ಪ.ಪೂ. ಭಕ್ತರಾಜ ಮಹಾರಾಜರ ಬೋಧನೆ

ಶಾಶ್ವತ ಪದವಿ : ನಿಮ್ಮನ್ನು ಯಾರೂ ಎಬ್ಬಿಸದಿರುವಂತಹ ಸ್ಥಳದಲ್ಲಿ ಕುಳಿತುಕೊಳ್ಳಿರಿ. ನಿಮ್ಮ ಮಾತು ಸುಳ್ಳೆಂದು ಯಾರೂ ಹೇಳದಂತಹ ಮಾತುಗಳನ್ನಾಡಿ. ಭಾವಾರ್ಥ : ಬ್ರಹ್ಮಸ್ಥಿತಿಗೆ ತಲುಪಿದ ನಂತರ ‘ಏಳು ಎಂದು ಹೇಳಲು ಇನ್ಯಾರೂ ಉಳಿಯಲಾರರು ಮತ್ತು ಅದು ಸರ್ವವ್ಯಾಪಿ ಅವಸ್ಥೆಯಾಗಿರುವುದರಿಂದ ಅಲ್ಲಿಂದ ಏಳುವ ಪ್ರಶ್ನೆಯೇ ಬರಲಾರದು. ‘ಇದು ಸುಳ್ಳು ಎಂದು ಯಾರೂ ಹೇಳಲಾರದಂತಹ ಮಾತನಾಡುವ ವಿಷಯವೆಂದರೆ ಬ್ರಹ್ಮನ ಅಥವಾ ಪರಮೇಶ್ವರನ ಅನುಭೂತಿ. ಮಾಯೆಯೇ ಸುಳ್ಳಾಗಿರುವುದರಿಂದ ಮಾಯೆಯಲ್ಲಿನ ಸತ್ಯ ಮಾತನಾಡುವುದು ಸಹ ಸುಳ್ಳೇ ಆಗಿದೆ.

ಅಭ್ಯಂಗಸ್ನಾನ

೨ ಅ. ಅರ್ಥ ೧. ಅಭ್ಯಂಗಸ್ನಾನ ಎಂದರೆ ಬೆಳಗಿನ ಸಮಯದಲ್ಲಿ ಎದ್ದು, ತಲೆಗೆ ಮತ್ತು ಶರೀರಕ್ಕೆ ಎಣ್ಣೆಯನ್ನು ಹಚ್ಚಿಕೊಂಡು ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು.೨. ಪಿಂಡದ ಉತ್ಕರ್ಷಕ್ಕಾಗಿ ಮಾಡಿದ ಸ್ನಾನ ವೆಂದರೆ ಅಭ್ಯಂಗಸ್ನಾನ. ೨ ಆ. ಅಭ್ಯಂಗಸ್ನಾನಕ್ಕಾಗಿ ಎಣ್ಣೆಯನ್ನು ಹಚ್ಚಿಕೊಳ್ಳುವುದರ ಮಹತ್ವ : ಅಭ್ಯಂಗದಿಂದ, ಅಂದರೆ ಸ್ನಾನಕ್ಕಿಂತ ಮೊದಲು ದೇಹಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಪಿಂಡದಲ್ಲಿನ ಚೇತನದ ಪ್ರವಾಹಕ್ಕೆ ಅಭಂಗತ್ವ, ಅಂದರೆ ಅಖಂಡತೆಯು ಪ್ರಾಪ್ತವಾಗುತ್ತದೆ. ಸ್ನಾನಕ್ಕಿಂತ ಮೊದಲು ದೇಹಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಅಣುರೇಣು, ಸ್ನಾಯು ಮತ್ತು ದೇಹದಲ್ಲಿರುವ ಟೊಳ್ಳುಗಳು ಜಾಗೃತವಾಗಿ … Read more

ಸುಸಂಸ್ಕಾರವನ್ನು ನೀಡುವ ಬೋಧಕಥೆ !

huduga_002ಗುರುಗಳ ಕಾರ್ಯ ಸದ್ಗುಣ, ರಾಷ್ಟ್ರಭಕ್ತಿಯ ಮಹತ್ವವು ಎಲ್ಲರಿಗೂ ತಿಳಿದು ಭಾವೀ ಪೀಳಿಗೆಯು ಸಂಸ್ಕಾರಯುತ ವಾಗಿರಬೇಕೆಂದು ಈ ಮಾಲಿಕೆಯನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ. ಮುಂದೆ ನೀಡಿದ ಕಥೆಯಿಂದ ಕರ್ಮಕಾಂಡ ಮಾಡುವವನಲ್ಲ, ಆಜ್ಞಾಪಾಲನೆ ಮಾಡುವವನು ಹೇಗೆ ಶ್ರೇಷ್ಠ ! ಎಂಬುದು ತಿಳಿಯುತ್ತದೆ.

ಶಿಷ್ಯ

೧.ಆಜ್ಞಾಪಾಲನೆ
೧ಅ. ಪುತ್ರ ಮತ್ತು ಶಿಷ್ಯನಲ್ಲಿನ ವ್ಯತ್ಯಾಸ : ಗುರು ನಾನಕರು ತಮ್ಮ ಶಿಷ್ಯನಿಗೆ ಒಂದು ಕಟ್ಟೆಯನ್ನು ಕಟ್ಟಲು ಹೇಳಿದರು. ಕಟ್ಟಿದ ನಂತರ ಅದನ್ನು ಒಡೆಯಲು ಹೇಳಿದರು. ‘ಪುನಃ ಕಟ್ಟು, ಪುನಃ ಒಡೆ’ ಹೀಗೆಯೇ ಹೇಳುತ್ತಿದ್ದರು. ಗುರು ನಾನಕರ ಮಗನಿಗೆ ಸಿಟ್ಟು ಬಂದಿತು.
ಮಗನು ಶಿಷ್ಯನಿಗೆ “ನಿನಗೆ ಸಿಟ್ಟು ಬರುವುದಿಲ್ಲವೇ?” ಎಂದು ಕೇಳಿದನು. ಶಿಷ್ಯನು “ನನಗೂ ಕಟ್ಟೆಗೂ ಸಂಬಂಧವಿಲ್ಲ. ‘ಕಟ್ಟೆಯನ್ನು ಕಟ್ಟುವುದು ಮತ್ತು ಪುನಃ ಒಡೆಯುವುದು’ ಇದು ನನ್ನ ಸಾಧನೆ ಯಾಗಿದೆ. ಗುರುದೇವರ ಆಜ್ಞೆಯು ಪ್ರಮಾಣವಾಗಿದೆ” ಎಂದು ಹೇಳಿದನು.

Read more

ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !

ಸೂಚನೆ : ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.

fxgvgh೧. ದೇಶದಲ್ಲಿ ಹಿಂದೂಗಳ ವಿರುದ್ಧ ಹೆಚ್ಚುತ್ತಿರುವ
ಅಸಹಿಷ್ಣುತೆಯ ಇನ್ನೊಂದು ಘಟನೆ!

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ಆಯರೂರ ಥೊಟ್ಟಾಥೀಲ ವೇಲಯುಧನ ಇವರ ಪುತ್ರ ಶ್ರೀ. ಮಿಥುನ (೨೩ ವರ್ಷಗಳು) ಇವರು ಶಬರಿಮಲೆ ಯಾತ್ರೆಯಿಂದ ಮನೆಗೆ ಮರಳುತ್ತಿದ್ದಾಗ ಅವರ ಮೇಲೆ ೩ ಮತಾಂಧರು ದಾಳಿ ನಡೆಸಿದರು. ಶ್ರೀ. ಮಿಥುನ ಇವರನ್ನು ಅಮಾನವೀಯವಾಗಿ ಥಳಿಸಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡರು.

Read more

ಕ್ರಾಂತಿಕಾರರ ಕನಸಿನ ಭಾರತ ಇದೇನಾ ? – ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಕ್ರಾಂತಿಕಾರರ ಕನಸಿನ ಭಾರತ ಇದೇನಾ ? – ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

shankarachrya
ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಉಜ್ಜೈನಿ, ೧೪ ಡಿಸೆಂಬರ್ (ವರದಿ) – ಕ್ರಾಂತಿಕಾರರು ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಸರ್ವಸ್ವವನ್ನು ತ್ಯಾಗ ಮಾಡಿದರು. ಸ್ವಾತಂತ್ರ್ಯ ಪಡೆದಂದಿನಿಂದ ಇಲ್ಲಿಯವರೆಗಿನ ಸ್ಥಿತಿಯನ್ನು ಗಮನಿಸಿದಾಗ ಅವರ ಕನಸಿನ ಭಾರತ ಇದೇನಾ ? ಕ್ರಾಂತಿಕಾರರ ಕನಸಿನ ಭಾರತದ ವಿಚಾರವನ್ನು ಮಾಡಿದಲ್ಲಿ ದೇಶದಲ್ಲಿ ಪರಿವರ್ತನೆಯ ದಿಶೆ ಸ್ಪಷ್ಟವಾಗುತ್ತದೆ ಎಂದು ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

Read more

ಹಿಂದೂಗಳೇ, ಹೊಸ ವರ್ಷವನ್ನು ಯುಗಾದಿಯಂದು ಆಚರಿಸದೇ ಡಿಸೆಂಬರ್ ೩೧ ರಂದು ಆಚರಿಸಿ ಮಹಾನ್ ಭಾರತೀಯ ಸಂಸ್ಕೃತಿಯನ್ನು ನಾಶಗೊಳಿಸಿದ ಪಾಪವನ್ನು ಕಟ್ಟಿಕೊಳ್ಳಬೇಡಿ !

31st-dececmberಆಂಗ್ಲ ದಿನದರ್ಶಿಕೆಗನುಸಾರ ೨೦೧೬ ಕಳೆದು ನಾವು ೨೦೧೭ ರ ಕಡೆಗೆ ಪ್ರಯಾಣ ಬೆಳೆಸುತ್ತಿದ್ದೇವೆ. ಅದಕ್ಕೆ ಸಂಬಂಧಿಸಿ ವಾಚಕರೊಂದಿಗಿನ ವಿಚಾರವಿನಿಮಯ

ಪ್ರತಿ ವರ್ಷದಂತೆ ಈ ವರ್ಷವೂ ಡಿಸೆಂಬರ್ ೩೧ ನ್ನು ಉತ್ಸಾಹದಿಂದ ಹೇಗೆ ಆಚರಿಸಬಹುದೆಂದು ಸಣ್ಣ ಮಕ್ಕಳು, ಪಾಲಕರು ಹಾಗೂ ಸಣ್ಣಪುಟ್ಟ ಊರುಗಳ ವೃದ್ಧರಿಂದ ಹಿಡಿದು ಅವಿದ್ಯಾವಂತರ ವರೆಗೆ ಎಲ್ಲರೂ ಆಯೋಜನೆ ಮಾಡಲು ಆರಂಭಿಸಿದ್ದಾರೆ. ಕೆಲವರು ರಜೆ ಪಡೆದುಕೊಂಡು, ಕೆಲವರು ಸಾಯಂಕಾಲ ತಮಗೆ ದೊರೆಯುವ ಸಮಯದಲ್ಲಿ ಡಿಸೆಂಬರ್ ೩೧ ನ್ನು ಆಚರಿಸಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತಿದೆ. ಅದರಲ್ಲಿ ಶಾಲೆ ಮತ್ತು ಮಹಾವಿದ್ಯಾಲಯಗಳೂ ಹಿಂದೆ ಉಳಿದಿಲ್ಲ. ಇದೆಲ್ಲವನ್ನೂ ನೋಡುವಾಗ ಆಶ್ಚರ್ಯವಾಗುತ್ತಿದೆ. ವಾಚಕರೇ, ನೀವು ಸಹ ಹೀಗೆಯೇ ಮಾಡುತ್ತಿರಬಹುದಲ್ಲ ? ನಾನು ಸಹ ಒಬ್ಬ ಪಾಲಕನ ಸ್ಥಾನದಲ್ಲಿ ನಿಂತು ಇದಕ್ಕೆ ಸಂಬಂಧಿಸಿ ನಿಮ್ಮೊಂದಿಗೆ ವಿಚಾರವಿನಿಮಯ ಮಾಡಲು ಇಚ್ಛಿಸುತ್ತೇನೆ.

Read more

ರಾಜ್ಯ ಸರಕಾರದ ಮೌಢ್ಯ ನಿಷೇಧ ವಿಧೇಯಕದ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ಕೈಗೊಂಡ ಚಳುವಳಿ ಯಶಸ್ವಿ !

ಕಾಂಗ್ರೆಸ್ಸಿನ ೨೦ ಮಂತ್ರಿಗಳಿಂದ ಹಿಂದೂ ಜನಜಾಗೃತಿ ಸಮಿತಿಗೆ
ಸಕಾರಾತ್ಮಕ ಪ್ರತಿಸನಿಂದನೆ
!

ಕ್ಯಾಪ್ಟನ್ ಗಣೇಶ ಕಾರ್ಣಿಕ್ (ಬಲಗಡೆ) ಇವರಿಗೆ ಮನವಿಯ ಮಾಹಿತಿ ನೀಡುತ್ತಿರುವ ಸಮಿತಿಯ ಶ್ರೀ. ಮೋಹನ ಗೌಡ, (ಎಡದಿಂದ) ಡಾ. ಅಂಜೇಶ ಕಣಗಲೇಕರ, ಶ್ರೀ. ಕಾಶಿನಾಥ ಶೆಟ್ಟಿ ಹಾಗೂ ಶ್ರೀ. ಅಶೋಕ ಭೋಜ
ಕ್ಯಾಪ್ಟನ್ ಗಣೇಶ ಕಾರ್ಣಿಕ್ (ಬಲಗಡೆ) ಇವರಿಗೆ ಮನವಿಯ ಮಾಹಿತಿ ನೀಡುತ್ತಿರುವ ಸಮಿತಿಯ ಶ್ರೀ. ಮೋಹನ ಗೌಡ, (ಎಡದಿಂದ) ಡಾ. ಅಂಜೇಶ ಕಣಗಲೇಕರ, ಶ್ರೀ. ಕಾಶಿನಾಥ ಶೆಟ್ಟಿ ಹಾಗೂ ಶ್ರೀ. ಅಶೋಕ ಭೋಜ

ಮೇಲಿಂದ ಮೇಲಾಗುತ್ತಿರುವ ಹಿಂದೂ ಮುಖಂಡರ ಹತ್ಯೆಗಳನ್ನು ಖಂಡಿಸಿ
ರಾಜ್ಯದ ವಿಧಾನಸಬ
s
ಯ ಪ್ರಮುಖ ಅಂಗಳ ಮಂಡನೆ 

ಬೆಳಗಾವಿ ರಾಜ್ಯ ವಿಧಾನ ಸಭೆಯ ಚಳಿಗಾಲದ ಅಧಿವೇಶನವು ನವೆಂಬರ್ ೨೨ ರಿಂದ ೩ ಡಿಸೆಂಬರ್ ಈ ಅವಧಿಯಲ್ಲಿ ಬೆಳಗಾವಿಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ಸರಕಾರವು ವಿಧಾನ ಸಭೆಯಲ್ಲಿ ಮೌಢ್ಯ ನಿಷೇಧ ವಿಧೇಯಕವನ್ನು ಮಂಡಿಸುವ ಸಿದ್ಧತೆಯಲ್ಲಿತ್ತು.

Read more

ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಜಾತ್ರೆ ಈ ವರ್ಷ ಡಿಸೆಂಬರ್ ೨೯ ರಂದು ಎಳ್ಳಮಾವಾಸ್ಯೆ ತೀರ್ಥಸ್ನಾನ, ೩೦ ರಂದು ರಥೋತ್ಸವ ಹಾಗೂ ೩೧ ರಂದು ತೆಪ್ಪೋತ್ಸವವು ನಡೆಯಲಿದೆ. ಆ ಪ್ರಯುಕ್ತ ಈ ಕಿರು ಲೇಖನವನ್ನು ಪ್ರಸ್ತುತಪಡಿಸುತ್ತಿದ್ದೇವೆ.

ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಜಾತ್ರೆ ಈ ವರ್ಷ ಡಿಸೆಂಬರ್ ೨೯ ರಂದು ಎಳ್ಳಮಾವಾಸ್ಯೆ ತೀರ್ಥಸ್ನಾನ, ೩೦ ರಂದು ರಥೋತ್ಸವ ಹಾಗೂ ೩೧ ರಂದು ತೆಪ್ಪೋತ್ಸವವು ನಡೆಯಲಿದೆ. ಆ ಪ್ರಯುಕ್ತ ಈ ಕಿರು ಲೇಖನವನ್ನು ಪ್ರಸ್ತುತಪಡಿಸುತ್ತಿದ್ದೇವೆ.

tirthahalli-mandir

ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಜಾತ್ರೆ ತೀರ್ಥಹಳ್ಳಿಯ ರಾಮೇಶ್ವರ ದೇವಸ್ಥಾನ ಹಾಗೂ ಗೋಲಾಕಾರದಲ್ಲಿ ರಾಮೇಶ್ವರನ ಮೂರ್ತಿ ಮಲೆನಾಡಿನ ಮಡಿಲಿನಲ್ಲಿರುವ ತೀರ್ಥಹಳ್ಳಿಯು ಪುರಾಣ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಪವಿತ್ರ ತುಂಗಾ ನದಿಯ ತೀರದಲ್ಲಿರುವ ತೀರ್ಥರಾಜಪುರದಲ್ಲಿ (ಅಂದರೆ ಈಗಿನ ತೀರ್ಥಹಳ್ಳಿಯಲ್ಲಿ) ಪ್ರತಿವರ್ಷ ಎಳ್ಳಮಾವಾಸ್ಯೆ ಉತ್ಸವವು ಅತಿ ವಿಜೃಂಭಣೆಯಿಂದ ನಡೆಯುತ್ತದೆ. ಈ ವರ್ಷ ಡಿಸೆಂಬರ್ ೨೯ ರಂದು ಎಳ್ಳಮಾವಾಸ್ಯೆ ತೀರ್ಥಸ್ನಾನ, ೩೦ ರಂದು ರಥೋತ್ಸವ ಹಾಗೂ ೩೧ ರಂದು ತೆಪ್ಪೋತ್ಸವವು ನಡೆಯಲಿದೆ. ಆ ಪ್ರಯುಕ್ತ ಈ ಕಿರು ಲೇಖನವನ್ನು ಪ್ರಸ್ತುತಪಡಿಸುತ್ತಿದ್ದೇವೆ.

Read more

ಅಯ್ಯಪ್ಪ ಮಾಲಾಧಾರಿಗಳ ವಾಹನದ ಮೇಲೆ ಭಾರಿ ತೆರಿಗೆ ಕಾರುಗಳಿಗೆ ೨೫ ಸಾವಿರ ಮತ್ತು ಟೆಂಪೋ ಟ್ರಾವೆಲರ್‌ಗೆ ಸುಮಾರು ೧ ಲಕ್ಷದ ವರೆಗೆ ತೆರಿಗೆ

ಹಜ್ ಯಾತ್ರೆಗೆ ಅನುದಾನ ನೀಡಿ ಹಿಂದೂಗಳ ಯಾತ್ರೆಗಳಿಗೆ ತೆರಿಗೆ ವಿಧಿಸುವ ಕೇರಳ ಸರಕಾರ ಭಾರತದ್ದೋ ಪಾಕಿಸ್ತಾನದ್ದೋ? ಸಾಮ್ಯವಾದಿಗಳು ಹೇಗೆ ಹಿಂದೂದೆಪೀಷಿಗಳಾಗಿರುತ್ತಾರೆ ಎಂದಕ್ಕೆ ಇದೊಂದು ಉದಾಹರಣೆ !

ಬೆಂಗಳೂರು : ಮೇ ೨೦೧೬ ರಲ್ಲಿ ಅಧಿಕಾರ ವಹಿಸಿಕೊಂಡ ಎಲ್.ಡಿ.ಎಫ್. ಸರಕಾರ ಆಲ್ ಇಂಡಿಯಾ ಪರ್ಮಿಟ್ ಹೊಂದಿದ ಕರ್ನಾಟಕ ರಾಜ್ಯದಿಂದ ಕೇರಳಕ್ಕೆ ಪ್ರವೇಶಿಸುವ ಪ್ರವಾಸಿ ವಾಹನಗಳ ಮೇಲೆ ಭಾರಿ ತೆರಿಗೆ ವಿಧಿಸಿದೆ. ಒಂದು ಇನೋವಾ ಈಗ ಕೇರಳ ಪ್ರವೇಶಿಸಲು ಸುಮಾರು ೨೫ ಸಾವಿರ ರೂಪಾಯಿ ಮತ್ತು ಟೆಂಪೊಟ್ರಾವೆಲರ್ ಸುಮಾರು ೧ ಲಕ್ಷ ಪಾವತಿಸಬೇಕಾಗಿದೆ. ದಕ್ಷಿಣ ಭಾರತದ ಇತರ ರಾಜ್ಯಗಳಿಂದ ಬರುವ ಪ್ರವಾಸಿ ವಾಹನಗಳಿಗೆ ಈ ಸಮಸ್ಯೆ ಇಲ್ಲ, ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Read more

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

  ಬುದ್ಧಿಪ್ರಾಮಾಣ್ಯವಾದಿಗಳು ವೈದ್ಯರು, ವಕೀಲರು ಹೇಳಿದ್ದನ್ನು ಕೂಡಲೇ ಕೇಳುತ್ತಾರೆ. ಅವರಿಗೆ ಏಕೆ ? ಹೇಗೆ ? ಎಂದು ಕೇಳುವುದಿಲ್ಲ; ಆದರೆ ಸಂತರು ಏನಾದರೂ ಹೇಳಿದರೆ ಏಕೆ ? ಹೇಗೆ ? ಎಂಬ ಪ್ರಶ್ನೆ ಬರುತ್ತದೆ ! – (ಪರಾತ್ಪರ ಗುರು) ಡಾ. ಆಠವಲೆ