ಭಾರತ ವಿರೋಧಿ ನೇಪಾಳ ಸರಕಾರವನ್ನು ವಿರೋಧಿಸಿದ್ದಕ್ಕಾಗಿ ನೇಪಾಳದ ಸಂಸದೆ ಸರಿತಾ ಗಿರಿ ಅವರಿಗೆ ಅಭಿನಂದನೆಗಳು !

ನೇಪಾಳ ಸರಕಾರವು ಸಂಸತ್ತಿನಲ್ಲಿ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿತು. ಭಾರತದ ಲಿಪುಲೇಖ, ಕಾಲಾಪಾನಿ ಮತ್ತು ಲಿಂಪಿಯಾಧುರಾ ಈ ಮೂರು ಭಾಗಗಳನ್ನು ತನ್ನ ಹೊಸ ನಕಾಶೆಯಲ್ಲಿ ತೋರಿಸಿದೆ. ನೇಪಾಳದ ಮಹಿಳಾ ಸಂಸದೆ ಸರಿತಾ ಗಿರಿ ಅವರು ವಿರೋಧಿಸಿದ ನಂತರ ಅವರ ಮನೆಯ ಮೇಲೆ ಹಲ್ಲೆ ನಡೆಸಲಾಯಿತು.

ಗೂಗಲ್‌ನ ಚೀನಾದ ಪ್ರೇಮ ಮತ್ತು ಭಾರತದ್ವೇಷವನ್ನು ತಿಳಿಯಿರಿ !

ಗೂಗಲ್ ತನ್ನ ‘ಪ್ಲೇ ಸ್ಟೋರ್ನಿಂದ ‘ರಿಮೂವ್ ಚೈನಾ ಆಪ್ ಅನ್ನು ತೆಗೆದು ಹಾಕಿದೆ, ಚೀನಾದ ವಿವಿಧ ‘ಅಪ್ಲಿಕೇಶನ್ಗಳ ವಿರುದ್ಧ ತಯಾರಿಸಲಾಗಿದ್ದ ಈ ‘ಆಪ್ ಕಳೆದ ಕೆಲವು ವಾರಗಳಲ್ಲಿ ೫೦ ಲಕ್ಷಕ್ಕೂ ಹೆಚ್ಚು ಜನರು ಡೌನ್‌ಲೋಡ್ ಮಾಡಿದ್ದಾರೆ.

ಅಧಿಕಾರದ ಆಸೆಯ ರಾಜಕಾರಣಿಗಳ ಸ್ವಾತಂತ್ರ್ಯವೀರ ಸಾವರಕರ ದ್ವೇಷವನ್ನು ತಿಳಿಯಿರಿ !

‘ಕರ್ನಾಟಕದ ದೇಶಭಕ್ತರ ಹೆಸರನ್ನು ಇತರ ರಾಜ್ಯಗಳಲ್ಲಿನ ಸೇತುವೆಗೆ ನೀಡಲಾಗಿದೆಯೇ ? ಹಾಗಾದರೆ ಯಲಹಂಕ ಸೇತುವೆಗೆ ಸಾವರಕರ ಇವರ ಹೆಸರನ್ನು ಏಕೆ ನೀಡಲಾಗುತ್ತಿದೆ ? ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಇವರು ಟ್ವೀಟರ್ ಮೂಲಕ ಪ್ರಶ್ನೆಯನ್ನು ಕೇಳಿದ್ದಾರೆ.

ಜಾತ್ಯತೀತವಾದಿಗಳು ಈಗ ಏಕೆ ಮೌನವಾಗಿದ್ದಾರೆ ?

ದಾವಣಗೆರೆಯಲ್ಲಿ ಈದ್‌ಗಾಗಿ ಹಿಂದೂ ಅಂಗಡಿಗಳಿಂದ ಸಾಹಿತ್ಯ ಖರೀದಿಸುತ್ತಿದ್ದ ಮುಸ್ಲಿಂ ಮಹಿಳೆಯರನ್ನು ಮತಾಂಧರು ನಿಂದಿಸುತ್ತಿರುವ ಕೆಲವು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿದೆ. ಒಬ್ಬ ಮತಾಂಧನು ಮಹಿಳೆಯ ಕೈಯಿಂದ ಚೀಲವನ್ನು ಕಸಿದುಕೊಂಡು ಅದನ್ನು ಎಸೆಯುವುದನ್ನು ಈ ವಿಡಿಯೋದಲ್ಲಿ ಕಾಣಿಸುತ್ತಿದೆ.

ಕೇರಳದಲ್ಲಿಯ ಸಾಮ್ಯವಾದಿ ಸರಕಾರದ ಹೊಸ ಷಡ್ಯಂತ್ರ !

ಕೇರಳದ ಸರಕಾರೀಕರಣ ಮಾಡಲಾಗಿದ್ದ ಗುರುವಾಯೂರ ದೇವಸ್ಥಾನದ ಸ್ಥಿರ ಠೇವಣಿಗಳಿಂದ ಕೊರೋನಾದ ವಿರುದ್ಧದ ಹೋರಾಟಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಸಹಾಯ ನಿಧಿಗೆ ೫ ಕೋಟಿ ರೂಪಾಯಿಗಳನ್ನು ಕೊಡಲು ಗುರುವಾಯೂರ ದೇವಸ್ಥಾನ ಸಮಿತಿಯು ನಿರ್ಧರಿಸಿದೆ. ಇದಕ್ಕೆ ಅಖಿಲ ಭಾರತೀಯ ಶಬರಿಮಲೆ ಕೃತಿ ಸಮಿತಿಯು ವಿರೋಧ ವ್ಯಕ್ತಪಡಿಸಿದೆ.

ಇಂತಹ ಘಟನೆಗಳು ಯಾವಾಗ ನಿಲ್ಲುವವು ?

ಸಂಚಾರ ನಿಷೇಧ (ಲಾಕ್‌ಡೌನ್) ಇರುವಾಗ ಬಂಗಾಲದ ಹಾವಡಾದಲ್ಲಿಯ ಮತಾಂಧರು ಬಹುಸಂಖ್ಯೆಯಲ್ಲಿರುವ ಟಿಕಿಯಾಪಾಡಾ ಪ್ರದೇಶದಲ್ಲಿ ಮತಾಂಧರು ಪೊಲೀಸರ ಮೇಲೆ ಹಲ್ಲೆ ನಡೆಸಿದರು. ಮತಾಂಧರು ಪೊಲೀಸರನ್ನು ಥಳಿಸುತ್ತ ಅವರ ಮೇಲೆ ಕಲ್ಲು ತೂರಾಟ ಮಾಡಿದರು. ಇದರಲ್ಲಿ ಇಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡರು. ಪೊಲೀಸರ ೨ ವಾಹನಗಳನ್ನೂ ಧ್ವಂಸ ಗೊಳಿಸಲಾಯಿತು.

ಕಾಂಗ್ರೆಸ್ ನಾಯಕರ ನಿಜ ಸ್ವರೂಪವನ್ನು ತಿಳಿಯಿರಿ !

ಹರಿಯಾಣಾದಲ್ಲಿ ಕಾಂಗ್ರೆಸ್ಸಿನ ರಾಷ್ಟ್ರೀಯ ಮುಖ್ಯಕಾರ್ಯದರ್ಶಿಗಳಾದ ಶ್ರವಣ ರಾವ ಇವರನ್ನು ಮದ್ಯದ ಕಳ್ಳಸಾಗಾಣಿಕೆ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದೆ. ಅವರ ವಾಹನದ ಮೇಲೆ ಅಗತ್ಯ ಸೇವೆಯ ಪಾಸ್ ಅಂಟಿಸಲಾಗಿತ್ತು. ಅಂದರೆ ಅವರು ಈ ಪಾಸ್‌ನ ಆಧಾರದಲ್ಲಿ ಮದ್ಯದ ಸಾಗಾಣಿಕೆ ಮಾಡುತ್ತಿದ್ದರು ಎಂಬುದು ಸ್ಪಷ್ಟವಾಗುತ್ತದೆ.