ಸರಕಾರಿ ವಾಚನಾಲಯಗಳಲ್ಲಿ ಹಾಗೆಯೇ ಶಾಲೆ ಮತ್ತು ಮಹಾವಿದ್ಯಾಲಯಗಳ ಗ್ರಂಥಾಲಯಗಳಲ್ಲಿ ಸನಾತನದ ಗ್ರಂಥ ಮತ್ತು ಕಿರುಗ್ರಂಥಗಳನ್ನು ಇಡಲು ಪ್ರಯತ್ನಿಸಿ !

ಸಾಧಕರಿಗೆ ಮಹತ್ವದ ಸೂಚನೆ

‘ಪ್ರತಿವರ್ಷ ಮಾರ್ಚ್‌ನಲ್ಲಿ ಹಾಗೆಯೇ ಜುಲೈನಿಂದ ಸೆಪ್ಟೆಂಬರ್ ಈ ಕಾಲದಲ್ಲಿ ಸರಕಾರಿ ವಾಚನಾಲಯಗಳಿಗೆ ಗ್ರಂಥಗಳ ಖರೀದಿಗಾಗಿ ಸರಕಾರದಿಂದ ಅನುದಾನವು ಪ್ರಾಪ್ತವಾಗುತ್ತದೆ. ಅನಂತರ ಆ ವಾಚನಾಲಯದ ಸಂಚಾಲಕರು ವಿವಿಧ ಗ್ರಂಥಗಳನ್ನು ಖರೀದಿಸುತ್ತಾರೆ. ವಾಚಕರಿಗೆ ರಾಷ್ಟ್ರ, ಧರ್ಮ ಮತ್ತು ಅಧ್ಯಾತ್ಮ ಕುರಿತಾದ ಅಮೂಲ್ಯ ಜ್ಞಾನವು ಸಹಜ ಸುಲಭ ಭಾಷೆಯಲ್ಲಿ ನೀಡುವ ಸನಾತನದ ಗ್ರಂಥ ಮತ್ತು ಕಿರುಗ್ರಂಥಗಳನ್ನು ಎಲ್ಲ ಕಡೆಗಿನ ವಾಚನಾಲಯಗಳಲ್ಲಿ ಇಡಬಹುದು. ಇದಕ್ಕಾಗಿ ಎಲ್ಲೆಡೆಯ ಸಾಧಕರು ಮುಂದಿನಂತೆ ಪ್ರಯತ್ನಿಸಬೇಕು.

೧. ವಾಚನಾಲಯದ ಸಂಚಾಲಕರು,ಹಾಗೆಯೇ ಮುಖ್ಯೋಧ್ಯಾಪಕರು ಮತ್ತು ಪ್ರಾಚಾರ್ಯರನ್ನು ಸಂಪರ್ಕಿಸುವುದು

ಸಾಧಕರು ತಾಲೂಕು ಸ್ತರದ ವಾಚನಾಲಯದ ಮುಖ್ಯಸ್ಥರನ್ನು ಸಂಪರ್ಕಿಸಿದರೆ ಆ ತಾಲೂಕಿನ ಎಲ್ಲ ಮುಖ್ಯಸ್ಥರ ಹೆಸರುಗಳು ಮತ್ತು ಸಂಪರ್ಕ ಸಂಖ್ಯೆಗಳು ಸಿಗಬಹುದು. ಶಾಲೆಗಳ ಮುಖ್ಯೋಧ್ಯಾಪಕರು ಮತ್ತು ಮಹಾವಿದ್ಯಾಲಯಗಳ ಪ್ರಾಚಾರ್ಯರು, ಹಾಗೆಯೇ ವಾಚನಾಲಯಗಳ ಗ್ರಂಥಪಾಲರನ್ನು (ಲೈಬ್ರೇರಿಯನ್) ಅವರ ಗ್ರಂಥಾಲಯಗಳಿಗಾಗಿ ಸನಾತನದ ಗ್ರಂಥಗಳನ್ನು ಖರೀದಿಸಲು ಪ್ರೇರೇಪಿಸಬಹುದು. ಇದರಿಂದ ವಿದ್ಯಾರ್ಥಿಗಳಿಗೆ ಸಂಸ್ಕಾರಸಕ್ಷಮವಾಗುವ ವಯಸ್ಸಿನಲ್ಲಿ ‘ಬಾಲಸಂಸ್ಕಾರದ ಲೇಖನಮಾಲೆ ಹಾಗೆಯೇ ಇತರ ಗ್ರಂಥಗಳನ್ನು ಓದಲು ಸಾಧ್ಯವಾಗಿ ಅವುಗಳಿಂದ ಲಾಭ ಪಡೆಯಲು ಸಾಧ್ಯವಾಗುತ್ತದೆ.

. ವಾಚನಾಲಯಗಳ ಮುಖ್ಯಸ್ಥರು ಹಾಗೆಯೇ ಮುಖ್ಯೋಪಾಧ್ಯಾಯರು ಮತ್ತು ಪ್ರಾಚಾರ್ಯರಿಗೆ ಸನಾತನವು ಪ್ರಕಾಶಿಸಿದ ಗ್ರಂಥಗಳ ಪಟ್ಟಿಯನ್ನು ತೋರಿಸಬೇಕು. ಆ ಪಟ್ಟಿಯನ್ನು ನೋಡಿ ಅವರಿಗೆ ‘ಸನಾತನದ ವಿವಿಧ ವಿಷಯಗಳ ಕುರಿತಾದ ಗ್ರಂಥಗಳ ಮಾಹಿತಿ ಮತ್ತು ಅವು ಯಾವೆಲ್ಲ ಭಾಷೆಗಳಲ್ಲಿ ಲಭ್ಯವಿವೆ ? ಎಂಬುದು ಒಂದೇ ಬಾರಿಗೆ ತಿಳಿಯಲು ಸಾಧ್ಯವಾಗುತ್ತದೆ. ವಾಚನಾಲಯಗಳು, ಶಾಲೆಗಳು ಮತ್ತು ಮಹಾವಿದ್ಯಾಲಯಗಳಿಗಾಗಿ ಸನಾತನದ ಗ್ರಂಥಗಳನ್ನು ಖರೀದಿಸಲು ಅವರನ್ನು ಪ್ರೇರೇಪಿಸಬೇಕು.

. ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ ಇವುಗಳ ಧಾರ್ಮಿಕ ವ್ರತವನ್ನು ಪಾಲಿಸುತ್ತಿರುವ ‘ಸನಾತನ ಪ್ರಭಾತ ನಿಯತಕಾಲಿಕೆಗಳ ಮಹತ್ವವನ್ನು ಹೇಳಿ ಸಂಚಿಕೆಯನ್ನು ಆರಂಭಿಸಲು ವಿನಂತಿಸಬೇಕು. ವಾಚನಾಲಯಗಳು, ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಸಂಚಿಕೆಯನ್ನು ಆರಂಭಿಸಿದರೆ ಒಂದೇ ಬಾರಿಗೆ ಅನೇಕರಿಗೆ ಸಂಚಿಕೆಯನ್ನು ಓದಲು ಸಾಧ್ಯವಾಗಿ ಅವರಿಗೆ ರಾಷ್ಟ್ರ ಮತ್ತು ಧರ್ಮ ಇವುಗಳ ಮೇಲಾಗುವ ಆಘಾತಗಳ ಬಗ್ಗೆ ಜ್ಞಾನವಾಗುತ್ತದೆ.

ಇ. ವಾಚನಾಲಯಗಳು, ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ರಾಷ್ಟ್ರ, ಧರ್ಮ ಅಥವಾ ಅಧ್ಯಾತ್ಮ ಇವುಗಳ ಕುರಿತು ಬೋಧಪ್ರದ ಮಾಹಿತಿಯನ್ನು ನೀಡುವ ‘ಆನ್‌ಲೈನ್ ಪ್ರವಚನಗಳನ್ನು ಆಯೋಜಿಸುವ ಕುರಿತು ಕೇಳಬೇಕು.

೨. ವಾಚನಾಲಯಗಳಿಗೆ ನಿಧಿಯನ್ನು ನೀಡುವ ಜನಪ್ರತಿನಿಧಿಗಳಿಗೆ ಸನಾತನದ ಗ್ರಂಥಗಳ ಮಹತ್ವವನ್ನು ಹೇಳುವುದು

ಬಹುತೇಕ ಶಾಸಕರು ಮತ್ತು ವಿಶೇಷ ನಿರೀಕ್ಷಕರು ‘ಚುನಾವಣಾಕ್ಷೇತ್ರದ ಅಭಿವೃದ್ಧಿ ನಿಧಿಯಿಂದ ಗ್ರಂಥಾಲಯಗಳು, ವಾಚನಾಲಯಗಳು ಮುಂತಾದವುಗಳಿಗೆ ಗ್ರಂಥಗಳನ್ನು ಖರೀದಿಸಲು ನಿಧಿಯನ್ನು ನೀಡುತ್ತಾರೆ ಅಥವಾ ಕೆಲವು ಗ್ರಂಥಗಳನ್ನು ಖರೀದಿಸಿ ಕೊಡುತ್ತಾರೆ. ಸಾಧಕರು ಇಂತಹ ಜನ ಪ್ರತಿನಿಧಿಗಳನ್ನು ಸಂಪರ್ಕಿಸಿ, ಆ ನಿಧಿಯಿಂದ ಸನಾತನದ ಗ್ರಂಥಗಳನ್ನು ಖರೀದಿಸಲು ಹೇಳಬೇಕು. ಇಲ್ಲಿಯವರೆಗೆ ಇಂತಹ ಬಹಳಷ್ಟು ಜನಪ್ರತಿನಿಧಿಗಳು ವಾಚನಾಲಯಗಳಿಗಾಗಿ ಸನಾತನದ ಗ್ರಂಥಗಳನ್ನು ಖರೀದಿಸಲು ನಿಧಿಯನ್ನು ಒದಗಿಸಿದ್ದಾರೆ.

೩. ಸಾಧಕರೇ, ವಾಚನಾಲಯದ ಸಂಚಾಲಕರು, ಮುಖ್ಯಸ್ಥರು, ಹಾಗೆಯೇ ಮುಖ್ಯೋಪಾಧ್ಯಾಯರು ಮತ್ತು ಪ್ರಾಚಾರ್ಯರನ್ನು ಸಂಪರ್ಕಿಸಿ !

ಮೇಲಿನ ಸಂಪರ್ಕದ ಸಮಯದಲ್ಲಿ ವಾಚನಾಲಯದ ಸಂಚಾಲಕರು, ಮುಖ್ಯಸ್ಥರು, ಮುಖ್ಯೋಪಾಧ್ಯಾಯರು ಮತ್ತು ಪ್ರಾಚಾರ್ಯರಿಗೆ ಸನಾತನದ ಗ್ರಂಥಗಳನ್ನು ಖರೀದಿಸಲು ಉದ್ಯುಕ್ತಗೊಳಿಸುವುದರೊಂದಿಗೆ ಅವರ ಅಭಿರುಚಿಗನುಸಾರ ರಾಷ್ಟ್ರ, ಧರ್ಮ ಅಥವಾ ಅಧ್ಯಾತ್ಮ ಇವುಗಳ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು, ಹಾಗೆಯೇ ಅವರೊಂದಿಗೆ ಆತ್ಮೀಯತೆಯನ್ನು ಸಾಧಿಸುವುದು, ಈ ದೃಷ್ಟಿಯಿಂದಲೂ ಪ್ರಯತ್ನಿಸಬೇಕು. ಜಿಲ್ಲಾಸೇವಕರು ಮೇಲಿನ ಸಂಪರ್ಕವನ್ನು ಮಾಡಲು ಕೆಲವು ಸಾಧಕರ ಆಯೋಜನೆಯನ್ನು ಮಾಡಬೇಕು ಮತ್ತು ‘ಈ ಸೇವೆಯು ಆದ್ಯತೆಯಿಂದ ಪೂರ್ಣಗೊಳ್ಳುವಂತೆ, ನೋಡಿಕೊಳ್ಳಬೇಕು.

ಸಾಧಕರೇ, ವಾಚಕನಿಗೆ ಸರ್ವಾಂಗಸ್ಪರ್ಶಿ ಜ್ಞಾನಭಂಡಾರವನ್ನು ನೀಡುವ ಸನಾತನದ ಗ್ರಂಥ ಮತ್ತು ಕಿರುಗ್ರಂಥಗಳನ್ನು ಹೆಚ್ಚೆಚ್ಚು ವಾಚನಾಲಯಗಳವರೆಗೆ ತಲುಪಿಸಿ ಗುರುಕಾರ್ಯದ ಪ್ರಸಾರವನ್ನು ಮಾಡಿರಿ !