ದೆಹಲಿ ಗಲಭೆಯಲ್ಲಿ ಶಂಕಿತ ಹಿಂದೂ ಆರೋಪಿಗಳನ್ನು ಕೊಲ್ಲಲು ಮತಾಂಧರ ಸಂಚು: ಇಬ್ಬರು ಮತಾಂಧರ ಬಂಧನ

* ಬಂಧಿಸಿ ಜೈಲಿನಲ್ಲಿದ್ದರೂ ಮತಾಂಧರು ತಮ್ಮ ಅಪರಾಧಿ ಮಾನಸಿಕತೆಯನ್ನು ಜಾಗೃತವಾಗಿಟ್ಟುಕೊಂಡು ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದ್ದರಿಂದ, ಅಂತಹವರಿಗೆ ಮರಣದಂಡನೆ ವಿಧಿಸಲು ಸರಕಾರ ಪ್ರಯತ್ನಿಸಬೇಕು!

* ಕಾರಾಗೃಹಗಳಲ್ಲಿ ಕೊಲೆ ಯತ್ನಗಳ ನಡೆಯುತ್ತವೆಯೆಂದರೆ ಕಾರಾಗೃಹಗಳ ಭದ್ರತೆ ದುರ್ಬಲವಾಗಿದೆ ಎಂಬುದು ಗಮನಕ್ಕೆ ಬರುತ್ತದೆ. ಇದಕ್ಕೆ ಕಾರಣರಾದವರನ್ನೇ ಕಾರಾಗೃಹದಲ್ಲಿ ತಳ್ಳಬೇಕು!

ನವ ದೆಹಲಿ: ದೆಹಲಿ ಗಲಭೆಗೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿರುವ ಶಂಕಿತ ಹಿಂದೂ ಆರೋಪಿಗಳ ಹತ್ಯೆ ಮಾಡಲು ಬಂಧನದಲ್ಲಿರುವ ಒಬ್ಬ ಮತಾಂಧನು ಹೊರಗಿರುವ ತನ್ನ ಸಹಚರರೊಂದಿಗೆ ಸಂಚು ರೂಪಿಸುತ್ತಿದ್ದ ಎಂದು ತಿಳಿದುಬಂದಿದೆ. ಪೊಲೀಸರು ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಜೈಲಿನಲ್ಲಿ ಪಾದರಸ ಕುಡಿಸಿ ಹಿಂದೂ ಆರೋಪಿಗಳನ್ನು ಕೊಲ್ಲಲು ಸಂಚು ರೂಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೈಲಿನಲ್ಲಿರುವ ಶಾಹಿದ್ ಮತ್ತು ಜೈಲಿನಿಂದ ಹೊರಗಿರುವ ಅಸ್ಲಂ ಈ ಪಿತೂರಿಯನ್ನು ನಡೆಸಿದ್ದಾರೆ. ಇದಕ್ಕಾಗಿ ಅಸ್ಲಂ ಜೈಲಿನಲ್ಲಿರುವ ಶಾಹಿದ್‌ಗೆ ಪಾದರಸವನ್ನು ಕಳುಹಿಸಿದ್ದ.

ಅಂಕಿತ್ ಮತ್ತಿತರರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಯಿತು. ಈ ಹಿಂದೂ ಆರೋಪಿಗಳು ದೆಹಲಿಯ ಜಾಫ್ರಾಬಾದ್‌ನಲ್ಲಿರುವ ಒಂದು ಧಾರ್ಮಿಕ ಸ್ಥಳಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಮತಾಂಧರಿಗೆ ಗುಮಾನಿಯಿತ್ತು; ಆದರೆ, ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಜೈಲಿಗೆ ಪಾದರಸವನ್ನು ಹೇಗೆ ತಲುಪಿಸಲಾಯಿತು ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.