ಬಿಜನೌರ್ (ಉತ್ತರಪ್ರದೇಶ) ಇಲ್ಲಿ ಬಕರಿ ಈದ್‌ನ ಸಮಯದಲ್ಲಿ ಹಿಂಸಾಚಾರ ಮಾಡುವ ಸಂಚನ್ನು ರೂಪಿಸಿದ ನ್ಯಾಯವಾದಿ ಜಾವೇದ ಸಿದ್ಧಕಿಯ ಬಂಧನ

ಬಕರಿ ಈದ್‌ನ ಸಮಯದಲ್ಲಿ ಹಿಂಸಾಚಾರ ಮಾಡುವ ಸಂಚನ್ನು ರೂಪಿಸಿದ ನ್ಯಾಯವಾದಿ ಜಾವೇದ ಸಿದ್ಧಿಕಿಯನ್ನು ಪೊಲೀಸರು ಅಲಿಗಡ್‌ದಿಂದ ಇತ್ತೀಚೆಗೆ ಬಂಧಿಸಿದ್ದಾರೆ. ಆತನಿಂದ ಒಂದು ಪಿಸ್ತೂಲು, ೧೬೨ ಮದ್ದುಗುಂಡುಗಳು ಹಾಗೂ ಕೆಲವು ಅಕ್ಷೇಪಾರ್ಹ ಕರಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

‘ಆನ್‌ಲೈನ್ ೯ ನೆಯ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ನಿಮಿತ್ತ ಪತ್ರಿಕಾಗೋಷ್ಠಿ !

ಮೋದಿ ಸರಕಾರ ಕೇಂದ್ರದಲ್ಲಿ ಎರಡನೆಯ ಬಾರಿ ಅಧಿಕಾರಕ್ಕೆ ಬಂದ ಬಳಿಕ ಕಾಶ್ಮೀರಿ ಹಿಂದೂಗಳ ಪುನರ್ವಸತಿಯ ದೃಷ್ಟಿಯಿಂದ ಕಲಮ್ ೩೭೦ ರದ್ದುಗೊಳಿಸುವುದು, ಪೌರತ್ವ ತಿದ್ದುಪಡಿ ಕಾನೂನು (ಸಿ.ಎ.ಎ.), ಸರ್ವೋಚ್ಚ ನ್ಯಾಯಾಲಯವು ರಾಮಮಂದಿರದ ಪರವಾಗಿ ನೀಡಿದ ಐತಿಹಾಸಿಕ ತೀರ್ಪು, ಅಲ್ಲದೇ ೫ ಆಗಸ್ಟ್ ೨೦೨೦ ರಂದು ಆಯೋಜಿಸಲಾಗಿರುವ ರಾಮ ಮಂದಿರದ ಭೂಮಿ ಪೂಜೆ ಮುಂತಾದ ಸಕಾರಾತ್ಮಕ ವಿಷಯಗಳು ಘಟಿಸುತ್ತಿವೆ.

ರಾಮಮಂದಿರ ಆಗುತ್ತಿದ್ದಂತೆ ದೇಶದಿಂದ ಕೊರೋನಾ ಓಡಿ ಹೋಗುವುದು ! – ಭಾಜಪದ ಶಾಸಕಿ ಜಸಕೌರ ಮೀನಾ

ನಾವು ಆಧ್ಯಾತ್ಮಿಕ ಶಕ್ತಿಯನ್ನು ಪೂಜಿಸುವವರಾಗಿದ್ದೇವೆ. ನಾವು ಆಧ್ಯಾತ್ಮಿಕ ಶಕ್ತಿಯನುಸಾರವೇ ಮಾರ್ಗಕ್ರಮಣ ಮಾಡುತ್ತೇವೆ. ಅಯೋಧ್ಯೆಯಲ್ಲಿ ರಾಮಮಂದಿರ ಆಗುತ್ತಿದ್ದಂತೆ ಕೊರೋನಾ ದೇಶದಿಂದ ಓಡಿ ಹೋಗಲಿದೆ, ಎಂದು ದೌಸಾ ಲೋಕಸಭೆ ಚುನಾವಣಾ ಕ್ಷೇತ್ರದ ಭಾಜಪದ ಸಂಸದೆ ಜಸಕೌರ್ ಮೀನಾರವರು ಹೇಳಿಕೆಯನ್ನು ನೀಡಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಾಮಿನ ನೆತಾನ್ಯಾಹುನ ಮಗನಿಂದ ಶ್ರೀ ದುರ್ಗಾದೇವಿಯ ಅವಮಾನ ; ಭಾರತೀಯರ ವಿರೋಧದ ನಂತರ ಕ್ಷಮೆ ಯಾಚನೆ

ಇಸ್ರೇಲ್‌ನ ಪ್ರಧಾನಿ ಬೆಂಜಾಮಿನ ನೆತನ್ಯಾಹುನ ೨೯ ವರ್ಷದ ಮಗ ಯಾಯರನು ಟ್ವೀಟ್ ಮೂಲಕ ಶ್ರೀ ದುರ್ಗಾದೇವಿಯ ವಿಡಂಬನಾತ್ಮಕ ಚಿತ್ರ ಪ್ರಸಾರ ಮಾಡಿ ದೇವಿಯ ಅವಮಾನ ಮಾಡಿದ್ದನು. ಇದಕ್ಕೆ ಇಸ್ರೇಲ್‌ನಲ್ಲಿರುವ ಭಾರತೀಯ ನಾಗರಿಕರು ತೀವ್ರವಾಗಿ ಆಕ್ಷೇಪಿಸುತ್ತ ಈ ಚಿತ್ರವನ್ನು ಕೂಡಲೇ ತೆಗೆದುಹಾಕಬೇಕು ಎಂದು ಆಗ್ರಹಿಸಿದರು.

ಭಾರತವು ಚೀನಾದ ‘ಆಪ್’ಗಳನ್ನು ನಿಷೇಧಿಸಿರುವುದನ್ನು ಖಂಡಿಸಿದ ಚೀನಾ

ಚೀನಾದ ‘ಆಪ್’ಗಳನ್ನು ಭಾರತ ನಿಷೇಧಿಸಿದ್ದಕ್ಕೆ ಚೀನಾದ ರಾಯಭಾರಿ ಕಚೇರಿಯು ಭಾರತದ ವಿದೇಶಾಂಗ ಸಚಿವಾಲಯ ಬಳಿ ಖಂಡಣೆಯನ್ನು ವ್ಯಕ್ತಪಡಿಸಿದೆ. ‘ಭಾರತವು ತಮ್ಮ ತಪ್ಪನ್ನು ಸರಿಪಡಿಸಬೇಕು’, ಎಂದು ರಾಯಭಾರಿ ಕಛೇರಿಯ ಅಧಿಕಾರಿಯೊಬ್ಬರು ಪುಕ್ಕಟ್ಟೆ ಸಲಹೆ ನೀಡಿದ್ದಾರೆ.

೭ ನೇ ತರಗತಿಯ ಪುಸ್ತಕದಿಂದ ಟಿಪ್ಪು ಸುಲ್ತಾನಿನ ಪಾಠವನ್ನು ಕೈಬಿಟ್ಟ ರಾಜ್ಯ ಸರಕಾರ

ಅತ್ಯಂತ ವಿವಾದಾತ್ಮಕವಾಗಿರುವ ಕ್ರೂರಿ ಟಿಪ್ಪು ಸುಲ್ತಾನನ ಬಗೆಗಿನ ಪಾಠವನ್ನು ೭ ನೇ ತರಗತಿಯ ಪುಸ್ತಕದಿಂದ ಕೈಬಿಡಲಾಗಿದೆ. ಅದೇರೀತಿ ೬ ನೇ ಹಾಗೂ ೧೦ ನೇ ತರಗತಿಯ ಪಠ್ಯಕ್ರಮಗಳಲ್ಲಿ ಟಿಪ್ಪು ಸುಲ್ತಾನಿನ ಪಾಠ ಮುಂದುವರೆಸಿದೆ.

ಪಾಲಘರ್‌ನಲ್ಲಿಯ ಸಾಧುಗಳ ಹತ್ಯೆ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಎಲ್ಲ ಅರ್ಜಿಗಳ ಮೇಲೆ ಒಟ್ಟಿಗೆ ಆಲಿಕೆ ಆಗಲಿದೆ

ಪಾಲಘರ್‌ನಲ್ಲಿ ಜನಸಮೂಹದಿಂದಾಗಿದ್ದ ಸಾಧುಗಳ ಹತ್ಯೆಪ್ರಕರಣಕ್ಕೆ ಸಂಬಂಧಪಟ್ಟಂತೆ ಸಲ್ಲಿಸಿದ್ದ ಎಲ್ಲ ಅರ್ಜಿಗಳ ಮೇಲೆ ಸರ್ವೋಚ್ಚ ನ್ಯಾಯಾಲಯವು ಒಟ್ಟಾಗಿ ಆಲಿಕೆ ಮಾಡಲಿದೆ. ನ್ಯಾಯಾಲಯದಲ್ಲಿ ೩ ಸ್ವತಂತ್ರ ಅರ್ಜಿಯನ್ನು ಸಲ್ಲಿಸಲಾಗಿತ್ತು.

ರಾಮಮಂದಿರದ ಕೆಳಗೆ ‘ಟೈಮ್ ಕ್ಯಾಪ್ಸೂಲ್’ ಅಲ್ಲ, ಬದಲಾಗಿ ‘ತಾಮ್ರಪತ್ರ’ ಇಡಲಾಗುವುದು ! – ‘ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ’ನ ಸ್ಪಷ್ಟನೆ

ರಾಮಮಂದಿರದ ಭೂಮಿಯ ೨ ಸಾವಿರ ಅಡಿ ಕೆಳಗೆ ‘ಟೈಮ್ ಕ್ಯಾಪ್ಸೂಲ್’ ಇಡಲಾಗುವುದು ಎಂದು ಪ್ರಸಾರ ಮಾಧ್ಯಮಗಳು ನೀಡಿದ ಮಾಹಿತಿ ತಪ್ಪಿದ್ದು ಭೂಮಿ ಪೂಜೆಯ ಸಮಯದಲ್ಲಿ ದೇವಸ್ಥಾನದ ಕೆಳಗೆ ‘ತಾಮ್ರಪತ್ರ’ ಇಡಲಾಗುವುದು. ಅದರಲ್ಲಿ ದೇವಸ್ಥಾನದ ಬಗ್ಗೆ ಎಲ್ಲ ಮಾಹಿತಿ ಇರಲಿದೆ, ಎಂದು ‘ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ’ನ ಪ್ರಧಾನ ಕಾರ್ಯದರ್ಶಿ ಚಂಪತ ರಾಯ ಇವರು ಸ್ಪಷ್ಟಪಡಿಸಿದರು.

ಭಾರತೀಯ ಸೈನ್ಯ ಹಾಗೂ ರಾ.ಸ್ವ.ಸೇ.ಸಂಘಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ : ಜೆಎನ್‌ಯುನ ‘ವಿದ್ವಾನ’ನ ವಿರುದ್ಧ ಪ್ರಥಮ ವರ್ತಮಾನ ವರದಿ ದಾಖಲು

ಭಾರತೀಯ ಸೇನೆ ಹಾಗೂ ರಾ.ಸ್ವ.ಸಂಘ ಇವುಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆಯನ್ನು ನೀಡುವ ‘ವಿದ್ವಾನ’ನ ವಿರುದ್ಧ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಲಾಗಿದೆ. ಸಾಜಿದ ಬಿನ್ ಸಯಿದ್ ಎಂದು ಹೆಸರಾಗಿದ್ದು ಆತ ‘ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ’ದ ಅಧ್ಯಕ್ಷನಾಗಿದ್ದಾನೆ.

‘ಕೊರೋನಾ ವಾಹಕ’ರಾಗಿ ಭಾರತದ ಮೇಲೆ ದಾಳಿ ಮಾಡಿ ! – ಇಸ್ಲಾಮಿಕ್ ಸ್ಟೇಟ್‌ನಿಂದ ಬೆಂಬಲಿಗರಿಗೆ ಪ್ರಚೋದನೆ

‘ಕೊರೋನಾದಿಂದಾಗಿ ಉದ್ಭವಿಸಿರುವ ಪರಿಸ್ಥಿತಿಯನ್ನು ಅವಕಾಶವೆಂದು ತಿಳಿದುಕೊಳ್ಳಿ ಹಾಗೂ ‘ಕೊರೋನಾ ವಾಹಕ’ರಾಗಿ ಭಾರತದ ಮೇಲೆ ದಾಳಿ ಮಾಡಿ’, ಎಂಬ ಪ್ರಚೋದನಾಕಾರಿ ಹೇಳಿಕೆಯನ್ನು ಇಸ್ಲಾಮಿಕ್ ಸ್ಟೇಟ್‌ನ ಕಟ್ಟರ ಜಿಹಾದಿ ಉಗ್ರ ಸಂಘಟನೆಯು ತನ್ನ ಬೆಂಬಲಿಗರಿಗೆ ನೀಡಿದೆ. ‘ವೈಸ್ ಆಫ್ ಹಿಂದ್’ ಹೆಸರಿನ ‘ಆನ್‌ಲೈನ್’ ಪ್ರಕಾಶನದ ಸಮೂಹವು ‘ಲಾಕ್ ಡೌನ್’ ವಿಶೇಷಾಂಕದಲ್ಲಿ ಈ ಪ್ರಚೋದನೆ ನೀಡಿದೆ.