‘ಮಂಗಲಮ್ ಕರ್ಪೂರ’ದ ಉತ್ಪಾದನೆಯ ಜಾಹೀರಾತಿನಲ್ಲಿ ಪ್ರಭು ಶ್ರೀರಾಮನ ಅವಹೇಳನೆ ನಡೆಯುತ್ತಲೇ ಇದೆ !

ಕರ್ಪೂರದ ಉತ್ಪಾದನೆ ಹಾಗೂ ಮಾರಾಟ ಮಾಡುವ ರಾಯಗಡ ಜಿಲ್ಲೆಯ ಕುಂಭಿವಲಿಯಲ್ಲಿನ ‘ಮಂಗಲಮ್ ಆರಗ್ಯಾನಿಕ್ಸ್ ಲಿಮಿಟೆಡ್’ ಈ ಸಂಸ್ಥೆಯು ತನ್ನ ‘ಮಂಗಲಮ್ ಕರ್ಪೂರ’ದ ಉತ್ಪಾದನೆಯ ಜಾಹೀರಾತಿನಲ್ಲಿ ಪ್ರಭು ಶ್ರೀರಾಮನು ಸೆಲ್ಫೀ (ಸಂಚಾರವಾಣಿಯಲ್ಲಿ ಸ್ವಂತದ ಫೋಟೊವನ್ನು ಸ್ವತಃ ತೆಗೆಯುವುದು) ತೆಗೆದುಕೊಳ್ಳುತ್ತಿರುವಂತೆ ತೋರಿಸಿ ಪ್ರಭು ಶ್ರೀರಾಮನ ಘೋರ ಅವಹೇಳನೆಯು ಇಂದಿಗೂ ಮುಂದುವರೆದಿದೆ.

ಮಂಡ್ಯದ ಅರ್ಕೇಶ್ವರ ಸ್ವಾಮಿ ದೇವಸ್ಥಾನದಲ್ಲಿ ೩ ಅರ್ಚಕರನ್ನು ಹತ್ಯೆ ಮಾಡಿ ದರೋಡೆ

ಮಂಡ್ಯ ಜಿಲ್ಲೆಯ ಗುತ್ತಲಿನಲ್ಲಿರುವ ಅರ್ಕೇಶ್ವರ ದೇವಾಲಯದಲ್ಲಿ ಅರ್ಚಕರಾಗಿ, ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮೂವರ ಮೇಲೆ ದೇವಾಲಯದ ಆವರಣದಲ್ಲೇ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿ ದರೋಡೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ರಾತ್ರಿ ಸುಮಾರು ೧ ಗಂಟೆಯ ಸಮಯದಲ್ಲಿ ಮೂರುಜನರು ಮಲಗಿರುವಾಗ ಸಂಭವಿಸಿದೆ.

‘ಉತ್ತಮ ಆಹಾರ ಹಾಗೂ ದೈಹಿಕ ಸಂಬಂಧಗಳಿಂದ ಸಿಗುವ ಆನಂದ ದಿವ್ಯವಾಗಿರುತ್ತದೆ (ಯಂತೆ) !’ – ಪೋಪ್ ಫ್ರಾನ್ಸಿಸ್

ಯಾವುದೇ ರೀತಿಯ ಆನಂದ ನಮಗೆ ಪ್ರತ್ಯಕ್ಷವಾಗಿ ದೇವರಿಂದ ಸಿಗುತ್ತಿರುತ್ತದೆ. ಅದು ಕ್ಯಾಥೊಲಿಕ್ ಕ್ರೈಸ್ತ ಅಥವಾ ಇನ್ನಾವುದೇ ಇರುವುದಿಲ್ಲ, ಅದು ಕೇವಲ ದಿವ್ಯವಾಗಿರುತ್ತದೆ. ಉತ್ತಮವಾದ ಬೇಯಿಸಿದ ಆಹಾರ ಹಾಗೂ ದೈಹಿಕ ಸಂಬಂಧದಿಂದಾಗಿ ಸಿಗುವ ಆನಂದ ದಿವ್ಯವಾಗಿರುತ್ತದೆ, ಎಂದು ಕ್ರೈಸ್ತರ ಸರ್ವೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಇವರು ಹೇಳಿದ್ದಾರೆ.

ಸನಾತನ ಸಂಸ್ಥೆಯ ‘ಶ್ರಾದ್ಧವಿಧಿ’ ‘ಅಂಡ್ರೈಡ್ ಆಪ್’ಗೆ ಉತ್ತಮ ಪ್ರತಿಕ್ರಿಯೆ

ಶ್ರಾದ್ಧವಿಧಿಯ ಬಗ್ಗೆ ಭಕ್ತರಿಗೆ ಶಾಸ್ತ್ರೀಯ ಮಾಹಿತಿ ಸಿಗಬೇಕೆಂದು ಸನಾತನ ಸಂಸ್ಥೆಯ ವತಿಯಿಂದ ‘ಶ್ರಾದ್ಧವಿಧಿ’ ಈ ‘ಅಂಡ್ರೈಡ್ ಆಪ್’ಅನ್ನು ನಿರ್ಮಿಸಲಾಯಿತು. ಇದರಲ್ಲಿ ಶ್ರಾದ್ಧದ ಮಹತ್ವ, ವಿಧ, ಶ್ರಾದ್ಧದ ಸಂದರ್ಭದಲ್ಲಿನ ಸಂದೇಹ ನಿವಾರಣೆ ಇತ್ಯಾದಿ ಜ್ಞಾನವನ್ನು ನೀಡುವ ಲೇಖನ, ಭಗವಾನ ದತ್ತಾತ್ರೇಯನ ಕುರಿತಾದ ಲೇಖನಗಳು ಹಾಗೂ ದತ್ತಾತ್ರೇಯ ದೇವತೆಯ ನಾಮಜಪದ ಆಡಿಯೋ ಲಭ್ಯವಿದೆ.

ಬೆಂಗಳೂರಿನ ‘ಚರ್ಚ್ ಆಫ್ ಸೌಥ ಇಂಡಿಯಾ ಟ್ರಸ್ಟ್ ಅಸೋಸಿಯೇಶನ್’ನಿಂದ ೫೯ ಕೋಟಿ ೫೨ ಲಕ್ಷ ರೂಪಾಯಿ ಜಪ್ತಿ

ರಕ್ಷಣಾ ಸಚಿವಾಲಯದ ೭೪೪೨೬.೮೮೮ ಚದರ ಮೀಟರ್ ಭೂಮಿಯನ್ನು ಕರ್ನಾಟಕ ಸರಕಾರಕ್ಕೆ ಪರಸ್ಪರ ಮಾರಾಟ ಮಾಡಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (‘ಇ.ಡಿ.’)ಯು ಬೆಂಗಳೂರಿನ ‘ಚರ್ಚ್ ಆಫ್ ಸೌಥ ಇಂಡಿಯಾ ಟ್ರಸ್ಟ್ ಅಸೋಸಿಯೇಶನ್’ನಿಂದ (‘ಸಿ.ಎಸ್.ಐ.ಟಿ.ಎ.’ ನಿಂದ) ೫೯ ಕೋಟಿ ೫೨ ಲಕ್ಷ ರೂಪಾಯಿಯನ್ನು ಜಪ್ತಿ ಮಾಡಿದೆ.

‘ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ನ ಬ್ಯಾಂಕ್ ಖಾತೆಯಿಂದ ೬ ಲಕ್ಷ ರೂಪಾಯಿ ಕದ್ದ ಕಳ್ಳರು

ಅಯೋಧ್ಯೆಯ ಶ್ರೀರಾಮಜನ್ಮಭೂಮಿಯ ಮೇಲೆ ಶ್ರೀರಾಮಮಂದಿರದ ನಿರ್ಮಾಣಕಾರ್ಯವು ಆರಂಭವಾಗಿದೆ. ಅದಕ್ಕಾಗಿ ಭಕ್ತರು ದೇವಸ್ಥಾನದ ಟ್ರಸ್ಟ್‌ಗೆ ಅರ್ಪಣೆಯನ್ನು ನೀಡುತ್ತಿದ್ದಾರೆ. ಅದಕ್ಕಾಗಿ ಟ್ರಸ್ಟ್ ತೆರೆದಿದ್ದ ಬ್ಯಾಂಕ್ ಖಾತೆಯಲ್ಲಿ ಈ ಮೊತ್ತವನ್ನು ಜಮೆ ಮಾಡಲಾಗುತ್ತಿದೆ. ಈ ಬ್ಯಾಂಕಿನ ಖಾತೆಯಿಂದ ೬ ಲಕ್ಷ ರೂಪಾಯಿಗಳ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಶ್ರೀಲಂಕಾದಲ್ಲಿ ಗೋಹತ್ಯಾನಿಷೇಧ ಇರಲಿದೆ; ಆದರೆ ಗೋವಂಶದ ಮಾಂಸವನ್ನು ತಿನ್ನಲು ಮಾತ್ರ ಅನುಮತಿ ಅಬಾಧಿತ

ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಷೆ ಇವರು ಇಡೀ ಶ್ರೀಲಂಕಾದಲ್ಲಿ ಗೋಹತ್ಯೆಯ ಮೇಲೆ ನಿಷೇಧ ಹೇರುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ರಾಜಪಕ್ಷೆ ಇವರು ತಮ್ಮ ಆಢಳಿತಾರೂಢ ‘ಶ್ರೀಲಂಕಾ ಪೊಡುಜನಾ ಪೆರುಮನಾ’ (ಎಸ್.ಎಲ್.ಪಿ.ಪಿ.) ಪಕ್ಷದ ಸಂಸದೀಯ ಸಭೆಯಲ್ಲಿ ಈ ಘೋಷಣೆ ಮಾಡಿದರು.

ಚೀನಾದೊಂದಿಗಿನ ‘ಹಂಬನಟೊಟಾ’ ಒಪ್ಪಂದ ಮಾಡಿಕೊಂಡಿರುವುದು ನಮ್ಮ ದೊಡ್ಡ ತಪ್ಪು !

ಶ್ರೀಲಂಕಾ ಸಾಲವನ್ನು ತೀರಿಸಲಾಗದೇ ತನ್ನ ‘ಹಂಬನಟೊಟಾ ಬಂದರ್’ಅನ್ನು ೯೯ ವರ್ಷಗಳ ಕಾಲ ಬಾಡಿಗೆಗೆ ನೀಡಬೇಕಾಯಿತು. ಚೀನಾದೊಂದಿಗಿನ ಈ ಒಪ್ಪಂದ ಮಾಡಿಕೊಂಡಿರುವುದು ನಮ್ಮ ದೊಡ್ಡ ತಪ್ಪಾಗಿತ್ತು ಎಂದು ಶ್ರೀಲಂಕಾದ ವಿದೇಶಾಂಗ ಸಚಿವ ಜಯನಾಥ ಕೋಲಂಬಗೆ ಇವರು ಒಂದು ವಾರ್ತಾವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

‘ಇಸ್ಲಾಮಿನ ಪರವಾಗಿ ನಿಂತರೆ, ಐ.ಎ.ಎಸ್. ಹಾಗೂ ಐ.ಪಿ.ಎಸ್. ಅಧಿಕಾರಿಗಳಾಗಬಹುದು (ಅಂತೆ) !’- ಡಾ. ಝಾಕಿರ ನಾಯಿಕ್‌ನಿಂದ ಮುಸಲ್ಮಾನರಿಗೆ ಸಲಹೆ

ಒಂದು ವೇಳೆ ನಿಮಗೆ ಐ.ಎ.ಎಸ್. (ಭಾರತೀಯ ಆಡಳಿತ ಸೇವೆ) ಹಾಗೂ ಐ.ಪಿ.ಎಸ್. (ಭಾರತೀಯ ಪೊಲೀಸ್ ಸೇವೆ) ಅಧಿಕಾರಿ ಆಗುವುದಿದ್ದರೆ, ನಿಮಗೆ ಇಸ್ಲಾಮ್‌ನ ಪರವಾಗಿ ನಿಲ್ಲಬೇಕಾಗುತ್ತದೆ, ಎಂದು ಭಯೋತ್ಪಾದಕರಿಗೆ ಆದರ್ಶಪ್ರಾಯವಾಗಿರುವ ಡಾ. ಝಾಕಿರ ನಾಯಿಕ್ ಒಂದು ವಿಡಿಯೋ ಮೂಲಕ ಮುಸಲ್ಮಾನರಿಗೆ ಸಲಹೆಯನ್ನು ನೀಡಿದ್ದಾನೆರೆ.

ಪಿತೃಪಕ್ಷದ ಕಾಲಾವಧಿಯಲ್ಲಿ ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದ ಕಡೆಗೆ ಅನೇಕ ಕಾಗೆಗಳು ಆಕರ್ಷಿತವಾಗುವುದು, ಇದು ಆಶ್ರಮವು ತೀರ್ಥಕ್ಷೇತ್ರ ಸಮಾನವಾಗಿರುವುದರಿಂದ ಇಲ್ಲಿಗೆ ಬಂದು ಪಿತೃಗಳು ತೃಪ್ತರಾದುದರ ದ್ಯೋತಕ !

ಶ್ರಾದ್ಧದಲ್ಲಿ ಪಿಂಡದಾನದ ಮಾಧ್ಯಮದಿಂದ ಪಿತೃಗಳನ್ನು ಆಹ್ವಾನಿಸುತ್ತಾರೆ. ಪಿತೃಗಳ ಅತೃಪ್ತ ಆಸೆಗಳನ್ನು ಪಿಂಡದ ಮೂಲಕ ಪೂರೈಸಲಾಗುತ್ತದೆ. ಪಿತೃಗಳ ಲಿಂಗದೇಹವು ಯಾವ ಸಮಯದಲ್ಲಿ ಪಿಂಡದ ಕಡೆಗೆ ಆಕರ್ಷಿತವಾಗುತ್ತದೆಯೋ ಆಗ ಅದು ರಜ-ತಮಾತ್ಮಕ ಲಹರಿಗಳಿಂದ ತುಂಬಿಕೊಂಡಿರುತ್ತದೆ. ಈ ಲಹರಿಗಳ ಕಡೆಗೆ ಕಾಗೆಯು ಆಕರ್ಷಿತವಾಗುತ್ತದೆ.