ಸಾಧಕರೇ, ‘ವ್ಯಷ್ಟಿ ಸಾಧನೆಯ ಪ್ರಯತ್ನವನ್ನು ಚೆನ್ನಾಗಿ ಮಾಡಿದರೆ ಸಮಷ್ಟಿ ಸಾಧನೆಯೂ ಚೆನ್ನಾಗಿ ಆಗುತ್ತದೆ’ ಎಂಬುದನ್ನು ಗಮನದಲ್ಲಿರಿಸಿ ವ್ಯಷ್ಟಿ ಸಾಧನೆಯ ಪ್ರಯತ್ನವನ್ನು ಹೆಚ್ಚಿಸಿ !
ವ್ಯಷ್ಟಿ ಸಾಧನೆಯು ಸಾಧನೆಯ ಅಡಿಪಾಯವಾಗಿದೆ. ಮರದ ಬೇರುಗಳು ಭೂಮಿಯಲ್ಲಿ ಗಟ್ಟಿಯಾಗಿ ಬೇರೂರಿದರೆ ಮರದ ಮೇಲಿನ ಭಾಗ ಚೆನ್ನಾಗಿ ಬೆಳೆಯುತ್ತದೆ ಮತ್ತು ಅದಕ್ಕೆ ಸುಂದರ ಹೂವುಗಳು ಮತ್ತು ರಸಭರಿತ ಹಣ್ಣುಗಳು ಬರುತ್ತವೆ.