ನವಿ ಮುಂಬಯಿಯಲ್ಲಿ ನವರಾತ್ರಿ ಉತ್ಸವ ಮಂಡಳಿಯ ಕಾಣಿಕೆ ಪೆಟ್ಟಿಗೆಯಲ್ಲಿದ್ದ ೪ ಸಾವಿರ ರೂಪಾಯಿ ಕಳ್ಳತನ !

ಇಲ್ಲಿನ ಒಂದು ನವರಾತ್ರಿ ಉತ್ಸವ ಮಂಡಳದ ಸ್ಥಳದಲ್ಲಿ ಇರಿಸಲಾಗಿದ್ದ ಕಾಣಿಕೆ ಪೆಟ್ಟಿಗೆ ಒಡೆದು ಅದರಲ್ಲಿನ ೪ ಸಾವಿರ ರೂಪಾಯಿ ಕಳ್ಳತನ ಮಾಡಿದ್ದಾರೆ. ಈ ಘಟನೆ ಸಿಸಿ ಟೀವಿಯಲ್ಲಿ ಸೆರೆಯಾಗಿದೆ. ಇದುವರೆಗೂ ಕಳ್ಳನನ್ನು ಹಿಡಿಯಲಾಗಿಲ್ಲ.

ಕೋಲಾರದಲ್ಲಿ ದೇವಸ್ಥಾನದಲ್ಲಿನ ಮೂರ್ತಿ ದ್ವಂಸ !

ಇಲ್ಲಿಯ ಪ್ರಾದೇಶಿಕ ಸಾರಿಗೆ ಇಲಾಖೆಯ ಕಾರ್ಯಾಲಯದ ಹತ್ತಿರ ಇರುವ ಜಡೆ ಮುನೇಶ್ವರ ದೇವಸ್ಥಾನದಲ್ಲಿನ ಮೂರ್ತಿಯನ್ನು ಓರ್ವ ವ್ಯಕ್ತಿಯು ವಿರೊಪಗೊಳಿಸುರುವ ಘಟನೆ ನಡೆದಿದೆ.

ಕರ್ನಾಲ (ಹರಿಯಾಣ) ಇಲ್ಲಿ ದುಷ್ಕರ್ಮಿಗಳಿಂದ ಶ್ರೀ ಹನುಮಂತನ ಮೂರ್ತಿ ಧ್ವಂಸ !

ಇಲ್ಲಿಯ ಶಾಮಗಡ ಗ್ರಾಮದಲ್ಲಿ ದುಷ್ಕರ್ಮಿಗಳಿಂದ ಶ್ರೀ ಹನುಮಂತನ ಮೂರ್ತಿ ಧ್ವಂಸಗೊಳಿಸಲಾಗಿದೆ. ಈ ಮೂರ್ತಿ ಗ್ರಾಮಪಂಚಾಯತಿಯ ಜಾಗದಲ್ಲಿ ಸ್ಥಾಪಿಸಲಾಗಿತ್ತು. ಮೂರ್ತಿಯನ್ನು ಧ್ವಂಸ ಮಾಡಿದ ನಂತರ ಅದರ ಅವಶೇಷಗಳನ್ನು ಕೆರೆಗೆ ಎಸೆಯಲಾಗಿದೆ.

ಕೆನಡಾದಲ್ಲಿ ಒಂದೇ ರಾತ್ರಿಯಲ್ಲಿ ೩ ಹಿಂದೂ ದೇವಸ್ಥಾನಗಳಲ್ಲಿ ಕಳವು !

ಕೆನಡಾದ ಒಂಟಾರಿಯ ಪ್ರದೇಶದಲ್ಲಿನ ೩ ದೇವಸ್ಥಾನಗಳಲ್ಲಿ ಒಂದೇ ರಾತ್ರಿ ಕಳ್ಳತನ ಆಗಿದೆ. ಈ ಪ್ರಕರಣದಲ್ಲಿ ಪೊಲೀಸರು ಓರ್ವ ಅನುಮಾನಾಸ್ಪದನನ್ನು ಹುಡುಕುತ್ತಿದ್ದಾರೆ. ಪೊಲೀಸರಿಗೆ ಕಳ್ಳನ ಬಗ್ಗೆ ಮಾಹಿತಿ ನೀಡುವವರಿಗೆ ೨ ಸಾವಿರ ಕೆನಡಾದ ಡಾಲರ್ (ಸುಮಾರು ೧ ಲಕ್ಷ ೨೨ ಸಾವಿರ ರೂಪಾಯಿ) ಬಹುಮಾನ ಘೋಷಿಸಲಾಗಿದೆ.

ಮುರಾದಾಬಾದ (ಉತ್ತರಪ್ರದೇಶ) ನಲ್ಲಿ ಮತಾಂಧ ಮುಸಲ್ಮಾನರಿಂದ ನಿರ್ಮಾಣ ಹಂತದಲ್ಲಿರುವ ದೇವಾಲಯ ಧ್ವಂಸ !

ಉತ್ರಪ್ರದೇಶದಲ್ಲಿ ಭಾಜಪ ರಾಜ್ಯವಿದ್ದರೂ ಮತಾಂಧರ ಹಿಂದೂದ್ವೇಷ ಇನ್ನೂ ನಿಂತಿಲ್ಲ. ಇದಕ್ಕಾಗಿ ಸರಕಾರವು ಹೆಚ್ಚು ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !

ಬುಂದಿ (ರಾಜಸ್ಥಾನ) ಇಲ್ಲಿಯ ಶ್ರೀ ರಕ್ತದಂತಿಕಾಮಾತಾ ದೇವಸ್ಥಾನದಲ್ಲಿ ೧೩ ಲಕ್ಷ ರೂಪಾಯಿಗಳ ಲೂಟಿ !

ರಾಜಸ್ಥಾನದಲ್ಲಿ ಹಿಂದೂದ್ವೇಷಿ ಕಾಂಗ್ರೆಸ್ ನ ಸರಕಾರ ಇರುವಾಗ ಈ ರೀತಿಯ ಘಟನೆ ಘಟಿಸುವುದರಲ್ಲಿ ಆಶ್ಚರ್ಯವೇನು ?

ಕೇರಳದಲ್ಲಿ ‘ಇಸ್ಲಾಮಿಕ್ ಸ್ಟೇಟ್’ನ ಭಯೋತ್ಪಾದಕನ ಬಂಧನ

ರಾಷ್ಟ್ರೀಯ ತನಿಖಾ ದಳದಿಂದ (‘ಎನ್.ಐ.ಎ.’ಯು) ಕೇರಳದಲ್ಲಿ ‘ಇಸ್ಲಾಮಿಕ್ ಸ್ಟೇಟ್’ನ ಭಯೋತ್ಪಾದಕ ಸಂಘಟನೆಯ ಒಂದು ನೆಲೆ ನಾಶಗೊಳಿಸಿ ನಬಿಲ್ ಅಹಮದ್ ಎಂಬ ಭಯೋತ್ಪಾದಕನನ್ನು ಬಂಧಿಸಿದ್ದಾರೆ.

ಪ್ರಯಾಗರಾಜ್ ನಲ್ಲಿ ಶಿವನ ದೇವಸ್ಥಾನದಿಂದ ಶಿವಲಿಂಗ ಕಳ್ಳತನ !

ಇಲ್ಲಿನ ಅತರಸುಯಿಯಾ ಪ್ರದೇಶದ ಪರ್ವತ ಮೊಹಲ್ಲಾದಲ್ಲಿರುವ ಶಿವನ ದೇವಸ್ಥಾನದಿಂದ ಶಿವಲಿಂಗವನ್ನೇ ಕಳ್ಳತನ ಮಾಡಲಾಗಿದೆ. ಬೆಳಗ್ಗೆ ಭಕ್ತರು ಪೂಜೆ ಮಾಡಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

ಭಾಮೇಶ್ವರಿ ದುರ್ಗಾ ದೇವಸ್ಥಾನ ಧ್ವಂಸ !

ಹಿಂದೂ ದೇವಾಲಯಗಳ ಮೇಲೆ ನಿರಂತರವಾಗಿ ದಾಳಿ ನಡೆದಾಗ ಕೆನಡಾ ಸರಕಾರ ಕಠಿಣ ಕ್ರಮ ಕೈಗೊಳ್ಳುವುದನ್ನು ತಡೆಯುತ್ತಿರುವುದನ್ನು ಜಗತ್ತು ನೋಡುತ್ತಿದೆ. ಕೆನಡಾದ ಮೇಲೆ ಕ್ರಮ ಕೈಗೊಳ್ಳುವಂತೆ ಭಾರತ ಒತ್ತಡ ಹೇರಬೇಕು !

ಹಿಂದುಗಳ ವಿರೋಧದ ಬಳಿಕ ದೇವಸ್ಥಾನದ ಜೀರ್ಣೋದ್ಧಾರಕ್ಕೆ ನೀಡುವ ಅನುದಾನಕ್ಕೆ ತಡೆ ಆಜ್ಞೆ ನೀಡಿರುವ ಆದೇಶವನ್ನು ಹಿಂಪಡೆದ ರಾಜ್ಯದ ಧಾರ್ಮಿಕ ದತ್ತಿ ಇಲಾಖೆ !

ರಾಜ್ಯದಲ್ಲಿನ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ನೀಡಲಾಗುವ ಅನುದಾನ ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ನಿಲ್ಲಿಸಿತ್ತು; ಆದರೆ ಹಿಂದುಗಳ ವಿರೋಧದಿಂದ ಕೊನೆಗೂ ಸರಕಾರ ಅದರಿಂದ ಹಿಂದೆ ಸರಿದಿದೆ. ರಾಜ್ಯ ಸರಕಾರದ ಅಧಿಕಾರದ ಅಡಿಯಲ್ಲಿರುವ ಧಾರ್ಮಿಕ ದತ್ತಿ ಇಲಾಖೆ ಮೂರು ಅಂಶಗಳ ಮೂಲಕ ಈ ಅನುದಾನ ತಡೆ ಹಿಡಿದಿತ್ತು.