ಆರೋಗ್ಯ !

ಮಾನವನು ಜನ್ಮದಿಂದ ಬೆಳೆಯುತ್ತಾ ಹೋದಂತೆ ಅವನಿಗೆ ‘ಪ್ರತಿಯೊಂದು ಕೃತಿಯನ್ನು ಈಶ್ವರನೇ ಮಾಡುತ್ತಾನೆ’ ಎಂದು ಅನಿಸುವುದಕ್ಕಿಂತ ‘ಪ್ರತಿಯೊಂದು ಕೃತಿಯನ್ನು ನಾನು ಮಾಡುತ್ತೇನೆ’ ಎಂದು ಅನಿಸುತ್ತದೆ. ಇದಕ್ಕೇ ‘ಅಹಂ’ ಎಂದು ಹೇಳುತ್ತಾರೆ. ಎಷ್ಟು ಅಹಂ ಹೆಚ್ಚೋ, ಅಷ್ಟು ಋಣ ಶಕ್ತಿ ಹೆಚ್ಚು. ಅಹಂನಿಂದಾಗಿ ಆಸಕ್ತಿ ನಿರ್ಮಾಣವಾಗುತ್ತದೆ.

ಔಷಧಿ ವನಸ್ಪತಿಗಳನ್ನು ಬೆಳೆಸಿರಿ !

ವೃಕ್ಷಗಳಿಗೆ ಬೆಳೆಯಲು ಸಮಯ ಬೇಕಾಗುತ್ತದೆ, ಇದನ್ನು ಗಮನದಲ್ಲಿಟ್ಟು ಕೊಂಡು ಸಾಧಕರು ಈಗಿನಿಂದಲೇ ಹೆಚ್ಚೆಚ್ಚು ಪ್ರಮಾಣದಲ್ಲಿ ವೃಕ್ಷಗಳನ್ನು ಬೆಳೆಸಬೇಕು, ಇದರಿಂದ ನಗರಗಳಲ್ಲಿರುವ ಮತ್ತು ವೃಕ್ಷಗಳನ್ನು ಬೆಳೆಯಲು ಜಾಗವಿಲ್ಲದಿರುವ ಸಾಧಕರಿಗೆ ಮುಂದೆ ಸಹಾಯ ಮಾಡಬಹುದು.

ಮುಂಬರುವ ಆಪತ್ಕಾಲದ ದೃಷ್ಟಿಯಿಂದ ಆಯುರ್ವೇದ ವನೌಷಧಿಗಳನ್ನು ಬೆಳೆಯಿರಿ !

ಭೀಕರ ಆಪತ್ಕಾಲದಲ್ಲಿ ವೈದ್ಯಕೀಯ ಔಷಧಗಳು ಸಿಗಲಾರವು; ಆದರೆ ಈಶ್ವರನ ಕೃಪೆಯಿಂದ ಕೆಲವು ಗಿಡಗಳನ್ನು ನಾವು ಔಷಧಿ ಎಂದು ಉಪಯೋಗಿಸಬಹುದು. ಇಂತಹ ಔಷಧಿವನಸ್ಪತಿಗಳನ್ನು ಮನೆಯ ಹತ್ತಿರ ಈಗಲೇ ನೆಡಬೇಕು, ಇದರಿಂದ ಮುಂಬರುವ ಕಾಲದಲ್ಲಿ ಅವುಗಳ ಉಪಯೋಗ ವಾಗಬಹುದು.

ಔಷಧಿ ವನಸ್ಪತಿ ಬೆಳೆಸುವುದರ ಆವಶ್ಯಕತೆ

‘ಔಷಧಿ ವನಸ್ಪತಿಗಳನ್ನು ಬೆಳೆಸುವುದು, ಆಯುರ್ವೇದವನ್ನು ಮುಖ್ಯ ಚಿಕಿತ್ಸಾ ಪದ್ಧತಿಯನ್ನಾಗಿಸುವ ಒಂದು ಪ್ರಯತ್ನ : ಮುಂಬರುವ ಹಿಂದೂ ರಾಷ್ಟ್ರದಲ್ಲಿ ಆಯುರ್ವೇದವೇ ಮುಖ್ಯ ಚಿಕಿತ್ಸಾ ಪದ್ಧತಿಯಾಗಲಿದೆ. ಆಯುರ್ವೇದವನ್ನು ಮುಖ್ಯ ಚಿಕಿತ್ಸಾ ಪದ್ಧತಿಯನ್ನಾಗಿಸಲು ಪ್ರತಿಯೊಬ್ಬರೂ ಪ್ರಯತ್ನಿಸುವುದು ಆವಶ್ಯಕವಾಗಿದೆ. ಔಷಧಿ ವನಸ್ಪತಿಗಳ ಕೃಷಿ ಅದರ ಒಂದು ಹಂತವಾಗಿದೆ.

ಸಾಧನೆ ಎಂದು ಔಷಧಿ ವನಸ್ಪತಿಗಳ ಕೃಷಿ ಮಾಡಿ

ಮನುಷ್ಯನಲ್ಲಿರುವ ಗುಣದೋಷಗಳಿಗೆ ಹೇಗೆ ಸುತ್ತಮುತ್ತಲಿನ ವಾತಾವರಣವೂ ಒಂದು ಕಾರಣ ವಾಗಿರುತ್ತದೆಯೋ, ಹಾಗೆಯೇ ವನಸ್ಪತಿಗಳ ವಿಷಯದಲ್ಲಿಯೂ ಆಗಿದೆ. ಔಷಧಿ ವನಸ್ಪತಿಗಳ ಸುತ್ತಮುತ್ತಲಿನ ವಾತಾವರಣವು ಎಷ್ಟು ಸಾತ್ತ್ವಿಕವಾಗಿರುತ್ತದೆಯೋ ವನಸ್ಪತಿಗಳೂ ಅಷ್ಟೇ ಸಾತ್ತ್ವಿಕವಾಗುತ್ತವೆ.

ವನಸ್ಪತಿಗಳು ಮಾನವನಿಗೆ ಸ್ಪಂದಿಸುತ್ತವೆ, ಎಂಬುದನ್ನು ಗಮನದಲ್ಲಿಡಿ !

‘ವನಸ್ಪತಿಗಳಿಗೂ ಮನಸ್ಸಿರುತ್ತದೆ. ಅವುಗಳಿಗೆ ಭಾವನೆಗಳಿರುತ್ತವೆ, ಎಂದು ಪ್ರಾಚೀನ ಋಷಿಮುನಿಗಳು ಸಾವಿರಾರು ವರ್ಷಗಳ ಹಿಂದೆ ಬರೆದಿಟ್ಟಿದ್ದಾರೆ. ಭಾರತದ ಸುಪುತ್ರ ಡಾ.ಜಗದೀಶ ಚಂದ್ರ ಬೋಸರು ಆಧುನಿಕ ಪ್ರಯೋಗಗಳ ಮೂಲಕ ಇದನ್ನು ಸಿದ್ಧಪಡಿಸಿದ್ದಾರೆ.

ತಾಮ್ರ-ಹಿತ್ತಾಳೆಯ ಪಾತ್ರೆಯಲ್ಲಿಟ್ಟ ನೀರು ಆರೋಗ್ಯಕ್ಕೆ ಲಾಭಕರ !

‘ತಾಮ್ರವು ಪಿತ್ತ ಹಾಗೂ ಕಫ ನಾಶಕವಿದೆ. ತಾಮ್ರದಿಂದ ಹೊಟ್ಟೆನೋವು, ಚರ್ಮರೋಗ, ಜಂತಾಗುವುದು, ದಪ್ಪತನ, ಮೂಲವ್ಯಾಧಿ, ಕ್ಷಯ(ಟಿ.ಬಿ.), ಪಾಂಡುರೋಗ (ರಕ್ತದಲ್ಲಿ ಹೆಮೊಗ್ಲೋಬಿನ ಕಡಿಮೆ ಇರುವುದು, ಅನಿಮಿಯಾ) ಈ ರೋಗ ನಿವಾರಣೆಯಾಗಲು ಸಹಾಯವಾಗುತ್ತದೆ.

ಕಾಯಿಲೆ ಬರಬಾರದೆಂದು ಆಯುರ್ವೇದದಲ್ಲಿ ಹೇಳಲಾದ ಉಪಾಯಗಳು !

ಪ್ರಜ್ಞಾಪರಾಧವಾಗಲು ಬಿಡದಿರುವುದು (ಹೊಟ್ಟೆ ತುಂಬಿರುವಾಗಲೂ ಅತಿಯಾಗಿ ಸೇವಿಸುವುದು) ಮನಸ್ಸು ಮತ್ತು ಇಂದ್ರಿಯಗಳನ್ನು ಹತೋಟಿಯಲ್ಲಿಡುವುದು ಹಾಗೂ ಕಾಮ, ಕ್ರೋಧ ಇತ್ಯಾದಿಗಳ ವೇಗವನ್ನು ನಿಯಂತ್ರಿಸುವುದು. ಕೆಮ್ಮು, ಬಿಕ್ಕಳಿಕೆ, ಮಲ-ಮೂತ್ರ ಇತ್ಯಾದಿ ನೈಸರ್ಗಿಕ ವೇಗಗಳನ್ನು ತಡೆಯದಿರುವುದು

ಆರೋಗ್ಯರಕ್ಷಣೆಗಾಗಿ ಔಷಧಿ ವನಸ್ಪತಿಗಳ ಸಂವರ್ಧನೆ ಮಾಡಲು ಸಚಿತ್ರ ವನಸ್ಪತಿ-ದರ್ಶನ !

ವಿಶ್ವದ ಉತ್ಪತ್ತಿಯ ಸಮಯದಲ್ಲಿ ಪ್ರತ್ಯಕ್ಷ ಬ್ರಹ್ಮ ದೇವನು ಆಯುರ್ವೇದದ ಸೃಜನ ಮಾಡಿದರು. ಅನಾದಿ ಕಾಲದಿಂದಲೂ ಭಾರತದಲ್ಲಿ ಆರೋಗ್ಯ ರಕ್ಷಣೆಗಾಗಿ ಔಷಧಿ ವನಸ್ಪತಿಗಳನ್ನು ಬಳಸಲಾಗುತ್ತಿದೆ. ಆಯುರ್ವೇದವು ‘ಐದನೇ ವೇದ ಎಂದು ತಿಳಿಯಲಾಗುತ್ತದೆ