‘ಅಲಿಘಡ’ ಹೆಸರನ್ನು ‘ಹರಿಗಡ’ ವನ್ನಾಗಿಡಬೇಕೆಂದು ಉತ್ತರಪ್ರದೇಶ ನಾಗರಿಕರಿಂದ ಸರಕಾರದ ಬಳಿ ಬೇಡಿಕೆ

ಇಲ್ಲಿಯ ನಾಗರಿಕರು ನಗರದ ಹೆಸರನ್ನು ‘ಅಲಿಗಡ’ದಿಂದ ‘ಹರಿಗಡ’ ಎಂದು ಬದಲಿಸುವಂತೆ ಉತ್ತರಪ್ರದೇಶದ ಬಿಜೆಪಿ ಸರಕಾರವನ್ನು ಒತ್ತಾಯಿಸಿದ್ದಾರೆ. ‘ಫಿರೋಜಾಬಾದ್’ ಜಿಲ್ಲೆಯ ಹೆಸರನ್ನು ‘ಚಂದ್ರನಗರ’ ಎಂದು ಬದಲಿಸಲು ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ.

ಹಿಂದೂ ಹೆಸರು ಹೇಳಿ ೫೧ ವರ್ಷದ ಮತಾಂಧನಿಂದ ೨೨ ವರ್ಷದ ಹಿಂದೂ ಯುವತಿಯೊಂದಿಗೆ ವಿವಾಹ !

ಇಲ್ಲಿಯ ೫೧ ವರ್ಷದ ಶೇಖ ಮಹಮ್ಮದ ಅಖ್ತರನು ಹಿಂದೂ ಹೆಸರನ್ನು ಇಟ್ಟುಕೊಂಡು ಓರ್ವ ೨೨ ವರ್ಷದ ಹಿಂದೂ ಯುವತಿಯೊಂದಿಗೆ ವಿವಾಹವಾದನು. ವಿವಾಹದ ನಂತರ ಆಕೆಗೆ ಬುರಖಾ ಧರಿಸಲು ಮತ್ತು ನಮಾಜ ಪಠಣ ಮಾಡುವಂತೆ ಕಡ್ಡಾಯಗೊಳಿಸಿದ ಹಾಗೂ ಅದಕ್ಕಾಗಿ ಆಕೆಯ ಮೇಲೆ ದೌರ್ಜನ್ಯವೆಸಗಿದ.

ಮನೆಬಳಕೆಯ ಗ್ಯಾಸ್ ಸಿಲೆಂಡರ್ ಬೆಲೆಯಲ್ಲಿ ೨೫ ರೂಪಾಯಿ ಹೆಚ್ಚಳ !

ಸಬ್ಸಿಡಿ ಇಲ್ಲದಿರುವ ಮನೆಬಳಕೆಯ ಎಲ್.ಪಿ.ಜಿ. ಸಿಲಿಂಡರ್‌ನ ಬೆಲೆಯನ್ನು ೨೫ ರೂಪಾಯಿಯಷ್ಟು ಹೆಚ್ಚಿಸಲಾಗಿದೆ. ಈ ಬೆಲೆ ಏರಿಕೆಯ ನಂತರ ದೆಹಲಿ ಮತ್ತು ಮುಂಬಯಿ ನಗರಗಳಲ್ಲಿ ಮನೆ ಬಳಕೆಯ ೧೪.೨ ಕೆಜಿಯ ಎಲ್.ಪಿ.ಜಿ ಸಿಲಿಂಡರಿನ ಬೆಲೆ ೮೫೯.೫ ರೂಪಾಯಿ ಆಗಿದೆ.

‘ಬ್ರಾಹ್ಮಣೇತರರನ್ನು ನೇಮಿಸುವಾಗ, ಹಿಂದಿನ ಪುರೋಹಿತರನ್ನು ತೆಗೆದುಹಾಕಲಾಗುವುದಿಲ್ಲ!’(ಅಂತೆ) – ಡಿಎಂಕೆ ಸರಕಾರ

ದ್ರಾವಿಡ ಮುನ್ನೇತ್ರ ಕಳಘಂ (ಡಿಎಂಕೆ) ಸರಕಾರದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇವರು ತಮಿಳುನಾಡಿನ ದೇವಸ್ಥಾನಗಳಲ್ಲಿ ಬ್ರಾಹ್ಮಣೇತರ ಅರ್ಚಕರನ್ನು ನೇಮಿಸುವ ನಿರ್ಧಾರವು ವಿವಾದವನ್ನು ಹುಟ್ಟುಹಾಕಿದೆ.

ಕಾಬೂಲ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿಯಲ್ಲಿನ ಸಿಬ್ಬಂದಿ ಮತ್ತು ಪ್ರಜೆಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ !

ತಾಲಿಬಾನರು ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿದ ಮೇಲೆ ಕಾಬೂಲ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ನಾಗರಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಯಿತು.

ಸುನಂದಾ ಪುಷ್ಕರ್ ಕೊಲೆ ಪ್ರಕರಣದಲ್ಲಿ ಆಕೆಯ ಪತಿ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್ ಖುಲಾಸೆ !

ವಿಶೇಷ ನ್ಯಾಯಾಲಯವು ಸುನಂದಾ ಪುಷ್ಕರ್ ಇವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್‌ಅನ್ನು ಖುಲಾಸೆಗೊಳಿಸಿದೆ. ೨೦೧೪ ರಲ್ಲಿ ದೆಹಲಿಯ ಹೋಟೆಲ್‌ನಲ್ಲಿ ಸುನಂದಾ ಪುಷ್ಕರ್ ಇವರ ಶವ ಪತ್ತೆಯಾಗಿತ್ತು.

ನ್ಯಾಯಬದ್ಧವಾಗಿ ಬೇಹುಗಾರಿಕೆಯಾಗಿದ್ದರೆ, ಅದಕ್ಕೆ ಅನುಮತಿ ನೀಡುವ ವಿಭಾಗವು ಪ್ರಮಾಣಪತ್ರ ದಾಖಲಿಸಬೇಕು ! – ಸರ್ವೋಚ್ಚ ನ್ಯಾಯಾಲಯ

ನಾವು ನಿಮಗೆ (ಕೇಂದ್ರ ಸರಕಾರಕ್ಕೆ) ಸೂಕ್ಷ್ಮ ಅಥವಾ ಗೌಪ್ಯ ಮಾಹಿತಿಯನ್ನು ಕೇಳುತ್ತಿಲ್ಲ. ಯಾವುದು ನೀವು ಹೇಳಲಾಗುವುದಿಲ್ಲ, ಅದನ್ನು ಹೇಳಲು ನಾವು ಕೇಂದ್ರ ಸರಕಾರಕ್ಕೆ ಒತ್ತಾಯಿಸುವುದಿಲ್ಲ. ನಾವು ಕೇವಲ ಜನರ ಗೌಪ್ಯತೆಯ ಉಲ್ಲಂಘನೆ ಮತ್ತು ಬೇಹುಗಾರಿಕೆಯ ನ್ಯಾಯಬದ್ಧತೆಯ ದೃಷ್ಟಿಯಿಂದ ನೋಟಿಸ್ ನೀಡಲು ಇಚ್ಚಿಸುತ್ತೇವೆ.

‘ತಾಲಿಬಾನ್‌ನ ನೇತೃತ್ವದಲ್ಲಿ ಅಫಗಾನಿ ಜನರಿಗೆ ಅಮೇರಿಕಾದಿಂದ ಸ್ವಾತಂತ್ರ್ಯ ಬೇಕಿತ್ತು (ಅಂತೆ) ! – ಸಮಾಜವಾದಿ ಪಕ್ಷದ ಸಂಸದ ಶಫೀಕುರ್ರ‍ಹಮಾನ ಬರ್ಕ್

ಅಫಗಾನಿಸ್ತಾನದಲ್ಲಿ ಬೀಡುಬಿಡಲು ಬಂದ ಅಮೇರಿಕಾ ಹಾಗೂ ರಶಿಯಾವನ್ನು ತಾಲಿಬಾನ್ ವಿರೋಧಿಸಿತ್ತು. ತಾಲಿಬಾನ್‌ನ ನೇತೃತ್ವದಲ್ಲಿ ಅಫಗಾನಿ ಜನರಿಗೆ ಅಮೇರಿಕಾದಿಂದ ಸ್ವಾತಂತ್ರ್ಯ ಬೇಕಿತ್ತು. ಅಫಗಾನಿಸ್ತಾನದ ಸ್ವಾತಂತ್ರ್ಯ ಅಲ್ಲಿನ ಜನರ ಆಂತರಿಕ ವಿಷವಾಗಿದೆ

ಹವಾಮಾನ ಬದಲಾವಣೆಯಿಂದ ಪಶ್ಚಿಮ ಘಟ್ಟದಲ್ಲಿನ ಶೇಕಡಾ ೩೩ರಷ್ಟು ಜೀವವೈವಿಧ್ಯವು ೨೦೫೦ ಇಸವಿಯವರೆಗೆ ನಾಶವಾಗಲಿದೆ – ವಿಜ್ಞಾನಿಗಳ ಹೇಳಿಕೆ

ವಿಜ್ಞಾನಿಗಳ ಈ ಗುಂಪಿನಲ್ಲಿ ಪ್ರಾ. (ನಿವೃತ್ತ) ಎನ್. ಎಚ್. ರವೀಂದ್ರನಾಥ ಮತ್ತು ಪ್ರಾ. ಜಿ. ಗಾಲ ಇವರೂ ಇದ್ದರು. ಕಳೆದ ವಾರ ಪ್ರಸಿದ್ಧವಾದ ಈ ವರದಿಯಲ್ಲಿ ಹವಾಮಾನ ಬದಲಾವಣೆಯಿಂದಾಗಿ ಜಗತ್ತು ಭೀಷಣ ದುಷ್ಪರಿಣಾಮಗಳನ್ನು ಎದುರಿಸಬೇಕಾಗುವುದು ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.

ರಾಜಸ್ಥಾನ ಮಹಿಳಾ ಆಯೋಗದ ಖಾಲಿ ಹುದ್ದೆಗಳ ನೇಮಕಾತಿಗೆ ನ್ಯಾಯಾಲಯದಿಂದ ರಾಜ್ಯ ಸರಕಾರಕ್ಕೆ ನೋಟಿಸ್ !

ರಾಜಸ್ಥಾನ ಮಹಿಳಾ ಆಯೋಗದಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಮಹಿಳಾ ಮತ್ತು ಬಾಲ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ರಾಜಸ್ಥಾನ ಉಚ್ಚ ನ್ಯಾಯಾಲಯವು ನೋಟಿಸ್ ಕಳುಹಿಸಿದೆ.