ವೈದ್ಯಕೀಯ ಚಿಕಿತ್ಸೆಯನ್ನು ಸುಲಭಗೊಳಿಸಲು ವೈದ್ಯಕೀಯ ವರದಿಗಳ ಕಡತವನ್ನು ವ್ಯವಸ್ಥಿತವಾಗಿ ಜೋಡಿಸಿಟ್ಟುಕೊಳ್ಳಿ !

ಸಾಧಕರಿಗೆ ಸೂಚನೆ !

‘ಅನೇಕ ಜನರು ಪರವೂರುಗಳಿಗೆ ಹೋದಾಗ ತಮ್ಮ ವೈದ್ಯಕೀಯ ವರದಿಗಳನ್ನು ತಮ್ಮೊಂದಿಗೆ ಒಯ್ಯುವುದಿಲ್ಲ. ಕೆಲವರಿಗೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಇನ್ನು  ಕೆಲವರು ತಕ್ಷಣ ವೈದ್ಯರ ಬಳಿಗೆ ಹೋಗಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ, ಅವರ ಹಿಂದಿನ ವೈದ್ಯಕೀಯ ಪರೀಕ್ಷೆಗಳ ವರದಿ ಅವರ ಬಳಿ ಇರುವುದಿಲ್ಲ ಅಥವಾ ‘ಅವರ ಮನೆಯಲ್ಲಿ (ಆಶ್ರಮದಲ್ಲಿ) ಎಲ್ಲಿದೆ ? ಎಂದು ಹೇಳಲು ಸಾಧ್ಯವಿರುವುದಿಲ್ಲ. ವೈದ್ಯಕೀಯ ವರದಿಗಳ ಕಡತವು ತಮ್ಮೊಂದಿಗಿದ್ದರೆ ಅದನ್ನು ವ್ಯವಸ್ಥಿತವಾಗಿ ಇಡುವುದಿಲ್ಲ. ಅಂತಹ ಸಂದರ್ಭಗಳಲ್ಲಿ ‘ರೋಗಿಯ ಸಮಸ್ಯೆಯನ್ನು ಪರಿಹರಿಸುವುದರ ಜೊತೆಗೆ ಅವರಿಗೆ ಚಿಕಿತ್ಸೆ ನೀಡುವಲ್ಲಿ ಅಡಚಣೆ ಉಂಟಾಗುತ್ತದೆ. ಅಂತಹ ಘಟನೆಗಳನ್ನು ತಡೆಗಟ್ಟಲು ತಮ್ಮ ವೈದ್ಯಕೀಯ ಪರೀಕ್ಷೆಯ ವರದಿಗಳ ಒಂದು ಕಡತವನ್ನು ಇಡಬೇಕು. ಅದನ್ನು ಪರವೂರಿಗೂ ತೆಗೆದುಕೊಂಡು ಹೋಗಬೇಕು. ಅದನ್ನು ಮನೆಯ (ಆಶ್ರಮದ) ವಿಶೇಷ ಸ್ಥಳದಲ್ಲಿ ಇಡಬೇಕು. ‘ಅದು ಎಲ್ಲಿದೆ ? ಎಂಬುದು ಜೊತೆಗಿರುವವರಿಗೆ ತಿಳಿದಿರಬೇಕು, ಇದರಿಂದಾಗಿ ರೋಗಿಯು ಅಗತ್ಯವಿದ್ದರೆ ಹೊರಗಿನಿಂದ ಕರೆ ಮಾಡಿದರೂ ಅಲ್ಲಿರುವ ವ್ಯಕ್ತಿಯು ಕಡತವನ್ನು ಉಪಯೋಗಿಸಿ ರೋಗಿಗೆ ಸಹಾಯ ಮಾಡಬಹುದು.

ವೈದ್ಯಕೀಯ ಕಾಗದಪತ್ರಗಳ ಕಡತವನ್ನು ಹೇಗೆ ತಯಾರಿಸಬೇಕು ?

೧. ಪ್ರತಿಯೊಬ್ಬ ವ್ಯಕ್ತಿಯ ಕಡತಗಳನ್ನು (ಫೈಲ್‌ಗಳು) ಬೇರೆ ಬೇರೆಯಾಗಿ ಇಟ್ಟುಕೊಳ್ಳಬೇಕು, ಉದಾಹರಣೆಗೆ ಗಂಡ ಮತ್ತು ಹೆಂಡತಿ ಇವರ ವರದಿಗಳು ಒಂದೇ ಕಡತದಲ್ಲಿ ಇರಬಾರದು. ನವಜಾತ ಶಿಶು ಮತ್ತು ಬಾಣಂತಿಯ ಕಡತಗಳು ಸಹ ಬೇರೆ ಬೇರೆಯಾಗಿದ್ದರೆ ಉತ್ತಮ !

೨. ಕಡತಗಳಲ್ಲಿ ಎಲ್ಲಕ್ಕಿಂತ ಹಳೆಯ ವರದಿಗಳನ್ನು ಕೆಳಭಾಗದಲ್ಲಿ ಮತ್ತು ಹೊಸ ವರದಿಯನ್ನು ಮೇಲ್ಭಾಗದಲ್ಲಿ ಇಡಬೇಕು.

೩. ಕಡತದಲ್ಲಿ ಔಷಧಿಗಳ ಪಾವತಿ, ಆಸ್ಪತ್ರೆಯ ಪಾವತಿಯ ರಶೀದಿ ಮುಂತಾದ ಕಾಗದಪತ್ರಗಳು ಇಡಬಾರದು. ಈ ಕಾಗದಪತ್ರಗಳನ್ನು ಇಟ್ಟುಕೊಳ್ಳುವ ಆವಶ್ಯಕವಿದ್ದರೆ, ಅವುಗಳಿಗಾಗಿ ಪ್ರತ್ಯೇಕವಾದ ಕಡತ ಮಾಡಬೇಕು. ಅದರಂತೆಯೇ, ಕಡತದಲ್ಲಿ ಇತರ ವಿಷಯಗಳ ಕಾಗದಪತ್ರಗಳು ಸಹ ಇರಬಾರದು, ಉದಾ. ವಿದ್ಯುತ್ ಬಿಲ್, ವಿವಾಹ ಪತ್ರಿಕೆ ಇತ್ಯಾದಿ.

೪. ಎಕ್ಸ್-ರೆ, ಸಿಟಿ ಸ್ಕ್ಯಾನ್, ಎಂಆರ್‌ಐ ಸ್ಕ್ಯಾನ್‌ನ ಫಿಲ್ಮಗಳಿದ್ದರೆ, ಅವರ ವರದಿಯ ಫೋಟೊಕಾಪಿಯನ್ನು ಕಡತದಲ್ಲಿ ಇಡಬೇಕು ಮತ್ತು ಮೂಲ ಪ್ರತಿಯನ್ನು ಫಿಲ್ಮಸ್ ಹೊಂದಿರುವ ಲಕೋಟೆಯಲ್ಲಿ ಇಡಬೇಕು. ಅದರ ಸಿಡಿಗಳನ್ನು ಹೊಂದಿದ್ದರೆ, ಅವುಗಳನ್ನು ಸೂಕ್ತವಾದ ಲಕೋಟೆಯಲ್ಲಿ ಹಾಕಿ ಅದರ ಮೇಲೆ ನೋಂದಣಿ ಮಾಡಬೇಕು.

೫. ಪರೀಕ್ಷೆಯ ಕೊನೆಯಲ್ಲಿ ವೈದ್ಯರು ಕೊಟ್ಟಿರುವ ವೈದ್ಯಕೀಯ ವಿವರದ ಚೀಟಿಗಳು ಅಥವಾ ನೋಂದಣಿಗಳನ್ನು ಒಳಗೊಂಡಿರುವ ಪೇಪರ್‌ಗಳು ಆಸ್ಪತ್ರೆಯು ನೀಡುವ ವರದಿಯ ಕಾಗದಪತ್ರ (ಡಿಸ್ಚಾರ್ಜ್ ಸಾರಾಂಶ ಅಥವಾ ಡಿಸ್ಚಾರ್ಜ್ ಕಾರ್ಡ್) ಈ ಕಡತದಲ್ಲಿ ಇರಬೇಕು.

೬. ಕೆಲವರ ಕಾಯಿಲೆಗಳು ದೀರ್ಘಕಾಲದ್ದಾಗಿರುತ್ತದೆ. ಆದ್ದರಿಂದ ಅವರ ಪರೀಕ್ಷಾ ವರದಿಗಳ ಕಾಗದಪತ್ರ ಮತ್ತು ವೈದ್ಯರ ಟಿಪ್ಪಣಿಗಳ ಕಾಗದಪತ್ರಗಳು ಹೆಚ್ಚಿರುತ್ತದೆ. ಅಂತಹ ಸಂದರ್ಭದಲ್ಲಿ, ಇಂತಹ ಸಮಯದಲ್ಲಿ ವೈದ್ಯರು ಬರೆದ ಚೀಟಿಗಳು ಮತ್ತು ಪರೀಕ್ಷಾ ವರದಿಗಳನ್ನು ಎರಡು ಸ್ವತಂತ್ರ ಕಡತಗಳಲ್ಲಿ ವಿಂಗಡಿಸಬಹುದು ಅಥವಾ ಚಿಕಿತ್ಸೆ ಮತ್ತು ಪರೀಕ್ಷೆಯು ಒಂದು ಅಥವಾ ಎರಡು ವರ್ಷಗಳಿಗಿಂತ ಹೆಚ್ಚು ಕಾಲದಿಂದ ನಡೆಯುತ್ತಿದ್ದರೆ, ಒಂದು ಅಥವಾ ಎರಡು ವರ್ಷಗಳ ಕಡತಗಳನ್ನು ಪ್ರತ್ಯೇಕವಾಗಿ ಮಾಡಬೇಕು. ಹಿಂದಿನ ಕಡತಗಳನ್ನು ಪ್ರತ್ಯೇಕವಾಗಿ ಮಾಡಬೇಕು. ಹೊಸ ಕಡತಗಳನ್ನು ವೈದ್ಯರಿಗೆ ತೋರಿಸಲು ಆದ್ಯತೆ ನೀಡಬೇಕು.

೭. ಕೆಲವರಲ್ಲಿ ವಿಭಿನ್ನ ಕಾಯಿಲೆಗಳಿಗೆ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಅಥವಾ ವೈದ್ಯರಿಂದ ಚಿಕಿತ್ಸೆಗಳು ನಡೆಯುತ್ತಿರುತ್ತವೆ. ಇಂತಹ ಸಂದರ್ಭಗಳಲ್ಲಿ ಅವರ ಕಡತಗಳನ್ನು ಅನುಕೂಲಕ್ಕನುಗುಣವಾಗಿ ಒಟ್ಟಿಗೆ ಅಥವಾ ಪ್ರತ್ಯೇಕವಾಗಿ ಇಡಬೇಕು.

೮. ರೋಗಿಯು ವಿವಿಧ ಚಿಕಿತ್ಸಾ ಪದ್ಧತಿಗಳ ಪ್ರಕಾರ, ಉದಾ, ಅಲೋಪತಿ, ಆಯುರ್ವೇದ ಇವುಗಳಿಗನುಸಾರ ಚಿಕಿತ್ಸೆ ಪಡೆಯುತ್ತಿದ್ದರೆ, ಆಗ ಆ ಚಿಕಿತ್ಸಾ ವಿಧಾನಕ್ಕನುಸಾರ ಬೇರೆಯೇ ಕಡತಗಳನ್ನು ಇಡುವುದು ಉತ್ತಮವಾಗಿರುತ್ತದೆ. ಆದ್ದರಿಂದ, ಆಯಾ ಚಿಕಿತ್ಸೆಗಳ ನೋಂದಣಿಗಳು ಪ್ರತ್ಯೇಕವಾಗಿರುವುದು. ಒಂದು ಕಾಯಿಲೆಯ ಚಿಕಿತ್ಸೆಯು ಅಲೋಪತಿ, ಆಯುರ್ವೇದಕ್ಕನುಸಾರ ಇದ್ದರೆ, ಆ ಕಾಯಿಲೆಯ ಮುಖ್ಯ ಶೀರ್ಷಿಕೆಯಲ್ಲಿ, ಅಲೋಪತಿ ಮತ್ತು ಆಯುರ್ವೇದ ಎರಡನ್ನೂ ಬೇರೆ ಬೇರೆಯಾಗಿ ಲಗತ್ತಿಸಬೇಕು.

೯. ಸಾಧ್ಯವಿರುವವರು, ಈ ಎಲ್ಲಾ ಅಥವಾ ಅಗತ್ಯ ನೋಂದಣಿಗಳ ಛಾಯಾಚಿತ್ರಗಳನ್ನು ತೆಗೆದುಕೊಂಡು ತಮ್ಮ ಮೊಬೈಲ್‌ನಲ್ಲಿ ಇಡಬೇಕು. ಇದರಿಂದ ನೀವು ಎಲ್ಲಿಗೆ ಹೋದರೂ ನಿಮ್ಮೊಂದಿಗೆ ನೊಂದಣಿ ಇರುತ್ತವೆ.

೧೦. ಪ್ರಸ್ತುತ, ವೈದ್ಯಕೀಯ ವರದಿಗಳು ಇ-ಮೇಲ್ ಮೂಲಕವೂ ಲಭ್ಯವಿದೆ. ಲ್ಯಾಪಟಾಪ್ ಹೊಂದಿರುವವರೂ ತಮ್ಮ ವರದಿಗಳನ್ನು ತಮ್ಮ ಲ್ಯಾಪಟಾಪ್‌ನಲ್ಲಿ ಸಂಗ್ರಹಿಸಬಹುದು ಮತ್ತು ಅವುಗಳನ್ನು ಗಣಕಯಂತ್ರದಲ್ಲಿ ಕಡತವನ್ನು ಮಾಡಿ ಇಡಬಹುದು.

– ಆಧುನಿಕ ವೈದ್ಯ (ಡಾ.) ಪಾಂಡುರಂಗ ಮರಾಠೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೮.೧೧.೨೦೨೦)