೨೦೨೧ ರ ಐಪಿಎಲ್ ಸ್ಪರ್ಧೆಯ ಮುಖ್ಯ ಪ್ರಾಯೋಜಕತ್ವ ಮತ್ತೆ ಚೀನಾದ ವಿವೋ ಕಂಪನಿಗೆ !

ಬಿಸಿಸಿಐನ ರಾಷ್ಟ್ರಘಾತಕ ನಿರ್ಧಾರ !

  • ಇದು ಬಿಸಿಸಿಐನ ಕಪಟ ದೇಶಭಕ್ತಿಯನ್ನು ತೋರಿಸುತ್ತದೆ! ಬಿಸಿಸಿಐ ದೇಶಭಕ್ತಿಗಿಂತ ಹಣ ಹೆಚ್ಚು ಮಹತ್ವದ್ದಾಗಿರುವುದರಿಂದ, ಅದು ಪುನಃ ಚೀನಾದ ಕಂಪನಿಗೆ ಪ್ರಾಯೋಜಕತ್ವ ನೀಡಿತು, ಇಲ್ಲದಿದ್ದರೆ ಅದು ಭಾರತೀಯ ಅಥವಾ ಇನ್ನಿತರ ವಿದೇಶಿ ಕಂಪನಿಗಳಿಗೆ ನೀಡಬಹುದಿತ್ತು!
  • ಈ ವಿಷಯದಲ್ಲಿ ಮಧ್ಯಪ್ರವೇಶಿಸುವ ಮೂಲಕ ಕೇಂದ್ರ ಸರ್ಕಾರವು ಬಿಸಿಸಿಐನ ರಾಷ್ಟ್ರಘಾತಕ ನಿರ್ಧಾರವನ್ನು ಬದಲಾಯಿಸಬೇಕು ಮತ್ತು ಅದಕ್ಕೆ ತಿಳುವಳಿಕೆಯನ್ನು ನೀಡಬೇಕೆಂದು ದೇಶಪ್ರೇಮಿಗಳು ನಿರೀಕ್ಷಿಸುತ್ತಾರೆ !

ಚೆನ್ನೈ: ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನ್ಯದೊಂದಿಗೆ ಘರ್ಷಣೆಯ ನಂತರ ಭಾರತವು ಚೀನಾದ ಮೇಲೆ ಕೆಂಡಕಾರಿದ. ಆ ಸಮಯದಲ್ಲಿ, ಕೇಂದ್ರ ಸರ್ಕಾರವು ಚೀನಾದ ಅನೇಕ ಕಂಪನಿಗಳ ಗುತ್ತಿಗೆಯನ್ನು ರದ್ದುಗೊಳಿಸಿತು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ‘ಆತ್ಮನಿರ್ಭರ ಭಾರತ’ ಎಂಬ ಘೋಷಣೆಯನ್ನು ನೀಡಿದರು. ಅದೇ ಸಮಯದಲ್ಲಿ, ‘ಇಂಡಿಯನ್ ಪ್ರೀಮಿಯರ್ ಲೀಗ್’ (ಐಪಿಎಲ್) ಕ್ರಿಕೆಟ್ ಪಂದ್ಯಾವಳಿಯ ಪ್ರಾಯೋಜಕರಾದ ಚೀನಾದ ವಿವೊ ಕಂಪನಿಯೊಂದಿಗೆ ೨೦೨೦ ರ ಮುಖ್ಯ ಪ್ರಾಯೋಜಕತ್ವದ ಒಪ್ಪಂದವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರದ್ದುಗೊಳಿಸಿತ್ತು; ಆದರೆ, ಈ ವರ್ಷ ಪುನಃ ೨೦೨೧ ರ ಐಪಿಎಲ್ ಸ್ಪರ್ಧೆಯ ಮುಖ್ಯ ಪ್ರಾಯೋಜಕತ್ವ ವಿವೋಗೆ ನೀಡಲಾಗಿದೆ ಎಂದು ಬಿಸಿಸಿಐ ಪ್ರಕಟಿಸಿದೆ.