ಆಪತ್ಕಾಲದ ದೃಷ್ಟಿಯಿಂದ ಮನೆ ಕಟ್ಟುವಾಗ ಗಮನದಲ್ಲಿಡಬೇಕಾದ ಕೆಲವು ಮುಖ್ಯ ಅಂಶಗಳು

‘ಅನೇಕ ಸಂತರು ಆಗಾಗ ಮುಂಬರುವ ಕಾಲ ತುಂಬಾ ಭಯಂಕರವಾಗಿರಲಿದೆ ಎಂದು ಮೊದಲೇ ಹೇಳಿದ್ದಾರೆ. ಈಗಾಗಲೇ ಭೀಕರ ಆಪತ್ಕಾಲವು ಪ್ರಾರಂಭವಾಗಿದೆ. ‘ಆಕಸ್ಮಿಕವಾಗಿ ಮೇಘಸ್ಫೋಟವಾದಂತೆ ಮಳೆ ಬರುವುದು, ನದಿಗಳಲ್ಲಿ ಪ್ರವಾಹವುಂಟಾಗುವುದು, ಮಹಾಮಾರಿ, ಯುದ್ಧದಂತಹ ಪರಿಸ್ಥಿತಿ ಉದ್ಭವಿಸುವುದು ಅಥವಾ ಪ್ರತ್ಯಕ್ಷ ಯುದ್ಧವಾಗುವುದು’ ಇಂತಹ ಪ್ರತಿಕೂಲ ವಿಷಯಗಳು ನಡೆಯುತ್ತಿದೆ ಹಾಗೂ ಮುಂದೆಯೂ ನಡೆಯಬಹುದು. ಇಂತಹ ಪರಿಸ್ಥಿತಿಯಲ್ಲಿ ನಾವು ‘ಎಲ್ಲಿ ಹೋಗಿ ವಾಸಿಸಬೇಕು ? ಯಾವ ರೀತಿಯ ಮನೆ ಬೇಕು ?, ‘ಆಪತ್ಕಾಲದಲ್ಲಿ ಮನೆ ಕಟ್ಟಲು ಯಾವ ವಿಷಯಗಳ ಅಗತ್ಯವಿರುತ್ತದೆ ?, ಎಂಬ ಬಗ್ಗೆ ಸವಿಸ್ತಾರವಾಗಿ ಈ ಲೇಖನದಲ್ಲಿ  ಆಲೋಚಿಸಲಿದ್ದೇವೆ. ಹಿಂದಿನ ಲೇಖನಗಳಲ್ಲಿ ಆಪತ್ಕಾಲದಲ್ಲಿ ಮನೆ ಹಾಗೂ ಅದಕ್ಕಾಗಿ ಸ್ಥಳ ಆರಿಸಿಕೊಳ್ಳುವ ಬಗ್ಗೆ ವಿವರವಾದ ಮಾನದಂಡವನ್ನು ಹೇಳಲಾಗಿತ್ತು. ಮಾನದಂಡದಲ್ಲಿ ನೀಡಿರುವಂತೆ ಸ್ಥಳವನ್ನು ಆರಿಸಿಕೊಳ್ಳಿ.

‘ಆಪತ್ಕಾಲದ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಯೋಚಿಸಿದಾಗ ಮಹಾನಗರಗಳಲ್ಲಿರುವುದು ಸುರಕ್ಷಿತವಲ್ಲ. ಆದ್ದರಿಂದ ಅನೇಕ ಸಾಧಕರು ಹಳ್ಳಿಗಳಲ್ಲಿ ಸಮರ್ಪಕವಾದ ಸ್ಥಳವನ್ನು ಹುಡುಕುತ್ತಿದ್ದಾರೆ. ಹಳ್ಳಿಯಲ್ಲಿ ಮನೆ ಕಟ್ಟಲು ಕೃಷಿಭೂಮಿಯನ್ನು ‘ಕೃಷಿಯೇತರ ಭೂಮಿಯಾಗಿ (N.A. ನಾನ್ ಆಗ್ರಿಕಲ್ಚರಲ್ ಲ್ಯಾಂಡ್) ಮಾರ್ಪಡಿಸ ಬೇಕಾಗುತ್ತದೆ. ಕೆಲವರಿಗೆ ‘ಗುಂಟೆಗನುಸಾರ ಒಂದು ಅಥವಾ ಎರಡು ಸಾವಿರ ಚದರಡಿ ಭೂಮಿಯನ್ನು (‘ಫ್ಲೂಟ್) ಖರೀದಿಸಿ ಮನೆ ಕಟ್ಟಿದರೂ ಪರವಾಗಿಲ್ಲ ಅದೆಲ್ಲವೂ ಕಾನೂನುಬದ್ಧವಾಗಿದೆ, ಎಂದು ಕೆಲವರಿಗೆ ಅನಿಸುತ್ತದೆ. ‘ಯಾರಾದರೂ ಒಬ್ಬರು ಕೃಷಿ ಭೂಮಿ ಖರೀದಿಸಿ ಅಲ್ಲಿ ಎಲ್ಲರೂ ಒಟ್ಟಾಗಿ ಮನೆ ಕಟ್ಟಿಕೊಂಡರೂ ಪರವಾಗಿಲ್ಲ’, ಎಂದು ಆಲೋಚಿಸಿ ಮನೆ ಕಟ್ಟಿಕೊಳ್ಳಬಹುದು ಎಂದು ಕೂಡ ಅನಿಸುತ್ತದೆ. ಈ ವಿಷಯದಲ್ಲಿ ವಿವರವಾದ ಮಾಹಿತಿ ಪಡೆದುಕೊಂಡು ‘ಕಾನೂನು ಬದ್ಧವಾಗಿ ಏನು ಮಾಡಬೇಕು ?, ಎಂದು ತಿಳಿದುಕೊಂಡು ಮನೆ ಕಟ್ಟಿರಿ, ಅದರಿಂದ ಮುಂದೆ ಇದರಿಂದ ನಾವು ಮೋಸಕ್ಕೊಳಗಾಗುವ ಅಥವಾ ಕಟ್ಟಡ ನಿರ್ಮಾಣವು ಕಾನೂನುಬಾಹಿರವಾಗುವ ಪರಿಸ್ಥಿತಿ ಉಂಟಾಗುವುದಿಲ್ಲ.

ಶ್ರೀ. ಮಧುಸೂದನ ಕುಲಕರ್ಣಿ

೧. ಕೃಷಿಭೂಮಿಯಲ್ಲಿ ಮನೆ ಕಟ್ಟುವಾಗ ಗ್ರಾಮಪಂಚಾಯತಿ ಸಹಿತ ‘ನಗರಯೋಜನೆ ಕಛೇರಿಯ (ಟೌನ್ ಪ್ಲಾನಿಂಗ್) ಅನುಮತಿ ಪಡೆದುಕೊಳ್ಳುವುದು ಆವಶ್ಯಕ !

ಗ್ರಾಮದಲ್ಲಿ ಕೃಷಿಭೂಮಿಯಲ್ಲಿ ಮನೆ ಕಟ್ಟುವಾಗ ಕೇವಲ ಗ್ರಾಮಪಂಚಾಯತಿಯ ಅನುಮತಿಯೊಂದಷ್ಟೇ ಸಾಕಾಗುವುದಿಲ್ಲ, ಅದರ ಜೊತೆಗೆ ‘ನಗರಯೋಜನೆ ಕಛೇರಿಯ (‘ಟೌನ್ ಪ್ಲಾನಿಂಗ್) ಅನುಮತಿ ಪಡೆದುಕೊಳ್ಳಬೇಕಾಗುತ್ತದೆ ! ‘ನಗರಯೋಜನೆ ಕಛೇರಿಯ ಅನುಮತಿ ಪಡೆದುಕೊಳ್ಳದೆ ಕಟ್ಟಡ ನಿರ್ಮಾಣ ಮಾಡುವುದು ಅಕ್ರಮವಾಗುತ್ತದೆ.

೨. ಕೃಷಿಭೂಮಿ ಖರೀದಿಯ ನಿಯಮಾವಳಿಯಂತೆ ಕೃಷಿಭೂಮಿ ಖರೀದಿಸಲು ಕೃಷಿಕನಾಗಿರುವುದು ಆವಶ್ಯಕ ಹಾಗೂ ಒಮ್ಮೆಲೆ ಕಡಿಮೆಪಕ್ಷ ೨೦ ಸಾವಿರ ಚದರಡಿ ಕೃಷಿಭೂಮಿ ಖರೀದಿಸಿದರೆ ಮಾತ್ರ ಅದನ್ನು ಅವನ ಹೆಸರಿಗೆ ಮಾಡಿಕೊಳ್ಳುವುದು ಸಾಧ್ಯ

೫-೬ ಜನರು ಸೇರಿ ೫ ಸಾವಿರ ಚದರಡಿ ಜಮೀನನ್ನು ಖರೀದಿಸಲು ನಿರ್ಧರಿಸುತ್ತಾರೆ. ‘ಪ್ರತಿಯೊಬ್ಬನಿಗೂ ೧ ಸಾವಿರ ಚದರಡಿ ಸಿಗುವುದು, ಎಂದು ಲೆಕ್ಕ ಹಾಕಿ ಅಲ್ಲಿ ಮನೆ ಕಟ್ಟಲು ಇಚ್ಛಿಸುತ್ತಾರೆ; ಆದರೆ ಕೃಷಿಭೂಮಿ ಖರೀದಿಸುವಾಗ ಒಂದು ಸಾವಿರ ಚದರಡಿ ಭೂಮಿ ಸಾಕಾಗುವುದಿಲ್ಲ ಹಾಗೂ ಕೃಷಿಭೂಮಿ ಖರೀದಿಸಲು ಇರುವ ಕಾನೂನಿನಂತೆ ಕಡಿಮೆಪಕ್ಷ ೨೦ ಸಾವಿರ ಚದರಡಿ ಜಮೀನನ್ನು ಖರೀದಿಸಿದರೆ ಮಾತ್ರ ಅದು ಆ ವ್ಯಕ್ತಿಯ ಹೆಸರಿನಲ್ಲಿ ಮಾಡಿಕೊಳ್ಳಲು ಸಾಧ್ಯ. ‘ಫಾರ್ಮ್‌ಹೌಸ್ ಕಟ್ಟಲು ೨೦ ಸಾವಿರ ಚದರಡಿ ಜಮೀನು ಖರೀದಿಸಿದರೆ ಅಲ್ಲಿ ಕೇವಲ ಶೇಕಡಾ ೪ ರಷ್ಟು, ಅಂದರೆ ೮೦೦ ಸ್ವೇರ್‌ಫೂಟ್ ಕಟ್ಟಡ ನಿರ್ಮಾಣ ಮಾಡಬಹುದು.

ಅದೇ ರೀತಿ ಕೃಷಿಭೂಮಿಯನ್ನು ಖರೀದಿಸುವವರು ರೈತನಾಗಿರಬೇಕು, ಅಂದರೆ ಹಕ್ಕುಗಳ ದಾಖಲೆ (೭/೧೨ ಎಕ್ಸ್‌ಟ್ರಾಕ್ಟ್)ಯಲ್ಲಿ ಅವರ ಹೆಸರಿನಲ್ಲಿ ಕೃಷಿಭೂಮಿಯಿರಬೇಕು.

೩. ಕೃಷಿಭೂಮಿಯ ಖರೀದಿ ಹಾಗೂ ಎಲ್ಲರ ಅಧಿಕಾರಕ್ಕೆ ಸಂಬಂಧಪಟ್ಟ ವಿಷಯದಲ್ಲಿ ನ್ಯಾಯವಾದಿಗಳ ಮಾರ್ಗದರ್ಶನ ಪಡೆದುಕೊಳ್ಳಿರಿ !

ಸಾಧಕರು ಹಳ್ಳಿಗಳಲ್ಲಿ ಒಟ್ಟಾಗಿ ಜಮೀನನ್ನು ಖರೀದಿಸಿ ಅಲ್ಲಿ ಕಟ್ಟಡ ನಿರ್ಮಾಣ ಮಾಡಬೇಕಾಗಿದ್ದಲ್ಲಿ ಅವರು ಮುಂದಿನಂತೆ ಕೃತಿ ಮಾಡಬಹುದು.

ಅ. ಒಬ್ಬ ಸಾಧಕನು ೨೦ ಸಾವಿರ ಚದರಡಿ ಜಮೀನನ್ನು ಖರೀದಿಸಿ ಅದನ್ನು ‘ಕೃಷಿಯೇತರವಾಗಿ (N.A. ನಾನ್ ಆಗ್ರಿಕಲ್ಚರಲ್ ಲ್ಯಾಂಡ್) ಆಗಿ ಮಾರ್ಪಡಿಸಿಕೊಳ್ಳಬೇಕು.

ಆ. ಅದನ್ನು ಸರಕಾರಿ ನಿಯಮಾನುಸಾರವಾಗಿ ‘ಪ್ಲಾಟ್ಗಳನ್ನಾಗಿ ವಿಭಜಿಸಿ.

. ಅನಂತರ ಆ ಸ್ಥಳದ ಮಾಲೀಕತ್ವದ ಹಕ್ಕು ಕಾನೂನುಬದ್ಧವಾಗಿ ಆಗುವ ದೃಷ್ಟಿಯಿಂದ ನ್ಯಾಯವಾದಿಗಳ ಮಾರ್ಗದರ್ಶನ ಪಡೆದುಕೊಂಡು ಅಲ್ಲಿ ಕಟ್ಟಡ ಕೆಲಸ ಪ್ರಾರಂಭಿಸಿ ಅಥವಾ ‘ಕೃಷಿಯೇತರ ವಾಗಿಸಿರುವ ‘ಪ್ಲಾಟನ್ನು ಖರೀದಿಸಿ ಅದರ ಮೇಲೆ ನಿರ್ಮಾಣ-ಕೆಲಸವನ್ನು ಪ್ರಾರಂಭಿಸಿರಿ.

೪. ಹೊಸತಾಗಿ ಜಮೀನು ಖರೀದಿಸುವಾಗ ಹಾಗೂ ಅದರ ಮೇಲೆ ಕಟ್ಟಡ ಕಟ್ಟುವಾಗ ವಾಸ್ತುಶಾಸ್ತ್ರದ ದೃಷ್ಟಿಯಂತೆ ಕೆಳಗಿನ ಅಂಶಗಳ ಬಗ್ಗೆ ವಿಚಾರ ಮಾಡಿ !

. ‘ಜಮೀನಿನ ಆಕಾರ ಚೌಕಾಕಾರ ಅಥವಾ ಆಯತಾಕಾರದಲ್ಲಿರಲಿ.

ಆ. ಜಮೀನು ಎಲ್ಲ ಕಡೆಯಿಂದಲೂ ಸಮತಟ್ಟಾಗಿದ್ದರೆ ಅಲ್ಲಿ ಮನೆ ಕಟ್ಟಲು ಚೆನ್ನಾಗಿರುತ್ತದೆ.

. ಜಮೀನು ಇಳಿಜಾರಿನಲ್ಲಿದ್ದರೆ ಅದು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರಲಿ. ಏರಿದ್ದರೆ ಅದು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿರಲಿ.

. ದಕ್ಷಿಣ ಅಥವಾ ಪಶ್ಚಿಮ ದಿಕ್ಕಿಗೆ ಕೊಳ ಅಥವಾ ನದಿಯಿರುವ ಹಾಗೂ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಪರ್ವತಗಳಿರುವ ಜಮೀನನ್ನು ಖರೀದಿಸಬೇಡಿ.

. ಜಮೀನು ಪೂರ್ವಾಭಿಮುಖವಾಗಿ ಅಥವಾ ಉತ್ತರಾಭಿಮುಖವಾಗಿರಲಿ.

. ಮನೆಯನ್ನು ಚೌಕಾಕಾರವಾಗಿ ಅಥವಾ ಆಯತಾಕೃತಿಯಲ್ಲಿ ಕಟ್ಟಿರಿ.

. ಜಮೀನಿನ ನೈಋತ್ಯದ ಕೊನೆಯಲ್ಲಿ ಮನೆ ಕಟ್ಟಿರಿ, ಅಂದರೆ ಪೂರ್ವ ಹಾಗೂ ಉತ್ತರಕ್ಕೆ ಖಾಲಿ ಜಾಗ ಹೆಚ್ಚು ಬಿಡಿ.

. ಮುಖ್ಯ ಪ್ರವೇಶದ್ವಾರ ಹಾಗೂ ಅಂಗಳದ ಪ್ರವೇಶದ್ವಾರ : ವಾಸ್ತುವಿನ ಮುಖ್ಯ ಪ್ರವೇಶದ್ವಾರಕ್ಕಾಗಿ ನಾಲ್ಕೂ ದಿಕ್ಕುಗಳ ವಿಚಾರ ಮಾಡಲಾಗಿದೆ. ಅದರಲ್ಲೂ ಉತ್ತರ ಹಾಗೂ ಪೂರ್ವ ದಿಕ್ಕಿಗೆ ಹೆಚ್ಚು ಮಹತ್ವ ನೀಡಲಾಗಿದೆ.

. ಮುಖ್ಯ ಪ್ರವೇಶದ್ವಾರದ ಹೊಸ್ತಿಲು ಮರದಿಂದ ಹೊಸ್ತಿಲು ತಯಾರಿಸಿದ್ದಾಗಿರಲಿ.

. ಮನೆಯನ್ನು ಕಟ್ಟುವಾಗ ಆದಷ್ಟು ಅದನ್ನು ವಾಸ್ತುಶಾಸ್ತ್ರಕ್ಕೆ ಅನುಸಾರವಾಗಿ ಕಟ್ಟಿರಿ, ಉದಾ. ಈಶಾನ್ಯದಲ್ಲಿ ದೇವರಕೋಣೆ, ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಕುಳಿತುಕೊಳ್ಳುವ ಕೋಣೆ, ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆ ಹಾಗೂ ‘ಪೂರ್ವಕ್ಕೆ ಮುಖ ಮಾಡಿ ಅಡುಗೆ ಮಾಡಲು ಆಗಬೇಕು, ಎಂಬ ರೀತಿಯಲ್ಲಿ ಅದರ ವಿನ್ಯಾಸವಿರಲಿ. ನೈಋತ್ಯಕ್ಕೆ ಮಲಗುವ ಕೋಣೆಯಿರಲಿ ಹಾಗೂ ಮಲಗುವಾಗ ದಕ್ಷಿಣಕ್ಕೆ ತಲೆಯಿಟ್ಟುಕೊಂಡು ಮಲಗಿರಿ. ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿ ಶೌಚಾಲಯವನ್ನು ಕಟ್ಟಿರಿ.

. ನೀರಿಗಾಗಿ ಕೊಳವೆಬಾವಿ (ಬೋರ್‌ವೆಲ್), ಬಾವಿ ಅಥವಾ ಭೂಮಿಯ ಕೆಳಗೆ (ಅಂಡರ್‌ಗ್ರೌಂಡ್) ನೀರಿನ ಕೊಳ (ಟ್ಯಾಂಕು) ಮಾಡಬೇಕಾಗಿದ್ದರೆ ಅದನ್ನು ‘ಪೂರ್ವದಿಂದ ಈಶಾನ್ಯ ಅಥವಾ ‘ಉತ್ತರದಿಂದ ಈಶಾನ್ಯದ ದಿಕ್ಕಿನಲ್ಲಿ ಮಾಡಿರಿ. ಈಶಾನ್ಯ ದಿಕ್ಕಿನ ಅತ್ಯಂತ ಮೂಲೆಯಲ್ಲಿ ಮಾಡಬೇಡಿ.

. ‘ಸೆಪ್ಟಿಕ್ ಟ್ಯಾಂಕ್ ಪಶ್ಚಿಮ-ಮಧ್ಯದಿಂದ ವಾಯುವ್ಯ ಭಾಗದಲ್ಲಿ ಮಾಡಿರಿ.

೫. ಕಡಿಮೆ ಸಮಯದಲ್ಲಿ ಹಾಗೂ ಕಡಿಮೆ ಖರ್ಚಿನಲ್ಲಿ ಊರಿನಲ್ಲಿ ಮನೆಕಟ್ಟಬೇಕೆಂದರೆ, ಏನು ಮಾಡಬೇಕು ?

ಹಳ್ಳಿಯಲ್ಲಿ ಮನೆಯ ವ್ಯವಸ್ಥೆ ಮಾಡುವಾಗ ಮನೆಯನ್ನು ಕಟ್ಟುವ ಬದಲು ತಯಾರಿರುವ ಮನೆ ಖರೀದಿಸಲು ಪ್ರಾಮುಖ್ಯತೆ ನೀಡಿರಿ. ಅಪೇಕ್ಷಿತ ರೀತಿಯಲ್ಲಿ ತಯಾರಾದ ಮನೆ ಸಿಗದಿದ್ದರೆ ಮನೆ ಕಟ್ಟುವ ತೀರ್ಮಾನ ತೆಗೆದುಕೊಳ್ಳಬಹುದು. ‘ಕಡಿಮೆ ಖರ್ಚಿನಲ್ಲಿ ಹಾಗೂ ಕಡಿಮೆ ಸಮಯದಲ್ಲಿ ಹೇಗೆ ಮನೆ ಕಟ್ಟಬಹುದು ?, ಎಂಬ ವಿಷಯದಲ್ಲಿ ಮುಂದಿನ ಅಂಶಗಳನ್ನು ನೀಡಲಾಗಿದೆ.

೫ ಅ. ಮನೆ ಕಟ್ಟುವ ಮೊದಲು ಮಾಡಬೇಕಾಗಿರುವ ಕೃತಿಗಳು

೧. ಆಪತ್ಕಾಲದ ಬಗ್ಗೆ ವಿಚಾರ ಮಾಡುವಾಗ ‘ಯಾವ ಹಳ್ಳಿಯಲ್ಲಿ ಜಮೀನು ಆಯ್ಕೆ ಮಾಡುವುದು ಯೋಗ್ಯವಿದೆ ?, ಎಂಬುದನ್ನು ಮಾನದಂಡವನ್ನು ಅಭ್ಯಾಸ ಮಾಡಿ ಜವಾಬ್ದಾರ ಸಾಧಕರ ಮಾರ್ಗದರ್ಶನಕ್ಕನುಸಾರ ಯೋಗ್ಯವಾಗಿರುವ ಹಳ್ಳಿಯಲ್ಲಿ ಜಮೀನನ್ನು ಆರಿಸಿಕೊಳ್ಳಿರಿ.

. ಮನೆಕಟ್ಟಡ ಭದ್ರವಾಗಿರಲು ಮನೆಯ ಅಡಿಪಾಯಕ್ಕೆ ಗಟ್ಟಿಯಾದ ನೆಲ ಬೇಕಾಗುತ್ತದೆ. ನೆಲದ ಮೇಲ್ಮೈಯಿಂದ ೨ ಅಡಿ ಕೆಳಗೆ ಗುಂಡಿ ತೋಡಿದಾಗ ಗಟ್ಟಿಯಾದ ನೆಲ ಸಿಗುವಂತಹ ಜಾಗವನ್ನು ಆರಿಸಿ. ಇದರಿಂದ ಅಡಿಪಾಯವು ಸುಭದ್ರವಾಗುವುದು.

. ಜಮೀನಿನ ನಕಾಶೆಯನ್ನು ಧರ್ಮಪ್ರಚಾರಕ ಸಂತರಿಗೆ ಅಥವಾ ಶೇಕಡಾ ೬೧ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ಆದರೆ ಕೆಟ್ಟ ಶಕ್ತಿಗಳ ತೊಂದರೆಯಿಲ್ಲದಿರುವ ಹಾಗೂ ಸೂಕ್ಷ್ಮದಲ್ಲಿ ಅರಿಯುವ ಸಾಧಕರಿಗೆ ತೋರಿಸಿರಿ. ನಕಾಶೆ ನೋಡಿದಾಗ ಅದರಿಂದ ಒಳ್ಳೆಯ ಸ್ಪಂದನಗಳು ಕಂಡು ಬಂದರೆ ಆ ಜಮೀನನ್ನು ಖರೀದಿಸುವ ತೀರ್ಮಾನ ತೆಗೆದುಕೊಳ್ಳಿರಿ. (ಈ ಸಂದರ್ಭದಲ್ಲಿ ಸವಿಸ್ತಾರವಾದ ಸೂಚನೆಗಳನ್ನು ಈ ಮೊದಲೇ ಪ್ರಕಟಿಸಲಾಗಿದೆ.)

. ‘ಮನೆಯಲ್ಲಿ ಎಷ್ಟು ಜನರು ವಾಸಿಸಲಿದ್ದಾರೆ ? ಅವರ ಅಗತ್ಯಗಳೇನು ?, ಎಂದು ಆಲೋಚಿಸಿ ಕೋಣೆಗಳ ಸಂಖ್ಯೆಯನ್ನು ನಿರ್ಧರಿಸಿರಿ.

. ಆಪತ್ಕಾಲದ ದೃಷ್ಟಿಯಿಂದ ಅಗತ್ಯವೆಂದು ಮನೆ ಕಟ್ಟುವಾಗ ಬೇಕಾಗಿರುವ ಎಲ್ಲ ಸೌಕರ್ಯಗಳ ಬದಲು ಜೀವನಾವಶ್ಯಕ ಸೌಲಭ್ಯಗಳ ಬಗ್ಗೆ ಆಲೋಚಿಸಿ.

. ‘ಮನೆಯ ಪ್ರವೇಶದ್ವಾರ ಹಾಗೂ ಇತರ ಕೋಣೆಗಳು ಯಾವ ದಿಕ್ಕಿನಲ್ಲಿರಬೇಕು ?, ಎಂಬ ಬಗ್ಗೆ ವಾಸ್ತುಶಾಸ್ತ್ರಜ್ಞರ ಮಾರ್ಗದರ್ಶನ ಪಡೆದುಕೊಳ್ಳಿರಿ. ನಿಮ್ಮ ಸಂಪರ್ಕದಲ್ಲಿರುವ ವಾಸ್ತುತಜ್ಞರನ್ನು ಸಂಪರ್ಕಿಸಿ ಅವರಿಂದ ನಕಾಶೆಯನ್ನು ತಯಾರಿಸಿಕೊಳ್ಳಬೇಕು.

೫ ಆ. ಪ್ರತ್ಯಕ್ಷ ಕಟ್ಟಡ ನಿರ್ಮಾಣದ ವಿಷಯ

. ಮನೆಯ ನಿರ್ಮಾಣ ‘ಆರ್.ಸಿ.ಸಿ. ಫ್ರೇಮ್ ಸ್ಟ್ರಕ್ಚರ್ ಅಥವಾ ‘ಲೋಡ್ ಬೇಯರಿಂಗ್ ಸ್ಟ್ರಕ್ಚರ್ನಲ್ಲಿರಲಿ.

. ಸಾಧ್ಯವಾದರೆ ‘ಸ್ಲಾಬ್ ಹಾಕಿ ಮನೆ ಕಟ್ಟಿರಿ. ಮನೆಯ ಒಳಗಿನ ಬದಿಯಲ್ಲಿ ‘ನಿರೂ ಫಿನಿಶ್ ಹಾಗೂ ಹೊರಗಿನ ಗೋಡೆಗೆ ‘ಸ್ಪಂಜ್ ಗಾರೆ (ಪ್ಲಾಸ್ಟರಿಂಗ್) ಮಾಡಿರಿ.

. ಅಸ್ತಿಭಾರವು ರಸ್ತೆಯಿಂದ ೨ ಅಡಿ ಎತ್ತರದಲ್ಲಿರಲಿ. ಕೋಣೆಯ ಎತ್ತರ ನೆಲದಿಂದ ಮೇಲ್ಛಾವಣಿಗೆ (‘ಸ್ಲಾಬ್ನ ಮೇಲಿನ ಕೊನೆಯ ವರೆಗೆ) ೧೦ ಅಡಿಗಳಿಡಬೇಕು.

. ಅಡುಗೆಮನೆಯಲ್ಲಿ ೫ ಅಡಿ (ಉದ್ದ) x ಎರಡುಕಾಲು ಅಡಿ (ಅಡ್ಡಗಲ) x ಎರಡುವರೆ ಅಡಿ (ಎತ್ತರ) ಈ ರೀತಿಯ ಆಕಾರದಲ್ಲಿ ಕಡಪ್ಪಾದಿಂದ ತಯಾರಿಸಿದ ಜಗುಲಿ ಮಾಡಿರಿ. ಅದರಲ್ಲಿ ‘ಸ್ಟೀಲ್‌ನ ಸಿಂಕನ್ನು ಕೂರಿಸಿರಿ. ಅಮೃತಶಿಲೆ (ಮಾರ್ಬಲ್‌ನ) ಜಗುಲಿ ಮಾಡಬೇಡಿ.

. ‘ಮನೆಯೊಳಗೆ ಸರಿಸೃಪ ಪ್ರಾಣಿಗಳು ಬರದಿರಲು ಪ್ರತಿಯೊಂದು ಬಾಗಿಲಿನ ಚೌಕಟ್ಟಿಗೂ ಹೊಸ್ತಿಲಿರಲಿ.

೫ ಇ. ನಳ್ಳಿಜೋಡಣೆ

. ಪಂಪಿನಿಂದ ಟ್ಯಾಂಕಿಯವರೆಗೂ ಹಾಗೂ ಅಲ್ಲಿಂದ ಮನೆಯೊಳಗಿನವರೆಗೂ ಬೇಕಾಗಿರುವ ಪೈಪುಗಳು ಹಾಗೂ ‘ಪ್ಲಂಬಿಂಗ್ ಫಿಟಿಂಗ್ಸ್ (ನಲ್ಲಿ ಜೋಡಿಸಲು ಬೇಕಾಗಿರುವ ದೊಡ್ಡ-ಚಿಕ್ಕ ಸಾಮಾನುಗಳು)ಗಳು ಒಳ್ಳೆಯ ಗುಣಮಟ್ಟದ್ದಾಗಿರಲಿ. ‘ಪೈಪ್‌ಲೈನ್ಗೋಸ್ಕರ ನೀಡಲಾಗುವ ಮುಖ್ಯ ಕೊಳಾಯಿಯನ್ನು (ಕಾಕ್) ಸಹಜವಾಗಿ ತಿರುಗಿಸಲು-ಆರಿಸಲು ಆಗುವಂತಹ ಸ್ಥಳದಲ್ಲಿ ಮಾಡಿಕೊಳ್ಳಿರಿ.

. ಚರಂಡಿ-ವ್ಯವಸ್ಥೆಯ ಸೌಲಭ್ಯವಿಲ್ಲದಿದ್ದಲ್ಲಿ ಮನೆಯ ಹೊರಗಿನ ಬದಿಯಲ್ಲಿ ೬ ಅಡಿ (ಉದ್ದ) x ೪ ಅಡಿ (ಅಗಲ)  x ೬ ಅಡಿ (ಎತ್ತರ)ದ ಆಕಾರದಲ್ಲಿ ‘ಸೆಪ್ಟಿಕ್ ಟ್ಯಾಂಕ್ ಕೂರಿಸಿರಿ. ಅದರ ಹೊರಗಿನ ಗೋಡೆ ೯ ಇಂಚು ದಪ್ಪ ಹಾಗೂ ಒಳಗಿನ ಗೋಡೆ (ಖಾನೆ) ೬ ಇಂಚು ದಪ್ಪವಾಗಿರಲಿ. ಚರಂಡಿ ನೀರು ಹರಿಯಲು ಒಳ್ಳೆಯ ಗುಣಮಟ್ಟದ ಪೈಪ್ ಹಾಗೂ ಫಿಟಿಂಗ್ಸ್‌ಗಳನ್ನು ಉಪಯೋಗಿಸಿರಿ. ಇದರಿಂದ ಭವಿಷ್ಯದಲ್ಲಿ ಸುಸ್ಥಿತಿ-ದುರಸ್ತಿ (ಮೈಟೇನೆನ್ಸ್ ಮತ್ತು ರಿಪೇರ್)ಯ ಅಡಚಣೆಗಳು ಬರುವುದಿಲ್ಲ.

. ಸ್ನಾನಗೃಹ ಹಾಗೂ ಅಡುಗೆ ಮನೆಯಿಂದ ಬರುವ ನೀರನ್ನು ಈ ಟ್ಯಾಂಕಿಗೆ ಜೋಡಿಸುವುದು ಬೇಡ. ಈ ನೀರಿಗೋಸ್ಕರ ಒಂದು ಬೇರೆ ಹೊಂಡ ಅಗೆದು ಅದರಲ್ಲಿ ಇಟ್ಟಿಗೆಗಳ ಕೆಲವು ತುಂಡುಗಳನ್ನು ಹಾಕಿರಿ (ಅದಕ್ಕೆ ‘ಹೀರಿಕೆ ಗುಂಡಿ (ಸೋಕ್ ಪಿಟ್) ಎಂದು ಹೇಳಲಾಗುತ್ತದೆ.) ಆ ನೀರನ್ನು ಅದರೊಳಗೆ ಇಂಗಿಸಿ.

೫ ಈ. ಮರಗೆಲಸ

೧. ಮನೆಯ ಮುಖ್ಯದ್ವಾರ ಹಾಗೂ ಕೋಣೆಗಳ ಇತರ ಬಾಗಿಲುಗಳು ಮರದ್ದೇ ಆಗಿರಲಿ. ಸ್ನಾನಗೃಹ ಹಾಗೂ ಶೌಚಾಲಯಕ್ಕೆ ‘ಫೈಬರ್ ಬಾಗಿಲುಗಳನ್ನು ಕೂರಿಸಿರಿ. ಅಲ್ಲಿ ಮರದ ಬಾಗಿಲು ಕೂರಿಸುವುದು ಬೇಡ.

೨. ‘ಸ್ಲೈಡಿಂಗ್ನ ಕಿಟಕಿಗಳನ್ನು ತಯಾರಿಸಲು ಹೆಚ್ಚು ಖರ್ಚಾಗುವುದರಿಂದ ಅಲ್ಲಿ ಆ ರೀತಿಯ ಕಿಟಕಿಗಳನ್ನು ತಯಾರಿಸದೆ ಎಂದಿನಂತೆ ಮರದ ಕಿಟಕಿಗಳನ್ನೇ ಮಾಡಿಸಿಕೊಳ್ಳಿ.

. ಮನೆಯಲ್ಲಿ ಪ್ರತ್ಯೇಕವಾಗಿ ಕಪಾಟುಗಳನ್ನು ಮಾಡದೆ ಗೋಡೆ ಯಲ್ಲಿಯೇ ಕಪಾಟುಗಳನ್ನು ಮಾಡಿ.

– ಶ್ರೀ. ಮಧುಸೂದನ ಕುಲಕರ್ಣೀ, ಸನಾತನ ಆಶ್ರಮ, ರಾಮನಾಥಿ, ಗೋವಾ (೧೦.೨.೨೦೧೯)

(ಮುಂದುವರಿಯುವುದು)