ಭಗವಂತನ ಭಾವವಿಶ್ವವನ್ನು ಅನುಭವಿಸುವ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಅಮೂಲ್ಯ ಮಾರ್ಗದರ್ಶನ !

ಸತತ ಭಾವದ ಸ್ಥಿತಿಯಲ್ಲಿದ್ದರೆ, ಶರೀರ, ಮನಸ್ಸು, ಬುದ್ಧಿ ಇವುಗಳು ಸಹಕರಿಸುವ ವಿಷಯದಲ್ಲಿ ಅಡಚಣೆ ಬರುವುದಿಲ್ಲ. ಸನಾತನವು ಪ್ರಕಾಶಿಸಿದ ‘ಭಾವಜಾಗೃತಿಗಾಗಿ ಸಾಧನೆ ಈ ಗ್ರಂಥವನ್ನು ಓದಿ ದಿನವಿಡೀ ಭಾವದ ಸ್ಥಿತಿಯಲ್ಲಿರಲು ಪ್ರಯತ್ನಿಸಿರಿ. ನಿಮ್ಮಲ್ಲಿ ಭಾವವಿದೆ. ಭಾವ ಇರುವುದರಿಂದ ಮುಂದೆ ಹೋಗುವಿರಿ.

ಸಾಧಕರ ಮುಂದೆ ಭಾವದ ಆದರ್ಶವನ್ನಿಡುವ ಪರಾತ್ಪರ ಗುರು ಡಾ. ಆಠವಲೆ !

ಫೋಂಡಾದಲ್ಲಿ ಸುಖಸಾಗರದ ಆಶ್ರಮವನ್ನು ಬಿಡುವಾಗ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ, “ಈ ಆಶ್ರಮವು ನಮಗೆ ಬಹಳಷ್ಟನ್ನು ನೀಡಿದೆ, ಎಂದರು. ಆಶ್ರಮವನ್ನು ಕೊನೆಯ ಕ್ಷಣಬಿಡುವಾಗ ಆಶ್ರಮ, ಅದೇ ರೀತಿ ಎಲ್ಲ ಗೋಡೆ, ಬಾಗಿಲು ಮತ್ತು ಕಿಟಕಿಗಳನ್ನು ಸ್ಪರ್ಶಿಸಿ ಹಾಗೂ ನಮಸ್ಕಾರ ಮಾಡಿ ಬಂದರು.

ಭಾವದ ವ್ಯಾಖ್ಯೆ

‘ಭಾವ ಅಂದರೆ ಈಶ್ವರನ ಅಸ್ತಿತ್ವದ ಸತತ ಅರಿವಿರುವುದು. ಭಾವ ಅಂದರೆ ಈಶ್ವರನನ್ನು ಅರಿತುಕೊಳ್ಳುವ ಜೀವದಲ್ಲಿರುವ ತೀವ್ರ ತಳಮಳ. ಭಾವ ಅಂದರೆ ಈಶ್ವರಪ್ರಾಪ್ತಿಯ ತೀವ್ರ ಪ್ರೇಮ, ಆತ್ಮೀಯತೆ ಮತ್ತು ಶರಣಾಗತಿಗಳ ಸಂಗಮದಿಂದ ಅಂತಃಕರಣದಲ್ಲಿ ನಿರ್ಮಾಣವಾದ ಆದ್ರತೆ. ಭಾವ ಎಂದರೆ ಈಶ್ವರನ ಅನುಭೂತಿ ಪಡೆಯುವುದು !

ಭಗವಂತನಿಗೂ ಸಹ ಭಾವಜಾಗೃತಿಯಾಗುತ್ತದೆ ! – (ಪರಾತ್ಪರ ಗುರು) ಡಾ. ಆಠವಲೆ

ಭಕ್ತನು ಭಗವಂತನೊಂದಿಗೆ ಏಕರೂಪವಾದ ನಂತರ ಬಿಂಬದ ಪ್ರತಿಬಿಂಬ ಮೂಡುತ್ತದೆ. ಭಕ್ತನ ಕಣ್ಣುಗಳಲ್ಲಿ ಭಾವಾಶ್ರು ಬಂದರೆ ಭಗವಂತನ ಕಣ್ಣುಗಳಿಂದ ಕೂಡ ಭಾವಾಶ್ರು ಬರುತ್ತವೆ. ಭಕ್ತನಿಗೆ ವೇದನೆಯಾದರೆ, ಭಗವಂತನಿಗೂ ಅದು ಆಗುತ್ತದೆ.

‘ಎಲ್ಲವೂ ದೇವರೇ ಆಗಿದ್ದಾನೆ’ ಎಂಬ ಭಾವದಿಂದ ಈಶ್ವರನೊಂದಿಗೆ ಹೇಗೆ ಮಾತನಾಡಬೇಕು ?

ಗುರುಗಳ ಅಥವಾ ಭಗವಂತನ ಸ್ಮರಣೆಯಿಂದ ಸಾಧಕನ ಭಾವ ಜಾಗೃತವಾಗುತ್ತದೆ ಮತ್ತು ಅವನಿಗೆ ಭಾವಾವಸ್ಥೆ ಪ್ರಾಪ್ತವಾಗುತ್ತದೆ. ಅವನು ಅವರಿಗೆ ಆತ್ಮನಿವೇದನೆಯ ಸ್ವರೂಪದಲ್ಲಿ ತನ್ನ ಸ್ಥಿತಿಯನ್ನು ಸತತವಾಗಿ ಹೇಳುತ್ತಾನೆ.

ಪರಾತ್ಪರ ಗುರು ಡಾ. ಆಠವಲೆಯವರ ಭಾವವಿಶ್ವದಲ್ಲಿರುವಕು. ಅನುರಾಧಾ ವಾಡೆಕರ (ಸದ್ಗುರು (ಕು.) ಅನುರಾಧಾ ವಾಡೆಕರ) !

ಪ.ಪೂ. ಡಾಕ್ಟರರೇ ನನ್ನ ಮಾಧ್ಯಮದಿಂದ ಬರೆಯುತ್ತಿದ್ದಾರೆ. ಅವರ ಸಾತ್ತ್ವಿಕ ಅಕ್ಷರಗಳಿಂದ ನನಗೆ ಚೈತನ್ಯವು ದೊರಕಲಿದೆ. ಹಾಗೆಯೇ ಅವರು ಸೂಕ್ಷ್ಮದಿಂದ ಮೊದಲೇ ಬರೆದಿದ್ದಾರೆ. ಈಗ ಸ್ಥೂಲದಿಂದ ನನ್ನ ಮಾಧ್ಯಮದಿಂದ ಬರೆಸಿಕೊಳ್ಳುತ್ತಿದ್ದಾರೆ.

ಆದರ್ಶ ಭಕ್ತಿಭಾವದ ಸರ್ವೋತ್ತಮ ಉದಾಹರಣೆ ಎಂದರೆ ಗೋಪಿ !

‘ಗೋಪಿಯರಿಗೆ ಶ್ರೀಕೃಷ್ಣನ ಮೇಲೆ ಎಷ್ಟು ಪ್ರೇಮವಿತ್ತೆಂದರೆ, ಅವರು ಪ್ರತಿಕ್ಷಣವೂ ಅವನ ಸ್ಮರಣೆಯಲ್ಲಿಯೇ ಇರುತ್ತಿದ್ದರು. ಅವರ ಮನಸ್ಸಿನಲ್ಲಿ ಎಲ್ಲೆಡೆ ಶ್ರೀಕೃಷ್ಣನು ವ್ಯಾಪಿಸಿದ್ದನು. ಅವರು ಮನಸ್ಸಿನಿಂದ ಸದಾ ಅವನ ಸೇವೆಯಲ್ಲಿಯೇ ಇರುತ್ತಿದ್ದರು. ಆದ್ದರಿಂದ ತಮ್ಮನ್ನು ತಾವು ಮರೆಯುತ್ತಿದ್ದರು. ಅವರಿಗೆ ಶ್ರೀಕೃಷ್ಣನ ಬಗ್ಗೆ ಭಾವವನ್ನು ಹೆಚ್ಚಿಸಲು ಪ್ರಯತ್ನ ಮಾಡಬೇಕಾಗಿರಲಿಲ್ಲ.

ಸದ್ಗುರು (ಸೌ.) ಅಂಜಲಿ ಗಾಡಗೀಳರಿಗೆ ಸಾಧಕರೊಂದಿಗೆ ಮಾತನಾಡುವಾಗ ಭಾವಜಾಗೃತಿಯಾಗುವುದರ ಬಗ್ಗೆ ಅವರು ಹೇಳಿದ ಕಾರಣಗಳು

‘ಸಾಧಕರ ಬಗ್ಗೆ ಭಾವಜಾಗೃತಿಯಾಗುವುದು, ಇದು ವಾತ್ಸಲ್ಯಭಾವದ ದರ್ಶನವಾಗಿದೆ ಮತ್ತು ವಾತ್ಸಲ್ಯಭಾವ ಇದು ಭಗವಂತನ ಪ್ರೀತಿಯ ಲಕ್ಷಣವಾಗಿದೆ. ‘ಎಲ್ಲರೂ ಮುಂದೆ ಹೋಗಬೇಕು, ಎಲ್ಲರ ಆಧ್ಯಾತ್ಮಿಕ ಉನ್ನತಿಯಾಗಬೇಕು ಹಾಗೂ ಅವರು ಈ ಭವಸಾಗರದಿಂದ ಪಾರಾಗಿ ಪುನಃ ಜನ್ಮ ಪಡೆಯಬಾರದು, ಎಂದು ಸದ್ಗುರು ಮತ್ತು ಪರಾತ್ಪರ ಗುರುಗಳಿಗೆ ಅನಿಸುತ್ತದೆ

ಭಕ್ತನು ಹೇಗೆ ಇರಬೇಕು ?

ಗುರುಗಳ ಆಜ್ಞೆಯ ಪಾಲನೆ ಮಾಡುವವನು, ಗುರುಗಳು ಮತ್ತು ದೇವತೆಯವರಿಗಾಗಿ ಏನನ್ನೂ ಮಾಡುವ ಸಿದ್ಧತೆಯಿರುವವನು, ದೇವರ ಸತತ ನೆನಪಿರುವವವನು, ಅನುಸಂಧಾನದಲ್ಲಿರುವವನು ಮತ್ತು ಎಂದೂ ವಿಕಲ್ಪಕ್ಕೆ ಹೋಗದಿರುವವನು, ಭಕ್ತನು ಹೀಗಿರಬೇಕು.

ಭಗವಂತನ ಭೇಟಿಗಾಗಿ ವ್ಯಾಕುಲರಾದ ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರ ಭಾವಸ್ಪರ್ಶಿ ಆತ್ಮಚಿಂತನೆ !

‘ಅಧ್ಯಾತ್ಮದ ಕ್ಷೇತ್ರದ ಹಾದಿಯಲ್ಲಿರುವವರಿಗೆ ಮಾರ್ಗ ದರ್ಶನ ಮಾಡುವ, ಹಾಗೆಯೇ ಭವತಾಪದಿಂದ ನೊಂದುಬೆಂದಿರುವವರನ್ನು ತಾಪಮುಕ್ತಗೊಳಿಸುವ ಈಶ್ವರೀ ಕಾರ್ಯ ಮಾಡುತ್ತಿರುವ ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರು ಒಂದು ತೀರ್ಥಕ್ಷೇತ್ರದಲ್ಲಿ ಧ್ಯಾನಮಗ್ನರಾಗಿರುವಾಗ ಭಗವಂತನ ಬಗ್ಗೆ ಅವರ ಮನಸ್ಸಿನಲ್ಲಿ ಮೂಡಿದ ಆತ್ಮಚಿಂತನೆಯನ್ನು ಇಲ್ಲಿ ಎಲ್ಲರಿಗಾಗಿ ನೀಡುತ್ತಿದ್ದೇವೆ.

Kannada Weekly | Offline reading | PDF