(ಅಲ್ಲಾಹು ಅಕ್ಬರ್ ಎಂದರೆ ಅಲ್ಲಾ ಮಹಾನ್)
ಲಂಡನ್ – ಇಲ್ಲಿನ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಟ್ಟರವಾದಿ ಮುಸಲ್ಮಾನ ನಗರಸೇವಕ ಮೋತಿನ್ ಅಲಿ ಇವರು ಗೆಲುವು ಸಾಧಿಸಿದ ನಂತರ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ನೀಡಿದರು. ಈ ಮುಸಲ್ಮಾ ನಗರ ಸೇವಕನ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಲೀಡ್ಸ್ ನಗರದಲ್ಲಿ ಗೆಲವು ಸಾಧಿಸಿದ ನಂತರ ೪೨ ವರ್ಷದ ಮೋತಿನ್ ಅಲಿ ಇವರು ಪ್ಯಾಲೆಸ್ಟೈನ್ ಅನ್ನು ಬೆಂಬಲಿಸಿ ಭಾಷಣ ಮಾಡಿದರು ಮತ್ತು ಅವರ ಗೆಲುವನ್ನು ಗಾಝಾದಲ್ಲಿನ ಜನರಿಗೆ ಅರ್ಪಿಸಿದರು. ಇತರ ಮುಸಲ್ಮಾನ ಅಭ್ಯರ್ಥಿಯಾದ ಜೋಹರ್ ಗುಲಾಸಿತಾಬ್ ಇವರು ವ್ಯಾಲ್ಸನ್ ತಮ್ಮ ಗೆಲುವನ್ನು ಗಾಝಾದ ಜನರಿಗೆ ಅರ್ಪಿಸಿದರು.
೧. ‘ಯುಕೆ ಗ್ರೀನ್ ಪಾರ್ಟಿ’ ಯ ಅಭ್ಯರ್ಥಿಯು ಇಂಗ್ಲೆಂಡಿನ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಗಾಝಾ ಯುದ್ಧದ ಅಂಶ ಎತ್ತಿ ಹಿಡಿದರು ಮತ್ತು ವಿಜಯ ಸಾಧಿಸಿದರು.
೨. ಅಲಿ ಇವನು ಪ್ಯಾಲೆಸ್ಟೈನ್ ನ ಕಟ್ಟರ್ ಬೆಂಬಲಿಗನಾಗಿದ್ದಾನೆ. ಅಕ್ಟೋಬರ್ ೭ ರಂದು ಇಸ್ರೇಲ್ ಮೇಲಿನ ಹಮಾಸ್ ನ ದಾಳಿಯನ್ನು ಬೆಂಬಲಿಸಿದ್ದನು.
೩. ಲೀಡ್ಸ್ ಕೌನ್ಸಿಲ್ ಚುನಾವಣೆಯಲ್ಲಿ ಗೆಲವು ದೊರೆತ ನಂತರ ‘ಯುಕೆ ಗ್ರೀನ್ ಪಾರ್ಟಿ’ ಪಕ್ಷದಲ್ಲಿ ಮೋತಿನ್ ಅಲಿಯ ಸ್ಥಾನ ಸದೃಢವಾಗಿದೆ.
೪. ಮೋತಿನ್ ಅಲಿ ಗೆಲುವಿನ ನಂತರ ಜನರಿಗೆ ಆಘಾತವಾಗಿದೆ. ‘ಇಂಗ್ಲೆಂಡ್ ನಲ್ಲಿ ಕಟ್ಟರ್ ಇಸ್ಲಾಂ ನ ಬೆಳವಣಿಗೆ ನಿರಂತರವಾಗಿ ಆಗುತ್ತಿದೆ’, ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವು
|