಾರಿ ಸಂಸ್ಥೆಯಲ್ಲಿ ಅವರ ಪ್ರತಿನಿಧಿತ್ವ ಕೂಡ ಬಹಳ ಕಡಿಮೆ ಇದೆ.
ಸಂಪಾದಕೀಯ ನಿಲುವುಈ ಜನಸಂಖ್ಯೆಯಿಂದ ಭಾರತದಲ್ಲಿ ಹಿಂದುಗಳು ಅಸುರಕ್ಷಿತರೇ ಅಥವಾ ಮುಸಲ್ಮಾನರೇ ಎಂಬುದನ್ನು ಪುಟ್ಟ ಮಗು ಕೂಡ ಹೇಳಬಲ್ಲದು. ಈ ವರದಿ ಬಳಸಿ ಭಾರತವು ಅಂತರಾಷ್ಟ್ರೀಯ ಮಟ್ಟದಲ್ಲಿ ಹಿಂದೂಗಳನ್ನು ಕಳಂಕಿತಗೊಳಿಸುವ ಪಶ್ಚಿಮಾತ್ಯ ಮಹಾಶಕ್ತಿ ಮತ್ತು ಪ್ರಸಾರ ಮಾಧ್ಯಮಗಳ ಷಡ್ಯಂತ್ರ ವಿಫಲಗೊಳಿಸಬೇಕು. |