ಭಾರತದ ಬಗ್ಗೆ ನೇಪಾಳದ ಮುಂದುವರೆದ ದ್ವೇಷ !

ನೇಪಾಳಿ ಪುರುಷರನ್ನು ಮದುವೆಯಾಗಿ ನೇಪಾಳಕ್ಕೆ ಹೋಗುವ ಭಾರತೀಯ ಮಹಿಳೆಯರಿಗೆ ಅಲ್ಲಿನ ಪೌರತ್ವ ಪಡೆಯಲು ಏಳು ವರ್ಷ ಕಾಯಬೇಕಾಗುವ ಮತ್ತು ಅವರಿಗೆ ಎಲ್ಲಾ ರಾಜಕೀಯ ಹಕ್ಕುಗಳಿಂದ ದೂರವಿಡುವ ಪೌರತ್ವ ವಿಷಯದ ತಿದ್ದುಪಡಿ ಕಾನೂನನ್ನು ನೇಪಾಳದ ಸಂಸತ್ತಿನಲ್ಲಿ ಅನುಮೋದಿಸಲಿದೆ.

ಭಾರತೀಯ ಸೈನಿಕರ ಹುತಾತ್ಮರಾದ ಬಗ್ಗೆ ಸೇಡನ್ನು ತೀರಿಸಿಕೊಳ್ಳಬೇಕೆಂದು ಟ್ವಿಟರ್‌ನಿಂದ ರಾಷ್ಟ್ರಪ್ರೇಮಿಗಳ ಆಗ್ರಹ

ಚೀನಾ ಹಾಗೂ ಭಾರತದ ಸೈನಿಕರ ನಡುವೆ ನಡೆದ ಕಾಳಗದಲ್ಲಿ ಭಾರತದ ಒಬ್ಬ ಕರ್ನಲ್ ಸಹಿತ ೨೦ ಸೈನಿಕರು ಹುತಾತ್ಮರಾದರು. ಇದಾದ ನಂತರ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿರುವಾಗ ಟ್ವಿಟರ್‌ನಿಂದಲೂ ವಿರೋಧ ವ್ಯಕ್ತವಾಗಿದೆ. ಜೂನ್ ೧೬ ರಂದು ಬೆಳಗ್ಗೆ ರಾಷ್ಟ್ರ ಪ್ರೇಮಿಗಳಿಂದ #TeachLessonToChina ಈ ಹ್ಯಾಷ್‌ಟ್ಯಾಗ್‌ನ ಟ್ರೆಂಡ್ ಆರಂಭಿಸಲಾಯಿತು.

ಭಗವಾನ ಶ್ರೀರಾಮನು ಚೀನಾ ಡ್ರ್ಯಾಗನ್ ಅನ್ನು ಕೊಲ್ಲುವ ಚಿತ್ರ ತೈವಾನ್‌ದಲ್ಲಿ ಜನಪ್ರಿಯವಾಗಿದೆ !

ಭಾರತ ಮತ್ತು ಚೀನಾದ ಸೈನಿಕರು ಚೀನಾದ ೪೩ ಸೈನಿಕರನ್ನು ಕೊಂದ ಹಿನ್ನೆಲೆಯಲ್ಲಿ ಚೀನಾದ ಕಟ್ಟಾ ಶತ್ರು ತೈವಾನ್ ಇದರ ತೈವಾನ್‌ನ್ಯೂಸ್.ಕಾಮ್ ಇದರಲ್ಲಿ ಚೀನಾದ ಡ್ರ್ಯಾಗನ್ ಮೇಲೆ ಭಗವಾನ್ ಶ್ರೀರಾಮನು ಬಾಣ ಬಿಡುವ ಚಿತ್ರವನ್ನು ಫೋಟೋ ಆಫ್ ದಿ ಡೇ (ಇಂದಿನ ಫೋಟೋ)ನಲ್ಲಿ ಪೋಸ್ಟ್ ಮಾಡಿದೆ. ಈ ಚಿತ್ರ ತೈವಾನ್‌ನಲ್ಲಿ ಬಹಳ ಜನಪ್ರಿಯವಾಯಿತು.

ಜಗತ್ತಿನ ೧೫೦ ದೇಶಗಳಿಗೆ ೧೨೦ ಲಕ್ಷ ಕೋಟಿ ಸಾಲ ನೀಡಿ ಮೋಸ ಹೋದ ಚೀನಾ !

ಜಗತ್ತಿನಲ್ಲಿ ತನ್ನ ವರ್ಚಸ್ಸನ್ನು ನಿರ್ಮಿಸಲು ಚೀನಾವು ಜಗತ್ತಿನ ೧೫೦ ದೇಶಗಳಿಗೆ ಸರಿ ಸುಮಾರು ೧೨೦ ಲಕ್ಷ ಕೋಟಿ ರೂಪಾಯಿ ಸಾಲ ನೀಡಿದೆ; ಆದರೆ ಅದರಲ್ಲಿ ಹೆಚ್ಚಿನ ಸಾಲದ ಹಣ ಮರುಪಾವತಿಯಾಗುವ ಸಾಧ್ಯತೆ ಕಡಿಮೆಯಾಗುತ್ತಿದೆ. ಕೊರೋನಾ ಸಂಕಟದಿಂದ ಜಗತ್ತಿನ ಅರ್ಥವ್ಯವಸ್ಥೆ ಹದಗೆಟ್ಟಿದ್ದರಿಂದ ಈ ಸ್ಥಿತಿ ನಿರ್ಮಾಣವಾಗಿದೆ.

ವಕ್ರದೃಷ್ಟಿಯಿಂದ ನೋಡುವವರಿಗೆ ಭಾರತವು ಪಾಠ ಕಲಿಸಿದೆ ! – ಪ್ರಧಾನಮಂತ್ರಿ ಮೋದಿ

ನಮ್ಮ ದೇಶವನ್ನು ವಕ್ರದೃಷ್ಟಿಯಿಂದ ನೋಡುವವರಿಗೆ ಭಾರತವು ಪಾಠಕಲಿಸಿದೆ. ಭಾರತ ಮಾತೆಯ ಕಡೆ ವಕ್ರದೃಷ್ಟಿಯಿಂದ ನೋಡಿದರೆ, ನಿಮ್ಮ ಕಣ್ಣು ಕೀಳುವ ಶಕ್ತಿ ನಮ್ಮಲ್ಲಿದೆ, ಎಂಬುದು ಭಾರತೀಯ ಸೈನಿಕರು ತೋರಿಸಿಕೊಟ್ಟಿದ್ದಾರೆ, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಕಾಶವಾಣಿಯ ತಮ್ಮ ತಿಂಗಳ ಕಾರ್ಯಕ್ರಮವಾದ ‘ಮನ್ ಕಿ ಬಾತ್’ ನಲ್ಲಿ ಹೇಳಿದ್ದಾರೆ.

ಬಿಹಾರದ ಗಡಿಭಾಗದ ಭೂಪ್ರದೇಶದ ಮೇಲೆ ನೇಪಾಳಿ ಸೈನಿಕರಿಂದ ಅತಿಕ್ರಮಣ

ಭಾರತೀಯ ಭೂಪ್ರದೇಶವಾಗಿರುವ ಸುಸ್ತಾ ಪ್ರದೇಶವನ್ನು ನೇಪಾಳವು ಆಕ್ರಮಿಸಿಕೊಂಡಿದ್ದು ಅಲ್ಲಿ ಭಾರತೀಯ ನಾಗರಿಕರ ಮೇಲೆ ನಿರ್ಬಂಧ ಹೇರಿದೆ. ಈ ಪ್ರದೇಶದಲ್ಲಿ ೭ ಸಾವಿರದ ೧೦೦ ಎಕರೆ ಭೂಮಿಯ ಬಗ್ಗೆ ವಿವಾದ ನಡೆಯುತ್ತಿದೆ, ಅದೇ ರೀತಿ ನೇಪಾಳವು ಇಲ್ಲಿಯ ನರಸಹಿ ಕಾಡು ಕೂಡ ತನ್ನದಾಗಿದೆ ಎಂದು ಹೇಳಿಕೊಂಡಿದೆ. ಕೊರೋನಾ ‘ಪ್ರತ್ಯೇಕಿಕರಣ ಕೇಂದ್ರ’ ತೆರೆಯುವ ನೆಪದಲ್ಲಿ ನೇಪಾಳವು ತನ್ನ ಸೈನ್ಯವನ್ನು ಅಲ್ಲಿ ಕಳುಹಿಸಿದೆ.

ಪಿಪರಿಯಾ (ಮಧ್ಯಪ್ರದೇಶ)ದಲ್ಲಿ ಜಿಲ್ಲಾ ಗೋರಕ್ಷಕ ಮುಖ್ಯಸ್ಥನ ಗುಂಡಿಕ್ಕಿ ಹತ್ಯೆ

ರವಿಯು ತಮ್ಮ ಚತುಷ್ಚಕ್ರ ವಾಹನದಿಂದ ತಮ್ಮ ಸಹಚರರೊಂದಿಗೆ ಹೋಗುತ್ತಿರುವಾಗ ಇನ್ನೊಂದು ಚತುಷ್ಚಕ್ರ ವಾಹನ ಅವರ ವಾಹನವನ್ನು ಅಡ್ಡಗಟ್ಟಿತು ಹಾಗೂ ಆ ವಾಹನದಿಂದ ೬ ಜನ ಕೋಲು, ಕಬ್ಬಿಣದ ಸಲಾಕೆ, ಬಂದೂಕಿನೊಂದಿಗೆ ಹೊರಬಂದು ರವಿ ಮೇಲೆ ಗುಂಡು ಹಾರಿಸಿದರು. ಇದರಿಂದ ಗಾಯಗೊಂಡ ರವಿಯವರನ್ನು ಆಸ್ಪತ್ರೆಗೆ ಸಾಗಿಸುತ್ತಿರುವಾಗಲೇ ಮೃತಪಟ್ಟರು.

ಕೈಥಲ (ಹರಿಯಾಣಾ)ನ ಪ್ರಾಚೀನ ಶೃಂಗೀ ಋಷಿ ಆಶ್ರಮದ ಮಹಂತ ರಾಮಭಜ ದಾಸ ಇವರ ಹತ್ಯೆ

ಜೂನ್ ೨೪ ರಂದು ೨೩ ವರ್ಷ ವಯಸ್ಸಿನ ಮಹಂತ ರಾಮಭಜ ದಾಸ ಇವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹಲ್ಲೆಖೋರರು ಅವರನ್ನು ಅಮಾನವೀಯವಾಗಿ ಥಳಿಸಿ ಕಲಾಯತನಲ್ಲಿನ ಖರಕಪಾಂಡವಾ ಗ್ರಾಮದ ಗದ್ದೆಯಲ್ಲಿ ಎಸೆದರು. ಗಂಭೀರವಾಗಿ ಗಾಯಗೊಂಡ ಮಹಂತರನ್ನು ಆಸ್ಪತ್ರೆಗೆ ದಾಖಲಿಸಲಾಯಿತು;

ಸಂದೇಸರ ಹಗರಣ ಪ್ರಕರಣದಲ್ಲಿ ‘ಇಡಿ’ಯಿಂದ ಸೋನಿಯಾ ಗಾಂಧಿಯವರ ರಾಜಕೀಯ ಸಲಹೆಗಾರ ಅಹಮದ ಪಟೇಲ್ ತನಿಖೆ

ಸಂದೇಸರಾ ಹಗರಣದ ಪ್ರಕರಣದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಸೋನಿಯಾ ಗಾಂಧಿಯ ರಾಜಕೀಯ ಸಲಹೆಗಾರ ಅಹಮದ ಪಟೇಲ್ ಇವರನ್ನು ಜಾರಿ ನಿರ್ದೇಶನಾಲಯ(‘ಇಡಿ’) ದಿಂದ ವಿಚಾರಣೆ ಮಾಡಲಾಯಿತು. ಇದರೊಂದಿಗೆ ಅವರ ದೆಹಲಿಯಲ್ಲಿನ ನಿವಾಸದಲ್ಲಿ ‘ಇಡಿ’ಯು ದಾಳಿ ನಡೆಸಿದೆ.

ಉತ್ತರಪ್ರದೇಶದ ಮದರಸಾದ ಸಿಬ್ಬಂದಿಗಳ ನೇಮಕದ ಬಗ್ಗೆ ತನಿಖೆ ನಡೆಯಲಿದೆ

ಉತ್ತರಪ್ರದೇಶದ ಮದರಸಾದಲ್ಲಿ ಆಗಿರುವ ಎಲ್ಲ ಸಿಬ್ಬಂದಿಗಳ ನೇಮಕದ ಬಗ್ಗೆ ತನಿಖೆ ನಡೆಯಲಿದೆ, ಎಂದು ರಾಜ್ಯದ ಅಲ್ಪಸಂಖ್ಯಾತ ಖಾತೆಯ ಸಚಿವ ಮೊಹಸೀನ ರಜಾ ಇವರು ತಿಳಿಸಿದ್ದಾರೆ. ಸಮಾಜವಾದಿ ಪಕ್ಷದ ಸರಕಾರ ಇರುವಾಗ ಮದರಸಾದಲ್ಲಿ ಆದಂತಹ ನೇಮಕದ ಬಗ್ಗೆ ತನಿಖೆ ನಡೆಯಲಿದೆ.