ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಹಾಸ್ಯಾಸ್ಪದ ಸಾಮ್ಯವಾದ !
೧. ಅಧ್ಯಾತ್ಮದ ‘ಪ್ರಾರಬ್ಧ ಎಂಬ ಪದವನ್ನು ಮತ್ತು ಈಶ್ವರನನ್ನು ಸಂಪೂರ್ಣವಾಗಿ ದುರ್ಲಕ್ಷಿಸಿದ್ದರಿಂದ ಸಾಮ್ಯವಾದ ೧೦೦ ವರ್ಷಗಳಲ್ಲಿಯೇ ಕೊನೆಗೊಳ್ಳುವ ಸ್ಥಿತಿಯಲ್ಲಿದೆ !
೨. ಪೃಥ್ವಿಯ ಮೇಲಿನ ಎಲ್ಲ ಜನರು, ಅಷ್ಟೇ ಅಲ್ಲದೇ ಮರಗಳು, ಪರ್ವತಗಳು, ನದಿಗಳು ಇತ್ಯಾದಿಗಳು ಒಂದೇ ರೀತಿ ಕಾಣುವುದಿಲ್ಲ, ಅಲ್ಲಿ ‘ಸಾಮ್ಯವಾದ ಎಂಬ ಪದವು ಹಾಸ್ಯಾಸ್ಪದವಲ್ಲವೇ ?
೩. ‘ತಂದೆ-ತಾಯಂದಿರು ತಮ್ಮ ಎಲ್ಲ ಮಕ್ಕಳನ್ನು ಸಮಾನವಾಗಿ ಪ್ರೀತಿಸುವುದಿಲ್ಲ. ಹೀಗಿರುವಾಗ ‘ಸಾಮ್ಯವಾದ ಎಂಬ ಪದಕ್ಕೆ ಏನಾದರೂ ಅರ್ಥವಿದೆಯೇ ?
‘ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಯಾರೂ ಏನನ್ನೂ ಮಾಡಬೇಕಾಗಿಲ್ಲ; ಏಕೆಂದರೆ ಅದು ಕಾಲಮಹಾತ್ಮೆಗನುಸಾರ ಆಗಲಿದೆ; ಆದರೆ ಈ ಕಾರ್ಯದಲ್ಲಿ ತನು-ಮನ-ಧನದ ತ್ಯಾಗ ಮಾಡುವ ಮೂಲಕ ಭಾಗವಹಿಸುವವರು ತಮ್ಮ ಸಾಧನೆಯ ಮೂಲಕ ಜನನ ಮತ್ತು ಮರಣದ ಚಕ್ರದಿಂದ ಮುಕ್ತರಾಗುತ್ತಾರೆ. – (ಪರಾತ್ಪರ ಗುರು) ಡಾ. ಆಠವಲೆ