ಎಲ್ಲ ಅರ್ಪಣೆದಾರರಿಗೆ ಅನ್ನದಾನ ಮಾಡುವ ಅಮೂಲ್ಯ ಅವಕಾಶ !

‘ಸದ್ಭಾವನೆಯಿಂದ ‘ಸತ್ಪಾತ್ರೆ ಅನ್ನದಾನ ಮಾಡಿದರೆ ಅನ್ನದಾನಕ್ಕೆ ಯೋಗ್ಯ ಫಲ ಸಿಗುತ್ತದೆ ಹಾಗೂ ಎಲ್ಲ ಪಾಪ ಕರ್ಮಗಳಿಂದ ಮುಕ್ತನಾಗಿ ಅವನು ಈಶ್ವರನ ಸಮೀಪಕ್ಕೆ ಹೋಗುತ್ತಾನೆ, ಎಂದು ಧರ್ಮಶಾಸ್ತ್ರವು ಹೇಳುತ್ತದೆ. ಅನ್ನದಾನ ಮಾಡಿದರೆ ಅನ್ನದಾನ ಮಾಡುವ ವ್ಯಕ್ತಿಗೆ ಆಧ್ಯಾತ್ಮಿಕ ಸ್ತರದಲ್ಲಿಯೂ ಲಾಭವಾಗುತ್ತದೆ.

ಸಾಧಕರಿಗೆ ಸೂಚನೆ, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

ಆಪತ್ಕಾಲದಲ್ಲಿ ಪೆಟ್ರೋಲ್, ಡೀಸೆಲ್ ಮುಂತಾದ ಇಂಧನಗಳ ಕೊರತೆಯಾಗುವ ಸಾಧ್ಯತೆಯಿರುವುದರಿಂದ ಇಂಧನ ರಹಿತ ಸೈಕಲ್‌ಅನ್ನು ಆಯ್ಕೆ ಮಾಡಿ ಸೈಕಲ್ ಇಂಧನವಿಲ್ಲದ ಸಾರಿಗೆ ಸಾಧನವಾಗಿದೆ. ಸೈಕಲ್ ಓಡಿಸಿದರೆ ವ್ಯಾಯಾಮವಾಗುತ್ತದೆ ಹಾಗೂ ಅದನ್ನು ಓಡಿಸುವುದು ವ್ಯಕ್ತಿಗತ ಆರೋಗ್ಯಕ್ಕೆ ಲಾಭದಾಯಕವಾಗಿದೆ.

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಸಂಶೋಧನೆಗಳ ಚಿತ್ರೀಕರಣಕ್ಕಾಗಿ ಹೊಸ ಉಪಕರಣಗಳ ಆವಶ್ಯಕತೆ !

‘ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ವೈಶಿಷ್ಟ್ಯಪೂರ್ಣ ಘಟನೆಗಳ ಚಿತ್ರೀಕರಣವನ್ನು ಮಾಡಿ ಸಂಶೋಧನಾತ್ಮಕ ಅಧ್ಯಯನವನ್ನು ಮಾಡಲಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಚಿತ್ರೀಕರಣ ಮಾಡಿದರೆ ಅದು ಮುಂದಿನ ಕಾಲಕ್ಕಾಗಿ ಹೆಚ್ಚು ಉಪಯುಕ್ತವಾಗುತ್ತದೆ. ಆದ್ದರಿಂದ ಆಶ್ರಮದಲ್ಲಿ ಕೆಳಗೆ ಕೊಡಲಾದ ಹೊಸ ಉಪಕರಣಗಳ ಆವಶ್ಯಕತೆ ಇದೆ.

ಹಿಂದುತ್ವನಿಷ್ಠರ ರಕ್ಷಣೆ ಯಾವಾಗ ಆಗಲಿದೆ ?

ಮಧ್ಯಪ್ರದೇಶದ ಶಿವಸೇನೆಯ ಮಾಜಿ ರಾಜ್ಯಮುಖ್ಯಸ್ಥ ರಮೇಶ ಸಾಹು ಇವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಗೋಲಿಬಾರ್‌ನಲ್ಲಿ ಅವರ ಪತ್ನಿ ಮತ್ತು ಮಗಳು ಗಾಯಗೊಂಡರು. ಈ ಹತ್ಯೆಗೆ ಹಳೆಯ ವಿವಾದ ಕಾರಣ ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಆಂಧ್ರಪ್ರದೇಶದಲ್ಲಿ ದೇವಸ್ಥಾನಗಳ ಮೇಲಾಗುತ್ತಿರುವ ದಾಳಿ ಹಾಗೂ ದೇವಸ್ಥಾನದ ರಥವನ್ನು ಸುಟ್ಟುಹಾಕಿದ್ದನ್ನು ಖಂಡಿಸುತ್ತಾ ಭಾಜಪ ಹಾಗೂ ಜನಸೇನಾದ ಕಾರ್ಯಕರ್ತರಿಂದ ಉಪವಾಸ ಸತ್ಯಾಗ್ರಹ

ಹಿಂದೂ ದೇವಸ್ಥಾನಗಳ ಮೇಲಾಗುತ್ತಿರುವ ದಾಳಿ ಹಾಗೂ ದೇವಸ್ಥಾನದ ರಥವನ್ನು ಸುಟ್ಟುಹಾಕಿರುವುದನ್ನು ಖಂಡಿಸುತ್ತಾ ಭಾಜಪ ಹಾಗೂ ಜನಸೇನಾಗಳ ಮುಖಂಡರು ಹಾಗೂ ಅನೇಕ ಸಾವಿರಾರು ಕಾರ್ಯಕರ್ತರು ಸಪ್ಟೆಂಬರ್ ೧೦ ರಂದು ಸಂಪೂರ್ಣ ಆಂಧ್ರಪ್ರದೇಶದಲ್ಲಿ ೧೧ ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹವನ್ನು ಮಾಡಿದರು.

‘ಮಂಗಲಮ್ ಕರ್ಪೂರ’ದ ಉತ್ಪಾದನೆಯ ಜಾಹೀರಾತಿನಲ್ಲಿ ಪ್ರಭು ಶ್ರೀರಾಮನ ಅವಹೇಳನೆ ನಡೆಯುತ್ತಲೇ ಇದೆ !

ಕರ್ಪೂರದ ಉತ್ಪಾದನೆ ಹಾಗೂ ಮಾರಾಟ ಮಾಡುವ ರಾಯಗಡ ಜಿಲ್ಲೆಯ ಕುಂಭಿವಲಿಯಲ್ಲಿನ ‘ಮಂಗಲಮ್ ಆರಗ್ಯಾನಿಕ್ಸ್ ಲಿಮಿಟೆಡ್’ ಈ ಸಂಸ್ಥೆಯು ತನ್ನ ‘ಮಂಗಲಮ್ ಕರ್ಪೂರ’ದ ಉತ್ಪಾದನೆಯ ಜಾಹೀರಾತಿನಲ್ಲಿ ಪ್ರಭು ಶ್ರೀರಾಮನು ಸೆಲ್ಫೀ (ಸಂಚಾರವಾಣಿಯಲ್ಲಿ ಸ್ವಂತದ ಫೋಟೊವನ್ನು ಸ್ವತಃ ತೆಗೆಯುವುದು) ತೆಗೆದುಕೊಳ್ಳುತ್ತಿರುವಂತೆ ತೋರಿಸಿ ಪ್ರಭು ಶ್ರೀರಾಮನ ಘೋರ ಅವಹೇಳನೆಯು ಇಂದಿಗೂ ಮುಂದುವರೆದಿದೆ.

ಮಂಡ್ಯದ ಅರ್ಕೇಶ್ವರ ಸ್ವಾಮಿ ದೇವಸ್ಥಾನದಲ್ಲಿ ೩ ಅರ್ಚಕರನ್ನು ಹತ್ಯೆ ಮಾಡಿ ದರೋಡೆ

ಮಂಡ್ಯ ಜಿಲ್ಲೆಯ ಗುತ್ತಲಿನಲ್ಲಿರುವ ಅರ್ಕೇಶ್ವರ ದೇವಾಲಯದಲ್ಲಿ ಅರ್ಚಕರಾಗಿ, ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮೂವರ ಮೇಲೆ ದೇವಾಲಯದ ಆವರಣದಲ್ಲೇ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿ ದರೋಡೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ರಾತ್ರಿ ಸುಮಾರು ೧ ಗಂಟೆಯ ಸಮಯದಲ್ಲಿ ಮೂರುಜನರು ಮಲಗಿರುವಾಗ ಸಂಭವಿಸಿದೆ.

‘ಉತ್ತಮ ಆಹಾರ ಹಾಗೂ ದೈಹಿಕ ಸಂಬಂಧಗಳಿಂದ ಸಿಗುವ ಆನಂದ ದಿವ್ಯವಾಗಿರುತ್ತದೆ (ಯಂತೆ) !’ – ಪೋಪ್ ಫ್ರಾನ್ಸಿಸ್

ಯಾವುದೇ ರೀತಿಯ ಆನಂದ ನಮಗೆ ಪ್ರತ್ಯಕ್ಷವಾಗಿ ದೇವರಿಂದ ಸಿಗುತ್ತಿರುತ್ತದೆ. ಅದು ಕ್ಯಾಥೊಲಿಕ್ ಕ್ರೈಸ್ತ ಅಥವಾ ಇನ್ನಾವುದೇ ಇರುವುದಿಲ್ಲ, ಅದು ಕೇವಲ ದಿವ್ಯವಾಗಿರುತ್ತದೆ. ಉತ್ತಮವಾದ ಬೇಯಿಸಿದ ಆಹಾರ ಹಾಗೂ ದೈಹಿಕ ಸಂಬಂಧದಿಂದಾಗಿ ಸಿಗುವ ಆನಂದ ದಿವ್ಯವಾಗಿರುತ್ತದೆ, ಎಂದು ಕ್ರೈಸ್ತರ ಸರ್ವೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಇವರು ಹೇಳಿದ್ದಾರೆ.

ಸನಾತನ ಸಂಸ್ಥೆಯ ‘ಶ್ರಾದ್ಧವಿಧಿ’ ‘ಅಂಡ್ರೈಡ್ ಆಪ್’ಗೆ ಉತ್ತಮ ಪ್ರತಿಕ್ರಿಯೆ

ಶ್ರಾದ್ಧವಿಧಿಯ ಬಗ್ಗೆ ಭಕ್ತರಿಗೆ ಶಾಸ್ತ್ರೀಯ ಮಾಹಿತಿ ಸಿಗಬೇಕೆಂದು ಸನಾತನ ಸಂಸ್ಥೆಯ ವತಿಯಿಂದ ‘ಶ್ರಾದ್ಧವಿಧಿ’ ಈ ‘ಅಂಡ್ರೈಡ್ ಆಪ್’ಅನ್ನು ನಿರ್ಮಿಸಲಾಯಿತು. ಇದರಲ್ಲಿ ಶ್ರಾದ್ಧದ ಮಹತ್ವ, ವಿಧ, ಶ್ರಾದ್ಧದ ಸಂದರ್ಭದಲ್ಲಿನ ಸಂದೇಹ ನಿವಾರಣೆ ಇತ್ಯಾದಿ ಜ್ಞಾನವನ್ನು ನೀಡುವ ಲೇಖನ, ಭಗವಾನ ದತ್ತಾತ್ರೇಯನ ಕುರಿತಾದ ಲೇಖನಗಳು ಹಾಗೂ ದತ್ತಾತ್ರೇಯ ದೇವತೆಯ ನಾಮಜಪದ ಆಡಿಯೋ ಲಭ್ಯವಿದೆ.

ಬೆಂಗಳೂರಿನ ‘ಚರ್ಚ್ ಆಫ್ ಸೌಥ ಇಂಡಿಯಾ ಟ್ರಸ್ಟ್ ಅಸೋಸಿಯೇಶನ್’ನಿಂದ ೫೯ ಕೋಟಿ ೫೨ ಲಕ್ಷ ರೂಪಾಯಿ ಜಪ್ತಿ

ರಕ್ಷಣಾ ಸಚಿವಾಲಯದ ೭೪೪೨೬.೮೮೮ ಚದರ ಮೀಟರ್ ಭೂಮಿಯನ್ನು ಕರ್ನಾಟಕ ಸರಕಾರಕ್ಕೆ ಪರಸ್ಪರ ಮಾರಾಟ ಮಾಡಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (‘ಇ.ಡಿ.’)ಯು ಬೆಂಗಳೂರಿನ ‘ಚರ್ಚ್ ಆಫ್ ಸೌಥ ಇಂಡಿಯಾ ಟ್ರಸ್ಟ್ ಅಸೋಸಿಯೇಶನ್’ನಿಂದ (‘ಸಿ.ಎಸ್.ಐ.ಟಿ.ಎ.’ ನಿಂದ) ೫೯ ಕೋಟಿ ೫೨ ಲಕ್ಷ ರೂಪಾಯಿಯನ್ನು ಜಪ್ತಿ ಮಾಡಿದೆ.