ದೇವಸ್ಥಾನಗಳ ವಿಶ್ವಸ್ಥರ ಮತ್ತು ಅರ್ಚಕರ ಸಂಘಟನೆ ಮಾಡಿ !

ದೇವಸ್ಥಾನಗಳು ಹಿಂದೂ ಧರ್ಮದ ಮೂಲಾಧಾರವಾಗಿವೆ. ಧರ್ಮದ ರಕ್ಷಣೆಯ ದೃಷ್ಟಿಯಿಂದಲೂ ದೇವಸ್ಥಾನಗಳ ಸ್ಥಾನವು ಮಹತ್ವದ್ದಾಗಿವೆ. ಇದುವರೆಗೆ ‘ಸೆಕ್ಯುಲರ್ (ಜಾತ್ಯತೀತ) ಸರಕಾರಗಳು ಭಕ್ತರು ನೀಡುವ ಅರ್ಪಣೆಯ ಮೇಲೆ ಕಣ್ಣಿಟ್ಟು ನೂರಾರು ದೇವಸ್ಥಾನಗಳನ್ನು ಸ್ವಾಧೀನಪಡಿಸಿ ಕೊಂಡಿವೆ.

ಹಿಂದುತ್ವನಿಷ್ಠ ಆಡಳಿತಾವಧಿಯಲ್ಲಿ ಹಿಂದೂಗಳ ಹಿತರಕ್ಷಣೆಗಾಗಿ ಹಿಂದೂಸಂಘಟನೆಗಳು ಮಾಡಬೇಕಾದ ಪ್ರಯತ್ನಗಳು !

ಹಿಂದುತ್ವನಿಷ್ಠ ಸಂಘಟನೆಗಳು ರಾಷ್ಟ್ರಹಿತದ ದೃಷ್ಟಿಯಿಂದ ಸಂಘರ್ಷ ವನ್ನು ಮಾಡುತ್ತಿರುತ್ತವೆ. ಅವುಗಳಲ್ಲಿನ ಹೆಚ್ಚಿನ ಸಂಘಟನೆಗಳಿಗೆ ಯಾವುದೇ ರೀತಿಯ ಧನಸಹಾಯ ಸಿಗುವುದಿಲ್ಲ. ಸರಕಾರದಿಂದ ಭದ್ರತೆ ಸಿಗುವುದಂತೂ ದೂರದ ಮಾತಾಯಿತು.

ಹಿಂದೂಗಳು ತಮ್ಮದೇ ದೇಶದಲ್ಲಿ ಅಸುರಕ್ಷಿತ ?’ ಈ ಕುರಿತು ಆನ್‌ಲೈನ್ ವಿಶೇಷ ಸಂವಾದದ ಆಯೋಜನೆ !

ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವ ಮೂಲಕ ಈ ಮತಾಂಧ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು

‘ಸೆಕ್ಯುಲರ್’ ಪದದ ಹೆಸರಿನಲ್ಲಿ ಶಿಕ್ಷಣದ ಇಸ್ಲಾಮೀಕರಣ ಆರಂಭ ! – ಡಾ. ನೀಲ ಮಾಧವ ದಾಸ

ಹಿಂದೆ ಭಾರತದಲ್ಲಿ ಗುರುಕುಲ ಶಿಕ್ಷಣ ಪದ್ಧತಿ ಇತ್ತು. ಅದನ್ನು ಕಿತ್ತೊಗೆಯಲು ಸ್ವಾತಂತ್ರ್ಯ ಪೂರ್ವದಲ್ಲಿಯೇ ಗಾಂಧಿಜಿಯವರ ಪ್ರೋತ್ಸಾಹದಿಂದ ದೇಶದಲ್ಲಿ ಶಿಕ್ಷಣ ವ್ಯವಸ್ಥೆಯ ಇಸ್ಲಾಮೀಕರಣ ಪ್ರಾರಂಭವಾಯಿತು. ಅಂದಿನಿಂದ ಶಾಲಾ ಪಠ್ಯಪುಸ್ತಕಗಳಲ್ಲಿ ಅಕ್ಬರ, ಟಿಪ್ಪು ಸುಲ್ತಾನ ಮುಂತಾದ ಮುಸ್ಲಿಂ ಆಕ್ರಮಣಕಾರರ ಪಾಠಗಳನ್ನು ಕಲಿಸಲು ಪ್ರಾರಂಭಿಸಲಾಯಿತು.

ಬಾಂಗ್ಲಾದೇಶದ ಹಿಂದೂಗಳನ್ನು ರಕ್ಷಿಸಲು ಜಗತ್ತಿನಾದ್ಯಂತದ ದೇಶಗಳು, ವಿಶ್ವ ಸಂಸ್ಥೆ ಮತ್ತು ಭಾರತವು ನೇತೃತ್ವ ವಹಿಸಬೇಕು ! – ನ್ಯಾಯವಾದಿ (ಪೂ.) ರವೀಂದ್ರ ಘೋಷ, ಅಧ್ಯಕ್ಷರು, ಬಾಂಗ್ಲಾದೇಶ ಮೈನಾರಟಿ ವಾಚ್

ಬಾಂಗ್ಲಾದೇಶದಲ್ಲಿ ಅಪರಾಧ ಪ್ರವೃತ್ತಿಯ ಸಾವಿರಾರು ಮುಸಲ್ಮಾನರು ಹಿಂದೂಗಳನ್ನು ಗುರಿ ಮಾಡುತ್ತಿದ್ದಾರೆ. ಕುರಾನ್ ಅಥವಾ ಪ್ರವಾದಿ ಮೊಹಮ್ಮದ್ ಅವರನ್ನು ಅವಮಾನಿಸಿದ್ದಾರೆ ಎಂಬ ಸುಳ್ಳು ಆರೋಪ ಹೊರಿಸಿ ಹಿಂದೂಗಳ ದೇವಸ್ಥಾನಗಳನ್ನು ಕೆಡಹುವುದು, ದೇವತೆಗಳ ವಿಗ್ರಹಗಳನ್ನು ಒಡೆಯುವುದು, ಹಿಂದೂ ವಸತಿಗಳನ್ನು ಸುಡುವುದು, ಹಿಂದೂಗಳ ಹತ್ಯೆ ಮಾಡುವುದು ಈ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ.

ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಹೆಚ್ಚಿನ ಶುಲ್ಕ ನೀಡಿ ದರ್ಶನ ಪಡೆಯುವ ‘ಸುಗಮ ದರ್ಶನ’ ಯೋಜನೆಯನ್ನು ನಿಲ್ಲಿಸಬೇಕು ! – ಹಿಂದೂ ಜನ ಜಾಗೃತಿ ಸಮಿತಿ

ಕಾಶಿ ವಿಶ್ವನಾಥ ದೇವಸ್ಥಾನದ ಸಾಲಿನಲ್ಲಿ ನಿಲ್ಲದೆ ಭಕ್ತರಿಗೆ ದರ್ಶನ ಪಡೆಯುವುದಕ್ಕಾಗಿ ‘ಸುಗಮ ದರ್ಶನ’ ಯೋಜನೆಯಲ್ಲಿ ಪ್ರತಿಯೊಬ್ಬರಿಂದ ೫೦೦ ರೂಪಾಯಿ ಮತ್ತು ಸೋಮವಾರದಂದು ೭೫೦ ರೂಪಾಯಿ ಪಡೆಯುವುದು ಸಂಪೂರ್ಣವಾಗಿ ಅನ್ಯಾಯವಾಗಿದೆ.

‘ಕಾಲಿ’ ಸಾಕ್ಷ್ಯಚಿತ್ರದಲ್ಲಿನ ಭಿತ್ತಿಪತ್ರದ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯಿಂದ ಆನ್‌ಲೈನ್ ಸಹಿ ಅಭಿಯಾನ

ಹಿಂದೂ ಜನಜಾಗೃತಿ ಸಮಿತಿಯು ‘ಕಾಲಿ’ ಸಾಕ್ಷ್ಯಚಿತ್ರದ ಭಿತ್ತಿಪತ್ರ ಮತ್ತು ಅದರ ನಿರ್ಮಾಪಕ ಲೀನಾ ಮಣಿಮೇಕಲೈ ವಿರುದ್ಧ ಕ್ರಮ ಕೈಗೊಳ್ಳುವಂತೆ ಆನ್‌ಲೈನ್ ಸಹಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದಾದ ಬಳಿಕ ಕೇಂದ್ರ ಸರಕಾರಕ್ಕೆ ಮನವಿ ನೀಡಲಾಗುವುದು.

ತಿಸ್ತಾ ಸೆಟಲ್ವಾಡ್ ಪ್ರಕರಣ ವ್ಯಾಪಕವಾಗಿರುವುದರಿಂದ ಅದನ್ನು ‘ಎನ್.ಐ.ಎ.’ ಗೆ ಒಪ್ಪಿಸಬೇಕು ! – ಆರ್.ವಿ.ಎಸ್. ಮಣಿ, ಮಾಜಿ ಅಧೀನ ಕಾರ್ಯದರ್ಶಿ, ಕೇಂದ್ರ ಗೃಹಸಚಿವಾಲಯ

ನರೇಂದ್ರ ಮೋದಿ ಮತ್ತು ಹಿಂದೂ ಸಮುದಾಯವನ್ನು ಅಪಖ್ಯಾತಿಗೊಳಿಸಲು ತಿಸ್ತಾ ಸೆಟಲ್ವಾಡ್ ಅವರು ‘ಭಾರತದಲ್ಲಿನ ಮುಸ್ಲಿಮರಿಗೆ ಅನ್ಯಾಯವಾಗುತ್ತಿದೆ’ ಎಂದು ಬಿಂಬಿಸಿ ಗುಜರಾತ್ ಗಲಭೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಸಿಕೊಂಡರು. ತಿಸ್ತಾ ಸೆಟಲ್ವಾಡ್ ಇವರು, ‘ಹಿಂದೂ ಭಯೋತ್ಪಾದನೆಯ ಪಿ.ಆರ್. ಎಜೆಂಟ’ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡಿದ್ದಾರೆ.

ಬುಲ್ಡೋಜರ್‌ಗಳನ್ನು ಸಮಾಜವಿರೋಧಿ ಪ್ರವೃತ್ತಿಗಳ ಮನೆಯ ಮೇಲೆ ಮಾತ್ರವಲ್ಲ, ಇಂತಹ ಜಿಹಾದಿ ಸಿದ್ಧಾಂತದ ಮೇಲೂ ಹತ್ತಿಸಬೇಕಾಗುತ್ತದೆ ! – ಶ್ರೀ. ವಿನೋದ ಬನ್ಸಲ್, ವಿಹಿಂಪ

ಉದಯಪುರದಲ್ಲಿ ಜಿಹಾದಿಗಳು ಕನ್ಹಯ್ಯಾಲಾಲ್ ಎಂಬ ಹಿಂದೂ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈದಿರುವುದು ಸಾಮಾನ್ಯ ಘಟನೆಯಲ್ಲ ಬದಲಾಗಿ ದೇಶದ ಸಾರ್ವಭೌಮತ್ವ, ಸುಸಂಸ್ಕೃತ ಸಮಾಜ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ.

ಸಂವಿಧಾನದಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳನ್ನು ಕೈಬಿಡಲು ಆಗ್ರಹ !

೧೯೭೬ ರಲ್ಲಿ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯ ಸಮಯದಲ್ಲಿ ಸಂವಿಧಾನದ ೪೨ ನೇ ತಿದ್ದುಪಡಿಯನ್ನು ಮಾಡಿ ‘ಜಾತ್ಯತೀತ'(ಸೆಕ್ಯುಲರ್) ಮತ್ತು ‘ಸಮಾಜವಾದಿ'(ಸೋಶಲಿಸ್ಟ) ಪದಗಳನ್ನು ತುರುಕಿಸಿದರು. ಈ ಕೃತಿ ಸಂವಿಧಾನಬಾಹಿರವಾಗಿರುವುದರಿಂದ ಸಂವಿಧಾನದಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳನ್ನು ತೆಗೆದುಹಾಕಬೇಕು.