ಕೇರಳದ ಮತಾಂಧ ವೈದ್ಯಕೀಯ ಶಿಕ್ಷಣ ನಿರ್ದೇಶಕರ ಹಿಂದೂದ್ವೇಷವನ್ನು ತಿಳಿಯಿರಿ !

ಕೇರಳ ರಾಜ್ಯ ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ. ರಮಲಾ ಬೀವಿ ಇವರು ‘ರಕ್ಷಾಬಂಧನ ಹಿಂದೂ ಹಬ್ಬವಾಗಿದ್ದರಿಂದ ಅದನ್ನು ರಾಜ್ಯ ವೈದ್ಯಕೀಯ ಕಾಲೇಜುಗಳಲ್ಲಿ ಆಚರಿಸಬಾರದು’ ಎಂದು ಆದೇಶ ಹೊರಡಿಸಿದ್ದಾರೆ.

ಕೊರೋನಾ ಮಹಾಮಾರಿಯಿಂದ ಉದ್ಭವಿಸಿರುವ ಸದ್ಯದ ಈ ಆಪತ್ಕಾಲದಲ್ಲಿ ನವರಾತ್ರೋತ್ಸವವನ್ನು ಹೇಗೆ ಆಚರಿಸಬೇಕು ?

ಕರ್ಮಕಾಂಡದ ಸಾಧನೆಗನುಸಾರ ಆಪತ್ಕಾಲದಲ್ಲಿ ಯಾವುದಾದರೊಂದು ವರ್ಷಕುಲಾಚಾರದಂತೆ ವ್ರತ, ಉತ್ಸವ ಅಥವಾ ಧಾರ್ಮಿಕ ಕೃತಿಗಳನ್ನು ಆಚರಿಸಲು ಸಾಧ್ಯವಾಗದಿದ್ದರೆ ಅಥವಾ ಕರ್ಮದಲ್ಲಿ ಏನಾದರೂ ನ್ಯೂನ್ಯತೆಗಳು ಉಳಿದಿದ್ದರೆ, ಮುಂದಿನ ವರ್ಷ ಅಥವಾ ಮುಂದಿನ ಕಾಲದಲ್ಲಿ ಯಾವಾಗ ಸಾಧ್ಯವಿರುತ್ತದೆಯೋ, ಆಗ ಆ ವ್ರತ, ಉತ್ಸವ ಅಥವಾ ಧಾರ್ಮಿಕ ಕೃತಿಗಳನ್ನು ಅಧಿಕ ಉತ್ಸಾಹದಿಂದ ಆಚರಿಸಬೇಕು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಗಣಿತ ಮತ್ತು ಭೂಗೋಲ ಇವು ವಿಭಿನ್ನ ವಿಷಯಗಳಾಗಿವೆ. ಒಂದರ ಭಾಷೆಯಲ್ಲಿ ಇನ್ನೊಂದು ವಿಷಯವನ್ನು ಹೇಳಲು ಸಾಧ್ಯವಿಲ್ಲ. ಅಂತೆಯೇ, ‘ವಿಜ್ಞಾನ ಮತ್ತು ಅಧ್ಯಾತ್ಮ ಇವೆರಡು ವಿಭಿನ್ನ ವಿಷಯಗಳು’ ಎಂದು ವಿಜ್ಞಾನವು ಅರ್ಥಮಾಡಿಕೊಳ್ಳಬೇಕು.

ಸಾಧಕ-ರೋಗಿಗಳಿಗೆ ಚಿಕಿತ್ಸೆ ನೀಡಲು ಸನಾತನ ಆಶ್ರಮಗಳಲ್ಲಿ ಮರ್ದನ, ಬಿಂದುಒತ್ತಡ, ಪಂಚಕರ್ಮ, ಆಯುರ್ವೇದೀಯ ನ್ಯೂರೋಥೆರಪಿ, ಯೋಗಾಸನ ಈ ವಿಷಯಗಳಲ್ಲಿನ ತಜ್ಞರ ಆವಶ್ಯಕತೆ !

ಅಧ್ಯಾತ್ಮ ಪ್ರಸಾರ, ಸಮಾಜಕ್ಕೆ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡುವುದು, ಹಾಗೆಯೇ ಹಿಂದೂ ರಾಷ್ಟ್ರದ ಸ್ಥಾಪನೆಯ ಬಗ್ಗೆ ಸಮಾಜದಲ್ಲಿ ಜಾಗೃತಿಯನ್ನು ಮಾಡುವುದು, ಈ ವ್ಯಾಪಕ ಉದ್ದೇಶಗಳಿಂದ ಸನಾತನ ಸಂಸ್ಥೆಯ ಕಾರ್ಯವು ನಡೆದಿದೆ. ವಿವಿಧ ವಯಸ್ಸಿನ ನೂರಾರು ಸಾಧಕರು ಪೂರ್ಣವೇಳೆ ಸೇವಾ ನಿರತರಾಗಿ ಈ ಧರ್ಮ ಕಾರ್ಯದಲ್ಲಿ ತಮ್ಮ ಯೋಗದಾನವನ್ನು ನೀಡುತ್ತಿದ್ದಾರೆ

ಸನಾತನದ ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಲು ಸಹಾಯ ಮಾಡಬೇಕಾಗಿ ವಿನಂತಿ !

ಅಧ್ಯಾತ್ಮದ ಜಿಜ್ಞಾಸುಗಳು, ವಿವಿಧ ಯೋಗಮಾರ್ಗಗಳಿಗನುಸಾರ ಸಾಧನೆ ಮಾಡುವ ಸಾಧಕರು ಮತ್ತು ಧರ್ಮ ಪ್ರೇಮಿಗಳಿಗೆ ಆಧ್ಯಾತ್ಮಿಕ ಪ್ರಗತಿಗಾಗಿ ಮಾರ್ಗದರ್ಶನವಾಗ ಬೇಕು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು ಎಂಬುದಕ್ಕಾಗಿ ಸನಾತನವು ಆಚಾರಧರ್ಮ, ಧಾರ್ಮಿಕ ಕೃತಿ, ದೇವತೆಗಳು, ಸಾಧನೆ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿಷಯಗಳ ಬಗ್ಗೆ ಗ್ರಂಥ ಮತ್ತು ಕಿರುಗ್ರಂಥಗಳನ್ನು ಪ್ರಕಾಶಿಸಿದೆ.

ಹಂತಕನಿಗೆ ೫೫ ವರ್ಷಗಳಾದರೂ ಆತನು ತನ್ನ ೧೬ ನೆಯ ವಯಸ್ಸಿನಲ್ಲಿ ಮಾಡಿದ ಹತ್ಯೆಗೆ ಶಿಕ್ಷೆ ನೀಡುವ ಬಗ್ಗೆ ಅಂತಿಮ ತೀರ್ಪು ಇನ್ನೂ ಬಾಕಿ !

೧೯೮೧ ರ ಡಿಸೆಂಬರ್ ೧೧ ರಂದು ಉತ್ತರ ಪ್ರದೇಶದ ಬಹ್ರೇಚ್ ಜಿಲ್ಲೆಯಲ್ಲಿ ೧೬ ವರ್ಷದ ಸತ್ಯ ದೇವ ಎಂಬ ಬಾಲಕನು ಓರ್ವ ವ್ಯಕ್ತಿಯ ಹತ್ಯೆ ಮಾಡಿದ್ದನು. ಈ ಪ್ರಕರಣದಲ್ಲಿ ಆತನಿಗೆ ಬಹ್ರೇನಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ಶಿಕ್ಷೆಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯವು ಎತ್ತಿಹಿಡಿದಿದೆ.

‘ಸಮಾನ ನಾಗರಿಕ ಕಾನೂನಿನ ವಿರುದ್ಧ ಜನಾಭಿಪ್ರಾಯ ಸಂಗ್ರಹಿಸುವೆವು !’(ಅಂತೆ) – ‘ಮುಸ್ಲಿಂ ಪರ್ಸನಲ್ ಲಾ ಬೋರ್ಡ್

ಭಾರತವು ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳಿಂದ ತುಂಬಿದ ದೇಶವಾಗಿದೆ. ಇಲ್ಲಿ ಸಮಾನ ನಾಗರಿಕ ಕಾನೂನನ್ನು ಅನ್ವಯಿಸುವುದು ತಪ್ಪಾಗಿದೆ. ಆದ್ದರಿಂದ ಸಮಾಜದ ವಿವಿಧ ಅಂಗಗಳನ್ನು ಸಂಪರ್ಕಿಸಿ, ನಾವು ಈಗಾಗಲೇ ಈ ಕಾನೂನಿನ ವಿರುದ್ಧ ಜನಾಭಿಪ್ರಾಯ ಸಂಗ್ರಹಿಸಲಿದ್ದೇವೆ

ತರುಣಿಯ ಮೇಲೆ ಬಲಾತ್ಕಾರ ಮಾಡಿದ ಕ್ರೈಸ್ತ ಪಾದ್ರಿಯ ಮೇಲೆ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ !

ಸಿಬಿಐನ ಮಾಜಿ ಸಂಚಾಲಕರಾದ ಎಮ್. ನಾಗೇಶ್ವರ ರಾವ್ ಇವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನಮೋಹನ ರೆಡ್ಡಿ ಇವರಿಗೆ ಪತ್ರ ಬರೆದು ತಿರುಪತಿಯ ಬಡಕುಟುಂಬದ ಓರ್ವ ೨೦ ವರ್ಷದ ತರುಣಿಯ ಮೇಲೆ ಬಲಾತ್ಕಾರ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಮಲ್ಲೆಮ್ ದೇವಸಹಯಮ್ ಎಂಬ ಕ್ರೈಸ್ತ ಪಾದ್ರಿಯ ಮೇಲೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ತಿಳಿಸಿದ್ದಾರೆ.

ಭಾರತೀಯ ಸೈನ್ಯವು ಯುದ್ಧಕ್ಕಾಗಿ ಸದಾ ಸಿದ್ಧ ! ಅಮಿತ ಶಹಾ

ಭಾರತವು ತನ್ನ ಒಂದೊಂದು ಇಂಚಿನ ಭೂಮಿಗಾಗಿ ಜಾಗೃತವಾಗಿದೆ. ಅದನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಭಾರತೀಯ ಸೈನ್ಯವು ಯುದ್ಧಕ್ಕಾಗಿ ಸಿದ್ಧವಿದೆ. ಸೈನ್ಯವು ಯುದ್ಧಕ್ಕಾಗಿ ಸಜ್ಜಾಗಿರಿಸುವುದರ ಹಿಂದಿನ ಉದ್ದೇಶವೆಂದರೆ, ಯಾವುದೇ ಸ್ವರೂಪದ ಆಕ್ರಮಣಕ್ಕಾಗಿ ಸಿದ್ಧರಿರುವುದು. ನಾನು ಇದನ್ನು ಯಾವುದೇ ವಿಶೇಷ ಪ್ರಸಂಗದ ಸಂದರ್ಭದಲ್ಲಿ ಹೇಳುತ್ತಿಲ್ಲ; ಆದರೆ ಭಾರತದ ಸಂರಕ್ಷಣೆಗಾಗಿ ಸೈನ್ಯವು ಯಾವಾಗಲೂ ಸಿದ್ಧವಿದೆ.

ನಿಮಗೆ ಧೈರ್ಯವಿದ್ದರೆ, ಬಿಹಾರದ ಚುನಾವಣಾ ಘೋಷಣಾಪತ್ರದಲ್ಲಿ ‘೩೭೦’ ಅನ್ನು ಉಲ್ಲೇಖಿಸಿ ! – ಕಾಂಗ್ರೆಸ್‌ಗೆ ಬಿಜೆಪಿಯಿಂದ ಸವಾಲು

ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಪ್ರಕಾಶ ಜಾವಡೇಕರ ಇವರು ಕಾಂಗ್ರೆಸ್‌ಗೆ ನಿಮಗೆ ಧೈರ್ಯವಿದ್ದರೆ, ಬಿಹಾರದ ಚುನಾವಣಾ ಘೋಷಣಾಪತ್ರದಲ್ಲಿ ‘೩೭೦’ ಅನ್ನು ಉಲ್ಲೇಖಿಸಬೇಕು ಎಂದು ಸವಾಲನ್ನು ನೀಡಿದ್ದಾರೆ. ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಪುನಃಸ್ಥಾಪಿಸುವ ಬೇಡಿಕೆಯನ್ನು ಕಾಂಗ್ರೆಸ್ ಬೆಂಬಲಿಸಿತ್ತು. ಅದರ ನಂತರ ಜಾವಡೇಕರ ಈ ಸವಾಲನ್ನು ನೀಡಿದ್ದಾರೆ.