ಚೀನಾ ಮತ್ತು ತಾಲಿಬಾನಿನ ನಡುವಿನ ಸಂಬಂಧವು ಅಷ್ಟೊಂದು ಉತ್ತಮವಾಗಿಲ್ಲ ಆದುದರಿಂದ ಅವು ಯಾವುದಾದರೊಂದು ಮಾರ್ಗವನ್ನು ಹುಡುಕಲು ಪ್ರಯತ್ನಿಸುತ್ತಿವೆ ! – ಜೋ ಬಾಯಡೆನ

ಚೀನಾ ಮತ್ತು ತಾಲಿಬಾನ್ ನಡುವಿನ ಸಂಬಂಧ ಅಷ್ಟೇನೂ ಉತ್ತಮವಾಗಿಲ್ಲ. ಆದ್ದರಿಂದಲೇ ಅವರು ತಾಲಿಬಾನಿಗೆ ಸಹಾಯ ಮಾಡಿ ಈ ಪ್ರಕ್ಷುಬ್ಧತೆಯಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ರಷ್ಯಾ, ಇರಾನ್ ಮತ್ತು ಪಾಕಿಸ್ತಾನಗಳೂ ಇದೇ ರೀತಿಯಲ್ಲಿ ಪ್ರಯತ್ನಿಸುತ್ತಿವೆ.

ಸಂಗೀತ, ನೃತ್ಯ, ಪ್ರಜಾಪ್ರಭುತ್ವ, ಮಹಿಳಾ ಅಧಿಕಾರ ಇತ್ಯಾದಿಗಳನ್ನು ವಿರೋಧಿಸುವ ಇಸ್ಲಾಂ ಧರ್ಮ ! – ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರೀನ

‘ತಾಲಿಬಾನ ವಾದ್ಯಗಳನ್ನೆಲ್ಲ ನಾಶಮಾಡಿದೆ ಏಕೆಂದರೆ ಇಸ್ಲಾಂ ಸಂಗೀತವನ್ನು ವಿರೋಧಿಸುತ್ತದೆ. ಇದೆಂತಹ ಧರ್ಮ ! ಸಂಗೀತ, ನೃತ್ಯ, ಚಲನಚಿತ್ರ, ನಾಟಕ ಇತ್ಯಾದಿಗಳನ್ನು ಇಸ್ಲಾಂ ವಿರೋಧಿಸುತ್ತದೆ. ಇಸ್ಲಾಂ ಪ್ರಜಾಪ್ರಭುತ್ವ, ಮಹಿಳಾ ಅಧಿಕಾರ, ಸ್ವತಂತ್ರ ವಿಚಾರಗಳನ್ನು ವಿರೋಧಿಸುತ್ತದೆ’

ಧೂರ್ತ ತಾಲಿಬಾನ್ !

ತಾಲಿಬಾನ ಅಧಿಕಾರಕ್ಕೆ ಬಂದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರತಿಷ್ಠೆಯನ್ನು ಸುಧಾರಿಸುವುದಕ್ಕಾಗಿ ‘ಮಹಿಳೆಯರ ಮೇಲೆ ಅತ್ಯಾಚಾರ ನಡೆಯುವುದಿಲ್ಲ ಎಂದು ಹೇಳಿದೆ. ಅದು ಎಷ್ಟು ಅಪ್ಪಟ ಸುಳ್ಳೆಂಬುದು ಅನೇಕ ‘ವಿಡಿಯೋಗಳಿಂದ ಬೆಳಕಿಗೆ ಬಂದಿದೆ.

ಅಫ್ಘಾನಿಸ್ತಾನದಿಂದ ಕಾಶ್ಮೀರದಲ್ಲಿ ಭಯೋತ್ಪಾದನೆ ಹರಡುವ ಅಪಾಯ ! – ಭಾರತದಲ್ಲಿನ ರಷ್ಯಾದ ರಾಯಭಾರಿ

ಭಯೋತ್ಪಾದನಾ ವಿರೋಧಿ ಸಹಕಾರ ಇದು ವಿವಿಧ ಮಟ್ಟದ ಭಾರತ ಮತ್ತು ರಷ್ಯಾದ ನಡುವಿನ ಸಂವಾದದ ಒಂದು ಮಹತ್ವದ ಭಾಗವಾಗಿದೆ. ನಮಗೆ ಕಾಬೂಲಿನಲ್ಲಿ ಒಂದು ಸರ್ವಸಮಾವೇಶಕ ಸರಕಾರ ಬೇಕಾಗಿದೆ. ಅಫಘಾನಿಸ್ತಾನದಿಂದ ಉದ್ಭವಿಸುವಂತಹ ಭಯೋತ್ಪಾದನೆಯ ಅಪಾಯವನ್ನು ಎದುರಿಸಲು ರಷ್ಯಾವು ಭಾರತಕ್ಕೆ ಅತ್ಯಂತ ಸಮೀಪದಿಂದ ಸಹಕರಿಸುತ್ತಿದೆ.

ಕಾಬೂಲನಲ್ಲಿ ಪಾಕಿಸ್ತಾನದ ವಿರುದ್ಧ ಮೆರವಣಿಗೆ ನಡೆಸುವವರನ್ನು ತಡೆಗಟ್ಟಲು ತಾಲಿಬಾನಿಗಳಿಂದ ಗಾಳಿಯಲ್ಲಿ ಗುಂಡು ಹಾರಾಟ!

ಅಫಘಾನಿಸ್ತಾನದಲ್ಲಿನ ಘಟನಾವಳಿಗಳಲ್ಲಿ ಪಾಕಿಸ್ತಾನವು ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿ ಇಲ್ಲಿ ಮೆರವಣಿಗೆಯನ್ನು ನಡೆಸಲಾಗಿತ್‌ತು. ಹೆಚ್ಚುಕಮ್ಮಿ ೭೦ ಜನರು ಪಾಕಿಸ್ತಾನದ ರಾಯಭಾರಿ ಕಚೇರಿಯ ಹೊರಗೆ ಆಂದೋಲನ ಮಾಡುತ್ತಿದ್ದರು.

ಪಂಜಶಿರ ‘ನ್ಯಾಶನಲ್ ರೆಸಿಸ್ ಟೆನ್ಸ್ ಫ್ರಂಟ್’ನ ವಕ್ತಾರ ಫಹೀಮ ದಶ್ತಿ ಹತರಾಗಲು ಬಿಬಿಸಿ ಕಾರಣ ಎಂದು ಸಾಮಾಜಿಕ ಮಾಧ್ಯಮಗಳಿಂದ ಆರೋಪ

ಅಫಘಾನಿಸ್ತಾನದ ಪಂಜಶಿರ ಪ್ರಾಂತ್ಯದ ಮೇಲೆ ೫ ಸಪ್ಟಂಬರನಂದು ತಾಲಿಬಾನ್ ನಡೆಸಿದ ದಾಳಿಯಲ್ಲಿ ‘ನ್ಯಾಶನಲ್ ರೆಸಿಸ್ ಟೆನ್ಸ್ ಫ್ರಂಟ್’ನ ವಕ್ತಾರ ಫಹೀಮ ದಶ್ತಿ ಮತ್ತು ಕಮಾಂಡರ್ ಜನರಲ್ ಸಾಹಿಬ ಅಬ್ದುಲ ವದೂದ ಇವರು ಹತರಾದರು.

ಸರಕಾರ ರಚನೆಯ ಕಾರ್ಯಕ್ರಮಕ್ಕೆ ಉಪಸ್ಥಿತರಿರಲು ತಾಲಿಬಾನನಿಂದ ರಶಿಯಾ, ಚೀನಾ, ಪಾಕಿಸ್ತಾನ, ಇರಾನ್, ಕತಾರ್ ಮತ್ತು ತುರ್ಕಿಸ್ತಾನ ಇವರಿಗೆ ಆಮಂತ್ರಣ

ತಾಲಿಬಾನ್ ಸಂಪೂರ್ಣ ಅಫಫಾನಿಸ್ತಾನದ ಮೇಲೆ ಹಿಡಿತವನ್ನು ಸಾಧಿಸಿದ ನಂತರ ಸರಕಾರ ರಚನೆಯ ಕಾರ್ಯಕ್ರಮವನ್ನು ಆಯೋಜಿಸಿದೆ.

ಭಾರತದಲ್ಲಿರುವ ಮುಸಲ್ಮಾನರ ಬಗ್ಗೆ ತಾಲಿಬಾನಿಗಳು ಚಿಂತಿಸುವ ಅಗತ್ಯವಿಲ್ಲ ! – ತಾಲಿಬಾನಿಗೆ ಭಾರತದ ಪ್ರತ್ಯುತ್ತರ

ಭಾರತದಲ್ಲಿರುವ ಮುಸಲ್ಮಾನರ ಬಗ್ಗೆ ತಾಲಿಬಾನ ಚಿಂತಿಸುವ ಅಗತ್ಯವಿಲ್ಲ, ಎಂಬ ಶಬ್ದಗಳಲ್ಲಿ ಕೇಂದ್ರೀಯ ಅಲ್ಪಸಂಖ್ಯಾತ ಮಂತ್ರಿ ಮುಖ್ತಾರ ಅಬ್ಬಾಸ ನಕ್ವಿಯವರು ತಾಲಿಬಾನನ್ನು ಖಂಡಿಸಿದ್ದಾರೆ.

ಪಾಕಿಸ್ತಾನವೇ ತಾಲಿಬಾನನ್ನು ಸಾಕಿದೆ ! – ಭಾರತದ ಆರೋಪ

ಇಂತಹ ಆರೋಪಗಳಿಂದ ತಾಲಿಬಾನ್ ಮತ್ತು ಪಾಕ್ ಇವುಗಳ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ, ಮತ್ತು ಆಗುವುದು ಸಹ ಇಲ್ಲ ! ಅದರ ಬದಲಾಗಿ ಪಾಕಿಸ್ತಾನವನ್ನು ನಾಶಗೊಳಿಸಲು ಭಾರತವು ಏನಾದರೂ ಪ್ರಯತ್ನ ಮಾಡಿದರೆ ಅದು ಹೆಚ್ಚು ಯೋಗ್ಯವಾಗುವುದು !

ಅಫ್ಘಾನಿಸ್ತಾನದಿಂದ ಅಮೆರಿಕಾವನ್ನು ಓಡಿಸಿಬಿಟ್ಟ ತಾಲಿಬಾನಿಗಳನ್ನು ಶ್ಲಾಘಿಸಲೇಬೇಕು! (ಅಂತೆ) -ಜಾರ್ಖಂಡದ ಕಾಂಗ್ರೆಸ್ ಸಂಸದ ಇರ್ಫಾನ್ ಅನ್ಸಾರಿ

ಭಯೋತ್ಪಾದಕರು ಮತ್ತು ಮತಾಂಧರನ್ನು ವೈಭವೀಕರಿಸುವುದು ಕಾಂಗ್ರೆಸ್ಸಿನ `ಪರಂಪರೆ’ಯಾಗಿದೆ. ಇಂತಹ ಪಕ್ಷದವರು ಭಾರತದಲ್ಲಿ ಎಲ್ಲಕ್ಕಿಂತ ಹೆಚ್ಚು ಕಾಲ ರಾಜ್ಯಭಾರ ಮಾಡಿದರು, ಎಂಬುದು ಖೇದಕರ !