ಭರತಪೂರ (ರಾಜಸ್ಥಾನ) ಇಲ್ಲಿಯ ಅಕ್ರಮ ಗಣಿಗಾರಿಕೆಯನ್ನು ವಿರೋಧಿಸಲು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಸಂತ ವಿಜಯ ದಾಸ ಇವರ ಸಾವು

ಇಲ್ಲಿಯ ಆದಿಬದ್ರಿ ಧಾಮ ಮತ್ತು ಕನಕಾಚಲ ಭಾಗದಲ್ಲಿ ಅಕ್ರಮ ಗಣಿಗಾರಿಕೆಯ ಪ್ರಕರಣದಲ್ಲಿ ಸಾಧು, ಸಂತರು ಮತ್ತು ಗ್ರಾಮಸ್ಥರು ೫೫೦ ದಿನ ಆಂದೋಲನ ಮಾಡಿದ ನಂತರ ಸರಕಾರ ಈ ಕ್ಷೇತ್ರಕ್ಕೆ ‘ವನಕ್ಷೇತ್ರ’ ಎಂದು ಘೋಷಿಸುವ ಆಶ್ವಾಸನೆ ನೀಡಿತು. ಆದರೂ ಇದರ ಒಂದು ದಿನ ಮೊದಲು ಆಂದೋಲನದ ಸಮಯದಲ್ಲಿ ೬೫ ವಯಸ್ಸಿನ ಸಂತ ವಿಜಯ ದಾಸ ಆತ್ಮಹತ್ಯೆಗೆ ಯತ್ನಿಸಿದ್ದರು.

ನೆಹರು – ಗಾಂಧಿ ಹೆಸರಿನ ಮೇಲೆ ನಾವು ‘೩ – ೪ ತಲೆಮಾರು ಕುಳಿತು ತಿನ್ನುವಷ್ಟು’ ಗಳಿಸಿದ್ದೇವೆ !

ನಾವು ನೆಹರು, ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ ಇವರ ಹೆಸರಿನಲ್ಲಿ ನಮ್ಮ ಮುಂದಿನ ೩ – ೪ ತಲೆಮಾರಿಗೆ ಸಾಕಾಗುವಷ್ಟು ಆಸ್ತಿಯನ್ನು ಗಳಿಸಿದ್ದೇವೆ ! ನಾವು ಅವರಿಂದಲೇ ಅಧಿಕಾರ ಅನುಭವಿಸಿದ್ದೇವೆ. ಇಂದು ನಾವು ಬಲಿದಾನ ನೀಡದಿದ್ದರೆ ಭವಿಷ್ಯದಲ್ಲಿ ನಾವು ಊಟ ಮಾಡುವುದರಲ್ಲಿ ಹುಳ ಬೀಳುತ್ತದೆ.

ಕರಾಚಿ (ಪಾಕಿಸ್ತಾನ)ದಲ್ಲಿ ಮುಸಲ್ಮಾನರಿಂದ ಅಪ್ರಾಪ್ತ ಯುವತಿಯ ಅಪಹರಣ, ಮತಾಂತರ ಹಾಗೂ ವಿವಾಹ

ಪಾಕಿಸ್ತಾನದಲ್ಲಿರುವ ಅಸುರಕ್ಷಿತ ಹಿಂದೂಗಳು !

ನೂಪುರ ಶರ್ಮಾ ಯಾವ ತಪ್ಪು ಹೇಳಿಕೆ ನೀಡಿದ್ದರು ಎಂಬುದನ್ನು ಮೌಲ್ವಿಗಳು ಹೇಳಬೇಕು !

ಮೊಹಮ್ಮದ್ ಪೈಗಂಬರರ ಬಗ್ಗೆ ನೂಪುರ ಶರ್ಮಾ ಹೇಳಿಕೆಯಲ್ಲಿ ತಪ್ಪಿಲ್ಲ. ನೂಪುರ ಶರ್ಮಾ ತಪ್ಪು ಹೇಳಿಕೆ ನೀಡಿದ್ದಾರೆ ಎಂದು ಯಾರಿಗಾದರೂ ಅನಿಸಿದರೆ, ಯಾರಾದರೂ ಹಿರಿಯ ಮೌಲ್ವಿಗಳು ಮುಂದೆ ಬಂದು, ‘ಶರ್ಮಾ ಏನು ತಪ್ಪು ಹೇಳಿಕೆ ನೀಡಿದ್ದಾರೆ?’ ಎಂಬುದು ಹೇಳಬೇಕು

ಶ್ರೀಲಂಕಾ ಅಧ್ಯಕ್ಷ ಗೋಟಾಬಾಯಾ ರಾಜಪಕ್ಷೆ ಅವರ ನಿವಾಸದಿಂದ ಪರಾರಿ!

ಶ್ರೀಲಂಕಾದ ನಾಗರಿಕರು ಅಪಾರ ಸಂಖ್ಯೆಯಲ್ಲಿ ರಾಷ್ಟ್ರಾಧ್ಯಕ್ಷರ ನಿವಾಸದತ್ತ ಮೆರವಣಿಗೆ ನಡೆಸಿದ ನಂತರ ಅಧ್ಯಕ್ಷ ಗೋಟಾಬಾಯಾ ರಾಜಪಕ್ಷೆ ಅವರು ತಮ್ಮ ನಿವಾಸದಿಂದ ಪಲಾಯನಗೈದರು. ರಾಜಪಕ್ಷೆ ರಾಜೀನಾಮೆಗೆ ನಾಗರಿಕರು ಒತ್ತಾಯಿಸಿದ್ದಾರೆ. ಮೂಲಗಳ ಪ್ರಕಾರ ರಾಜಪಕ್ಷೆಯವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ತಿರುಪೂರ(ತಮಿಳುನಾಡು)ದಲ್ಲಿನ ಕಾನೂನು ಬಾಹಿರ ಮಸೀದಿಗೆ ಬೀಗ ಜಡಿಯುವ ನ್ಯಾಯಾಲಯದ ಆದೇಶವನ್ನು ವಿರೋಧಿಸಿ ಮುಸಲ್ಮಾನರಿಂದ ‘ರಸ್ತೆ ತಡೆ’ ಆಂದೋಲನ !

ಇಲ್ಲಿ ಒಂದು ಕಾನೂನು ಬಾಹಿರ ಮಸೀದಿಗೆ ಬೀಗ ಜಡಿಯಲು ಪ್ರಯತ್ನಿಸಿದಾಗ ಮುಸಲ್ಮಾನರು ಅಲ್ಲಿ ‘ರಸ್ತೆ ತಡೆ’ ಆಂದೋಲನ ನಡೆಸಿದ ಘಟನೆ ನಡೆದಿದೆ. ಅವರು ರಸ್ತೆಯ ಮೇಲೆ ನಮಾಜು ಪಠಣ ಆರಂಭಿಸಿ ದಾರಿಯನ್ನು ತಡೆದಿದ್ದಾರೆ. ಆದುದರಿಂದ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಚಾರ ವ್ಯವಸ್ಥೆಗೆ ಅಡಚಣೆಯಾಯಿತು.

ಕನ್ಹೈಯ್ಯಲಾಲ ಇವರ ಕ್ರೂರ ಕೊಲೆ, ಭಾರತೀಯ ಸಂವಿಧಾನದ ಹತ್ಯೆ ! – ಹಿಂದೂ ಯುವ ಮಂಚ್

ರಾಷ್ಟ್ರಪ್ರೇಮಿ ವಿಚಾರಸರಣಿ ಇರುವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಕಾರ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಕನ್ಹೈಯ್ಯಲಾಲ ಇವರ ಕ್ರೂರ ಕೊಲೆ ಇದು ಭಾರತೀಯ ಸಂವಿಧಾನದ ಕೊಲೆಯಾಗಿದೆ, ಎಂದು ಹಿಂದೂ ಯುವ ಮಂಚ ನ ಸ್ಥಾನೀಯ ಪ್ರಮುಖ ಶ್ರೀ. ಗೋವಿಂದರಾಜ ನಾಯ್ಡು ಇವರು ಪ್ರತಿಪಾದಿಸಿದರು.

ಪಾಕಿಸ್ತಾನದಲ್ಲಿ ಓರ್ವ ಅಪ್ರಾಪ್ತ ಹಿಂದೂ ಹುಡುಗನ ಅಪಹರಣ !

ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ ಜೂನ್ ೨೮ ರ ಬೆಳಿಗ್ಗೆ ಎರಡು ದ್ವಿ ಚಕ್ರವಾಹನ ಸವಾರರು ಆದೇಶ ಕುಮಾರ ಎಂಬ ಅಪ್ರಾಪ್ತ ಹಿಂದೂ ಹುಡುಗನ ಅಪಹರಣ ಮಾಡಿದರು. ಅವನು ಮನೆಯ ಹೊರಗೆ ತನ್ನ ಸ್ನೇಹಿತರ ಜೊತೆಗೆ ಆಟ ಆಡುತ್ತಿದ್ದಾಗ ಈ ಘಟನೆ ನಡೆದಿದೆ.

ಹಿಂದೂ ದೇವಸ್ಥಾನದ ಹಣ ಹಿಂದೂಗಳ ಹಿತಕ್ಕಾಗಿಯೇ ಬಳಸಬೇಕು ! – ವಿಶ್ವ ಹಿಂದೂ ಪರಿಷತ್

ದೇವಸ್ಥಾನಗಳಿಗೆ ಸಿಗುವ ಆದಾಯ ಸರಕಾರಿ ಮತ್ತು ಆಡಳಿತ ಖರ್ಚಿಗಾಗಿ ಉಪಯೋಗಿಸದೆ ಕೇವಲ ದೇವಸ್ಥಾನದ ನಿರ್ವಹಣೆಗಾಗಿ ಮತ್ತು ಹಿಂದುಗಳ ಹಿತಕ್ಕಾಗಿಯೇ ಉಪಯೋಗಿಸಬೇಕೆಂದು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಾಧ್ಯಕ್ಷ ಅಲೋಕ ಕುಮಾರ ಇವರು ಒತ್ತಾಯಿಸಿದ್ದಾರೆ.

ಆಂದೋಲನದ ಸಮಯದಲ್ಲಿ ಕಾಂಗ್ರೆಸ್ ನಾಯಕಿ ನೆಟ್ಟ ಡಿಸೋಜಾ ಪೊಲೀಸರ ಮೇಲೆ ಉಗಳಿದರು !

ಕಾಂಗ್ರೆಸ್ಸಿನಿಂದ ದೇಶಾದ್ಯಂತ ಆಂದೋಲನ ಮಾಡಲಾಗುತ್ತಿದೆ. ದೆಹಲಿಯ ಆಂದೋಲನ ಸಮಯದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ನೆಟ್ಟ ಡಿಸೋಜಾ ಅವರು ಪೊಲೀಸ್ ಸಿಬ್ಬಂದಿಗಳ ಮೇಲೆ ಉಗಳಿರುವ ಘಟನೆ ನಡೆದಿದೆ.