ಹಿಂದೂಗಳೇ, ಬದುಕುಳಿಯುವುದಿದ್ದರೆ, ಹೋರಾಡಲು ಕಲಿಯಿರಿ, ಸ್ವರಕ್ಷಣೆ ಕಲಿಯಿರಿ ! – ಟಿ. ರಾಜಾಸಿಂಗ್, ಭಾಜಪ ಶಾಸಕ, ತೆಲಂಗಾಣ

‘ನಾಗರಾಜು ಹತ್ಯೆ : ಸೆಕ್ಯುಲರ್ ಗ್ಯಾಂಗ್ ಏಕೆ ಮೌನ ?’ ಈ ಕುರಿತು ವಿಶೇಷ ಸಂವಾದ !

ಭಾರತವು ‘ಜಾತ್ಯತೀತ’ ರಾಷ್ಟ್ರ ಎಂಬ ಕಾರಣಕ್ಕೆ ಭಾಗ್ಯನಗರದ (ಹೈದರಾಬಾದ್) ನಾಗರಾಜು ಎಂಬ ಹಿಂದೂ ಯುವಕನನ್ನು ಹಾಡುಹಗಲೇ ಹತ್ಯೆ ಮಾಡಲಾಯಿತು. ಭಾರತವು ಅಖಂಡ ‘ಹಿಂದೂ ರಾಷ್ಟ್ರ’ವಾಗುವವರೆಗೆ ಇದೇ ರೀತಿಯಲ್ಲಿ ಹಿಂದೂಗಳ ಹತ್ಯೆಯಾಗುವುದು. ಹಂತಕರು ಮುಸ್ಲಿಮರಾಗಿರುವುದರಿಂದ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ; ಬದಲಾಗಿ ತೆಲಂಗಾಣ ಸರಕಾರ ಮತ್ತು ಎಂಐಎಂ ಪಕ್ಷಗಳು ಹಂತಕರನ್ನು ಕಾಪಾಡಲು ಪ್ರಯತ್ನಿಸಬಹುದು. ನಾಗರಾಜು ಹತ್ಯೆಯಾದಾಗ ಅಲ್ಲಿದ್ದ ಶೇ. ೯೦ ರಷ್ಟು ಹಿಂದೂಗಳು ಶಾಂತವಾಗಿದ್ದರು. ಹಿಂದೂಗಳು ಹೋರಾಡಲು ಬಯಸುವುದಿಲ್ಲ, ಬದಲಾಗಿ ಸಾಯಲು ಸಿದ್ಧರಾಗಿದ್ದಾರೆ. ಹಿಂದೂಗಳು ಇಂದು ‘ಸೆಕ್ಯುಲರ್’ ಆಗಿದ್ದು ಅವರು ‘ಹಿಂದೂ-ಮುಸ್ಲಿಂ ಸಹೋದರತ್ವ’ ಸಿದ್ಧಾಂತದೊಂದಿಗೆ ಬದುಕುತ್ತಿದ್ದಾರೆ. ನಾಳೆ ಈ ಮತಾಂಧರು ನಿಮ್ಮ ತಂಗಿ, ಮಗಳು ಮತ್ತು ತಾಯಿಯನ್ನು ಮನೆಯಿಂದ ಎತ್ತಿಕೊಂಡು ಹೋಗುತ್ತಾರೆ ಎಂಬುದನ್ನು ಇಂತಹ ‘ಸೆಕ್ಯುಲರ್’ ಹಿಂದೂಗಳು ಅರಿತುಕೊಳ್ಳಬೇಕು. ಆದ್ದರಿಂದ, ಹಿಂದೂಗಳೇ, ನೀವು ಬದುಕುಳಿಯಲಿಕ್ಕಿದ್ದರೆ ಹೋರಾಡಲು ಕಲಿಯಿರಿ, ಆತ್ಮರಕ್ಷಣೆ ಮಾಡಿಕೊಳ್ಳಲು ಕಲಿಯಿರಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಿಮಗೆ ಹಣೆಗೆ ತಿಲಕ ಹಚ್ಚುವ ಬಗ್ಗೆಯೂ ವಿಚಾರ ಮಾಡಬೇಕಾಗುತ್ತದೆ ಎಂದು ತೆಲಂಗಾಣದ ಗೋಶಾಮಹಲ್‌ನ ಭಾಜಪ ಶಾಸಕ ಶ್ರೀ. ಟಿ. ರಾಜಾ ಸಿಂಗ್ ಇವರು ತೀಕ್ಷ್ಣ ಪದಗಳಲ್ಲಿ ಹೇಳಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ನಾಗರಾಜು ಹತ್ಯೆ : ಸೆಕ್ಯುಲರ್ ಗ್ಯಾಂಗ್ ಏಕೆ ಮೌನ ?’ ಎಂಬ ವಿಷಯದ ಕುರಿತು ಆಯೋಜಿಸಿದ್ದ ಆನ್‌ಲೈನ್ ‘ವಿಶೇಷ ಸಂವಾದ’ದಲ್ಲಿ ಮಾತನಾಡುತ್ತಿದ್ದರು.

ಈ ಸಮಯದಲ್ಲಿ ಮಾತನಾಡಿದ ‘ದಿ ಲೀಗಲ್ ಹಿಂದೂ’ನ ರಾಷ್ಟ್ರೀಯ ಸಹಸಂಸ್ಥಾಪಕರಾದ ಶ್ರೀ. ಸಮೀರ ಚಾಕುರವರು, ಬರ್ಬರವಾಗಿ ಹತ್ಯೆಗೀಡಾದ ನಾಗರಾಜು ಹಿಂದೂ ಆಗಿರುವುದರಿಂದ ಕಾಂಗ್ರೆಸ್ ನ ರಾಹುಲ್ ಗಾಂಧಿ, ‘ಆಪ್’ನ ಅರವಿಂದ್ ಕೇಜ್ರಿವಾಲ್, ಎಡಪಂಥಿಯರು, ಜಾತ್ಯತೀತ ಪಕ್ಷಗಳು ಅಲ್ಲಿಗೆ ಭೇಟಿ ನೀಡುವುದಿಲ್ಲ; ಏಕೆಂದರೆ ಅವರು ಧರ್ಮ ಮತ್ತು ಜಾತಿಯ ಆಧಾರದಲ್ಲಿ ರಾಜಕೀಯ ಮಾಡುತ್ತಾರೆ. ಪ್ರಸಾರ ಮಾಧ್ಯಮಗಳು ಕೂಡ ಈ ಬಗ್ಗೆ ವಿಶೇಷ ಪ್ರಚಾರ ನೀಡುವುದಿಲ್ಲ. ಆದ್ದರಿಂದ ಹಿಂದೂಗಳು ತಮ್ಮ ರಕ್ಷಣೆಗಾಗಿ ಹೋರಾಡುವುದನ್ನು ಕಲಿಯಬೇಕು ಎಂದು ಹೇಳಿದರು. ಈ ವೇಳೆ ಬಜರಂಗದಳದ ಮುಂಬಯಿ ಮಾಜಿ ಸಂಚಾಲಕರಾದ ಶ್ರೀ. ಉಮೇಶ ಗಾಯಕವಾಡ ಇವರು ಮಾತನಾಡುತ್ತಾ, ನಾಗರಾಜು ಮಾತ್ರವಲ್ಲ, ಈ ಮೊದಲು ದೇಶಾದ್ಯಂತ ಹಲವು ಹಿಂದೂಗಳ ಹತ್ಯೆ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ಈಗ ಭಯೋತ್ಪಾದಕರು, ಖಲಿಸ್ತಾನಿಗಳು ಮತ್ತು ನಕ್ಸಲೀಯರು ಒಟ್ಟಾಗಿದ್ದಾರೆ. ೨೦೨೪ ರಲ್ಲಿ ದೇಶದಲ್ಲಿ ದೊಡ್ಡ ಗಲಭೆ ಎಬ್ಬಿಸುವ ಸಂಚು ನಡೆಯುತ್ತಿದೆ ಎಂದು ಮುಂಬಯಿನಲ್ಲಿ ನಡೆದ ತನಿಖೆಯಿಂದ ಬೆಳಕಿಗೆ ಬಂದಿದೆ. ದೊಡ್ಡ ಘರ್ಷಣೆಯೇ ನಡೆಯಲಿದೆ. ಆದ್ದರಿಂದ ಹಿಂದೂಗಳು ವ್ಯವಸ್ಥೆಯೊಂದಿಗೆ ಇದ್ದು ಹೋರಾಟ ಮಾಡಬೇಕು ಎಂದು ಹೇಳಿದರು.

ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ವಕ್ತಾರರಾದ ಶ್ರೀ. ನರೇಂದ್ರ ಸುರ್ವೆ ಇವರು ಮಾತನಾಡುತ್ತಾ, ಭಾರತದಲ್ಲಿ ಹಿಂದೂಗಳ ಹತ್ಯೆ ಮಾಡಿ ಹಿಂದೂಗಳನ್ನೇ ಅವಮಾನಿಸುವ ಜಾಗತಿಕ ಷಡ್ಯಂತ್ರವು ನಡೆಯುತ್ತಿದೆ. ಹಿಂದೂಗಳ ಹತ್ಯೆ ಮಾಡುತ್ತಿರುವ ಮುಸ್ಲಿಮರನ್ನು ಕಾಪಾಡಲು ‘ಜಮಿಯತ್-ಎ-ಉಲೇಮಾ’ ಇದು ಆರ್ಥಿಕ ನೆರವು ನೀಡುತ್ತಿದೆ. ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಅನೇಕ ಹಿಂದೂಗಳ ಹತ್ಯೆ ಮಾಡಿರುವ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ವನ್ನು ಕೇಂದ್ರವು ನಿಷೇಧಿಸಬೇಕು. ಸ್ವರಕ್ಷಣೆಗಾಗಿ ಹಿಂದೂಗಳು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ನಿದ್ರಿಸ್ತ ಹಿಂದೂಗಳಿಗೆ ವಿವಿಧ ರೀತಿಯ ಜಿಹಾದ್ ಬಗ್ಗೆ ಮಾಹಿತಿ ನೀಡಿ, ಸ್ವಧರ್ಮದ ಬಗ್ಗೆ ಬೋಧಿಸುವ ಮೂಲಕ ಜಾಗೃತಗೊಳಿಸಬೇಕು ಎಂದು ಹೇಳಿದರು.