ಸಹೋದರ ಬಿದಿಗೆ (ಯಮದ್ವಿತೀಯಾ)(ನವೆಂಬರ್ ೧)

೧. ಇದು ಮಾತೆಯ ಗರ್ಭದಿಂದ ಜನಿಸಿದ ಜೀವಗಳಿಗೆ ಪರಸ್ಪರರ ಬಗ್ಗೆ ಆತ್ಮೀಯತೆ ವ್ಯಕ್ತಪಡಿಸುವ ದಿನವಾಗಿದೆ. ೨. ಈ ದಿನದಂದು ಸಹೋದರಿಯು ಸಹೋದರನಿಗಾಗಿ ಶ್ರೀ ಯಮಾಯಿ ದೇವಿಯಲ್ಲಿ ಏನನ್ನು ಕೇಳುವಳೋ, ಅವಳ ಭಾವಕ್ಕನುಸಾರ ಸಹೋದರನಿಗೆ ಅದು ಸಿಗುತ್ತದೆ. ಅದರಿಂದ ಸಹೋದರನೊಂದಿಗಿನ ಅವಳ ಕೊಡು–ಕೊಳ್ಳುವ ಲೆಕ್ಕಾಚಾರ ಸ್ವಲ್ಪ ಕಡಿಮೆಯಾಗುತ್ತದೆ. ೩. ಸ್ತ್ರೀ ಜೀವದಲ್ಲಿರುವ ದೇವಿತತ್ತ್ವ ಜಾಗೃತವಾಗಿ ಅದರಿಂದ ಸಹೋದರನಿಗೆ ಲಾಭವಾಗುತ್ತದೆ ಮತ್ತು ಅವನು ಸಾಧನೆ ಮಾಡುತ್ತಿದ್ದರೆ ಅವನಿಗೆ ವ್ಯವಹಾರಿಕ ಲಾಭವಾಗುತ್ತದೆ. ಸಹೋದರನು ವ್ಯವಹಾರ ನಡೆಸಿ ಸಾಧನೆ ಮಾಡುತ್ತಿದ್ದರೆ ಅವನಿಗೆ ಶೇ. … Read more

ಬಲಿಪಾಡ್ಯ (ದೀಪಾವಳಿ ಪಾಡ್ಯ) (ಅಕ್ಟೋಬರ್ ೩೧)

vaman_balipratipada

ಸತ್ಪಾತ್ರರಿಗೆ ದಾನ ಕೊಡಬೇಕು, ಅಪಾತ್ರರಿಗೆ ಕೊಡಬಾರದು. ಅಪಾತ್ರರಿಗೆ ಸಂಪತ್ತನ್ನು ದಾನ ಮಾಡಿದರೆ ಅವರು ಮದೋನ್ಮತ್ತರಾಗಿ ಮನಸ್ಸಿಗೆ ಬಂದಂತೆ ವರ್ತಿಸುತ್ತಾರೆ. ಬಲಿ ರಾಜನು ಯಾರಿಗಾ ದರೂ, ಯಾವಾಗ ಬಂದರೂ ಮತ್ತು ಅವರು ಏನು ಕೇಳಿದರೂ ದಾನವೆಂದು ಕೊಡುತ್ತಿದ್ದನು. ಆಗ ಭಗವಾನ ಶ್ರೀವಿಷ್ಣುವು ವಟುವಿನ ಅವತಾರ (ವಾಮನಾವತಾರ) ತಾಳಿದನು ಮತ್ತು ಬಲಿ ರಾಜನಲ್ಲಿಗೆ ಹೋಗಿ ತ್ರಿಪಾದ (ಮೂರು ಹೆಜ್ಜೆ)

ಭೂಮಿಯನ್ನು ದಾನವಾಗಿ ಕೇಳಿದನು. ಬಲಿ ರಾಜನು ತ್ರಿಪಾದ ಭೂಮಿಯನ್ನು ವಾಮನನಿಗೆ ದಾನವಾಗಿ ನೀಡಿದನು. ವಾಮನನು ವಿರಾಟರೂಪವನ್ನು ತಾಳಿ ಒಂದು ಹೆಜ್ಜೆಯಿಂದ ಸಂಪೂರ್ಣ ಭೂಮಿಯನ್ನು ವ್ಯಾಪಿಸಿದನು. ಎರಡನೆಯ ಹೆಜ್ಜೆಯಿಂದ ಇಡಿ ಅಂತರಿಕ್ಷವನ್ನು ವ್ಯಾಪಿಸಿಕೊಂಡನು ಹಾಗೂ ಅವನು ಮೂರನೇ ಹೆಜ್ಜೆಯನ್ನು ಬಲಿರಾಜನು ಹೇಳಿದಂತೆ ಅವನ ತಲೆಯ ಮೇಲಿಟ್ಟು ಅವನನ್ನು ಪಾತಾಳಕ್ಕೆ ಕಳುಹಿಸಿದನು, ಇದೇ ದಿನ ಬಲಿಪಾಡ್ಯವಾಗಿದೆ.

Read more

ಆನಂದ, ಸೌಖ್ಯ, ಸುಖಸಮೃದಿ, ಅಭ್ಯುದಯ, ಪ್ರಚಂಡ ಉತ್ಸಾಹ ಮತ್ತು ಚೈತನ್ಯಮಯ ದೀಪೋತ್ಸವವೆಂದರೆ, ದೀಪಾವಳಿ !

deepa

. ‘ದೀಪ’ ಶಬ್ದದ ವ್ಯಾಖ್ಯೆ :ದೀಪ್ಯತೆ ದೀಪಯತಿ ವಾ ಸ್ವಯಂ ಪರಂ ಚೇತಿ ’ ಅಂದರೆ ಯಾವುದು ‘ಸ್ವತಃ ಪ್ರಕಾಶಿಸುತ್ತದೆ ಹಾಗೂ ಇತರರನ್ನು ಪ್ರಕಾಶಮಯಗೊಳಿಸುತ್ತದೆಯೋ ಅದು ದೀಪ’, ‘ದೀಪ’ ಈ ಶಬ್ದದ ವ್ಯಾಖ್ಯೆ ಹೀಗಿದೆ.

. ಬುದ್ಧಿ ಮತ್ತು ಜ್ಞಾನದ ಪ್ರತೀಕ : ದೀಪ ಅಥವಾ ದೀಪಜ್ಯೋತಿಯು ಬುದ್ಧಿ ಮತ್ತು ಜ್ಞಾನದ ಪ್ರತೀಕವಾಗಿದೆ. ‘ತಮಸೊಮಾ ಜ್ಯೋತಿರ್ಗಮಯ’ ಇದು ಉಪನಿಷತ್‌ಕಾರರ ಪ್ರಾರ್ಥನೆಯಾಗಿದೆ. ‘ಅಜ್ಞಾನರೂಪಿ ಕತ್ತಲೆಯಿಂದ ಜ್ಞಾನರೂಪಿ ಪ್ರಕಾಶದೆಡೆಗೆ ಕರೆದುಕೊಂಡು ಹೋಗು’, ಎಂದು ಇದರ ಅರ್ಥವಾಗಿದೆ.

Read more

ದೀಪಾವಳಿಯಲ್ಲಿ ಲಕ್ಷ್ಮೀ ಪ್ರಾಪ್ತಿಗಾಗಿ ಮಾಡಬೇಕಾದ ಕೃತಿಗಳು !

lakshmi_2013_c

. ಸುಖಸಂಪತ್ತು ವೃದ್ಧಿಯಾಗಲು ದೀಪಾವಳಿ ಯಂದು ಮನೆಯ ಮುಖ್ಯದ್ವಾರದ ಎರಡೂ ಬದಿ ಗಳಲ್ಲಿ ಗೋದಿಹಿಟ್ಟಿನ ಕಣಕ ಮಾಡಿ ಅದರ ಮೇಲೆ ದೀಪವನ್ನು ಹಚ್ಚಿಡಬೇಕು ! :ದೀಪಾವಳಿಯಂದು ಮನೆಯ ಮುಖ್ಯದ್ವಾರದ ಎಡ ಮತ್ತು ಬಲ ಬದಿಯಲ್ಲಿ ಗೋದಿ ಹಿಟ್ಟಿನ ಸಣ್ಣ ಕಣಕ ಮಾಡಿ ಅವುಗಳ ಮೇಲೆ ದೀಪವನ್ನು ಹಚ್ಚಿಡಬೇಕು. ಈ ದೀಪಗಳನ್ನು ಸಾಧ್ಯವಿದ್ದರೆ, ರಾತ್ರಿಯಿಡೀ ಉರಿಸಿಡ ಬೇಕು. ಇದರಿಂದ ನಿಮ್ಮ ಮನೆಯಲ್ಲಿನ ಸುಖ ಸಂಪತ್ತು ವೃದ್ಧಿಯಾಗುವುದು.

ಮಣ್ಣಿನ ಹೊಸ ದೀಪಗಳಲ್ಲಿ ಯಾವತ್ತೂ ಎಣ್ಣೆತುಪ್ಪ ಇವುಗಳನ್ನು ಹಾಕಬಾರದು. ಈ ದೀಪಗಳನ್ನು ಉಪಯೋಗಿಸುವ ಮೊದಲು ೬ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡ ಬೇಕು.

Read more

ಲಕ್ಷ್ಮೀಪೂಜೆ (ಅಕ್ಟೋಬರ್ ೩೦)

lakshmipoojan1

ಸಾಮಾನ್ಯವಾಗಿ ಅಮಾವಾಸ್ಯೆಯನ್ನು ಅಶುಭ ದಿನವೆಂದು ಪರಿಗಣಿಸಲಾಗುತ್ತದೆ; ಆದರೆ ಈ ಅಮಾವಾಸ್ಯೆಯು ಅದಕ್ಕೆ ಅಪವಾದವಾಗಿದೆ. ಈ ದಿನ ಪ್ರಾತಃಕಾಲದಲ್ಲಿ ಮಂಗಲ ಸ್ನಾನ ಮಾಡಿ ದೇವರ ಪೂಜೆ, ಮಧ್ಯಾಹ್ನ ಪಾರ್ವಣಶ್ರಾದ್ಧ ಹಾಗೂ ಬ್ರಾಹ್ಮಣಭೋಜನ ಮತ್ತು ಪ್ರದೋಷಕಾಲದಲ್ಲಿ ಎಲೆಬಳ್ಳಿಗಳಿಂದ ಶೃಂಗರಿಸಿದ ಮಂಟಪದಲ್ಲಿ ಲಕ್ಷ್ಮೀ, ಶ್ರೀವಿಷ್ಣು ಮುಂತಾದ ದೇವತೆಗಳ ಮತ್ತು ಕುಬೇರನ ಪೂಜೆ ಮಾಡುತ್ತಾರೆ. ಇವು ಈ ದಿನದ ವಿಧಿಗಳಾಗಿವೆ.

ಲಕ್ಷ್ಮೀಯ ಪೂಜೆಯನ್ನು ಮಾಡುವಾಗ ಒಂದು ಚೌರಂಗದ ಮೇಲೆ ಅಕ್ಷತೆಗಳಿಂದ ಅಷ್ಟದಳ ಕಮಲ ಅಥವಾ ಸ್ವಸ್ತಿಕವನ್ನು ಬಿಡಿಸಿ ಅದರ ಮೇಲೆ ಲಕ್ಷ್ಮೀಯ ಮೂರ್ತಿಯನ್ನು ಸ್ಥಾಪಿಸುತ್ತಾರೆ.

Read more

ಶರೀರಕ್ಕೆ ಉಟಣೆ ಹಚ್ಚುವ ಪದ್ಧತಿ

utane-laavne

ಉಟಣೆಯು ರಜೋಗುಣ ಮತ್ತು ತೇಜತತ್ತ್ವಕ್ಕೆ ಸಂಬಂಧಿಸಿದೆ. ಶರೀರದ ಮೇಲೆ ದಕ್ಷಿಣಾವರ್ತ ಅಂದರೆ ಗಡಿಯಾರದ ಮುಳ್ಳಿನ ದಿಕ್ಕಿನಂತೆ ಉಟಣೆಯನ್ನು ಹಚ್ಚಿಕೊಳ್ಳಬೇಕು. ಕೈ ಬೆರಳುಗಳ ತುದಿಯು ಶರೀರವನ್ನು ಸ್ಪರ್ಷಿಸುವಂತೆ ಮತ್ತು ಶರೀರದ ಮೇಲೆ ಸ್ವಲ್ಪ ಒತ್ತಡ ಬರುವಂತೆ ನೋಡಬೇಕು. ೧. ಹಣೆ : ತರ್ಜನಿ, ಮಧ್ಯಮಾ ಮತ್ತು ಅನಾಮಿಕಾ ಈ ಬೆರಳು ಗಳಿಂದ ಹಣೆ ಮೇಲೆ ತಮ್ಮ ಎಡದಿಂದ ಬಲಕ್ಕೆ ಭಸ್ಮದಂತೆ ಉಟಣೆ ಹಚ್ಚಿಕೊಳ್ಳಬೇಕು. ಉಟಣೆ ಹಚ್ಚಿಕೊಳ್ಳುವಾಗ ಬಲದಿಂದ ಎಡಕ್ಕೆ ವಿರುದ್ಧ ದಿಕ್ಕಿನಲ್ಲಿ ಬೆರಳುಗಳನ್ನು ತಿರುಗಿಸಬಾರದು.

೨. ಹಣೆಯ ಎರಡೂ ಕಡೆಗೆ ಮತ್ತು ಹುಬ್ಬುಗಳ ಹೊರ ಭಾಗಕ್ಕೆ ಬೆರಳುಗಳ ಅಗ್ರ ಭಾಗವನ್ನಿಟ್ಟು ಅವುಗಳನ್ನು ಹಿಂದೆ ಮುಂದೆ ಸರಿಸಬೇಕು.

೩. ಕಣ್ಣು ರೆಪ್ಪೆ : ಮೂಗಿನಿಂದ ಕಿವಿಯೆಡೆಗೆ ಕೈಯನ್ನು ತಿರುಗಿಸುತ್ತಾ ಕಣ್ಣು ರೆಪ್ಪೆಯ ಮೇಲೆ ಉಟಣೆ ಯನ್ನು ಹಚ್ಚಬೇಕು.

Read more

ನರಕ ಚತುರ್ದಶಿ (ಅಕ್ಟೋಬರ್ ೨೯)

sri-krushna-merge-2011-3ಹಬ್ಬ ಆಚರಿಸುವ ಪದ್ಧತಿ

. ಆಕಾಶದಲ್ಲಿ ನಕ್ಷತ್ರಗಳಿರುವಾಗ ಬ್ರಾಹ್ಮೀ ಮಹೂರ್ತದಲ್ಲಿ ಅಭ್ಯಂಗ ಸ್ನಾನವನ್ನು ಮಾಡುತ್ತಾರೆ. ಉತ್ತರಣೆಯ ಗೆಲ್ಲಿನಿಂದ ತಲೆಯಿಂದ ಕಾಲುಗಳವರೆಗೆ ಮತ್ತು ಪುನಃ ಕಾಲುಗಳಿಂದ ತಲೆಯವರೆಗೆ ನೀರನ್ನು ಸಿಂಪಡಿಸಿಕೊಳ್ಳುತ್ತಾರೆ. ಇದಕ್ಕಾಗಿ ಬೇರಿರುವ ಉತ್ತರಣೆಯನ್ನು ಉಪಯೋಗಿಸುತ್ತಾರೆ.

. ಯಮತರ್ಪಣ : ಅಭ್ಯಂಗಸ್ನಾನದ ನಂತರ ಅಪಮೃತ್ಯುವಿನ ನಿವಾರಣೆಗಾಗಿ ಯಮತರ್ಪಣವನ್ನು ಮಾಡಬೇಕೆಂದು ಹೇಳಲಾಗಿದೆ. ಯಮತರ್ಪಣದ ವಿಧಿಯನ್ನು ಪಂಚಾಂಗ ದಲ್ಲಿ ಕೊಟ್ಟಿರುತ್ತಾರೆ. ಅದರಂತೆ ವಿಧಿಯನ್ನು ಮಾಡಬೇಕು. ಅನಂತರ ತಾಯಿಯು ಮಕ್ಕಳಿಗೆ ಆರತಿಯನ್ನು ಮಾಡುತ್ತಾಳೆ. ನರಕಾಸುರನ ವಧೆಯ ಪ್ರತೀಕವೆಂದು ಕೆಲವರು (ಮಹಾಲಿಂಗನ ಬಳ್ಳಿಯ) ಹಿಂಡ್ಲಚ್ಚಿ ಕಾಯಿಯನ್ನು ಕಾಲಿನಿಂದ ಜಜ್ಜಿ ಕಾಲಿನಿಂದಲೇ ಬಿಸಾಡುತ್ತಾರೆ. ಇನ್ನೂ ಕೆಲವರು ಅದರ ರಸವನ್ನು (ರಕ್ತವನ್ನು) ನಾಲಗೆಗೆ ಹಚ್ಚಿಕೊಳ್ಳುತ್ತಾರೆ.

Read more

ಯಮದೀಪದಾನ (ಅಕ್ಟೋಬರ್ ೨೮)

untitled-13

ಪ್ರಾಣಹರಣ ಮಾಡುವುದು ಯಮರಾಜನ ಕಾರ್ಯವಾಗಿದೆ. ಕಾಲ ಮೃತ್ಯುವು ಯಾರಿಗೂ ತಪ್ಪಿಲ್ಲ ಮತ್ತು ಅದನ್ನು ತಪ್ಪಿಸಲೂ ಸಾಧ್ಯವಿಲ್ಲ. ಆದರೆ ಅಕಾಲ ಮೃತ್ಯುವು ಯಾರಿಗೂ ಬರಬಾರದೆಂದು ಧನ ತ್ರಯೋದಶಿಯಂದು ಯಮಧರ್ಮನಿಗೆ ಕಣಕದಿಂದ ತಯಾರಿಸಿದ ಎಣ್ಣೆಯ ದೀಪವನ್ನು (ಹದಿಮೂರು ದೀಪಗಳನ್ನು) ತಯಾರಿಸಿ ಸಂಜೆಯ ಹೊತ್ತಿನಲ್ಲಿ ಮನೆಯ ಹೊರಗೆ ದಕ್ಷಿಣಕ್ಕೆ ಮುಖ ಮಾಡಿಡಬೇಕು. ಇತರ ಯಾವುದೇ ದಿನದಂದು ದೀಪವನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಇಡುವುದಿಲ್ಲ. ಈ ದಿನ ಮಾತ್ರ ದೀಪವನ್ನು ದಕ್ಷಿಣಕ್ಕೆ ಮುಖ ಮಾಡಿಡಬೇಕು. ಅನಂತರ ಮುಂದಿನ ಮಂತ್ರದಿಂದ ಪ್ರಾರ್ಥನೆ ಮಾಡಬೇಕು.

Read more

ದೀಪಾವಳಿ ಶಬ್ದದ ಅರ್ಥ

ದೀಪಾವಳಿ ಶಬ್ದದ ಅರ್ಥ ದೀಪಾವಳಿ ಎನ್ನುವ ಶಬ್ದವು ದೀಪ+ಆವಳಿ ಹೀಗೆ ರೂಪುಗೊಂಡಿದೆ. ಇದರ ಅರ್ಥ ದೀಪಗಳ ಸಾಲು ಎಂದಾಗಿದೆ. ದೀಪಾವಳಿಯಂದು ಎಲ್ಲೆಡೆಯೂ ದೀಪಗಳನ್ನು ಹಚ್ಚುತ್ತಾರೆ. ಆಶ್ವಯುಜ ಕೃಷ್ಣ ಪಕ್ಷ ತ್ರಯೋದಶಿ (ಧನತ್ರಯೋದಶಿ), ಆಶ್ವಯುಜ ಕೃಷ್ಣ ಪಕ್ಷ ಚತುರ್ದಶಿ (ನರಕ ಚತುರ್ದಶಿ), ಆಶ್ವಯುಜ ಅಮಾವಾಸ್ಯೆ (ಲಕ್ಷ್ಮೀಪೂಜೆ) ಹಾಗೂ ಕಾರ್ತಿಕ ಶುಕ್ಲ ಪಕ್ಷ ಪ್ರತಿಪದೆ (ಬಲಿಪಾಡ್ಯ) ಹೀಗೆ ನಾಲ್ಕು ದಿನ ದೀಪಾವಳಿಯನ್ನು ಆಚರಿಸಲಾಗು ತ್ತದೆ. ಕೆಲವರು ತ್ರಯೋದಶಿಯನ್ನು ದೀಪಾವಳಿಯೆಂದು ಪರಿಗಣಿಸದೇ ಉಳಿದ ಮೂರು ದಿನ ಇರುತ್ತದೆ ಎಂದು ತಿಳಿಯುತ್ತಾರೆ. ಗೋವತ್ಸದ್ವಾದಶಿ … Read more