ಚಾತುರ್ಮಾಸ

ಪ್ರಸ್ತುತ ಚಾತುರ್ಮಾಸ ನಡೆಯುತ್ತಿದೆ, ಚಾತುರ್ಮಾಸದ ಮಹತ್ವ, ವೈಶಿಷ್ಟ್ಯಗಳೇನು ? ಈ ಅವಧಿಯಲ್ಲಿ ಯಾವೆಲ್ಲ ವ್ರತಗಳನ್ನು ಮಾಡಬೇಕು ? ಮುಂತಾದ ಮಾಹಿತಿಗಳನ್ನು ವಾಚಕರಿಗಾಗಿ ನೀಡುತ್ತಿದ್ದೇವೆ.

ಅನಂತ ಚತುರ್ದಶಿ

(೧.೯.೨೦೨೦)

ತಿಥಿ : ಭಾದ್ರಪದ ಶುಕ್ಲ ಚತುರ್ದಶಿ

ಉದ್ದೇಶ : ಈ ವ್ರತವನ್ನು ಮುಖ್ಯವಾಗಿ ಗತವೈಭವದ ಪುನರ್‌ಪ್ರಾಪ್ತಿಗಾಗಿ ಮಾಡುತ್ತಾರೆ.

ವ್ರತವನ್ನು ಆಚರಿಸುವ ಪದ್ಧತಿ : ಈ ವ್ರತದ ಮುಖ್ಯ ದೇವತೆ ಅನಂತ, ಅಂದರೆ ಶ್ರೀವಿಷ್ಣು ಆಗಿದ್ದು ಶೇಷ ಮತ್ತು ಯಮುನೆಯು ಉಪದೇವತೆಗಳಾಗಿದ್ದಾರೆ. ಈ ವ್ರತದ ಕಾಲಾವಧಿಯು ಹದಿನಾಲ್ಕು ವರ್ಷಗಳದ್ದಾಗಿದೆ. ಈ ವ್ರತವನ್ನು ಯಾರಾದರೂ ಹೇಳಿದರೆ ಅಥವಾ ಅಕಸ್ಮಾತ್ತಾಗಿ ಅನಂತನದಾರವು ಸಿಕ್ಕಿದಾಗ ಪ್ರಾರಂಭಿಸುತ್ತಾರೆ. ಅನಂತರ ಅದು ಆ ಕುಲದಲ್ಲಿ ಹಾಗೆ ಮುಂದುವರಿಯುತ್ತದೆ. ಅನಂತನ ಪೂಜೆಯಲ್ಲಿ ಹದಿನಾಲ್ಕು ಗಂಟುಗಳನ್ನು ಹಾಕಿದ ಕೆಂಪುರೇಶ್ಮೆಯ ದಾರವನ್ನು ಪೂಜಿಸುತ್ತಾರೆ. ಪೂಜೆಯ ನಂತರ ದಾರವನ್ನು ಯಜಮಾನನ ಬಲಗೈಗೆ ಕಟ್ಟುತ್ತಾರೆ. ಚತುರ್ದಶಿಯು ಹುಣ್ಣಿಮೆಯುಕ್ತವಾಗಿದ್ದರೆ ಈ ವ್ರತದಿಂದ ವಿಶೇಷ ಲಾಭವಾಗುತ್ತದೆ. (ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ)