ಪ.ಪೂ. ಭಕ್ತರಾಜ ಮಹಾರಾಜರು ಹೇಳಿದ ಸಂತಸಂಗದ ಮಹತ್ವ !

ಕೇವಲ ಭಜನೆಗಳನ್ನು ಕೇಳುತ್ತಿರಿ. ಅದು ತಿಳಿಯದಿದ್ದರೂ ಪರವಾಗಿಲ್ಲ. ಒಂದು ವೇಳೆ ಭಜನೆಗಳನ್ನು ಕೇಳುತ್ತ ಮಲಗಿದರೂ ಪರವಾಗಿಲ್ಲ; ಆದರೆ ನನ್ನ ಜೊತೆಯಲ್ಲಿರಿ. ಸಂತಸಂಗದಲ್ಲಿರುವುದರಿಂದ ಒಮ್ಮೆಯಾದರೂ ದೇವರ ಗಮನವು ನಿಮ್ಮ ಕಡೆಗೆ ಬರುವುದು ಮತ್ತು ಅವನು ನಿಮ್ಮನ್ನು ಜಾಗೃತಗೊಳಿಸುವನು ಎಂದರು.

ಸಾಧಕರೇ, ಸಾಧನೆಯ ದೊಡ್ಡ ಅಡಚಣೆಯಾಗಿರುವ ನಕಾರಾತ್ಮಕತೆಯನ್ನು ದೂರಗೊಳಿಸಿರಿ ಮತ್ತು ಸಕಾರಾತ್ಮಕರಾಗಿದ್ದು ಜೀವನದಲ್ಲಿ ಆನಂದವನ್ನು ಪ್ರಾಪ್ತಮಾಡಿಕೊಳ್ಳಿರಿ !

‘ಕಪ್ಪು ಬಣ್ಣದ ಕನ್ನಡಕ ಧರಿಸಿ ಸುಂದರ ಜಗತ್ತಿನ ಕಡೆಗೆ ನೋಡಿದರೆ, ಆ ವ್ಯಕ್ತಿಗೆ ಎಲ್ಲ ಜಗತ್ತು ಕಪ್ಪಾಗಿಯೇ ಕಾಣಿಸುತ್ತದೆ. ಸೃಷ್ಟಿಸೌಂದರ್ಯವೂ ಅವನಿಗೆ ಕಪ್ಪಾಗಿಯೇ ಕಾಣಿಸುತ್ತದೆ. ಆ ವ್ಯಕ್ತಿಗೆ ‘ದೇವರು ಜಗತ್ತಿನ ಪ್ರತಿಯೊಂದು ವಸ್ತುವನ್ನು ಪರೋಪಕಾರಕ್ಕಾಗಿ ನಿರ್ಮಿಸಿದ್ದಾನೆ’, ಎಂಬುದು ಗಮನಕ್ಕೆ ಬರುವುದಿಲ್ಲ.

ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಆಗಾಗ ಮಾಡಿದ ಮಾರ್ಗದರ್ಶನ

ಮನೆಯಲ್ಲಿ ಎಲ್ಲ ಮಾಯೆಯ ವಿಷಯಗಳಿರುತ್ತವೆ. ದೂರದರ್ಶನ (ಟಿ.ವಿ.) ಇರುತ್ತದೆ. ಆಶ್ರಮದಲ್ಲಿ ಏನೂ ಇರುವುದಿಲ್ಲ. ಇಲ್ಲಿ ೨೪ ಗಂಟೆ ಸಾಧನೆಯ ವಿಚಾರಗಳೇ ಇರುತ್ತವೆ. ನಾವು ಬೇಗಬೇಗನೇ ಕಲಿತು ಇತರರಿಗೆ ಕಲಿಸಬೇಕು. ಯಾರು ಒಳ್ಳೆಯ ಜನರಿದ್ದಾರೋ ಅವರಿಗೆ ಮಹಾಯುದ್ಧದ ಮೊದಲೇ ಸಾಧನೆ ತಿಳಿಯಬೇಕು.

ಸಾಧನೆಯಲ್ಲಿನ ಧ್ಯೇಯವನ್ನು ಸಾಧ್ಯಗೊಳಿಸುವಾಗ ಪುನಃ ಪುನಃ ವೈಫಲ್ಯ ಬಂದರೆ, ಏನು ಮಾಡಬೇಕು ?

ವೈಫಲ್ಯದ (ವಿಫಲ) ಹಿಂದಿನ ಕಾರಣಗಳನ್ನು ಹುಡುಕಬೇಕು. ಶಾರೀರಿಕ, ಮಾನಸಿಕ ಅಥವಾ ಆಧ್ಯಾತ್ಮಿಕ ಇವುಗಳಲ್ಲಿ ನಿರ್ದಿಷ್ಟವಾಗಿ ಯಾವ ಕಾರಣವಿದೆ, ಎಂಬುದರ ಬಗ್ಗೆ ಚಿಂತನೆಯನ್ನು ಮಾಡಬೇಕು ಮತ್ತು ಆ ಕಾರಣಕ್ಕನುಸಾರ ಯೋಗ್ಯ ಉಪಾಯ ಯೋಜನೆಯನ್ನು ಮಾಡಬೇಕು.

ಸಾಧಕರೇ, ಸಾಧನೆಯ ದೊಡ್ಡ ಅಡಚಣೆಯಾಗಿರುವ ನಕಾರಾತ್ಮಕತೆಯನ್ನು ದೂರಗೊಳಿಸಿರಿ ಮತ್ತು ಸಕಾರಾತ್ಮಕರಾಗಿದ್ದು ಜೀವನದಲ್ಲಿ ಆನಂದವನ್ನು ಪ್ರಾಪ್ತಮಾಡಿಕೊಳ್ಳಿರಿ !

ಆಲಸ್ಯವಿರುವ ಮನುಷ್ಯನಿಗೆ ವಿದ್ಯೆ ಸಿಗುವುದಿಲ್ಲ. ವಿದ್ಯೆ, ಕಲೆ ಮತ್ತು ಜ್ಞಾನ ಇವುಗಳ ಅಭಾವವಿರುವ ವ್ಯಕ್ತಿಗೆ ಧನಪ್ರಾಪ್ತಿಯಾಗುವುದಿಲ್ಲ. ಯಾರ ಬಳಿ ಧನವಿಲ್ಲವೋ, ಅವನಿಗೆ ಎಲ್ಲಿಂದ ಸುಖ ಸಿಗುವುದು ? ದುಃಖದಿಂದ ಬಳಲುವ ವ್ಯಕ್ತಿಯು ಸಕಾರಾತ್ಮಕವಾಗಿರಲು ಸಾಧ್ಯವಿಲ್ಲ. ಆ ವ್ಯಕ್ತಿಯು ಎಲ್ಲರ ಮೇಲೆ ಸಿಟ್ಟು ಮಾಡುತ್ತಾನೆ. ನಕಾರಾತ್ಮಕ ವಿಚಾರಗಳಿಂದಾಗಿ ಆ ವ್ಯಕ್ತಿಯು ತನ್ನ ಮೇಲೆ ಮತ್ತು ಇತರರ ಮೇಲೆ ಸಿಡಿಮಿಡಿಗೊಳ್ಳುತ್ತಾನೆ.

ದೇವತೆಗಳ ಉಪಾಸನೆ ಮತ್ತು ಶಾಸ್ತ್ರವನ್ನು ಕಲಿಸುವ ಸನಾತನ ಗ್ರಂಥ

ಸ್ತೋತ್ರದಲ್ಲಿ ದೇವತೆಯ ಸ್ತುತಿಯೊಂದಿಗೆ ಅದನ್ನು ಪಠಿಸುವವರ ಸುತ್ತಲೂ ರಕ್ಷಾಕವಚ ನಿರ್ಮಿಸುವ ಶಕ್ತಿಯೂ ಇರುತ್ತದೆ. ಸ್ತೋತ್ರದ ಫಲಶ್ರುತಿಯ ಹಿಂದೆ ಅದನ್ನು ರಚಿಸುವವರ ಸಂಕಲ್ಪವಿರುವುದರಿಂದ ಸ್ತೋತ್ರಪಠಣದಿಂದ ಇಚ್ಛಾಪೂರ್ತಿ, ಐಶ್ವರ್ಯ, ಪಾಪನಾಶ ಮುಂತಾದ ಫಲಪ್ರಾಪ್ತಿಯಾಗುತ್ತದೆ. ಆದುದರಿಂದ ಅರ್ಥವನ್ನು ತಿಳಿದುಕೊಂಡು ಸ್ತೋತ್ರಗಳನ್ನು ಪಠಿಸಿ !

ಪೂ. ರಾಧಾ ಪ್ರಭು ಇವರು ಬಾಲಸಂತ ಪೂ. ಭಾರ್ಗವರಾಮರಿಗೆ ರಾಜಣ್ಣ (ಚಾಲಕ) ಮತ್ತು ಅವರ ಎತ್ತಿನ ಬಂಡಿಯ ಕಥೆಯನ್ನು ಹೇಳುವುದು

‘ಪೂ. ರಾಧಾ ಅಜ್ಜಿ (ಪೂ. ರಾಧಾ ಪ್ರಭು) ಪೂ. ಭಾರ್ಗವರಾಮರಿಗೆ ವಿವಿಧ ಚಿತ್ರಗಳ ಮತ್ತು ಕಥೆಗಳ ಮೂಲಕ ಕಲಿಸುತ್ತಿರುತ್ತಾರೆ. ಪೂ. ಭಾರ್ಗವರಾಮರಿಗೆ ಒಳ್ಳೆಯ ಸಂಸ್ಕಾರವಾಗಬೇಕೆಂದು ಅವರಿಗೆ ಸಾಧನೆಯನ್ನು ಕಲಿಸುವ ಅವರ ತಳಮಳವನ್ನು ನೋಡಿದರೆ ಭಾವಜಾಗೃತಿಯಾಗುತ್ತದೆ.

ಮಂಗಳೂರಿನ ಶ್ರೀ. ಗುರುಪ್ರಸಾದ ಗೌಡ ಇವರಿಗೆ ಧರ್ಮಪ್ರೇಮಿಗಳಿಂದ ಕಲಿಯಲು ಸಿಕ್ಕಿರುವ ಅಂಶಗಳು

ಧರ್ಮಪ್ರೇಮಿಗಳಿಗೆ ಪೂ. ರಮಾನಂದ ಗೌಡ ಇವರ ಮಾರ್ಗದರ್ಶನ ಸಿಗುತ್ತದೆ, ಆಗ ಅವರು ಸಂತರ ಮಾರ್ಗದರ್ಶನದ ಲಾಭವನ್ನು ಮಾಡಿಕೊಳ್ಳುತ್ತಾರೆ ಮತ್ತು ಅವರ ಚೈತನ್ಯಮಯ ವಾಣಿಯಿಂದ ಅವರಿಗೆ ಸಾಧನೆಯನ್ನು ಮಾಡಲು ಸ್ಫೂರ್ತಿ ಸಿಗುತ್ತದೆ.

ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಆಗಾಗ ಮಾಡಿದ ಮಾರ್ಗದರ್ಶನ

ಸಾಧಕನು ಪ್ರಾರಬ್ಧವನ್ನು ನಾಶ ಮಾಡುವುದಕ್ಕಾಗಿಯೇ ಸಾಧನೆಯನ್ನು ಮಾಡುತ್ತಾನೆ, ಇಲ್ಲದಿದ್ದರೆ ಸಾಧನೆಯನ್ನು ಏಕೆ ಮಾಡಬೇಕು ? ಸಂಪೂರ್ಣ ಜೀವನ ‘ಪ್ರಾರಬ್ಧ, ಪ್ರಾರಬ್ಧ’ ಎಂದು ಜಪ ಮಾಡಿದರೆ. ಅದಕ್ಕೆ ಯಾವ ಬೆಲೆಯೂ ಇಲ್ಲ. ಅದಕ್ಕೆ ಏನೂ ಅರ್ಥವಿಲ್ಲ !

ಇತರ ಸಂತರ ಭಕ್ತರು ಮತ್ತು ಸನಾತನದ ಸಾಧಕರು

ಹೆಚ್ಚಾಗಿ ಸಂತರ ಬಳಿಗೆ ಬರುವ ಅವರ ನೂರಾರು, ಸಾವಿರಾರು ಭಕ್ತರು ಮಾಯೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲು ಬರುತ್ತಾರೆ. ಸನಾತನದ ಸಾವಿರಾರು ಸಾಧಕರು ಮಾಯೆಗೆ ಸಂಬಂಧಿಸಿದ ಒಂದೂ ಪ್ರಶ್ನೆಯನ್ನು ಕೇಳುವುದಿಲ್ಲ. ಅವರು ಕೇಳುವ ಪ್ರಶ್ನೆಗಳೂ, ಕೇವಲ ಸಾಧನೆಯಲ್ಲಿ ಮುಂದೆ ಹೋಗುವ ಕುರಿತದ್ದಾಗಿರುತ್ತವೆ.