ಪಾಕಿಸ್ತಾನ ಸಂಸತ್ತಿನಿಂದ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ಅವರನ್ನು ‘ನಿಶಾನ್-ಎ-ಪಾಕಿಸ್ತಾನ’ ಪ್ರಶಸ್ತಿಗೆ ಶಿಫಾರಸ್ಸು

ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸಯ್ಯದ ಅಲಿ ಶಾಹ ಗಿಲಾನಿಯವರಿಗೆ ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ನಿಶಾನ್-ಎ-ಪಾಕಿಸ್ತಾನ’ ನೀಡುವಂತೆ ಪಾಕಿಸ್ತಾನದ ಸಂಸತ್ತು ಶಿಫಾರಸ್ಸನ್ನು ಮಾಡಿದೆ.ಸಯ್ಯದ ಅಲಿ ಶಾಹ ಗಿಲಾನಿಯವರ ಜೀವನದ (ಪ್ರತ್ಯೇಕತಾದಿ) ಪ್ರವಾಸದ ಬಗ್ಗೆ ಶಾಲಾ ಪಠ್ಯಕ್ರಮದಲ್ಲಿ ಸೇರಿಸಬೇಕು, ಇಸ್ಲಾಮಾಬಾದ್ ಒಂದು ಇಂಜಿನಿಯರಿಂಗ್ ವಿದ್ಯಾಪೀಠಕ್ಕೆ ಗಿಲಾನಿಯವರ ಹೆಸರು ನೀಡಬೇಕು’

ಧರ್ಮನಿಂದನೆಯ ಆರೋಪವಿರುವ ಅಮೇರಿಕಾದ ನಾಗರಿಕನಿಗೆ ಪಾಕಿಸ್ತಾನ ನ್ಯಾಯಾಲಯದಲ್ಲಿ ಗುಂಡಿಕ್ಕಿ ಹತ್ಯೆ

ಪಾಕಿಸ್ತಾನದ ಪೇಶಾವರ ಪಟ್ಟಣದಲ್ಲಿ ಒಂದು ನ್ಯಾಯಾಲಯವು ಧರ್ಮನಿಂದನೆಯ ಪ್ರಕರಣದಲ್ಲಿ ಅಮೇರಿಕಾದ ನಾಗರಿಕನ ಮೇಲೆ ನಡೆಯುತ್ತಿದ್ದ ಮೊಕದ್ದಮೆಯ ಆಲಿಕೆಯ ಸಮಯದಲ್ಲಿ ಆತನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ ಘಟನೆ ನಡೆದಿದೆ.

ಗೋರಖಪುರ(ಉತ್ತರಪ್ರದೇಶ)ದಲ್ಲಿ ಪಾಕಿಸ್ತಾನದ ಆದೇಶದ ಮೇರೆಗೆ ಅಫಘಾನಿ ಉಗ್ರರಿಂದ ದಾಳಿ ಸಾಧ್ಯತೆ

ಗುಪ್ತಚರ ಇಲಾಖೆಯ ವರದಿಗನುಸಾರ ಅಫಘಾನಿ ಆತ್ಮಾಹುತಿ ಉಗ್ರರು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದತ್ಯನಾಥ ಇವರ ಗೋರಖಪುರ ಸಹಿತ ಇತರ ಜಿಲ್ಲೆಗಳಲ್ಲಿ ದಾಳಿ ಮಾಡುವ ಸಂಚನ್ನು ರೂಪಿಸಿದ್ದಾರೆ. ಪಾಕಿಸ್ತಾನದ ಗೂಢಚಾರ ಇಲಾಖೆ ಐ.ಎಸ್.ಐ.ನ ಆದೇಶಕ್ಕನುಸಾರ ಅಫಘಾನಿ ಉಗ್ರರು ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಇಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಕೊರೋನಾದಿಂದಾಗಿ ಮೃತಪಟ್ಟವರ ಸಂಖ್ಯೆಯಲ್ಲಿ ಭಾರತವು ಜಗತ್ತಿನ ೫ ಸ್ಥಾನದಲ್ಲಿದೆ

ಕಳೆದ ಕೆಲವು ದಿನಗಳಿಂದ ಪ್ರತಿದಿನ ೫೦ ಸಾವಿರಕ್ಕಿಂತಲೂ ಹೆಚ್ಚು ರೋಗಿಗಳು ಪತ್ತೆಯಾಗುತ್ತಿದ್ದಾರೆ. ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೫೫ ಸಾವಿರದ ೭೯ ಹೊಸ ರೋಗಿಗಳು ಪತ್ತೆಯಾಗಿದ್ದು ೭೭೯ ರೋಗಿಗಳು ಸಾವನ್ನಪ್ಪಿದ್ದಾರೆ.

‘ಆನ್‌ಲೈನ್’ ಮಾಧ್ಯಮದಿಂದ ೯ ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ವು ಉತ್ಸಾಹದ ವಾತಾವರಣದಲ್ಲಿ ಪ್ರಾರಂಭ !

ಕೊರೋನಾದ ಮಹಾಮಾರಿಯಾಗಿರಲಿ ಅಥವಾ ಭವಿಷ್ಯದಲ್ಲಿ ಎದುರಾಗುವ ಮೂರನೇ ವಿಶ್ವಯುದ್ಧವಾಗಿರಲಿ, ಕಾಲಮಹಾತ್ಮೆಗನುಸಾರ ಮುಂಬರುವ ಕಾಲವು ಹಿಂದುತ್ವನಿಷ್ಠರಿಗೆ ಅನುಕೂಲಕರ ಕಾಲವಾಗಿರಲಿದೆ. ಅದಕ್ಕಾಗಿ ನಾವು ನಿರಂತರವಾಗಿ ಹಿಂದೂ ರಾಷ್ಟ್ರದ ಬೇಡಿಕೆಯನ್ನು ಮಾಡುತ್ತಿರಬೇಕು.

ರಾಮಮಂದಿರ ಭೂಮಿಪೂಜೆಯ ಮುಹೂರ್ತವನ್ನು ಬೆಳಗಾವಿಯ ಪಂಡಿತ ವಿಜಯೇಂದ್ರ ಶರ್ಮಾ ಇವರು ತೆಗೆದರು

ಗೋವಾ ವೇಸನ ವಿದ್ಯಾ ವಿಹಾರ ವಿದ್ಯಾಲಯದ ಕುಲಪತಿ ವಿಜಯೇಂದ್ರ ಶರ್ಮಾ ಇವರು ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿಪೂಜೆಯ ಮುಹೂರ್ತವನ್ನು ತೆಗೆದರು. ರಾಮಮಂದಿರ ನಿರ್ಮಾಣದ ಟ್ರಸ್ಟ್‌ನ ಅಧ್ಯಕ್ಷ ಪೂ. ಕಿಶೋರಜಿ ವ್ಯಾಸ ಇವರ ಆಜ್ಞೆಯಂತೆ ಈ ಮುಹೂರ್ತವನ್ನು ತೆಗೆದಿರುವ ಮಾಹಿತಿಯನ್ನು ಬೆಳಗಾವ ಲೈವ್ ಈ ವಾರ್ತಾವಾಹಿನಿಯಲ್ಲಿ ನೀಡಿದ ಸಂದರ್ಶನದಲ್ಲಿ ಹೇಳಿದರು.

ರಾಮಜನ್ಮಭೂಮಿಯ ಪುರೋಹಿತರು ಹಾಗೂ ೧೬ ಪೊಲೀಸರಿಗೆ ಕೊರೋನಾದ ಸೋಂಕು

ಆಗಸ್ಟ್ ೫ ರಂದು ರಾಮಜನ್ಮಭೂಮಿಯ ರಾಮಮಂದಿರದ ಭೂಮಿ ಪೂಜೆಯಾಗುವ ಮುನ್ನವೇ ರಾಮಜನ್ಮಭೂಮಿಯ ಪುರೋಹಿತ ಪ್ರದೀಪ ದಾಸ ಇವರಿಗೆ ಕೊರೋನಾದ ಸೋಂಕು ತಗಲಿದೆ. ಅವರು ಮುಖ್ಯ ಅರ್ಚಕರಾದ ಆಚಾರ್ಯ ಸತ್ಯೇಂದ್ರ ದಾಸ ಇವರ ಶಿಷ್ಯರಾಗಿದ್ದಾರೆ. ದಾಸ ಇವರ ಜೊತೆಗೆ ಅಲ್ಲಿಯ ೧೬ ಪೊಲೀಸರಿಗೂ ಕೊರೋನಾದ ಸೋಂಕು ತಗಲಿದೆ.

ಮಣಿಪುರದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಮೂವರು ಸೈನಿಕರು ಹುತಾತ್ಮ

ಮಣಿಪುರದ ಚಂದೆಲ ಜಿಲ್ಲೆಯ ಮ್ಯಾನ್ಮಾರ ಗಡಿಯ ಸಮಿಪದ ಪ್ರದೇಶದಲ್ಲಿ ಸ್ಥಳಿಯ ಪೀಪಲ್ಸ್ ಲಿಬರೇಶನ್ ಆರ್ಮಿಯ ಭಯೋತ್ಪಾದಕರು ಆಸಾಮ ರೈಫಲ್ ಸೈನಿಕರ ಮೇಲೆ ದಾಳಿ ಮಾಡಿದರು. ಇವರು ಮೊದಲು ಬಾಂಬ್ ಸ್ಪೋಟಿಸಿದರು. ನಂತರ ಗುಂಡು ಹಾರಿಸಿದರು. ಇದರಲ್ಲಿ ೩ ಸೈನಿಕರು ಹುತಾತ್ಮರಾದರೇ, ೬ ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೊರೆಗಾವ ಭೀಮಾ ಪ್ರಕರಣದಲ್ಲಿ ದೆಹಲಿ ವಿದ್ಯಾಪೀಠದ ಪ್ರಾ. ಹನೀ ಬಾಬೂ ಬಂಧನ

ಕೊರೆಗಾವ ಭೀಮಾದಲ್ಲಿ ನಡೆದ ಹಿಂಸಾಚಾರದ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ವಿದ್ಯಾಪೀಠದ ಆಂಗ್ಲ ವಿಭಾಗದ ೫೪ ವರ್ಷದ ಪ್ರಾಧ್ಯಾಪಕ ಹನಿ ಬಾಬೂನನ್ನು ಬಂಧಿಸಲಾಗಿದೆ. ಇವರ ಮೇಲೆ ಮಾವೋವಾದಿಗಳ ವಿಚಾರಗಳನ್ನು ಹಬ್ಬಿಸುವ ಆರೋಪವು ಇದೆ.