ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ದೇವರು ಎಲ್ಲೆಡೆ ಇದ್ದಾನೆ, ಪ್ರತಿಯೊಬ್ಬನಲ್ಲಿಯೂ ಇದ್ದಾನೆ’ ಎಂಬುದು ಹಿಂದೂ ಧರ್ಮದ ಬೋಧನೆ ಇರುವುದರಿಂದ ಹಿಂದೂಗಳಿಗೆ ಇತರ ಧರ್ಮಗಳನ್ನು ದ್ವೇಷಿಸಲು ಕಲಿಸುವುದಿಲ್ಲ.

ಒಬ್ಬ ಅನಕ್ಷರಸ್ತನು ‘ಎಲ್ಲ ಭಾಷೆಗಳ ಅಕ್ಷರಗಳು ಸಮಾನವಿರುತ್ತವೆ’ ಎಂದು ಹೇಳುವುದು ಹೇಳುವವನ ಅಜ್ಞಾನವನ್ನು ತೋರಿಸುತ್ತದೆ, ಅದೇರೀತಿ ‘ಸರ್ವಧರ್ಮ ಸಮಭಾವ’ ಎಂದು ಹೇಳುವುದು ಅವರ ಅಜ್ಞಾನವನ್ನು ತೋರಿಸುತ್ತದೆ. ‘ಸರ್ವಧರ್ಮ ಸಮಭಾವ’ ಎನ್ನುವುದು ‘ಎಲ್ಲ ಔಷಧಿಗಳು, ಎಲ್ಲ ಕಾನೂನುಗಳು ಒಂದೇ ಇದೆ’ ಎಂದು ಹೇಳುವಂತಿದೆ.

‘ಬುದ್ಧಿಜೀವಿಗಳಿಗೆ ‘ತಮಗೆ ಎಲ್ಲವೂ ತಿಳಿಯುತ್ತದೆ’, ಎಂಬ ಅಹಂಭಾವ ಇರುತ್ತದೆ; ಆದ್ದರಿಂದ ಅವರಿಗೆ ಯಾವುದೇ ವಿಷಯದ ಬಗ್ಗೆ ಪೂರ್ಣ ಜ್ಞಾನವಿರುವುದಿಲ್ಲ, ಸಂತರಿಗೆ ಅಹಂಭಾವ ಇರುವುದಿಲ್ಲ, ಆದ್ದರಿಂದ ಅವರಿಗೆ ಶಬ್ದಗಳನ್ನು ಮೀರಿದ ಅನೇಕ ವಿಷಯಗಳ ಜ್ಞಾನವಿರುತ್ತದೆ !’

ಅಧ್ಯಾತ್ಮದ ತುಲನೆಯಲ್ಲಿ ವಿಜ್ಞಾನವು ಶಿಶುವಿಹಾರದಂತಿದೆ !

‘ವಿಜ್ಞಾನಿಗಳು ಅನೇಕ ವರ್ಷಗಳ ಕಾಲ ಸಂಶೋಧನೆ ಮಾಡಿ ಒಂದು ಆವಿಷ್ಕಾರ ಮಾಡುತ್ತಾರೆ. ಕೆಲವು ವರ್ಷಗಳ ನಂತರ ಆ ನಿಟ್ಟಿನಲ್ಲಿ ಹೊಸ ಸಂಶೋಧನೆಯಾಗುತ್ತದೆ ಮತ್ತು ಹಿಂದಿನ ಸಂಶೋಧನೆಗಳನ್ನು ಮರೆಯುತ್ತಾರೆ. ತದ್ವಿರುದ್ಧ ಅಧ್ಯಾತ್ಮದಲ್ಲಿ ಸಂಶೋಧನೆ ಮಾಡಬೇಕಾಗುವುದಿಲ್ಲ. ದೇವರಿಂದ ಸರಿಯಾದ ಜ್ಞಾನವು ತನ್ನಷ್ಟಕ್ಕೆ ಪ್ರಾಪ್ತಿಯಾಗುತ್ತದೆ ಮತ್ತು ಅದು ಚಿರಂತನ ಸತ್ಯವಾಗಿದ್ದರಿಂದ, ಅದು ಎಂದಿಗೂ ಬದಲಾಗುವುದಿಲ್ಲ. ಇದರಿಂದ ಅಧ್ಯಾತ್ಮವನ್ನು ಹೋಲಿಸಿದರೆ ವಿಜ್ಞಾನವು ಶಿಶುವಿಹಾರದಂತೆಯೇ ಇದೆ ಎಂಬುದು ಗಮನಕ್ಕೆ ಬರುತ್ತದೆ ! ’

– (ಪರಾತ್ಪರ ಗುರು) ಡಾ. ಆಠವಲೆ