ಬಾಂಗ್ಲಾದೇಶದಲ್ಲಿ ೨೦೨೧ ರಲ್ಲಿ ೨೭೩ ದೇವಸ್ಥಾನಗಳ ಮೇಲೆ ದಾಳಿ ಹಾಗೂ ೧೫೨ ಹಿಂದೂಗಳ ಹತ್ಯೆ !

ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ೨೦೨೧ ನೇ ವರ್ಷವು ಭಯ, ಹತ್ಯೆ, ರಕ್ತಪಾತ ಮತ್ತು ಕಣ್ಣೀರಿನಿಂದ ಕೂಡಿತ್ತು. ಅಕ್ಟೋಬರ್ ೨೦೨೧ ರಲ್ಲಿ ದುರ್ಗಾಪೂಜೆಯ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ಮೇಲಾದ ದೌರ್ಜನ್ಯವನ್ನು ಜಗತ್ತೇ ನೋಡಿತ್ತು.

ಬಾಗಲಕೋಟೆಯಲ್ಲಿ ಹಿಂದೂ ವಿದ್ಯಾರ್ಥಿಗಳ ಮತಾಂತರದ ಆರೋಪದಿಂದ ಸೇಂಟ್ ಪಾಲ್ ಶಾಲೆಯನ್ನು ಮುಚ್ಚಿದ ಇಲಾಖೆ !

ದೂರಿನ ನಂತರ ತಕ್ಷಣ ಕ್ರಮ ಕೈಗೊಂಡ ಇಲಾಖೆಗೆ ಅಭಿನಂದನೆ ! ಇಂತಹ ತತ್ಪರತೆ ಎಲ್ಲ ಕಡೆಗಳಲ್ಲೂ ಇರಬೇಕು ಮತ್ತು ಅದರಲ್ಲಿಯೂ ಯಾರಾದರೂ ದೂರನ್ನು ನೀಡುವುದಕ್ಕಿಂತ ಇಲಾಖೆಯೇ ಎಚ್ಚರದಿಂದಿದ್ದು ಇಂತಹ ಘಟನೆಗಳನ್ನು ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕು !

ಪೋಪ್ ಫ್ರಾನ್ಸಿಸ್ ಇವರು ಹಿಂದೂಗಳಲ್ಲಿ ಕ್ಷಮೆ ಯಾಚಿಸಬೇಕು ! – ವಿಹಿಂಪ

ವಿಹಿಂಪ ಕ್ರೈಸ್ತರ ಸರ್ವೋಚ್ಚ ಧರ್ಮಗುರುಗಳು ಪೋಪ್ ಫ್ರಾನ್ಸಿಸ್ ಭಾರತದ ಪ್ರವಾಸಕ್ಕೆ ಬರುವ ಸಂದರ್ಭದಲ್ಲಿ, ‘ಕ್ರೈಸ್ತರು ಕಳೆದ ೩೫೦ ವರ್ಷಗಳಿಂದ ನಡೆಸಿರುವ ಅತ್ಯಾಚಾರಗಳ ಬಗ್ಗೆ ಕ್ಷಮೆ ಯಾಚಿಸಬೇಕು’, ಎಂದು ಒತ್ತಾಯಿಸಿದೆ

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಮೊದಲು ಮತಾಂತರ ನಿಷೇಧ ಕಾನೂನನ್ನು ರದ್ದುಗೊಳಿಸಲಾಗುವುದು !(ಅಂತೆ)

ವಿಧಾನಸಭೆಯ ಮೊದಲ ಅಧಿವೇಶನದಲ್ಲಿಯೇ ಮತಾಂತರ ನಿಷೇಧ ಕಾನೂನನ್ನು ರದ್ದುಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಎಂಬ ಹಿಂದೂದ್ರೋಹಿ ಹೇಳಿಕೆಯನ್ನು ಕಾಂಗ್ರೆಸ್‌ನ ನಾಯಕ, ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯದ ವಿಪಕ್ಷದ ನಾಯಕ ಸಿದ್ಧರಾಮಯ್ಯನವರು ಸುದ್ದಿಗಾರರೊಂದಿಗೆ ಮಾತನಾಡುತ್ತಿರುವಾಗ ಹೇಳಿದರು.

ಹಿಂದೂ ಧರ್ಮವನ್ನು ತೊರೆದವರನ್ನು ಪುನಃ ಧರ್ಮಕ್ಕೆ ಕರೆತರಲು ಮಠಗಳು ಮತ್ತು ದೇವಾಲಯಗಳು ವಾರ್ಷಿಕ ಗುರಿಗಳನ್ನು ನಿಗದಿಪಡಿಸಬೇಕು ! – ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕರೆ

ಯಾರು ವಿವಿಧ ಕಾರಣಗಳಿಗಾಗಿ ಸನಾತನ ಧರ್ಮವನ್ನು ತ್ಯಜಿಸಿ ಇತರ ಧರ್ಮಕ್ಕೆ ಪ್ರವೇಶಿದರೋ ಅವರನ್ನು ಮರಳಿ ಕರೆತರಲು ದೇವಾಲಯಗಳು ಮತ್ತು ಮಠಗಳು ವರ್ಷಪೂರ್ತಿ ಗುರಿಗಳನ್ನು ನಿಗದಿಪಡಿಸಬೇಕು.

‘ಯಾರೂ ತಲವಾರಿನ ಬಲದ ಮೇಲೆ ಯಾರ ಮತಾಂತರ ಮಾಡುವುದಿಲ್ಲ, ಒಳ್ಳೆಯ ಕೆಲಸಗಳನ್ನು ನೋಡಿ ಜನರು ಮತಾಂತರಗೊಳ್ಳುತ್ತಾರೆ!’ (ಅಂತೆ) – ಕಾಂಗ್ರೆಸ್ಸಿನ ಹಿರಿಯ ಮುಖಂಡ ಗುಲಾಮ ನಬಿ ಆಝಾದ ಇವರ ಹೇಳಿಕೆ

ಈ ಹೇಳಿಕೆಯನ್ನು ಚಿಕ್ಕ ಮಗುವಾದರೂ ನಂಬುವುದೇ? ಭಾರತದಲ್ಲಿಯಷ್ಟೇ ಅಲ್ಲ, ಜಗತ್ತಿನಾದ್ಯಂತ ಇಸ್ಲಾಂ ಹರಡಿರುವುದು ಕೇವಲ ಮತ್ತು ಕೇವಲ ತಲವಾರಿನ ಬಲದಿಂದಲೇ ಹರಡಿದೆಯೆನ್ನುವುದು ಇತಿಹಾಸ ಆಗಿದೆ ಮತ್ತು ವರ್ತಮಾನದಲ್ಲಿಯೂ ಆಮಿಷಗಳನ್ನೊಡ್ಡಿ, ಮೋಸದಿಂದ ಮತಾಂತರಗೊಳಿಸಲಾಗುತ್ತಿದೆ. ಇದು ವಸ್ತುಸ್ಥಿತಿಯಾಗಿದೆ.

ಕರ್ನಾಟಕ ವಿಧಾನಸಭೆಯಲ್ಲಿ ಮತಾಂತರ ನಿಷೇಧ ಮಸೂದೆ ಅಂಗೀಕಾರ !

ರಾಜ್ಯದಲ್ಲಿ ಭಾಜಪದ ಸರಕಾರವಿದೆ. ಕೇಂದ್ರದಲ್ಲೂ ಭಾಜಪ ಸರಕಾರವಿರುವುದರಿಂದ ಇಡೀ ದೇಶದಲ್ಲಿ ಮತಾಂತರ ನಿಷೇಧ ಕಾನೂನನ್ನು ತರಲು ಭಾಜಪ ಹೆಜ್ಜೆ ಇಡಬೇಕು, ಎಂಬುದು ಹಿಂದೂಗಳ ಅಪೇಕ್ಷೆಯಾಗಿದೆ !

ಅಭೂಝಮಾಡ (ಛತ್ತೀಸಗಡ) ದಲ್ಲಿ ಆದಿವಾಸಿಗಳಿಂದ ಮತಾಂತರದ ವಿರುದ್ಧ ಆಂದೋಲನ

ಛತ್ತೀಸಗಡ ರಾಜ್ಯದ ಅಭೂಝಮಾಡ ಎಂಬ ನಕ್ಸಲ ಪೀಡಿತ ಭಾಗದಲ್ಲಿ ಕ್ರೈಸ್ತ ಮಿಷನರಿಗಳಿಂದಾಗುವ ಬಡ ಆದಿವಾಸಿಗಳ ಮತಾಂತರದ ವಿರುದ್ಧ ಆದಿವಾಸಿ ಗ್ರಾಮಸ್ಥರು ಆಂದೋಲನವನ್ನು ಆರಂಭಿಸಿದ್ದಾರೆ.

ಕೇಂದ್ರ ಸರಕಾರವು ಮತಾಂತರದ ವಿರುದ್ಧ ರಾಷ್ಟ್ರೀಯ ಕಾನೂನು ತರಬೇಕು ! – ಮಹಾಮಂಡಲೇಶ್ವರ ಆಚಾರ್ಯ ಸ್ವಾಮಿ ಶ್ರೀ ಪ್ರಣವಾನಂದ ಸರಸ್ವತೀಜಿ ಮಹಾರಾಜರು

‘ಮತಾಂತರ ಒಂದು ಭೀಕರ ಪಿತೂರಿಯಾಗಿದ್ದು, ಕ್ರೈಸ್ತ ಮಿಶನರಿಗಳು ಸೇವೆಯ ಹೆಸರಿನಲ್ಲಿ ವ್ಯವಹಾರವನ್ನು ಮಾಡುತ್ತಿದ್ದಾರೆ ಹಾಗೂ ಹಿಂದೂಗಳನ್ನು ವಂಚಿಸುತ್ತಿದ್ದಾರೆ. ದೇಶವಿರೋಧಿ ಶಕ್ತಿಗಳು ಈ ದೇಶವನ್ನು ಒಡೆಯಲು ಪ್ರಯತ್ನಿಸುತ್ತಿವೆ. ಹಿಂದೂಗಳು ಅದರಲ್ಲಿಯೂ ವಿಶೇಷವಾಗಿ ಯುವಕರು ಇವೆಲ್ಲವನ್ನು ಕೊನೆಗಾಣಿಸಲು ಮುಂದಾಗಬೇಕು.

ಮತಾಂತರ ವಿರೋಧಿ ಕಾನೂನು ಜಾರಿಯಾಗಲು ವಿಹಿಂಪವು ಡಿಸೆಂಬರ 21 ರಿಂದ ದೇಶಾದ್ಯಂತ ಆಂದೋಲನ ಮಾಡಲಿದೆ

ಈ ರೀತಿಯ ಬೇಡಿಕೆ ಮತ್ತು ಆಂದೋಲನ ಮಾಡುವಂತಾಗಬಾರದು ! ಸರಕಾರವು ತಾನಾಗಿ ಈ ಕಾನೂನನ್ನು ಶೀಘ್ರವಾಗಿ ಜಾರಿಗೊಳಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !