ಸಾಧಕರಿಗೆ ಸೂಚನೆ, ಹಾಗೆಯೇ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ವಿನಂತಿ !
ಸದ್ಯ ಸಾರಿಗೆಗಾಗಿ ರೈಲ್ವೆ, ಟ್ರಕ್, ಟೆಂಪೋ, ರಿಕ್ಷಾಗಳಂತಹ ಇಂಧನದಿಂದ ಚಲಿಸುವ ವಾಹನಗಳನ್ನು ಬಳಸಲಾಗುತ್ತದೆ. ಸಂಭಾವ್ಯ ಆಪತ್ಕಾಲದಲ್ಲಿ ಇಂಧನವು ಲಭ್ಯವಿರಲಾರದು. ಆ ಸಮಯದಲ್ಲಿ ದೈನಂದಿನ ಆವಶ್ಯಕತೆಗಳನ್ನು ಪೂರೈಸಲು ಪ್ರಾಚೀನಕಾಲದಲ್ಲಿ ಬಳಸಲಾಗುತ್ತಿದ್ದ ಇಂಧನರಹಿತ ವಾಹನಗಳ (ಉದಾ. ಎತ್ತಿನಗಾಡಿ, ಕುದುರೆಗಾಡಿ) ಪರ್ಯಾಯವನ್ನು ಬಳಸಬೇಕಾಗುತ್ತದೆ. ಇವೆಲ್ಲ ಸಾಧನಗಳನ್ನು ಪಡೆದುಕೊಳ್ಳಲು, ಅದನ್ನು ಓಡಿಸುವುದು, ನಿರ್ವಹಣೆ, ದುರಸ್ತಿ, ಪ್ರಾಣಿಗಳನ್ನು ನೋಡಿಕೊಳ್ಳುವ ಕೌಶಲ್ಯವನ್ನು ಇಂದಿನಿಂದ ಕಲಿಯುವುದು ಆವಶ್ಯವಾಗಿದೆ.
೧. ಹೊಸ ಎತ್ತಿ ನಗಾಡಿ ಮತ್ತು ಕುದುರೆಗಾಡಿಗಳನ್ನು ಅರ್ಪಣೆಯ ರೂಪದಲ್ಲಿ ಅಥವಾ ಕಡಿಮೆ ಬೆಲೆಗೆ ಕೊಡಬಹುದು ಎಂದಾದರೆ ತಿಳಿಸಿ
ಮುಂಬರುವ ಕಾಲದಲ್ಲಿ ಎಲ್ಲ ಆಶ್ರಮ ಮತ್ತು ಸೇವಾಕೇಂದ್ರಗಳಿಗೆ ಎತ್ತಿನಗಾಡಿ ಮತ್ತು ಕುದುರೆಗಾಡಿಗಳ ಆವಶ್ಯಕತೆ ಭಾಸವಾಗಲಿದೆ. ಇಂದಿಗೂ ಗ್ರಾಮೀಣ ಪ್ರದೇಶದ ಕೆಲವು ರೈತರು ಎತ್ತಿನಗಾಡಿಗಳನ್ನು ಬಳಸುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಗಾಡಿಗಳನ್ನು ತಯಾರಿಸಲಾಗುತ್ತದೆ. ತಮ್ಮ ಪ್ರದೇಶದಲ್ಲಿ ಎತ್ತಿನಗಾಡಿ ಅಥವಾ ಕುದುರೆಗಾಡಿ ತಯಾರಿಸುವವರ ಮಾಹಿತಿಯನ್ನು ಸ್ಥಳೀಯ ಸಾಧಕರಿಗೆ ನೀಡಿರಿ. ಆ ಸಾಧಕರು ಜಿಲ್ಲಾಸೇವಕರ ಮೂಲಕ ಕೆಳಗೆ ನೀಡಿದ ಕೋಷ್ಟಕಕ್ಕನುಸಾರ ಮಾಹಿತಿಯನ್ನು ಕಳುಹಿಸಿರಿ. ಹೊಸ ಗಾಡಿಯನ್ನು ಅರ್ಪಣೆಯ ರೂಪದಲ್ಲಿ ಅಥವಾ ಕಡಿಮೆಬೆಲೆಗೆ ನೀಡಬಹುದೇ ?, ಇದರ ಬಗ್ಗೆಯೂ ತಿಳಿಸಬೇಕು.
೨. ಹಳೆಯ ಎತ್ತಿನಗಾಡಿ ಮತ್ತು ಕುದುರೆಗಾಡಿ ಅಥವಾ ಅವುಗಳ ಬಿಡಿಭಾಗಗಳನ್ನು ಅರ್ಪಣೆಯ ರೂಪದಲ್ಲಿ ಅಥವಾ ಕಡಿಮೆಬೆಲೆಗೆ ನೀಡಬಹುದೇ ಎಂದು ತಿಳಿಸಿ.
ಗ್ರಾಮೀಣ ಪ್ರದೇಶಗಳಲ್ಲಿ ರೈತರು ಕೃಷಿಗಾಗಿ ಎತ್ತಿನಗಾಡಿಗಳ ಬಳಕೆಯನ್ನು ಕಡಿಮೆ ಮಾಡಿ ವಾಹನಗಳನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ. ಅದರಿಂದ ಹೆಚ್ಚಿನ ರೈತರ ಬಳಿ ಎತ್ತಿನಗಾಡಿ ಅಥವಾ ಅದರ ಭಾಗಗಳು(ಚಕ್ರ, ವಸ್ತುಗಳನ್ನು ಇಡುವ ಸ್ಥಳ, ನೊಗ (ಎರಡು ಎತ್ತಿನ ಬಂಡಿಯನ್ನು ಜೋಡಿಸುವ ಮರ ಇತ್ಯಾದಿ) ಬಳಕೆಯಾಗದೇ ಹಾಗೆ ಇವೆ. ಇವೆಲ್ಲ ಭಾಗಗಳನ್ನು ಸ್ವಲ್ಪ ದುರುಸ್ತಿ ಮಾಡಿ ಮರುಬಳಕೆ ಮಾಡಬಹುದು.
ತಮ್ಮ ಪ್ರದೇಶದಲ್ಲಿ ರೈತರು ಈ ರೀತಿಯ ಹಳೆಯ ಎತ್ತಿನ ಗಾಡಿಗಳು ಅಥವಾ ಕುದುರೆಗಾಡಿಗಳು ಅಥವಾ ಅವುಗಳ ವಿವಿಧ ಭಾಗಗಳನ್ನು ಅರ್ಪಣೆರೂಪದಲ್ಲಿ ಅಥವಾ ಕಡಿಮೆ ಬೆಲೆಗೆ ನೀಡಲು ಇಚ್ಚಿಸುತ್ತಿದ್ದಲ್ಲಿ ಅದರ ಮಾಹಿತಿಯನ್ನು ಸ್ಥಳೀಯ ಸಾಧಕರಿಗೆ ಕಳಿಸಿಕೊಡಬೇಕು. ಸ್ಥಳೀಯ ಸಾಧಕರು ಜಿಲ್ಲಾಸೇವಕರ ಮೂಲಕ ಕೆಳಗೆ ನೀಡಿದ ಕೋಷ್ಟಕ್ಕನುಸಾರ ಮಾಹಿತಿಯನ್ನು ತಿಳಿಸಬೇಕು.
ಮೇಲಿನ ಎಲ್ಲ ಮಾಹಿತಿಗಳನ್ನು ಕೆಳಗಿನ ಗಣಕೀಯ ವಿಳಾಸಕ್ಕೆ ಕಳುಹಿಸಿರಿ
ಹೆಸರು ಮತ್ತು ವಿಳಾಸ : ಸೌ. ಭಾಗ್ಯಶ್ರೀ ಸಾವಂತ – 7058885610
ಗಣಕೀಯ ವಿಳಾಸ : [email protected]
ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ‘ಸನಾತನ ಆಶ್ರಮ, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್-403401