ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ಎಲ್ಲರೂ ವೈಯುಕ್ತಿಕ ಜೀವನಕ್ಕಾಗಿ ಹೆಚ್ಚು ಹಣವು ಸಿಗುತ್ತದೆ ಎಂದು ಆನಂದದಿಂದ ಹೆಚ್ಚು ಸಮಯ (ಓವರ್ ಟೈಮ್) ಕೆಲಸ ಮಾಡುತ್ತಾರೆ, ಆದರೆ ರಾಷ್ಟ್ರ ಮತ್ತು ಧರ್ಮಕ್ಕಾಗಿ ೧ ಗಂಟೆ ಸೇವೆ ಮಾಡಲು ಯಾರು ಸಿದ್ಧರಿರುವುದಿಲ್ಲ.

ಸಚ್ಚಿದಾನಂದ ಈಶ್ವರನ ಪ್ರಾಪ್ತಿಯನ್ನು ಹೇಗೆ ಮಾಡಿಕೊಳ್ಳುವುದು ಎಂಬುದನ್ನು ಅಧ್ಯಾತ್ಮಶಾಸ್ತ್ರವು ಹೇಳುತ್ತದೆ, ಆದರೆ ಕೆಲವು ವಿಜ್ಞಾನವಾದಿ ಅಂದರೆ ಬುದ್ಧಿಜೀವಿಗಳು ಈಶ್ವರನೇ ಇಲ್ಲ ಎಂದು ಜೋರಾಗಿ ಹೇಳುತ್ತಾರೆ.

ಹಿಂದೂ ಧರ್ಮದಲ್ಲಿ ಹೇಳಿರುವಷ್ಟು ಆಳವಾದ ಜ್ಞಾನ ಇತರ ಒಂದಾದರೂ ಪಂಥಗಳಲ್ಲಿ ಇದೆಯೇ ? ವಿಜ್ಞಾನಕ್ಕಾದರೂ ತಿಳಿದಿದೆಯೇ ?

ಶಾರೀರಿಕ ಮತ್ತು ಮಾನಸಿಕ ಬಲಕ್ಕಿಂತ ಆಧ್ಯಾತ್ಮಿಕ ಬಲ ಶ್ರೇಷ್ಠವಾಗಿದ್ದು ಹಿಂದೂಗಳು ಸಾಧನೆಯನ್ನು ಮರೆತಿರುವುದರಿಂದ ಮುಷ್ಠಿಯಷ್ಟಿರುವ ಮತಾಂಧ ಮತ್ತು ಆಂಗ್ಲರು ಕೆಲವು ವರ್ಷಗಳಲ್ಲಿ ಸಂಪೂರ್ಣ ಭಾರತದ ಮೇಲೆ ರಾಜ್ಯವಾಳಿದರು. ಈಗ ಪುನಃ ಹಾಗಾಗಬಾರದೆಂದು ಹಿಂದೂಗಳು ಸಾಧನೆಯನ್ನು ಮಾಡುವುದು ಬಹಳಷ್ಟು ಆವಶ್ಯಕವಾಗಿದೆ.

ಸ್ವರಾಜ್ಯ ಇದು ಸುರಾಜ್ಯವಲ್ಲ ಏಕೆಂದರೆ ರಜ-ತಮಪ್ರಧಾನ ಜನರ ಸ್ವರಾಜ್ಯವು ಎಂದಿಗೂ ಸುರಾಜ್ಯವಾಗಲು ಸಾಧ್ಯವಿಲ್ಲ, ಭಾರತವು  ಸ್ವಾತಂತ್ರ್ಯದಿಂದ ಈವರೆಗಿನ ೭೨ ವರ್ಷಗಳಲ್ಲಿ ಇದನ್ನು ಅನುಭವಿಸಿದೆ.

ಮನುಷ್ಯತ್ವವನ್ನು ಕಲಿಸುವ ಸಾಧನೆಯನ್ನು ಬಿಟ್ಟು ಬೇರೆಲ್ಲ ವಿಷಯಗಳನ್ನು ಕಲಿಸುವ ಆಧುನಿಕ ಶಿಕ್ಷಣ ವ್ಯವಸ್ಥೆಯಿಂದ ರಾಷ್ಟ್ರದ ಪರಮಾವಧಿಯ ಅಧೋಗತಿಯಾಗಿದೆ. – ಪರಾತ್ಪರ ಗುರು ಡಾ. ಆಠವಲೆ