ಅಧ್ಯಾತ್ಮದಲ್ಲಿ ಸ್ತ್ರೀ-ಪುರುಷರಲ್ಲಿ ಯಾವುದೇ ಭೇದವಿಲ್ಲದೇ ಆಧ್ಯಾತ್ಮಿಕ ಪ್ರಗತಿಗಾಗಿ ಇಬ್ಬರಿಗೂ ಸಮಾನ ಅವಕಾಶ !

ಅಧ್ಯಾತ್ಮದಲ್ಲಿ ಲಿಂಗದ ಆಧಾರದಲ್ಲಿ ಭೇದಭಾವವಿರುವುದಿಲ್ಲ. ಅಧ್ಯಾತ್ಮಶಾಸ್ತ್ರದಲ್ಲಿ ಮಾರ್ಗದರ್ಶನ ಮಾಡುವ ಅವಕಾಶ ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚು ಸಿಗುತ್ತಿದೆ ಎಂದು ಗಮನಕ್ಕೆ ಬರುತ್ತಿದ್ದರೂ ಆಧ್ಯಾತ್ಮಿಕ ಪ್ರಗತಿಯ ಅವಕಾಶ ಇಬ್ಬರಿಗೂ ಸಮಾನವಾಗಿದೆ ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಾನ್ ಕ್ಲಾರ್ಕ್ ಇವರು ಪ್ರತಿಪಾದಿಸಿದರು.

ಎಳನೀರು, ಕಿತ್ತಳೆಯ ರಸ, ಭಾರತೀಯ ಗೋವಿನ ಹಾಲು ಇವುಗಳು ವ್ಯಕ್ತಿಯಲ್ಲಿ ಸಕಾರಾತ್ಮಕತೆ ಹೆಚ್ಚಿಸುತ್ತದೆ  ಹಾಗೂ ‘ವೈನ್’, ‘ವಿಸ್ಕೀ’, ‘ಬಿಯರ್’ ನಕಾರಾತ್ಮಕತೆ ಹೆಚ್ಚಿಸುತ್ತದೆ !

‘ಬಿಯರ್’ನಲ್ಲಿ ಅತಿಹೆಚ್ಚು ನಕಾರಾತ್ಮಕತೆ ಕಂಡುಬಂದಿದೆ. ಅದನ್ನು ಸೇವಿಸಿದ ನಂತರ, ಒಬ್ಬ ವ್ಯಕ್ತಿಯಲ್ಲಿ ನಕಾರಾತ್ಮಕತೆಯು ಸುಮಾರು ಶೇ. ೫೦೦೦ ರಷ್ಟು ಹೆಚ್ಚಾಯಿತು. ಇದರ ನಂತರ ಕ್ರಮವಾಗಿ ‘ಕೆಂಪು ವೈನ್’ನಲ್ಲಿ ನಕಾರಾತ್ಮಕ ಪ್ರಭಾವಳಿ ಕಂಡಿತು.

ಶತಮಾನಗಳು ಕಳೆದರೂ ಆದಿಶಂಕರಾಚಾರ್ಯರ ಜನ್ಮಸ್ಥಾನಕ್ಕೆ ಸಂಬಂಧಿಸಿದ ಘಟಕಗಳಲ್ಲಿ ಚೈತನ್ಯಶಕ್ತಿ ಶಾಶ್ವತವಾಗಿರುವುದು

ಆದಿಶಂಕರಾಚಾರ್ಯರು ಓರ್ವ ಶ್ರೇಷ್ಠ ಯತಿ, ಗ್ರಂಥಕರ್ತ, ಅದ್ವೈತ ಮತದ ಪ್ರಚಾರಕ, ಸ್ತೋತ್ರ ರಚನಾಕಾರ ಮತ್ತು ಧರ್ಮ ಸಾಮ್ರಾಜ್ಯದ ಸಂಸ್ಥಾಪಕರಾಗಿದ್ದರು. ಈ ಲೋಕಕಲ್ಯಾಣ ಕಾರ್ಯದಿಂದ ಶಂಕರಾಚಾರ್ಯರು ‘ಜಗದ್ಗುರು’ ಆದರು.

ಗೋಮೂತ್ರ ಮಿಶ್ರಿತ ನೀರನ್ನು ಕುಡಿದ ನಂತರ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕ ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಸಾಧಕ ಇವರ ಮೇಲೆ ಆಗಿರುವ ಸಕಾರಾತ್ಮಕ ಪರಿಣಾಮ

ಗೋಮೂತ್ರದಲ್ಲಿನ ಸಾತ್ತ್ವಿಕತೆಯಿಂದಾಗಿ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕನ ದೇಹದ ಸುತ್ತಲಿನ ನಕಾರಾತ್ಮಕ ಸ್ಪಂದನಗಳ ಪ್ರಮಾಣ ಕಡಿಮೆ ಆಯಿತು, ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕನಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು.

ಶ್ರೀ ಹನುಮಾನ ಚಾಲಿಸಾ ಪಠಿಸುವುದು, ಹಾಗೆಯೇ ಹನುಮಂತನ ತಾರಕ ಮತ್ತು ಮಾರಕ ನಾಮವನ್ನು ಜಪಿಸುವುದು ಇವು ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿರುವುದು; ಆದರೆ ಸ್ತೋತ್ರಪಠಣದ ತುಲನೆಯಲ್ಲಿ ನಾಮಜಪದಿಂದ ಹೆಚ್ಚಿನ ಪರಿಣಾಮವಾಗುವುದು

ಪರೀಕ್ಷಣೆಯಲ್ಲಿನ ಇಬ್ಬರೂ ಸಾಧಕರ ಮೇಲೆ ಶ್ರೀ ಹನುಮಾನ ಚಾಲಿಸಾಕ್ಕಿಂತ ಹನುಮಂತನ ನಾಮಜಪದಿಂದ  ಹೆಚ್ಚು ಪ್ರಮಾಣದಲ್ಲಿ ಪರಿಣಾಮವಾಯಿತು. ಅದರಲ್ಲಿಯೂ ಹನುಮಂತನ ತಾರಕ ಸ್ವರೂಪದ ನಾಮಜಪಕ್ಕಿಂತ ಮಾರಕ ಸ್ವರೂಪದ ನಾಮಜಪದಿಂದ ಅತ್ಯಧಿಕ ಪರಿಣಾಮವಾಯಿತು.

ಪರಾತ್ಪರ ಗುರು ಡಾ. ಆಠವಲೆಯವರು ಶ್ರೀರಾಮ ಯಾಗದಲ್ಲಿ ಆಹುತಿ ನೀಡಲಾಗುವ ಹವನ-ದ್ರವ್ಯಗಳನ್ನು ಹಸ್ತದಿಂದ ಸ್ಪರ್ಶಿಸಿದುದರಿಂದ ಹವನ-ದ್ರವ್ಯಗಳ ಮೇಲಾದ ಪರಿಣಾಮ

ಪರಾತ್ಪರ ಗುರು ಡಾಕ್ಟರರು ಹವನ-ದ್ರವ್ಯಗಳನ್ನು ನಾಮಜಪ ಮಾಡುತ್ತಾ ಹಸ್ತಸ್ಪರ್ಶ ಮಾಡಿದಾಗ ಹವನ-ದ್ರವ್ಯಗಳಲ್ಲಿನ ಸಕಾರಾತ್ಮಕ ಊರ್ಜೆಯು ಹೆಚ್ಚಾಗಿ ಅದರ ಪ್ರಭಾವಲಯವು ೧೧೭.೯೧ ರಷ್ಟಾಯಿತು. ಇದು ಪರಾತ್ಪರ ಗುರು ಡಾಕ್ಟರರು ನಾಮಜಪ ಮಾಡಿರುವುದರ ಪರಿಣಾಮವಾಗಿದೆ.

ವ್ಯಕ್ತಿಯು ಕಲ್ಲುಪ್ಪು ಮಿಶ್ರಿತ ನೀರಿನಿಂದ ಅಥವಾ ಗೋಮೂತ್ರ ಮಿಶ್ರಿತ ನೀರಿನಿಂದ ಸ್ನಾನ ಮಾಡುವುದು ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿದೆ

ಗೋಮೂತ್ರದಲ್ಲಿನ ಸಾತ್ತ್ವಿಕತೆ ಮತ್ತು ಸ್ನಾನದ ನೀರಿನಲ್ಲಿನ ಗೋಮೂತ್ರದಲ್ಲಿ ಆಕರ್ಷಿಸಲ್ಪಟ್ಟಿರುವ ದೇವತೆಗಳ ತತ್ತ್ವಗಳಿಂದ ವ್ಯಕ್ತಿಯ ದೇಹದ ಸುತ್ತಲೂ ಚೈತನ್ಯದ ಕವಚ ನಿರ್ಮಾಣವಾಗುತ್ತದೆ.

ಭಾರತೀಯ ಸಂಸ್ಕೃತಿಯಂತೆ ಯುಗಾದಿಯ ದಿನ ಸಾತ್ತ್ವಿಕ ವಾತಾವರಣದಲ್ಲಿ ಬ್ರಹ್ಮಧ್ವಜದ ಪೂಜೆ ಮಾಡಿ ಹೊಸ ವರ್ಷ ಸ್ವಾಗತಿಸುವುದು ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕ !

ಮಾಡಿದ ಅಭ್ಯಾಸ ಹಾಗೂ ಭಾಗವಹಿಸಿದ ಸಾಧಕರ ವೈಯಕ್ತಿಕ ಅನುಭವಗಳಿಂದ ಭಾರತೀಯ ಪದ್ಧತಿಯಿಂದ ಬ್ರಹ್ಮಧ್ವಜದ ಪೂಜೆ ಮಾಡಿ ಹೊಸವರ್ಷಾರಂಭ ಮಾಡುವುದು ಆಧ್ಯಾತ್ಮಿಕ ದೃಷ್ಟಿಯಲ್ಲಿ ಲಾಭದಾಯಕವಾಗಿದೆ ಮತ್ತು ಪಾಶ್ಚಾತ್ಯ ಪದ್ಧತಿಯಲ್ಲಿ ಹೊಸವರ್ಷಾರಂಭ ಮಾಡುವುದು ಹಾನಿಕರವಾಗಿದೆ, ಎಂಬುದು ಸ್ಪಷ್ಟವಾಗುತ್ತದೆ.’

ತರಕಾರಿಗಳನ್ನು ಸಾತ್ತ್ವಿಕ ಪದ್ಧತಿಯಿಂದ ಹೆಚ್ಚಿ ತಯಾರಿಸಿದ ಪಲ್ಯವನ್ನು ಸೇವಿಸುವುದರಿಂದ ವ್ಯಕ್ತಿಗೆ ಆಧ್ಯಾತ್ಮಿಕ ಲಾಭವಾಗುವುದು

ಸಾಧಕರು ಓರೆ ಮತ್ತು ಉದ್ದ ಆಕಾರದಲ್ಲಿ ಹೆಚ್ಚಿದ ಬೆಂಡೆಕಾಯಿಯ ಪಲ್ಯವನ್ನು ಸೇವಿಸಿದ ನಂತರ ಅವರ ನಕಾರಾತ್ಮಕ ಸ್ಪಂದನಗಳಲ್ಲಿ ಹೆಚ್ಚಳವಾಗಿ ಅವರಲ್ಲಿನ ಸಕಾರಾತ್ಮಕ ಸ್ಪಂದನಗಳು ಕಡಿಮೆಯಾದವು. ಇದರ ಅರ್ಥ ಈ ಪಲ್ಯಗಳನ್ನು ಸೇವಿಸಿದ್ದರಿಂದ ಅವರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗದೇ, ಹಾನಿಯಾಯಿತು.

ಅಡುಗೆ ಮಾಡುವ ವ್ಯಕ್ತಿ ಸಾಧನೆ ಮಾಡುವವನು ಮತ್ತು ಅಡುಗೆ ಮಾಡುವ ಸ್ಥಳವು ಸಾತ್ತ್ವಿಕವಾಗಿದ್ದರೆ, ಅವರು ಮಾಡುವ ಅಡುಗೆಯ ಪದಾರ್ಥಗಳ ಮೇಲೆ ಹಾಗೆಯೇ ಅವುಗಳನ್ನು ಸೇವಿಸುವವರ ಮೇಲೆ ಆಗುವ ಪರಿಣಾಮ

ಆಶ್ರಮದಲ್ಲಿನ ಅಡುಗೆಮನೆಯಲ್ಲಿ ಸಂತರ ವಾಣಿಯಲ್ಲಿನ ಭಜನೆಗಳು ಅಥವಾ ದೇವತೆಗಳ ನಾಮಜಪವನ್ನು ಸಣ್ಣ ಧ್ವನಿಯಲ್ಲಿ ಹಾಕಿಡಲಾಗುತ್ತದೆ. ಇದರಿಂದ ಸಾತ್ತ್ವಿಕತೆಯ ಸಕಾರಾತ್ಮಕ ಪರಿಣಾಮವು ಆಶ್ರಮದಲ್ಲಿ ತಯಾರಿಸಿದ ಪದಾರ್ಥಗಳ ಮೇಲಾಗಿ ಅವೂ ಚೈತನ್ಯದಿಂದ ತುಂಬಿಕೊಳ್ಳುತ್ತವೆ.