ಸಾಧನೆಯನ್ನು ಮಾಡುತ್ತಾ ಪರೀಕ್ಷೆಯಲ್ಲಿ ಸುಯಶಸ್ಸು ಕಂಡ ಸನಾತನದ ವಿದ್ಯಾರ್ಥಿ ಸಾಧಕರು

ಚಿ. ಲಿಖಿತ ಗಣೇಶ ಸಾಲ್ಯಾನ್

ಮಂಗಳೂರು – ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲನ ಸನಾತನದ ಸಾಧಕರಾದ ಶ್ರೀ. ಗಣೇಶ ಸಾಲ್ಯಾನ್ ಮತ್ತು ಸೌ. ಹೇಮಾವತಿ ಸಾಲ್ಯಾನ್ ಇವರ ಮಗನಾದ ಚಿ. ಲಿಖಿತ ಗಣೇಶ ಸಾಲ್ಯಾನ್ ಇವರು ಇತ್ತೀಚೆಗೆ ನಡೆದ ೧೦ ನೇ ತರಗತಿಯ ಪರೀಕ್ಷೆಯಲ್ಲಿ ೬೨೫ ಕ್ಕೆ ೬೦೪ ಅಂದರೆ ಶೇ. ೯೬.೫೪ ರಷ್ಟು ಅಂಕಗಳನ್ನು ಗಳಿಸಿ ತೇರ್ಗಡೆಯಾಗಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಧರ್ಮಪ್ರಸಾರದ ಪೋಸ್ಟ್‌ಗಳನ್ನು ಕಳುಹಿಸುವುದು. ಅದೇ ರೀತಿ ಸೇವಾಕೇಂದ್ರದಲ್ಲಿ ಗ್ರಂಥಗಳ ಪರಿಶೀಲನೆ ಸೇವೆಯನ್ನು ಮಾಡುತ್ತಾನೆ ಮತ್ತು ಗ್ರಂಥ ಪ್ರದರ್ಶನಿಯಲ್ಲಿ ಸೇವೆ ಮಾಡುತ್ತಾನೆ. ಈದರ ಬಗ್ಗೆ ಶ್ರೀ. ಗಣೇಶ ಸಾಲ್ಯಾನ ಅವರು ಹೇಳುತ್ತಾ, ಲಿಖಿತನು ಪ್ರತಿದಿನ ೧ ಗಂಟೆ ನಾಮಜಪ ಮಾಡುತ್ತಾನೆ. ಪರೀಕ್ಷೆ ಸಮಯದಲ್ಲಿ ಶ್ರೀಗಣೇಶ ಮತ್ತು ಸರಸ್ವತಿ ದೇವಿಗೆ ಪ್ರಾರ್ಥನೆ ಮಾಡಿ ಓದುತ್ತಿದ್ದನು. ಆಧ್ಯಾತ್ಮಿಕ ಉಪಾಯ ಮಾಡುವುದರೊಂದಿಗೆ ಹಿರಿಯರ ಕಾಲಿಗೆ ನಮಸ್ಕಾರ ಮಾಡಿ ಪರೀಕ್ಷೆಗೆ ಹೋಗುತ್ತಿದ್ದನು. ಪರೀಕ್ಷೆಯ ಮುಂಚೆ ಪ್ರಾರ್ಥನೆ ಮಾಡಿ ಬರೆಯುತ್ತಿದ್ದನು. ಕೇವಲ ಗುರುಗಳ, ಈಶ್ವರನ ಕೃಪೆಯಿಂದ ಒಳ್ಳೆಯ ಅಂಕ ಪಡೆಯಲು ಸಾಧ್ಯವಾಯಿತು. ಇದಕ್ಕಾಗಿ ಗುರುಚರಣಗಳಿಗೆ ಕೃತಜ್ಞತೆಗಳು’, ಎಂದಿದ್ದಾರೆ.

ಕು. ಸಾನಿಕಾ ಮತ್ತು ಕು. ಸೃಜನ್ ಆಚಾರ್ಯ

ಮಂಗಳೂರಿನ ಪಿ. ವಸಂತ ಆಚಾರ್ಯ ಮತ್ತು ಶೋಭಾ ಆಚಾರ್ಯ ಇವರ ಮಗನಾದ ಕುಮಾರ್ ಸೃಜನ್ ಆಚಾರ್ಯ ಇವನು ದ್ವಿತೀಯ ಪಿಯುಸಿ ವಾಣಿಜ್ಯವಿಭಾಗದಲ್ಲಿ ಶೇಕಡ ೯೭ ರಷ್ಟು ಅಂಕಗಳನ್ನು ಗಳಿಸಿದ್ದಾನೆ ಹಾಗೂ ಅವರ ಮಗಳಾದ ಕು. ಸಾನಿಕ ಆಚಾರ್ಯ ಇವರು ೧೦ ನೇ ತರಗತಿಯಲ್ಲಿ ಶೇ. ೯೭ ರಷ್ಟು ಅಂಕವನ್ನು ಪಡೆದಿದ್ದಾರೆ. ಇದರ ಬಗ್ಗೆ ಅವರ ತಾಯಿ ಸೌ. ಶೋಭಾ ಆಚಾರ್ಯರವರು ಮಾತನಾಡುತ್ತಾ, ‘ಸಾನಿಕಾಳು ಮನೆಯಲ್ಲಿ ಸೇವೆ ಎಂದು ಸನಾತನ ಪ್ರಭಾತದ ಪತ್ರಿಕೆಯನ್ನು ಮಡಚುವುದು, ಸೇವಾಕೇಂದ್ರಕ್ಕಾಗಿ ತಿಂಡಿ ತಯಾರಿ ಇತ್ಯಾದಿಗಳನ್ನು ಸೇವಾಭಾವದಿಂದ ಮಾಡುತ್ತಾಳೆ. ಕುಮಾರ್ ಸೃಜನ್ ಸಹ ಗ್ರಂಥಗಳ ಪರಿಶೀಲನೆ ಇತ್ಯಾದಿ ಸೇವೆ ಮಾಡುತ್ತಾನೆ. ಕೇವಲ ಗುರುಕೃಪೆಯಿಂದ ಒಳ್ಳೆಯ ಅಂಕ ಪಡೆಯಲು ಸಾಧ್ಯವಾಯಿತು’, ಎಂದರು.