ಸನಾತನದ ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಲು ಸಹಾಯ ಮಾಡಬೇಕಾಗಿ ವಿನಂತಿ !

ಈ ಜ್ಞಾನದಿಂದ ಕೇವಲ ಭಾರತ ಮಾತ್ರವಲ್ಲ ಜಗತ್ತಿನೆಲ್ಲೆಡೆಯ ಮಾನವರಿಗೆಲಾಭವಾಗುತ್ತಿದ್ದು ಅವರ ಜೀವನ ಉದ್ಧಾರವಾಗುತ್ತಿದೆ ಗ್ರಂಥ ನಿರ್ಮಿತಿ ಪ್ರಕ್ರಿಯೆಯು ನಿರಂತರವಾಗಿ ನಡೆಯುತ್ತಿದ್ದು ಮೇ ೨೦೨೦ ರ ವರೆಗೆ ಸನಾತನದ ೩೨೩ ಗ್ರಂಥಗಳ ೧೭ ಭಾಷೆಗಳಲ್ಲಿ ೭೯,೮೧,೦೦೦ ಪ್ರತಿಗಳನ್ನು ಪ್ರಕಟಿಸಲಾಗಿದ್ದು, ಇನ್ನೂ ೮೦೦೦ ಗ್ರಂಥಗಳನ್ನು ಪ್ರಕಟಿಸುವಷ್ಟು ಜ್ಞಾನ ಸಂಗ್ರಹವಾಗಿದೆ.

ವಸಿಷ್ಠ ಕುಂಡದ ಕಥೆ ಮತ್ತು ಆ ಸ್ಥಾನದ ಮಹತ್ವ

ವಿಶೇಷವೆಂದರೆ ಇದರ ಅಕ್ಕಪಕ್ಕದಲ್ಲಿ ಮಂಜುಗಡ್ಡೆ ಇದ್ದರೂ ಈ ನೀರು ಮಾತ್ರ ಮಂಜುಗಡ್ಡೆ (ಹಿಮಗಡ್ಡೆ) ಆಗುವುದಿಲ್ಲ ಮತ್ತು ಇಷ್ಟು ಕಡಿಮೆ ತಾಪಮಾನದಲ್ಲಿಯೂ ಈ ನೀರು ಬಿಸಿಯಾಗಿರುತ್ತದೆ ಈ ಕುಂಡದಲ್ಲಿ ಸ್ನಾನ ಮಾಡಿದರೆ ಎಲ್ಲ ಪಾಪಗಳಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ.

‘ಆಯುರ್ವೇದ ಜಾಗೃತಿ ಬದನೆಕಾಯಿ

ಬದನೆಯು ಸ್ವಾಧಿಷ್ಟ, ಪೌಷ್ಟಿಕ ಹಾಗೂ ಶುಕ್ರಧಾತೂ (ವೀರ್ಯ)ವನ್ನು ಹೆಚ್ಚಿಸುವುದಾಗಿದೆ. ಯಾರ ಶರೀರದಲ್ಲಿ ಮೇಧ (ಕೊಬ್ಬು) ಹೆಚ್ಚಾಗಿ ಶರೀರ ದಪ್ಪವಾಗುತ್ತದೆಯೋ; ಆದರೆ ಅದರ ತುಲನೆಯಲ್ಲಿ ಯಾರಲ್ಲಿ ಶಕ್ತಿ ಇರುವುದಿಲ್ಲವೋ, ಅಂತಹವರು ಬದನೆಯ ಪಲ್ಯವನ್ನು ಅವಶ್ಯ ಸೇವಿಸಬೇಕು. ಇದರಿಂದ ಸ್ವಲ್ಪ ದಿನಗಳಲ್ಲಿಯೆ ಬಲ ಹೆಚ್ಚಾಗುತ್ತದೆ.

ಬೆಂಗಳೂರಿನ ಓರ್ವ ಗೀತೆಯ ಅಧ್ಯಯನಕಾರರು ಗೀತಾವ್ರತಿ ಎಂಬ ಹೆಸರಿನಲ್ಲಿ ಸಂಕಲನ ಮಾಡಿದ ಗೀತಾಭ್ಯಾಸಯಾತ್ರೆ ಎಂಬ ಗ್ರಂಥದ ಬಗ್ಗೆ ಅವರ ಮನೋಗತ ಮತ್ತು ಪರಾತ್ಪರ ಗುರು ಡಾಕ್ಟರರು ಈ ಗ್ರಂಥದ ಬಗ್ಗೆ ತೆಗೆದ ಗೌರವೋದ್ಗಾರ !

ಗ್ರಂಥವನ್ನು ನೋಡುವಾಗ ಪರಾತ್ಪರ ಗುರು ಡಾಕ್ಟರರು, ಈ ಮಾಧ್ಯಮದಿಂದ ಅವರು ಪ್ರತ್ಯಕ್ಷ ಶ್ರೀಮದ್ಭಗವದ್ಗೀತೆಯನ್ನು ಜೀವಿಸಿದ್ದಾರೆ ! ಎಂದು ಹೇಳಿದರು. ಅವರು ಸಂಕಲನಕಾರರ ಆಧ್ಯಾತ್ಮಿಕ ಮಟ್ಟವು ಶೇ. ೬೧ ರಷ್ಟಿರುವುದಾಗಿ ಹೇಳಿ ಉತ್ತಮ ಆಧ್ಯಾತ್ಮಿಕ ಮಟ್ಟವಿಲ್ಲದೇ ಧರ್ಮಗ್ರಂಥಕ್ಕೆ ಸಂಬಂಧಿಸಿದ ಇಂತಹ ಕಾರ್ಯವು ಕೈಯಿಂದ ಆಗುವುದಿಲ್ಲ, ಎಂದೂ ಸ್ಪಷ್ಟಪಡಿಸಿದರು.

ಪಾಕಿಸ್ತಾನದ ಸಿಂಧನಲ್ಲಿ ೧೦೨ ಹಿಂದೂಗಳ ಬಲವಂತವಾಗಿ ಮತಾಂತರ

ಪಾಕಿಸ್ತಾನದ ಸಿಂಧ ಪ್ರಾಂತ್ಯದ ಬಾದಿನ ಜಿಲ್ಲೆಯಲ್ಲಿ ೧೦೨ ಹಿಂದೂಗಳನ್ನು ಮತಾಂತರಿಸಿ ಅವರನ್ನು ಮುಸಲ್ಮಾನರನ್ನಾಗಿಸಿದ್ದಾರೆ ಎಂದು ‘ಟೈಮ್ಸ್ ನೌ’ ಈ ಆಂಗ್ಲ ವಾರ್ತಾವಾಹಿನಿಯು ವರದಿ ಮಾಡಿದೆ. ಇದರಲ್ಲಿ ಮಕ್ಕಳು, ಮಹಿಳೆಯರು ಹಾಗೂ ಪುರುಷರು ಸಮಾವೇಶಗೊಂಡಿದ್ದಾರೆ. ಅದೇ ರೀತಿ ಇಲ್ಲಿನ ದೇವಸ್ಥಾನದ ಮೂರ್ತಿಯನ್ನು ಒಡೆದು ದೇವಸ್ಥಾನವನ್ನು ಮಸೀದಿಯನ್ನಾಗಿ ಮಾಡಲಾಗಿದೆ.

ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಯೆಂದು ಪತಂಜಲಿಯ ‘ಕೊರೊನಿಲ್’ಗೆ ಆಯುಷ್ ಸಚಿವಾಲಯದಿಂದ ಮಾನ್ಯತೆ

ಕೊನೆಗೂ ಯೋಗಋಷಿ ರಾಮದೇವ ಬಾಬಾರವರ ‘ಪತಂಜಲಿ ಯೋಗಪೀಠ’ದಿಂದ ತಯಾರಿಸಲಾದ ‘ಕೊರೊನಿಲ್’ಗೆ ಕೇಂದ್ರ ಸರಕಾರದಿಂದ ಮಾನ್ಯತೆ ಸಿಕ್ಕಿದೆ. ‘ಈ ಔಷಧಿಯನ್ನು ಕೊರೋನಾ ಪೀಡಿತರಿಗೆ ಗುಣಮುಖರನ್ನಾಗಿಸುತ್ತದೆ ಎಂದು ಮಾರಾಟ ಮಾಡದೇ ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಿಯೆಂದು ಮಾರಾಟ ಮಾಡಬಹುದು’,

ಬಳ್ಳಾರಿಯಲ್ಲಿ ಕೊರೋನಾದಿಂದ ಮೃತಪಟ್ಟ ೮ ರೋಗಿಗಳ ಶವವನ್ನು ಒಂದೇ ಗುಂಡಿಯಲ್ಲಿ ಹಾಕಲಾಯಿತು

ಮುಖ್ಯಮಂತ್ರಿ ಬಿ,ಎಸ್. ಯಡಿಯೂರಪ್ಪನವರು ಈ ಬಗ್ಗೆ ಪ್ರತಿಕ್ರಿಯಿಸುತ್ತಾ, ‘ಮೃತಪಟ್ಟ ಕೊರೋನಾ ಪೀಡಿತ ರೋಗಿಗಳ ಮೃತದೇಹವನ್ನು ಈ ರೀತಿಯಲ್ಲಿ ಎಸೆಯುವುದು ಅಮಾನವೀಯ ಹಾಗೂ ದುಃಖದಾಯಕವಾಗಿದೆ. ಮಾನವೀಯತೆಗಿಂತ ದೊಡ್ಡದು ಬೇರೊಂದು ಧರ್ಮವಿಲ್ಲ, ಎಂಬುದು ಆರೋಗ್ಯ ಕಾರ್ಯಕರ್ತರು ಗಮನದಲ್ಲಿಡಬೇಕು. ಇದರಿಂದಾಗಿ ಇಂತಹವರ ಅಂತಿಮಸಂಸ್ಕಾರವನ್ನು ಗೌರವದಿಂದ ಮಾಡಬೇಕು’ ಎಂದು ಹೇಳಿದ್ದಾರೆ.

ಚೀನಾದಿಂದ ೨ ದಿನಗಳ ಹಿಂದೆಯೇ ಭಾರತೀಯ ದಿನಪತ್ರಿಕೆ ಹಾಗೂ ವಾರ್ತಾವಾಹಿನಿಗಳ ಮೇಲೆ ನಿರ್ಬಂಧ

ಭಾರತವು ಚೀನಾದ ೫೯ ‘ಆಪ್ಸ್’ಗಳನ್ನು ನಿಷೇಧಿಸುವ ೨ ದಿನಗಳ ಮೊದಲೇ ಚೀನಾವು ಭಾರತದ ದಿನಪತ್ರಿಕೆ ಹಾಗೂ ವಾರ್ತಾವಾಹಿನಿಯ ಜಾಲತಾಣವನ್ನು ನಿಷೇಧಿಸಿದೆ. ಆದ್ದರಿಂದ ಚೀನಾದಲ್ಲಿ ಈ ಜಾಲತಾಣಗಳನ್ನು ನೋಡಲು ಸಾಧ್ಯವಿಲ್ಲ. ಭಾರತೀಯ ವಾರ್ತಾವಾಹಿನಿಯನ್ನು ನೋಡಲು ಚೀನಾದಲ್ಲಿ ‘ಐ.ಪಿ. ಟಿವಿ’ಯನ್ನು ಉಪಯೋಗಿಸಲಾಗುತ್ತದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ವಿಡಿಯೊ ಕಾನ್ಫರೆನ್ಸಿಂಗ್’ ಮೂಲಕ ಅಲ್ಲ, ಅಯೋಧ್ಯೆಗೆ ಬಂದು ರಾಮಮಂದಿರದ ಭೂಮಿ ಪೂಜೆಯನ್ನು ಮಾಡಬೇಕು ! – ಸಾಧು-ಸಂತರ ಬೇಡಿಕೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ವಿಡಿಯೊ ಕಾನ್ಫರೆನ್ಸಿಂಗ್’ ಮೂಲಕ ಅಲ್ಲ, ಅಯೋಧ್ಯೆಗೆ ಬಂದು ರಾಮಮಂದಿರದ ನಿರ್ಮಾಣ ಕಾರ್ಯದ ಭೂಮಿ ಪೂಜೆಯನ್ನು ಮಾಡಬೇಕು, ಎಂದು ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ’ ಹಾಗೂ ಸಾಧು-ಸಂತರು ಒತ್ತಾಯಿಸಿದ್ದಾರೆ.

‘ಚೀನಾ ಸಂಸ್ಥೆಯಿಂದ ಪಿ.ಎಮ್. ಕೇರ್ ಫಂಡ್’ಗಾಗಿ ನೀಡಿದ ನಿಧಿಯನ್ನು ಕೇಂದ್ರ ಸರಕಾರವು ಹಿಂದಿರುಗಿಸಬೇಕು !’ (ಅಂತೆ) – ಕಾಂಗ್ರೆಸ್ ಆಡಳಿತವಿರುವ ಪಂಜಾಬನ ಮುಖ್ಯಮಂತ್ರಿ ಅಮರಿಂದರ ಸಿಂಗ್ ಆಗ್ರಹ

ಗಡಿರೇಖೆಯ ಒತ್ತಡವನ್ನು ಗಮನದಲ್ಲಿಟ್ಟುಕೊಂಡು ಚೀನಾ ಕಂಪನಿಯಿಂದ ‘ಪಿ.ಎಮ್. ಕೇರ್ ಫಂಡ್’ಗಾಗಿ ಪಡೆದ ನಿಧಿಯನ್ನು ಹಿಂದಿರುಗಿಸಬೇಕು, ಎಂದು ಪಂಜಾಬ್‌ನ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಇವರು ಭಾರತವು ಚೀನಾದ ೫೯ ‘ಆಪ್ಸ’ಗಳನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ.