ಸನಾತನ ಸಂಸ್ಥೆ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಹೆಸರನ್ನು ಉಪಯೋಗಿಸಿ ಸಮಾಜದ ದಾರಿತಪ್ಪಿಸುವ ವಂಚಕರಿಂದ ಎಚ್ಚರಿಕೆ !

ಸನಾತನದ ಸಾಧಕರಿಗೆ ಮಹತ್ವದ ಸೂಚನೆ ಮತ್ತು ‘ಸನಾತನ ಪ್ರಭಾತದ ವಾಚಕರಿಗೆ ವಿನಂತಿ !

ಸನಾತನ ಸಂಸ್ಥೆಯ ಕಾರ್ಯವು ಈ ಹಿಂದೆ ಉತ್ತರ ಭಾರತದ ಕೆಲವು ಸ್ಥಳಗಳಲ್ಲಿ ನಡೆಯುತ್ತಿತ್ತು, ಇಂತಹ ಪ್ರದೇಶಗಳಲ್ಲಿ ಸನಾತನ ಸಂಸ್ಥೆ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಹೆಸರನ್ನು ಉಲ್ಲೇಖಿಸಿ ಕೆಲವರು ‘ಸನಾತನ ಪ್ರಭಾತದ ವಾಚಕರು ಮತ್ತು ಸನಾತನದ ಸಾಧಕರನ್ನು ದಾರಿ ತಪ್ಪಿಸುತ್ತಿರುವುದು  ಗಮನಕ್ಕೆ ಬಂದಿದೆ. ಇದರ ಕೆಲವು ಉದಾಹರಣೆಗಳನ್ನು ಮುಂದೆ ಕೊಡಲಾಗಿದೆ.

ಉದಾಹರಣೆ ೧. ‘ಪರಾತ್ಪರ ಗುರು ಡಾ. ಆಠವಲೆಯವರು ನನಗೆ ಒಳಗಿನಿಂದ ಸೂಚಿಸುತ್ತಾರೆ, ಎಂದು ಸುಳ್ಳು ಹೇಳಿ –

. ಸಾಧಕರಿಗೆ ಮತ್ತು ವಾಚಕರಿಗೆ ವಿವಿಧ ಮಂತ್ರಜಪಗಳನ್ನು ಅಥವಾ ನಾಮಜಪಗಳನ್ನು ಮಾಡಲು ಹೇಳುವುದು.

. ಆಧ್ಯಾತ್ಮಿಕ ಉಪಾಯಗಳಿಗಾಗಿ ವಿವಿಧ ಉತ್ಪಾದನೆಗಳನ್ನು ತಯಾರಿಸಿ ಅವುಗಳನ್ನು ಸಾಧಕರು ಮತ್ತು ವಾಚಕರಿಗೆ ಮಾರಾಟ ಮಾಡುವುದು.

. ಸಾಧಕರು ಮತ್ತು ವಾಚಕರಿಗೆ ಆಪತ್ಕಾಲದ ಸಂದರ್ಭದಲ್ಲಿ ತಮ್ಮ ಮನಸ್ಸಿನಂತೆ ಕೃತಿಗಳನ್ನು ಮಾಡಲು ಹೇಳುವುದು.

ಈ. ತಮ್ಮ ಮನಸ್ಸಿನಂತೆ ಸಾಧಕರ ಮತ್ತು ವಾಚಕರ ವಾಟ್ಸ್‌ಆಪ್ ಗ್ರೂಪ್‌ಗಳನ್ನು ಮಾಡಿ ಇವುಗಳಿಂದಲೂ ಮೇಲಿನಂತಹ ಕೃತಿಗಳನ್ನು ಮಾಡಲು ಹೇಳುವುದು.

ಈ ರೀತಿ ವಿವಿಧ ಕೃತ್ಯಗಳನ್ನು ಮಾಡುವುದು ಗಮನಕ್ಕೆ ಬಂದಿದೆ.

(‘ಸನಾತನ ಪ್ರಭಾತದ ವಾಚಕರು ಮತ್ತು ಸನಾತನ ಸಂಸ್ಥೆಯ ಸಾಧಕರು ಇಂತಹ ವ್ಯಕ್ತಿಗಳಿಂದ ಎಚ್ಚರದಿಂದಿರಬೇಕು. ಪರಾತ್ಪರ ಗುರು ಡಾ. ಆಠವಲೆಯವರು ಯಾರಿಗೂ ಒಳಗಿನಿಂದ ಸೂಚಿಸಿ ಮೇಲಿನಂತಹ ಕೃತಿಗಳನ್ನು ಸ್ವತಃ ಮಾಡಿರಿ ಅಥವಾ ಇತರರಿಗೆ ಮಾಡಲು ಹೇಳಿರಿ, ಎಂದು ಹೇಳುವುದಿಲ್ಲ. ಸಾಧಕರಿಗಾಗಿ ಮತ್ತು ಸಮಾಜಕ್ಕಾಗಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನವನ್ನು ಆಗಾಗ ‘ಸನಾತನ ಪ್ರಭಾತದಲ್ಲಿ, ಹಾಗೆಯೇ ಸನಾತನದ ವಿವಿಧ ಗ್ರಂಥಗಳಲ್ಲಿ ಮುದ್ರಿಸಲಾಗುತ್ತದೆ. ಆದುದರಿಂದ ‘ಸನಾತನ ಪ್ರಭಾತದ ವಾಚಕರು ಮತ್ತು ಸನಾತನದ ಸಾಧಕರು ‘ಸನಾತನ ಪ್ರಭಾತ ಮತ್ತು ಗ್ರಂಥಗಳಲ್ಲಿ ಪ್ರಕಟಿಸಲಾದ ಮಾರ್ಗದರ್ಶನವನ್ನು ಪ್ರಮಾಣವೆಂದು ಸ್ವೀಕರಿಸಿ, ಹಾಗೆಯೇ ಸನಾತನದ ಧರ್ಮಪ್ರಚಾರಕ ಸಂತರು ಮಾಡಿದ ಮಾರ್ಗದರ್ಶನಕ್ಕನುಸಾರ ಸಾಧನೆ ಮತ್ತು ಸೇವೆಯನ್ನು ಮಾಡಬೇಕು.)

ಉದಾ. ೨ ಹೀಗೆಯೇ ಒಂದು ಕಡೆ ಕೊರೋನಾ ವಿಷಾಣುವಿನ ಕಾರಣದಿಂದ ಜಾರಿಯಲ್ಲಿರುವ ಸಂಚಾರನಿಷೇಧದ ಸಮಯದಲ್ಲಿ ಓರ್ವ ವಂಚಕನು ಒಂದು ಸಾಪ್ತಾಹಿಕ ಸತ್ಸಂಗವನ್ನು ಪ್ರಾರಂಭಿಸಿದನು. ಈ ಪರಿಸರದಲ್ಲಿ ಕೆಲವು ವರ್ಷಗಳ ಹಿಂದೆ ಸನಾತನದ ಸತ್ಸಂಗ ನಡೆಯುತ್ತಿತ್ತು. ಆಗ ಸನಾತನದ ಸತ್ಸಂಗದಲ್ಲಿ ಬರುತ್ತಿದ್ದ ಜಿಜ್ಞಾಸುಗಳನ್ನು ಈ ಹೊಸ ಸತ್ಸಂಗಕ್ಕೆ ಕರೆದನು. ಈ ಸತ್ಸಂಗದಲ್ಲಿನ ಓರ್ವ ಜಿಜ್ಞಾಸು ಕುಟುಂಬದಲ್ಲಿನ ಓರ್ವ ಸದಸ್ಯನ ಆರೋಗ್ಯ ಸರಿ ಇಲ್ಲವೆಂದು ಹೇಳಿದಾಗ ಆ ವಂಚಕನು ಉಪಾಯವೆಂದು ಒಂದು ಲಾಕೇಟನ್ನು ಆ ಜಿಜ್ಞಾಸುವಿಗೆ ಕೊಟ್ಟನು ಮತ್ತು ಅದರೊಂದಿಗೆ ಒಂದು ಮಂತ್ರವನ್ನು ಕೊಟ್ಟನು, ಹಾಗೆಯೇ ಈಗ ಅವರ ಆರೋಗ್ಯ ಸುಧಾರಿಸುತ್ತದೆ, ಎಂದು ಆಶ್ವಾಸನೆಯನ್ನೂ ನೀಡಿದನು. ಇದಕ್ಕಾಗಿ ಆ ವಂಚಕನು ಜಿಜ್ಞಾಸುವಿನಿಂದ ೧೫೦೦ ರೂಪಾಯಿಗಳನ್ನು ತೆಗೆದುಕೊಂಡನು.

(ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರಿಗೆ ಅವರ ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರು ಅಧ್ಯಾತ್ಮದ ಜ್ಞಾನವನ್ನು ಉಚಿತವಾಗಿ ಕೊಟ್ಟರು. ಪರಾತ್ಪರ ಗುರು ಡಾ. ಆಠವಲೆಯವರು ಅವರ ಬೋಧನೆಯನ್ನೇ ಪ್ರತ್ಯಕ್ಷ ಆಚರಣೆಗೆ ತಂದಿದ್ದಾರೆ ಮತ್ತು ಸನಾತನದ ಕಾರ್ಯವನ್ನು ಉಚಿತವಾಗಿ ಪ್ರಾರಂಭಿಸಲಾಗಿದ್ದು ಅದು ಈಗಲೂ ಉಚಿತವಾಗಿಯೇ ನಡೆಯುತ್ತಿದೆ. ಸನಾತನದ ಸತ್ಸಂಗ, ಪ್ರವಚನಗಳು, ಬಾಲಸಂಸ್ಕಾರವರ್ಗ, ಪ್ರದರ್ಶನಗಳು ಮುಂತಾದ ಎಲ್ಲ ಅಧ್ಯಾತ್ಮ ಪ್ರಸಾರದ ಕಾರ್ಯವು ಉಚಿತವಾಗಿಯೇ ನಡೆಯುತ್ತದೆ. ಸನಾತನದ ಸಾಧಕರಾಗುವುದು, ಸತ್ಸಂಗದಲ್ಲಿ ಸಹಭಾಗಿಯಾಗುವುದು, ಯಾವುದೇ ರೀತಿಯ ಮಾರ್ಗದರ್ಶನ ಮತ್ತು ಆಧ್ಯಾತ್ಮಿಕ ಉಪಾಯವನ್ನು ಹೇಳುವುದು, ಸನಾತನದ ಆಶ್ರಮಗಳಿಗೆ ಭೇಟಿ ನೀಡುವುದು ಇತ್ಯಾದಿಗಳಿಗೂ ಯಾವುದೇ ರೀತಿಯ ಹಣವನ್ನು ಸ್ವೀಕರಿಸಲಾಗುವುದಿಲ್ಲ. ಆದುದರಿಂದ  ‘ಸನಾತನ ಪ್ರಭಾತದ ವಾಚಕರು ಮತ್ತು ಸನಾತನದ  ಸಾಧಕರು ಇಂತಹ ವಂಚಕರಿಂದ ಎಚ್ಚರದಿಂದಿರಬೇಕು.)

ಉದಾ. ೩ ಈ ಸತ್ಸಂಗದಲ್ಲಿನ ಇನ್ನೊಂದು ಪ್ರಸಂಗದಲ್ಲಿ ಭಾವಿ ಆಪತ್ಕಾಲದ ಬಗ್ಗೆ ಅಯೋಗ್ಯ ಮಾಹಿತಿ ನೀಡಿದ್ದರಿಂದಾಗಿ ಓರ್ವ ಜಿಜ್ಞಾಸುವಿಗೆ ಸನಾತನ ಸಂಸ್ಥೆಯ ಆಪತ್ಕಾಲದ ಸಂದರ್ಭದಲ್ಲಿ ಪ್ರಕಾಶನಗಳ ಕುರಿತು ವಿಕಲ್ಪ ನಿರ್ಮಾಣವಾಯಿತು..

(ಈ ರೀತಿ ಸನಾತನ ಸಂಸ್ಥೆ ಮತ್ತು ಪರಾತ್ಪರ ಗುರು ಡಾ.ಆಠವಲೆಯವರ ಹೆಸರಿನ ಅಥವಾ ಬೋಧನೆಯನ್ನು ಅಯೋಗ್ಯ ಪದ್ಧತಿಯಿಂದ ಬಳಸುತ್ತಿರುವುದು ಗಮನಕ್ಕೆ ಬಂದರೆ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಸಾಧ್ಯವಾಗಬೇಕೆಂದು ಅವರ ಮಾಹಿತಿಯನ್ನು ಕೆಳಗಿನ ವಿಳಾಸಕ್ಕೆ ಕೂಡಲೆ ಕಳುಹಿಸಬೇಕು.)

– ಶ್ರೀ. ವೀರೇಂದ್ರ ಮರಾಠೆ, ವಿಶ್ವಸ್ಥರು, ಸನಾತನ ಸಂಸ್ಥೆ.

ಹೆಸರು ಮತ್ತು ಸಂಪರ್ಕ ಸಂಖ್ಯೆ : ಸೌ. ಭಾಗ್ಯಶ್ರೀ ಸಾವಂತ –7058885610

ವಿ-ಅಂಚೆ ವಿಳಾಸ : [email protected]

ವಿಳಾಸ : ಸೌ. ಭಾಗ್ಯಶ್ರೀ ಸಾವಂತ, C/o ‘ಸನಾತನ ಆಶ್ರಮ, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – 403401