ಬುರಖಾ ಹಾಕಿಕೊಳ್ಳುವುದು ಮೂಲಭೂತವಾದದ ಲಕ್ಷಣ ಆಗಿದ್ದರಿಂದ ಶ್ರೀಲಂಕಾ ಬುರಖಾ ಮೇಲೆ ನಿಷೇಧ ಹೇರಲಿದೆ !

೧ ಸಾವಿರಕ್ಕೂ ಹೆಚ್ಚು ಮದರಸಾಗಳನ್ನು ಮುಚ್ಚಲಾಗುವುದು !

* ಜಿಹಾದಿ ಭಯೋತ್ಪಾದಕ ದಾಳಿಯ ನಂತರ ಇಂತಹ ದಿಟ್ಟ ನಿರ್ಧಾರವನ್ನು ತೆಗೆದುಕೊಂಡ ಶ್ರೀಲಂಕಾ ಎಲ್ಲಿ ಮತ್ತು ಕಳೆದ ೩ ದಶಕಗಳಲ್ಲಿ ಸಾವಿರಾರು ಜಿಹಾದಿ ಭಯೋತ್ಪಾದಕ ದಾಳಿಗಳು ಆಗಿ ಅದರಲ್ಲಿ ಸಾವಿರಾರು ನಾಗರಿಕರ ಸಾವಿನ ನಂತರವೂ ನಿಷ್ಕ್ರಿಯವಾಗಿರುವ ಭಾರತ ಎಲ್ಲಿ !

* ಭಾರತದಲ್ಲಿ ಮದರಸಾಗಳು ಭಯೋತ್ಪಾದಕರನ್ನು ಸೃಷ್ಟಿಸಿವೆ ಎಂಬುದು ಬೆಳಕಿಗೆ ಬಂದಿದ್ದರೂ, ಅವುಗಳನ್ನು ಮುಚ್ಚುವ ಬದಲು, ಅವರಿಗೆ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ನೀಡಲಾಗುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಕೊಲಂಬೊ (ಶ್ರೀಲಂಕಾ) – ರಾಷ್ಟ್ರೀಯ ಭದ್ರತಾ ನಿಟ್ಟಿನಲ್ಲಿ ದೇಶದಲ್ಲಿ ಬುರ್ಖಾ ನಿಷೇಧವನ್ನು ಒತ್ತಾಯಿಸುವ ನಿರ್ಣಯಕ್ಕೆ ನಾನು ಸಹಿ ಹಾಕಿದ್ದೇನೆ. ಅಲ್ಲದೆ, ೧ ಸಾವಿರಕ್ಕೂ ಹೆಚ್ಚು ಮದರಸಾಗಳನ್ನು ಮುಚ್ಚಲಾಗುವುದು. ಈ ಪ್ರಸ್ತಾಪವನ್ನು ಈಗ ಸಂಪುಟಕ್ಕೆ ಅನುಮೋದನೆಗಾಗಿ ಕಳುಹಿಸಲಾಗುವುದು ಎಂದು ಶ್ರೀಲಂಕಾದ ಸಾರ್ವಜನಿಕ ಭದ್ರತಾ ಸಚಿವ ಸರಥ್ ವೀರಶೇಖರ ಒಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ‘ನಮ್ಮ ಕಾಲದಲ್ಲಿ ಮುಸ್ಲಿಂ ಮಹಿಳೆಯರು ಮತ್ತು ಹುಡುಗಿಯರು ಬುರ್ಖಾ ಧರಿಸಲಿಲ್ಲ. ಬುರ್ಖಾ ಧರಿಸುವುದು ಮತಾಂಧತೆಯ ಸಂಕೇತವಾಗಿದೆ ಮತ್ತು ಇತ್ತೀಚೆಗೆ ಬುರಖಾ ಹಾಕಿಕೊಳ್ಳುವುದು ಜನಪ್ರಿಯವಾಗಿದೆ. ಅದಕ್ಕಾಗಿಯೇ ನಾವು ಬುರ್ಖಾವನ್ನು ನಿಷೇಧಿಸಲಿದ್ದೇವೆ. ಹಾಗೆಯೇ ಯಾರೂ ಶಾಲೆಯನ್ನು ತೆರೆಯಲು ಮತ್ತು ಮಕ್ಕಳಿಗೆ ಏನು ಬೇಕೋ ಅದನ್ನು ಕಲಿಸಲು ಸಾಧ್ಯವಿಲ್ಲ’, ಎಂದು ಅವರು ಹೇಳಿದರು.

. ಜಿಹಾದಿ ಉಗ್ರರು ಚರ್ಚುಗಳು ಮತ್ತು ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ ನಂತರ ೨೦೧೯ ರಲ್ಲಿ ಶ್ರೀಲಂಕಾದಲ್ಲಿ ಬುರ್ಖಾಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು.

. ೨೦೨೦ ರಲ್ಲಿ ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ, ಶ್ರೀಲಂಕಾದಲ್ಲಿ ಶವಗಳನ್ನು ಹೂಳದೆ ಸುಡುವ ನಿರ್ಧಾರವನ್ನು ಶ್ರೀಲಂಕಾ ಸರಕಾರ ಘೋಷಿಸಿತು; ನಂತರ ಹೆಚ್ಚಿನ ದೇಶೀಯ ಮತ್ತು ಅಂತರರಾಷ್ಟ್ರೀಯ ಟೀಕೆಗಳ ನಂತರ ನಿರ್ಧಾರವನ್ನು ಹಿಂಪಡೆದು ಮುಸ್ಲಿಂ ನಾಗರಿಕರಿಗೆ ತೀರಿಹೋದ ಅವರ ಸಂಬಂಧಿಗಳ ದೇಹವನ್ನು ಹೂಳುವ ಅವಕಾಶ ನೀಡಲಾಯಿತು.

ಜಮಾತೆ-ಇ-ಇಸ್ಲಾಮಿಯ ಮಾಜಿ ಮುಖ್ಯಸ್ಥನ ಬಂಧನ

ಜಿಹಾದಿ ಭಯೋತ್ಪಾದನೆಯನ್ನು ಉತ್ತೇಜಿಸಿದ್ದಕ್ಕಾಗಿ ಶ್ರೀಲಂಕಾದಲ್ಲಿ ಜಮಾತ್-ಎ-ಇಸ್ಲಾಮಿ ಈ ಭಯೋತ್ಪಾದಕ ಸಂಘಟನೆಯ ಮಾಜಿ ನಾಯಕ ೬೦ ವಯಸ್ಸಿನ ರಶೀದ್ ಹಜ್ಜೂಲ್ ಅಕಬರ್ ಎಂಬವನನ್ನು ಬಂಧಿಸಲಾಗಿದೆ. ಆತ ೨೦೧೯ ರವರೆಗೆ ೨೪ ವರ್ಷಗಳ ಕಾಲ ಜಮಾತ್-ಎ-ಇಸ್ಲಾಮಿಯ ಮುಖ್ಯಸ್ಥನಾಗಿದ್ದ.