ಭಾವೀ ಆಪತ್ಕಾಲದಲ್ಲಿ ಜೀವಂತವಾಗಿರಲು ಇಂದಿನಿಂದಲೇ ಸಿದ್ಧತೆ ಮಾಡುವ ಬಗ್ಗೆ ಅಖಿಲ ಮನುಕುಲಕ್ಕೆ ಮಾರ್ಗದರ್ಶನ ಮಾಡುವ ಏಕೈಕ ಪರಾತ್ಪರ ಗುರು ಡಾ. ಆಠವಲೆ !

ಪರಾತ್ಪರ ಗುರು ಡಾ. ಆಠವಲೆ

ಮುಂಬರುವ ಆಪತ್ಕಾಲದಲ್ಲಿ ಜೀವಂತವಾಗಿರಲು ಇಂದಿನಿಂದಲೇ ಸಿದ್ಧತೆ ಮಾಡಿಟ್ಟುಕೊಳ್ಳಿ !

ಪ್ರಸ್ತುತ ಆಪತ್ಕಾಲವು ತುಂಬಾ ಹತ್ತಿರ ಅಂದರೆ ಬಾಗಿಲಿನ ತನಕ ಬಂದು ತಲುಪಿದೆ. ಘೋರ ಆಪತ್ಕಾಲವು ಪ್ರಾರಂಭವಾಗಲು ಇನ್ನು ಕೆಲವೇ ತಿಂಗಳುಗಳು ಬಾಕಿ ಇದೆ. ೨೦೧೯ ರ ನಂತರ ಕ್ರಮೇಣ ಮೂರನೇ ಮಹಾಯುದ್ಧವು ಆರಂಭವಾಗುವುದೆಂದು ಅನೇಕ ನಾಡಿಭವಿಷ್ಯಕಾರರು ಮತ್ತು ದಾರ್ಶನಿಕ ಸಾಧು-ಸಂತರು ಹೇಳಿದ್ದಾರೆ. ಆಪತ್ಕಾಲವನ್ನು ಎದುರಿಸಲು ಎಲ್ಲರೂ ಶಾರೀರಿಕ, ಮಾನಸಿಕ, ಕೌಟುಂಬಿಕ, ಆರ್ಥಿಕ, ಆಧ್ಯಾತ್ಮಿಕ ಮುಂತಾದ ಸ್ತರಗಳಲ್ಲಿ ಪೂರ್ವಸಿದ್ಧತೆಯನ್ನು ಮಾಡುವುದು ಆವಶ್ಯಕವಿದೆ. ಇವುಗಳ ಬಗೆಗಿನ ಸರ್ವಸಾಮಾನ್ಯ ವಿವರಣೆಗಳನ್ನು ಮುಂದೆ ಕೊಡಲಾಗಿದೆ. ಅದಕ್ಕನುಸಾರ ತಮ್ಮಿಂದ ಸಾಧ್ಯವಿರುವಷ್ಟು ವಿಷಯಗಳನ್ನು ಕಾರ್ಯರೂಪಕ್ಕೆ ತರಲು ಈ ಕ್ಷಣದಿಂದಲೇ ಪ್ರಾರಂಭಿಸಬೇಕು.

ಮುಂಬರುವ ಆಪತ್ಕಾಲದಲ್ಲಿ ಉಪಯುಕ್ತವಾಗುವಂತಹ, ವಿವಿಧ ಶಾರೀರಿಕ ಕೃತಿಗಳನ್ನು ಇಂದಿನಿಂದಲೇ ಮಾಡುವ ಅಭ್ಯಾಸ ಮಾಡಬೇಕು !

ಇದರಲ್ಲಿ ರಾಟೆಯಿಂದ ಬಾವಿಯ ನೀರು ಎಳೆಯುವುದು, ಬಟ್ಟೆಗಳನ್ನು ಕೈಯಿಂದ ತೊಳೆಯುವುದು, ‘ಲಿಫ್ಟ್ ಉಪಯೋಗಿಸದೇ ಮೆಟ್ಟಿಲುಗಳಿಂದ ಹತ್ತಿ-ಇಳಿಯುವುದು ಮಾಡುವುದು, ಹತ್ತಿರದ ಅಂತರದಲ್ಲಿರುವ ಕೆಲಸಗಳಿಗಾಗಿ ವಾಹನದ ಬದಲಾಗಿ ಸೈಕಲ್ ಉಪಯೋಗ ಮಾಡುವುದು, ಇವುಗಳಂತಹ ಕೃತಿಯ ಸಮಾವೇಶವಿರಬೇಕು. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಶರೀರವನ್ನು ಸಕ್ಷಮವಾಗಿಡಲು ಪ್ರತಿದಿನ ವ್ಯಾಯಾಮ (ಉದಾ. ಸೂರ್ಯನಮಸ್ಕಾರ ಹಾಕುವುದು, ಕಡಿಮೆಪಕ್ಷ ೧ – ೨ ಕಿ.ಮೀ. ನಡೆಯುವುದು), ಪ್ರಾಣಾಯಾಮ, ಯೋಗಾಸನಗಳು ಮುಂತಾದವುಗಳನ್ನು ಮಾಡಬೇಕು ! – ಪರಾತ್ಪರ ಗುರು ಡಾ. ಆಠವಲೆ (ಮುಂದುವರಿಯುವುದು)