ಬಂಗಾಲದ ಹಿಂದುತ್ವನಿಷ್ಠ ನಾಯಕ ತಪನ ಘೋಷ ನಿಧನ

ಬಂಗಾಲದ ಹಿಂದುತ್ವನಿಷ್ಠ ಸಂಘಟನೆಯಾದ ‘ಹಿಂದೂ ಸಂಹತಿ’ಯ ಸಂಸ್ಥಾಪಕ, ‘ಸಿಂಹ ವಾಹಿನಿ’ಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಹಿಂದುತ್ವದ ಬಗ್ಗೆ ಅಂತರರಾಷ್ಟ್ರೀಯ ಮಟ್ಟದ ಅಭ್ಯಾಸಕರಾದ ತಪನ ಘೋಷ ಇವರು ಕೊರೋನಾದ ಸೋಂಕಿನಿಂದ ನಿಧನರಾದರು. ಅವರು ೨೦೦೭ ರಲ್ಲಿ ‘ಹಿಂದೂ ಸಂಹತಿ’ಯ ಸ್ಥಾಪನೆಯನ್ನು ಮಾಡಿದ್ದರು. ಬಂಗಾಲದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯದ ವಿರುದ್ಧ ಸದಾ ಧ್ವನಿ ಎತ್ತುತ್ತಿದ್ದರು.

ಸನಾತನದ ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಲು ಸಹಾಯ ಮಾಡಬೇಕಾಗಿ ವಿನಂತಿ !

ಗ್ರಂಥ ನಿರ್ಮಿತಿ ಪ್ರಕ್ರಿಯೆಯು ನಿರಂತರವಾಗಿ ನಡೆಯುತ್ತಿದ್ದು ಮೇ ೨೦೨೦ ರ ವರೆಗೆ ಸನಾತನದ ೩೨೩ ಗ್ರಂಥಗಳ ೧೭ ಭಾಷೆಗಳಲ್ಲಿ ೭೯,೮೧,೦೦೦ ಪ್ರತಿಗಳನ್ನು ಪ್ರಕಟಿಸಲಾಗಿದ್ದು, ಇನ್ನೂ ೮೦೦೦  ಗ್ರಂಥಗಳನ್ನು ಪ್ರಕಟಿಸುವಷ್ಟು ಜ್ಞಾನ ಸಂಗ್ರಹವಾಗಿದೆ.

ಪರಾತ್ಪರ ಗುರು ಡಾ. ಆಠಲೆಯವರ ಮನಸ್ಸಿನಲ್ಲಿ ಬರುವ ಒಂದು ವಿಚಾರ

‘ಎಲ್ಲ ಕಡೆಗೆ ನನ್ನ ಹೆಸರು ಬರಬೇಕು ಅಥವಾ ಪ್ರಸಿದ್ಧಿ ಸಿಗಬೇಕು, ಎಂಬಂತಹ ವಿಚಾರಗಳೇ ನನ್ನ ಮನಸ್ಸಿನಲ್ಲಿ ಬರುವುದಿಲ್ಲ. ಹೀಗಿರುವಾಗ, ‘ಈಗ ಉಳಿದಿರುವುದು ಪರೋಪಕಾರಕ್ಕಾಗಿ’, ಎಂಬ ಸಂತ ತುಕಾರಾಮ ಮಹಾರಾಜರ ವಚನದಂತೆ ನಾನು ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಯಾರೆಲ್ಲ ನನಗೆ ಸಹಾಯ ಮಾಡಿರುವರೋ, ಅದರ ಅಂಶದಷ್ಟಾದರೂ ಆಗಲಿ, ಆ ಋಣವನ್ನು ತೀರಿಸಲು ನಾನು ಬಾಧ್ಯನಾಗಿದ್ದೇನೆ.

ಪ್ರಗತಿಪರ(ಅಧೋಗತಿ) ಪತ್ರಕರ್ತ ರಾಜದೀಪ ಸರದೇಸಾಯಿ ಅವರ ಹಿಂದೂದ್ವೇಷವನ್ನು ತಿಳಿಯಿರಿ !

ಮಹಾರಾಷ್ಟ್ರದ ಖ್ಯಾತ ‘ಲಾಲ್‌ಬಾಗ್‌ನ ರಾಜ (ಅಂದರೆ ಗಣೇಶಮೂರ್ತಿ) ಈ ವರ್ಷ ಬರುವುದಿಲ್ಲ. ಕೊರೋನಾದಿಂದಾಗಿ ಮುಂಬೈನಲ್ಲಿ ಅನೇಕ ವರ್ಷಗಳ ಹಳೆಯ ಪರಂಪರೆಯು ನಿಂತಿತು. ಯೋಚಿಸಿ, ಸಾಂಕ್ರಾಮಿಕತೆಯ ಮುಂದೆ ದೇವರು ಸಹ ಸೋಲೊಪ್ಪಿದ್ದಾನೆ’ ಎಂದು ಪತ್ರಕರ್ತ ರಾಜದೀಪ ಸರದೇಸಾಯಿ ಟ್ವೀಟ್ ಮಾಡಿದ್ದಾರೆ.

ಜಾಗತಿಕ ಖ್ಯಾತಿಯ ಇತಿಹಾಸಕಾರನಿಗೆ ತಿಳಿದ ಭಾರತದ ಮಹತ್ವ !

ಭಾರತೀಯ ಸಂಸ್ಕೃತಿ ಇದು ಅದರ ಪ್ರಚಂಡವಾದ ವಾಙ್ಮಯ, ಅದು ಹಿಡಿದಿರುವ ವಿಜ್ಞಾನದ ಹಿಡಿತ, ಆತ್ಮಶೋಧದ ಮಾಡಿರುವ ಶ್ರೇಷ್ಠ ಪ್ರಯತ್ನ, ಜೀವಕ್ಕೆ ಸ್ಪರ್ಶಿಸುವ ಅದರ ಸಂಗೀತ ಮತ್ತು ಭಯಚಕಿತಗೊಳಿಸುವ ಅದರಲ್ಲಿಯ ಈಶ್ವರನ ರೂಪಗಳು ಇವುಗಳಿಂದ ಸಮೃದ್ಧವಾಗಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಹಿಂದೂ ರಾಷ್ಟ್ರದ ಸ್ಥಾಪನೆ ಇದು ಸನಾತನ ಪ್ರಭಾತದ ಧ್ಯೇಯ ವಾಕ್ಯವಾಗಿದೆ ಅದು ಕೇವಲ ಶೋಭೆಗಾಗಿ ಅಲ್ಲದೇ ಅದು ಕೃತಿಗೆ ತರುವಂತಹುದು ಆಗಿದೆ. ಸನಾತನ ಪ್ರಭಾತದ ವಾಚಕರು ಈ ಹಿಂದೂ ರಾಷ್ಟ್ರದ ವೈಚಾರಿಕ ಶಕ್ತಿ ಯಾಗಿದ್ದಾರೆ ಈ ಶಕ್ತಿಯು ಈಗ ಸಕ್ರಿಯವಾಗುವುದು ಕಾಲದ ಆವಶ್ಯಕತೆಯಾಗಿದೆ.

ಘಾಟಶಿಲಾ (ಝಾರಖಂಡ) ಇಲ್ಲಿನ ಶಾಲೆಯಲ್ಲಿ ಶಿಶುವರ್ಗದ ಮಕ್ಕಳಿಗೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ರಾಷ್ಟ್ರಗೀತೆಯ ಬಾಯಿಪಾಠ ಮಾಡಿಸುತ್ತಿರುವುದು ಪೋಷಕರ ವಿರೋಧದ ನಂತರ ರದ್ದು

ಇಲ್ಲಿ ಸಂತ ನಂದಲಾಲ ಸ್ಮೃತಿ ವಿದ್ಯಾ ಮಂದಿರ ಶಾಲೆಯಲ್ಲಿ ಸಣ್ಣ ಹಾಗೂ ದೊಡ್ಡ ಶಿಶುವರ್ಗದ ಮಕ್ಕಳ ಬೇರೆ ಬೇರೆ ಗುಂಪುಗಳನ್ನು ಮಾಡಿ ಭಾರತ ಸಹಿತ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ರಾಷ್ಟ್ರಗೀತೆಯನ್ನು ಬಾಯಿಪಾಠ ಮಾಡಲು ಹೇಳಲಾಗಿತ್ತು. ಇದರಿಂದ ಮಕ್ಕಳ ಪೋಷಕರು ಇದರ ಬಗ್ಗೆ ಆಕ್ಷೇಪವೆತ್ತಿ ಶಾಲೆಯ ಆಡಳಿತಮಂಡಳಿಗೆ ‘ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ರಾಷ್ಟ್ರಗೀತೆಯನ್ನು ಕಲಿಸಬಾರದು’, ಎಂದು ಹೇಳಿದ್ದಾರೆ.

ಕರ್ನಾಟಕ ರಾಜ್ಯ ಭಾಜಪ ಸರಕಾರ ಶೀಘ್ರದಲ್ಲೇ ಗೋಹತ್ಯಾ ನಿಷೇಧ ಕಾನೂನನ್ನು ಜಾರಿಗೆ ತರಲಿದೆ

ಕರ್ನಾಟಕದಲ್ಲಿ ಶೀಘ್ರದಲ್ಲೇ ಗೋಹತ್ಯೆ, ಗೋಮಾಂಸ ಮಾರಾಟ, ಕಸಾಯಿಖಾನೆಗಾಗಿ ಗೋವುಗಳ ಸಾಗಾಟ ಹಾಗೂ ಮಾರಾಟದ ಮೇಲೆ ನಿರ್ಬಂಧ ಹೇರಲಿದೆ, ಎಂಬ ಮಾಹಿತಿಯನ್ನು ಪಶುಸಂಗೋಪಾಸನೆ ರಾಜ್ಯ ಸಚಿವ ಪ್ರಭು ಚೌಹಾಣ ಇವರು ನೀಡಿದರು. ಭಾಜಪ ತನ್ನ ಚುನಾವಣೆಯ ಪ್ರಣಾಳಿಕೆಯಲ್ಲಿ ಗೋ ಹತ್ಯಾ ನಿಷೇಧ ಮಾಡುವ ಆಶ್ವಾಸನೆಯನ್ನು ನೀಡಿತ್ತು.

ಚೀನಾದ ವಿರುದ್ಧ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಸಹಾಯ ಮಾಡುತ್ತಾರೆಂದು ಖಚಿತವಾಗಿ ಹೇಳಲಾಗದು ! – ಜಾನ್ ಬೊಲ್ಟನ್, ಅಮೇರಿಕಾದ ಮಾಜಿ ರಾಷ್ಟ್ರೀಯ ಸುರಕ್ಷೆಯ ಸಲಹೆಗಾರ

ಚೀನಾದ ವಿರುದ್ಧ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಸಹಾಯ ಮಾಡುವರು, ಎಂಬುದನ್ನು ಖಚಿತವಾಗಿ ಹೇಳಲಾಗದು, ಎಂದು ಅಮೇರಿಕಾದ ಮಾಜಿ ರಾಷ್ಟ್ರೀಯ ಸುರಕ್ಷೆಯ ಸಲಹೆಗಾರ ಜಾನ್ ಬೊಲ್ಟನ್ ಇವರು ಒಂದು ವಾರ್ತಾವಾಹಿನಿಯಲ್ಲಿ ಮಾತನಾಡುತ್ತಾ ಹೇಳಿದ್ದಾರೆ. ಬೋಲ್ಟ್ ಇವರು ಎಪ್ರಿಲ್ ೨೦೧೮ ರಿಂದ ಸೆಪ್ಟೆಂಬರ್ ೨೦೧೯ ಈ ಕಾಲಾವಧಿಯಲ್ಲಿ ಟ್ರಂಪ್ ಸರಕಾರದಲ್ಲಿ ಮುಖ್ಯ ಭದ್ರತಾ ಸಲಹೆಗಾರರಾಗಿದ್ದರು.

ಪಾಕಿಸ್ತಾನದ ಸೈದಪುರದಲ್ಲಿಯ ಪ್ರಾಚೀನ ರಾಮಮಂದಿರದಲ್ಲಿ ಹಿಂದೂಗಳಿಗೆ ಪೂಜೆ ಅರ್ಚನೆ ಮಾಡಲು ನಿರ್ಬಂಧ !

ಇಲ್ಲಿಯ ಸೈದಪುರ ಈ ಗ್ರಾಮದಲ್ಲಿ ಮರ್ಗಲ್ಲಾಹ ಗುಡ್ಡದ ಅಡಿಯಲ್ಲಿರುವ ಒಂದು ಪ್ರಾಚೀನ ರಾಮನ ದೇವಸ್ಥಾನದಲ್ಲಿ ಹಿಂದೂಗಳಿಗೆ ಪೂಜೆ-ಅರ್ಚನೆ ಮಾಡಲು ನಿರ್ಬಂಧ ಹೇರಿದೆ. ಈ ದೇವಸ್ಥಾನದ ದರ್ಶನಕ್ಕಾಗಿ ಭಕ್ತಾದಿಗಳು ದೂರದಿಂದ ಬರುತ್ತಾರೆ; ಆದರೆ ಅವರಿಗೆ ಪೂಜೆ ಮಾಡಲು ಆಗದೇ ಮರಳಿ ಹೋಗಬೇಕಾಗುತ್ತಿದೆ.