ಸನಾತನದ ಧರ್ಮಪ್ರಚಾರಕರು ಮತ್ತು ೭೫ ನೇ ಸಂತರಾದ ಪೂ. ರಮಾನಂದ ಗೌಡ ಇವರ ಜನ್ಮದಿನ

ಸನಾತನದ ಧರ್ಮಪ್ರಚಾರಕರು ಮತ್ತು ೭೫ ನೇ ಸಂತರಾದ ಪೂ. ರಮಾನಂದ ಗೌಡ ಇವರ ಜನ್ಮದಿನ
ಜ್ಯೇಷ್ಠ ಶುಕ್ಲ ಪಕ್ಷ ನವಮಿ (೩೧. ೫. ೨೦೨೦) ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು

ಪೂ. ರಮಾನಂದ ಅಣ್ಣನವರ ಬೆಂಗಳೂರು ಪ್ರವಾಸದಲ್ಲಿ ಅಲ್ಲಿಯ ಸಾಧಕರಿಗೆ ಕಲಿಯಲು ಸಿಕ್ಕಿದ ಅಂಶಗಳು ಮತ್ತು ಬಂದ ಅನುಭೂತಿಗಳು

‘ಪೂ. ಅಣ್ಣನವರು ಪ್ರಸಾದ-ಮಹಾಪ್ರಸಾದ, ತಮ್ಮ ಇಷ್ಟಗಳಿಗೆ ಕಡಿಮೆ ಮಹತ್ವವನ್ನು ನೀಡುತ್ತಾರೆ. ಸಾಧಕರಿಂದ ಅವರ ಮಹಾಪ್ರಸಾದ ತಯಾರಿಸುವಲ್ಲಿ ಏನಾದರೂ ತಪ್ಪಾದರೂ, ಅವರು ಅದಕ್ಕೆ ಹೆಚ್ಚು ಮಹತ್ವವನ್ನು ನೀಡದೇ ‘ಚೆನ್ನಾಗಿದೆ, ಎಂದೇ ಹೇಳುತ್ತಾರೆ ಅಥವಾ ‘ಏನೂ ತೊಂದರೆಯಿಲ್ಲ, ಎಂದು ಸಾಧಕರಿಗೆ ಹೇಳುತ್ತಾರೆ.

‘ರಾಷ್ಟ್ರೀಯ ಮಂದಿರ-ಸಂಸ್ಕೃತಿ ರಕ್ಷಾ ಅಭಿಯಾನ’ದ ಅಂಗವಾಗಿ ಮಹಾರಾಷ್ಟ್ರದಲ್ಲಿ ‘ಆನ್‌ಲೈನ್’ ಚರ್ಚಾಕೂಟದಲ್ಲಿ ೨೨೫ ಗಣ್ಯರ ಸಹಭಾಗ !

ಸಂಚಾರ ನಿಷೇಧದಲ್ಲಿ ಮದ್ಯದಂಗಡಿಗಳನ್ನು ತೆರೆಯುವುದಕ್ಕಿಂತ ಜನರ ನಂಬಿಕೆಯಾಗಿದ್ದ ಚರ್ಚುಗಳನ್ನು ತೆರೆಯುವುದು ಮುಖ್ಯ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಹಾಗೆ ಮಾಡುವಂತೆ ಆಡಳಿತಕ್ಕೂ ಸೂಚನೆ ನೀಡಿದ್ದರು. ಸಂಕಟಕಾಲದಲ್ಲಿ ‘ಶ್ರದ್ಧೆಯೇ’ ಸಮಾಜದ ಆಧಾರಸ್ತಂಭವಾಗಿರುತ್ತದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಗ್ಗೆ ಯಾವುದೇ ಸಮಯದಲ್ಲಿ ಏನು ಬೇಕಾದರೂ ಆಗಬಹುದು ! – ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸುಳಿವು

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಯಾವಾಗಬೇಕಾದರೂ ಏನಾದರೂ ಸಂಭವಿಸುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ, ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ‘ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಭಾರತದಿಂದ ಯಾವುದೇ ಕ್ರಮವು ಯಾವಾಗಬೇಕಾದರೂ ಕಾರ್ಯಾಚರಣೆ ಮಾಡಬಹುದು’, ಎಂಬ ಸಂಕೇತವನ್ನು ನೀಡಿದ್ದಾರೆ

ದೇಶದಲ್ಲಿ ೨೪ ಗಂಟೆಗಳಲ್ಲಿ ೭,೯೬೪ ಹೊಸ ಕರೋನಾ ರೋಗಿಗಳು ೨೬೫ ಸಾವು

ಕಳೆದ ವಾರದಲ್ಲಿ ೬ ಸಾವಿರದಂತೆ ಹೆಚ್ಚಾಗುತ್ತಿದ್ದ ಕೊರೊನಾ ಪೀಡಿತ ರೋಗಿಗಳ ಸಂಖ್ಯೆ ಕಳೆದ ಎರಡು ದಿನಗಳಲ್ಲಿ ೧,೦೦೦ ಹೆಚ್ಚಾಗಿದೆ. ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೭,೯೬೪ ಹೊಸ ರೋಗಿಗಳು ಪತ್ತೆಯಾಗಿವೆ. ಅದರಿಂದ ದೇಶದ ಒಟ್ಟು ಕರೋನಾ ರೋಗಿಗಳ ಸಂಖ್ಯೆ ೧ ಲಕ್ಷದ ೭೩ ಸಾವಿರ ೭೬೩ ಕ್ಕೆ ತಲುಪಿದೆ. ಕಳೆದ ೨೪ ಗಂಟೆಗಳಲ್ಲಿ ೨೬೫ ಜನರು ಸಾವನ್ನಪ್ಪಿದ್ದಾರೆ.

ಹಿಂದೂ ಧರ್ಮ ಹಾಗ್ತೂ ಋಷಿಮುನಿಗಳನ್ನು ಅವಮಾನಿಸಿದ ಹಾಸ್ಯನಟಿ ಸುರಲೀನ್ ಕೌರ್ ವಿರುದ್ಧ ಇಸ್ಕಾನ್‌ನಿಂದ ದೂರು

ಏಕಪಾತ್ರಾಭಿನಯ ಹಾಸ್ಯ ಕಾರ್ಯಕ್ರಮ ಮಾಡುವ ಸುರಲೀನ ಕೌರ್ ಗ್ರೋವರ ಇವರು ‘ಇಸ್ಕಾನ್’ (ಇಂಟರ್‌ನ್ಯಾಶನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್ನೆಸ್) ಈ ಸಂಘಟನೆಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದಕ್ಕಾಗಿ ಅವರ ಹಾಗೂ ‘ಶೆಮಾರು’ ಸಂಸ್ಥೆಯ ವಿರುದ್ಧ ಮುಂಬೈ ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ.

ಆಂಧ್ರಪ್ರದೇಶದಲ್ಲಿ ಕ್ರೈಸ್ತರ ಜನಸಂಖ್ಯೆಯು ದಾಖಲೆಯಲ್ಲಿ ಕೇವಲ ಶೇ. ೨.೫ ಆದರೆ ವಾಸ್ತವದಲ್ಲಿ ಶೇಕಡಾ ೨೫ ರಷ್ಟಿದೆ !

ಸರ್ಕಾರದ ಅಂಕಿಅಂಶಗಳ ಪ್ರಕಾರ, ಆಂಧ್ರಪ್ರದೇಶದಲ್ಲಿ ಕ್ರೈಸ್ತರ ಜನಸಂಖ್ಯೆಯು ಕೇವಲ ಶೇ.೨.೫ ರಷ್ಟು ಮಾತ್ರ ಇದ್ದರೂ, ವಾಸ್ತವದಲ್ಲಿ ಇದು ಶೇಕಡಾ ೨೫ ರಷ್ಟಿದೆ, ಎಂಬ ಗೌಪ್ಯಸ್ಪೋಟವನ್ನು ರಾಜ್ಯದ ಆಡಳಿತಾರೂಢ ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ಸಂಸದ ರಘು ರಾಮಕೃಷ್ಣ ರಾಜು ಅವರು ಮಾಡಿದರು. ಅವರು ‘ಟೈಮ್ಸ್ ನೌ’ ಎಂಬ ಆಂಗ್ಲ ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಿದ್ದರು.

ಕರೋನಾದಿಂದ ಮುಕ್ತವಾಗಲು ಗಾಯತ್ರಿ ಪರಿವಾರದಿಂದ ಮೇ ೩೧ ರಂದು ವಿಶ್ವದಾದ್ಯಂತ ಯಜ್ಞ

ಕರೋನಾ ಮತ್ತು ಇತರ ರೋಗಾಣು, ಹಾನಿಕಾರಕ ಜೀವಜಂತುಗಳನ್ನು ನಾಶಮಾಡಲು ಮತ್ತು ಪರಿಸರವನ್ನು ಶುದ್ಧೀಕರಿಸಲು ಮೇ ೩೧ ರಂದು ಅಖಿಲ ವಿಶ್ವ ಗಾಯತ್ರಿ ಪರಿವಾರ ಇವರಿಂದ ೨೪ ಸಲ ‘ಗಾಯತ್ರಿ ಮಂತ್ರ’, ೫ ಸಲ ‘ಸೂರ್ಯ ಗಾಯತ್ರಿ ಮಂತ್ರ’ ಮತ್ತು ೫ ಸಲ ‘ಮಹಾಮೃತುಂಜಯ ಮಂತ್ರ’ ಇದರ ಪಾರಾಯಣದೊಂದಿಗೆ ಆಹುತಿಯನ್ನು ಕೊಡುತ್ತ ಯಜ್ಞವನ್ನು ಮಾಡಲಾಗುವುದು.

ಮೇ 30 ರಂದು `ಗೋವಾ ದಿನ’ದ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿ ಮತ್ತು `ಫ್ಯಾಕ್ಟ್’ ಜಂಟಿಯಾಗಿ

ಗೋವಾ ರಾಜ್ಯವನ್ನು ಪೋರ್ಚುಗೀಸರಿಂದ ವಿಮೋಚನೆಗೊಳ್ಳಲು 1961 ನೇ ವರ್ಷ ಬರಬೇಕಾಯಿತು. ಸುಮಾರು 450 ವರ್ಷಗಳ ನಂತರ ಗೋವಾವನ್ನು ಪೋರ್ಚುಗೀಸರ ಹಿಡಿತದಿಂದ ಮುಕ್ತಗೊಳಿಸಲಾಯಿತು; ಆದರೆ ಈ ಅವಧಿಯಲ್ಲಿ ಗೋವಾದಲ್ಲಿ ಹಿಂದೂಗಳು ಅನುಭವಿಸಿದ ದೌರ್ಜನ್ಯದ ಬಗ್ಗೆ ಭಾರತೀಯರಿಗೆ ಹೆಚ್ಚು ತಿಳಿದಿಲ್ಲ.

ಪತಂಜಲಿಯಿಂದ ಕೊರೋನಾ ರೋಗಾಣುವಿನ ಔಷಧದ ವೈದ್ಯಕೀಯ ಪರೀಕ್ಷೆ ಪ್ರಾರಂಭ

ಆಡಳಿತ ಮಂಡಳಿಯ ಅನುಮೋದನೆ ಪಡೆದ ನಂತರ, ಯೋಗಋಷಿ ರಾಮದೇವಬಾಬಾ ಅವರ ಪತಂಜಲಿ ಸಂಸ್ಥೆಯ ವತಿಯಿಂದ ಕೊರೋನಾ ಮೇಲಿನ ಚಿಕಿತ್ಸೆಗಾಗಿ ಔಷಧಿಯ ವೈದ್ಯಕೀಯ ಪರೀಕ್ಷೆಯನ್ನು ಪ್ರಾರಂಭಿಸಿತು. ಪತಂಜಲಿ ಸಂಸ್ಥೆಯ ವ್ಯವಸ್ಥಾಪಕ ಸಂಚಾಲಕರಾದ ಆಚಾರ್ಯ ಬಾಲಕೃಷ್ಣ ಅವರು, ‘ಕರೋನಾಗೆ ಔಷಧಕ್ಕಾಗಿ ವೈದ್ಯಕೀಯ ಪರೀಕ್ಷೆಗೆ ಅನುಮತಿ ಪಡೆಯುವುದು ಸುಲಭವಿರಲಿಲ್ಲ.