ರೋಗಗಳ ನಿವಾರಣೆಗಾಗಿ ಆವಶ್ಯಕವಿರುವ ದೇವತೆಗಳ ತತ್ತ್ವಗಳಿಗನುಸಾರ ಕೆಲವು ರೋಗಗಳ ಪರಿಹಾರಕ್ಕೆ ನಾಮಜಪಗಳು

ಸದ್ಗುರು (ಡಾ.) ಮುಕುಲ ಗಾಡಗೀಳ

‘ಯಾವುದಾದರೊಂದು ರೋಗ ಗುಣಮುಖವಾಗಲು ದುರ್ಗಾದೇವಿ, ರಾಮ, ಕೃಷ್ಣ, ದತ್ತ, ಗಣಪತಿ, ಮಾರುತಿ ಮತ್ತು ಶಿವ ಈ  ೭ ಪ್ರಮುಖ ದೇವತೆಗಳಲ್ಲಿ ಯಾವ ದೇವತೆಯ ತತ್ತ್ವ ಎಷ್ಟು ಪ್ರಮಾಣದಲ್ಲಿ ಆವಶ್ಯಕವಿದೆ ? ಎನ್ನುವುದನ್ನು ಧ್ಯಾನದಲ್ಲಿ ಕಂಡುಹಿಡಿದು, ಅದಕ್ಕನುಸಾರ ನಾನು ಕೆಲವು ರೋಗಗಳಿಗೆ ಜಪವನ್ನು ಸಿದ್ಧಪಡಿಸಿದೆನು. ‘ಕೊರೋನಾ ವಿಷಾಣುವಿನ ತೊಂದರೆಯ ನಿವಾರಣೆಗೆ ನಾನು ಮೊದಲು ಇಂತಹ  ಒಂದು ಜಪವನ್ನು ಕಂಡು ಹಿಡಿದಿದ್ದೆನು. ಅದು ಪರಿಣಾಮಕಾರಿಯಾಗಿರುವುದು ಗಮನಕ್ಕೆ ಬಂದ ನಂತರ ನನಗೆ ಇತರ ರೋಗಗಳಿಗೂ ಜಪಗಳನ್ನು ಕಂಡು ಹಿಡಿಯಲು ಸ್ಫೂರ್ತಿ ಸಿಕ್ಕಿತು. ಈ ಜಪಗಳೆಂದರೆ ಆವಶ್ಯಕವಿರುವ ಬೇರೆ ಬೇರೆ ದೇವತೆಗಳ ಒಟ್ಟು ಜಪಗಳಾಗಿವೆ. ನಾನು ಕಂಡು ಹಿಡಿದ ಈ ಜಪಗಳನ್ನು ಸಾಧಕರಿಗೆ ಅವರ ರೋಗಗಳಿಗನುಸಾರ ಕೊಡುತ್ತಿದ್ದೇನೆ. ಸಾಧಕರು ಈ ಜಪಗಳಿಂದ ಅವರಿಗೆ ಲಾಭವಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಇದರಿಂದ ‘ಈ ಜಪಗಳಿಂದ ಲಾಭವಾಗುತ್ತದೆ ಎಂಬುದು ನನ್ನ ಗಮನಕ್ಕೆ ಬಂದಿತು. ಕೆಲವು ತಿಂಗಳುಗಳ ಹಿಂದೆ ಕೆಲವು ರೋಗಗಳು, ಅವುಗಳ ಮೇಲಿನ ಜಪಗಳು ಮತ್ತು ಸಾಧಕರು ಆ ಜಪಗಳನ್ನು ಮಾಡಿದ ನಂತರ ಅವರಿಗೆ ಬಂದ ಅನುಭೂತಿಗಳನ್ನು ‘ಸನಾತನ ಪ್ರಭಾತ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ಇಂದು ಇನ್ನೂ ಕೆಲವು ರೋಗಗಳು ಮತ್ತು ಅವುಗಳ ಮೇಲಿನ ಜಪಗಳನ್ನು ಇಲ್ಲಿ ನೀಡಲಾಗಿದೆ. ಈ ನಾಮಜಪಗಳನ್ನು ಕಳೆದ ೩ ತಿಂಗಳುಗಳಲ್ಲಿ ಕೆಲವು ಸಾಧಕರಿಗೆ ನೀಡಲಾಗಿದೆ. ಸಾಧಕರು ಅವರಿಗೆ ಬಂದಂತಹ ಅನುಭೂತಿಗಳನ್ನು ಗ್ರಂಥ ನಿರ್ಮಾಣಕ್ಕಾಗಿ ಆದಷ್ಟು ಬೇಗನೆ ಬರೆದು, ಈ ಲೇಖನದಲ್ಲಿ ನೀಡಿರುವ ಇ-ಮೇಲ್ ವಿಳಾಸಕ್ಕೆ ಅಥವಾ ಅಂಚೆ ವಿಳಾಸದ ಮೂಲಕ ಕಳುಹಿಸಬೇಕು.

ಸಾಧಕರಿಗೆ ಇಲ್ಲಿ ನೀಡಿರುವ ರೋಗಗಳಲ್ಲಿ ಯಾವುದಾದರೊಂದು ರೋಗವಿದ್ದರೆ ಅದನ್ನು ಹೋಗಲಾಡಿಸಲು ‘ಇಲ್ಲಿ ನೀಡಿರುವ ನಾಮಜಪವನ್ನು ಮಾಡಿ ನೋಡಬೇಕು, ಎಂದು ಅನಿಸಿದರೆ, ಅವರು ಆ ನಾಮಜಪವನ್ನು ೧ ತಿಂಗಳು ಪ್ರತಿದಿನ ೧ ಗಂಟೆ ಪ್ರಯೋಗವೆಂದು ಮಾಡಿ ನೋಡಬೇಕು. ಈ ನಾಮಜಪಗಳ ಸಂದರ್ಭದಲ್ಲಿ ಬರುವ ಅನುಭೂತಿಗಳನ್ನು ಸಾಧಕರು [email protected] ಇ-ಮೇಲ್ (ವಿ-ಅಂಚೆ) ವಿಳಾಸಕ್ಕೆ ಅಥವಾ ಮುಂದಿನ ಅಂಚೆ ವಿಳಾಸಕ್ಕೆ ಕಳುಹಿಸಬೇಕು.

ಸಾಧಕರ ಈ ಅನುಭೂತಿಗಳು ಗ್ರಂಥದಲ್ಲಿ ಸೇರಿಸುವುದರ ದೃಷ್ಟಿಯಿಂದ ಹಾಗೂ ನಾಮಜಪದ ಸಾಮರ್ಥ್ಯ ಸ್ಪಷ್ಟವಾಗಲು ಉಪಯುಕ್ತವಾಗುವವು.

ಅಂಚೆ ವಿಳಾಸ : ಸನಾತನ ಆಶ್ರಮ, 24/B ರಾಮನಾಥಿ, ಬಾಂದೋಡಾ, ಫೋಂಡಾ, ಗೋವಾ, ಪಿನ್ ಕೋಡ – 403401.