ಕೊರೋನಾ ಲಸೀಕರಣದ ಹೆಸರಿನಲ್ಲಿ ಯಾರಾದರೂ ಆಧಾರಕಾರ್ಡ್ ಸಂಖ್ಯೆ, ಓಟಿಪಿ ಇವುಗಳಂತಹ ಗೌಪ್ಯ ಮಾಹಿತಿಯನ್ನು ಕೇಳಿದರೆ ತಾವು ಮೋಸಕ್ಕೊಳಗಾಗದಿರಲು ಆಕಡೆಗೆ ನಿರ್ಲಕ್ಷಿಸಿ !

ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ಸವಿನಯ ವಿನಂತಿ !

‘ಸದ್ಯ ಕೊರೋನಾ ಲಸೀಕರಣದ ನೋಂದಣಿಗಾಗಿ ಆಧಾರಕಾರ್ಡ್ ಸಂಖ್ಯೆ ಅಥವಾ ಸಂಚಾರವಾಣಿಯಲ್ಲಿ ‘ಓಟಿಪಿ (ಒನ್ ಟೈಮ್ ಪಾಸ್‌ವರ್ಡ್) ಕಳುಹಿಸಿ ಅದನ್ನು ಕೇಳಿ ಪಡೆಯಲಾಗುತ್ತಿದೆ. ಈ ‘ಓಟಿಪಿಯನ್ನು ನೀಡಿದರೆ, ನಿಮ್ಮ ಹೆಸರು ಲಸೀಕರಣಕ್ಕಾಗಿ ರಿಜಿಸ್ಟರ್ ಆಗುವುದು, ಎಂದು ಹೇಳಲಾಗುತ್ತಿದೆ. ಹೀಗಿದ್ದರೂ, ತಪ್ಪಿಯೂ ನಿಮ್ಮ ಆಧಾರಕಾರ್ಡ್ ಕ್ರಮಾಂಕ, ‘ಓಟಿಪಿಯನ್ನು ಯಾರಿಗೂ ನೀಡಬೇಡಿರಿ, ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ತೆಗೆದು ಖಾತೆಯು ಖಾಲಿಯಾಗಬಹುದು. ಎಚ್ಚರದಿಂದಿರಿ. ಕಾಳಜಿವಹಿಸಿ. ಇಂತಹ ಕಾರಣಗಳಿಗಾಗಿ ದೂರವಾಣಿ ಬಂದರೆ ಮಾತನಾಡಬೇಡಿ, ಎಂಬ ಎಚ್ಚರಿಕೆಯನ್ನು ಮಹಾರಾಷ್ಟ್ರ ಪೊಲೀಸರ ವತಿಯಿಂದ ನೀಡಲಾಗುತ್ತಿದೆ.

ವಾಸ್ತವದಲ್ಲಿ ನೋಡಿದರೆ ಯಾವುದೇ ಕಾರಣದಿಂದ ನಾಗರಿಕರಿಗೆ ಸಂಚಾರವಾಣಿಯಲ್ಲಿ ಆಧಾರಕಾರ್ಡ್ ಕ್ರಮಾಂಕ, ಓಟಿಪಿ ಕೇಳದಿರುವ ಬಗ್ಗೆ ಸರಕಾರ-ಆಡಳಿತ, ಮುಂತಾದವರಿಂದ ಆಗಾಗ ಸ್ಪಷ್ಟಪಡಿಸಲಾಗಿದೆ. ಆದುದರಿಂದ ಇಂತಹ ವಿಧದ ವಂಚನೆಗಳಿಗೆ ಬೆಂಬಲ ನೀಡಿ ತಾವು ಆರ್ಥಿಕವಾಗಿ ಮೋಸಕ್ಕೊಳಗಾಗಬೇಡಿ !