ಉತ್ತರಪ್ರದೇಶದಲ್ಲಿ ೨ ದಿನಗಳಲ್ಲಿ ೧೪ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಮತ್ತು, ೨೦ ಜನರಿಗೆ ಜೀವಾವಧಿ ಶಿಕ್ಷೆ

ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಆದೇಶದಂತೆ ನವರಾತ್ರಿಯಲ್ಲಿ ನಡೆಸಲಾಗುತ್ತಿರುವ ‘ಮಿಶನ್ ಶಕ್ತಿ’ ಅಭಿಯಾನದಡಿಯಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರದ ಸಂದರ್ಭದಲ್ಲಿ ಕಳೆದ ೨ ದಿನಗಳಲ್ಲಿ ೧೪ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಮತ್ತು, ೨೦ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ನೀಡಲಾಗಿದೆ.

ಸಾಧಕರೇ, ಪ್ರಾಣಾಯಾಮ, ವ್ಯಾಯಾಮ ಮತ್ತು ಯೋಗಾಸನಗಳನ್ನು ನಿಯಮಿತವಾಗಿ ಮಾಡಿ ಶರೀರದ ಪ್ರತಿಕಾರ ಕ್ಷಮತೆಯನ್ನು ಹೆಚ್ಚಿಸಿ ಹಾಗೂ ಆಪತ್ಕಾಲವನ್ನು ಎದುರಿಸಲು ತಮ್ಮ ಶರೀರ ಮತ್ತು ಮನಸ್ಸು ಇವುಗಳನ್ನು ಸದೃಢಗೊಳಿಸಿ !

ನಾವು ದಿನಪೂರ್ತಿ ಧನ ಸಂಪಾದನೆಗಾಗಿ ದೇಹವನ್ನು ಸವೆಸುತ್ತೇವೆ. ಹಾಗೆ ಮಾಡದಿದ್ದರೆ ನಮ್ಮ ಮನೆಯನ್ನು ನಡೆಸಲು ಸಾಧ್ಯವಿಲ್ಲ. ವ್ಯಾವಹಾರಿಕ ದೃಷ್ಟಿಯಿಂದ ಇದು ಹೇಗೆ ಆವಶ್ಯಕವಿದೆಯೋ, ಹಾಗೆಯೇ ನಮ್ಮ ದೇಹವನ್ನು ನಡೆಸಲು ಅದರಲ್ಲಿ ಯೋಗ್ಯ ಪ್ರಮಾಣದಲ್ಲಿ ಪ್ರಾಣಶಕ್ತಿ (ಚೇತನಾಶಕ್ತಿ) ಪ್ರವಹಿಸುವುದು ಮತ್ತು ಅದನ್ನು ನಿಯಂತ್ರಣದಲ್ಲಿಡುವುದು ಅತ್ಯಾವಶ್ಯಕವಾಗಿದೆ.

ಅಮೆರಿಕದ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಡೆಮೊಕ್ರಟಿಕ್ ಪಕ್ಷದಿಂದ ಶ್ರೀ ದುರ್ಗಾದೇವಿಯ ವಿಡಂಬನೆ

ಮುಂದಿನ ತಿಂಗಳು ನಡೆಯಲಿರುವ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದಿಂದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮೊಕ್ರಟಿಕ್ ಪಕ್ಷದ ಜೋ ಬಿಡನ್ ಸ್ಪರ್ಧಿಸಲಿದ್ದಾರೆ. ಭಾರತೀಯ ಮೂಲದ ಮಹಿಳೆಯ ಮಗಳು ಕಮಲಾ ಹ್ಯಾರಿಸ್ ಉಪಾಧ್ಯಕ್ಷ ಪದವಿಯ ಅಭ್ಯರ್ಥಿಯಾಗಿದ್ದಾರೆ. ಭಾರತದಲ್ಲಿ ಚುನಾವಣಾ ಪ್ರಚಾರದಲ್ಲಿ ಧರ್ಮದ ಆಧಾರದಲ್ಲಿ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ.

ಲಡಾಖ್‌ನಲ್ಲಿ ಚೀನಾದ ಸೈನಿಕನನ್ನು ಸೆರೆಹಿಡಿದ ಭಾರತೀಯ ಸೇನೆ

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ (ಪಿಎಲ್‌ಎ) ಯೋಧನನ್ನು ಇಲ್ಲಿನ ಡೆಮ್‌ಚೋಕ್ ಪ್ರದೇಶದಲ್ಲಿ ಗಡಿಯಲ್ಲಿ ಭಾರತೀಯ ಸೈನ್ಯವು ಸೆರೆಹಿಡಿದಿದೆ. ಆತನ ಹೆಸರು ವಾಂಗ್ ಯಾ ಲಾಂಗ್ ಎಂದಿದೆ. ಆತ ಜೆಜಿಯಾಂಗ್ ಪ್ರಾಂತ್ಯದ ನಿವಾಸಿಯಾಗಿದ್ದಾನೆ. ಆತನ ಬಳಿ ಸಿವಿಲ್ ಮತ್ತು ಮಿಲಿಟರಿ ದಾಖಲೆಗಳು ಪತ್ತೆಯಾಗಿವೆ.

ಚೀನಾದ ‘ಶಾವೊಮಿ’ ಸಂಚಾರವಾಣಿಯಲ್ಲಿ ‘ಅರುಣಾಚಲ ಪ್ರದೇಶ’ವನ್ನು ಚೀನಾದ ಭಾಗವೆಂದು ತೋರಿಸಲಾಗುತ್ತಿದೆ !

ಸಂಚಾರವಾಣಿಗಳನ್ನು ತಯಾರಿಸುವ ಚೀನಾದ ಕಂಪನಿ ‘ಶಾವೊಮಿ’ಯ ಸಂಚಾರವಾಣಿಯಿಂದ ಅರುಣಾಚಲ ಪ್ರದೇಶದ ಹವಾಮಾನ ವರದಿಯ ಮಾಹಿತಿಯನ್ನು ಪಡೆಯಲು ಪ್ರಯತ್ನಿಸಿದಾಗ ಅದು ಯಾವುದೇ ಮಾಹಿತಿಯನ್ನು ತೋರಿಸಲಿಲ್ಲ. ಅದೇರೀತಿ ರಾಜ್ಯದ ರಾಜಧಾನಿ ‘ಇಟಾನಗರ’ದ ಹೆಸರನ್ನು ಸಹ ಬೆರಳಚ್ಚು ಮಾಡಿದರೂ ಯಾವುದೇ ಉತ್ತರ ಸಿಗುತ್ತಿಲ್ಲ.

ರಿವಾ (ಮಧ್ಯಪ್ರದೇಶ) ದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ೫ ಪೊಲೀಸರಿಂದ ೧೦ ದಿನಗಳ ಕಾಲ ಸಾಮೂಹಿಕ ಅತ್ಯಾಚಾರ – ಮಹಿಳೆಯ ಆರೋಪ

ಇಲ್ಲಿನ ಪೊಲೀಸ್ ಕಸ್ಟಡಿಯಲ್ಲಿ ೫ ಪೊಲೀಸರು ೧೦ ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬಳು ಆರೋಪಿಸಿದ್ದಾಳೆ. ಮೇ ೯ ರಿಂದ ಮೇ ೨೧ ರವರೆಗೆ ಈ ಪ್ರಸಂಗ ಘಟಿಸಿದೆ ಎಂದು ಅವಳು ಹೇಳಿದ್ದಾಳೆ. ಈ ಮಹಿಳೆಯು ಹತ್ಯೆಯ ಪ್ರಕರಣದ ಆರೋಪಿಯಾಗಿದ್ದಾಳೆ. ಸಧ್ಯ ಆಕೆ ಸೆರೆಮನೆಯಲ್ಲಿದ್ದಾಳೆ.

ಬಿಜೆಪಿಯ ಮಹಿಳಾ ಅಭ್ಯರ್ಥಿಯನ್ನು ‘ಐಟಂ’ ಎಂದು ಉಲ್ಲೇಖಿಸಿದ ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಕಮಲನಾಥ !

ಕಾಂಗ್ರೆಸ್‌ನ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಕಮಲನಾಥ ಇವರು ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿರುವಾಗ ಬಿಜೆಪಿ ಅಭ್ಯರ್ಥಿ ಇಮರತಿದೇವಿಯವರನ್ನು ‘ಐಟಂ’ ಎಂದು ಸಂಬೋಧಿಸಿದ್ದರು. ಅದಕ್ಕಾಗಿ ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಈ ಘಟನೆಯನ್ನು ಖಂಡಿಸಲು ರಾಜ್ಯದ ಬಿಜೆಪಿ ಮುಖ್ಯಮಂತ್ರಿ ಶಿವರಾಜ ಸಿಂಗ ಚೌಹಾಣರು ಅಕ್ಟೋಬರ್ ೧೯ ರಂದು ಎರಡು ಗಂಟೆಗಳ ಮೌನ ಪಾಲಿಸಿದರು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ವಿಜ್ಞಾನದ ನಿಜವಾದ ಅಧ್ಯಯನ ಮಾಡಿದಾಗಲೇ ವಿಜ್ಞಾನದ ಮಿತಿ ತಿಳಿಯುತ್ತದೆ. ಇತರ ತಥಾಕಥಿತ ಬುದ್ಧಿಜೀವಿಗಳು ವಿಜ್ಞಾನಕ್ಕೆ ತಲೆಯ ಮೇಲಿರಿಸಿ ಕುಣಿಯುತ್ತಾರೆ.

ಸಾಪ್ತಾಹಿಕ ‘ಸನಾತನ ಪ್ರಭಾತದಲ್ಲಿ ಪ್ರಕಟಿಸಲಾಗುವ ರಜ-ತಮಾತ್ಮಕ ವಾರ್ತೆಗಳಿಂದ ಹಾಗೂ ಲೇಖನಗಳಿಂದ ಪ್ರಕ್ಷೇಪಿತವಾಗವ ನಕಾರಾತ್ಮಕ ಸ್ಪಂದನಗಳಿಂದ ವಾಚಕರಿಗೆ ತೊಂದರೆಯಾಗದಿರಲಿ, ಎಂಬುದಕ್ಕಾಗಿ ‘ಸನಾತನ ಪ್ರಭಾತದ ಪುಟಗಳಿಗೆ ನಾಮಜಪದ ಮಂಡಲ ಹಾಕಲು ಪ್ರಾರಂಭ !

ಹತ್ಯೆ, ಅತ್ಯಾಚಾರ, ಭ್ರಷ್ಟಾಚಾರ, ಗಲಭೆ ಇತ್ಯಾದಿ ರಜ-ತಮಾತ್ಮಕ ವಾರ್ತೆಗಳಿಂದ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತವೆ. ಈ ನಕಾರಾತ್ಮಕ ಸ್ಪಂದನಗಳಿಂದ ವಾಚಕರಿಗೆ ತೊಂದರೆಯಾಗದಿರಲೆಂದು ಈ ವಾರದಿಂದ ಸಾಪ್ತಾಹಿಕ ‘ಸನಾತನ ಪ್ರಭಾತದ ಎಲ್ಲ ಪುಟಗಳಿಗೆ ಭಗವಾನ ಶ್ರೀಕೃಷ್ಣನ ನಾಮಜಪದ ಮಂಡಲ ಹಾಕಲು ಪ್ರಾರಂಭಿಸುತ್ತಿದ್ದೇವೆ.

ಅಪರಾಧಗಳಲ್ಲಿ ಜಾತಿಧರ್ಮ!

ಇತ್ತೀಚೆಗೆ ಮುಸಲ್ಮಾನ ಯುವತಿಯರನ್ನು ಪ್ರೇಮಿಸಿದ ಹಿಂದೂ ಯುವಕರ ಹತ್ಯೆಯ ಘಟನೆಗಳು ಹೆಚ್ಚಾಗುತ್ತಿವೆ. ಹಿಂದೂಗಳ ವಿಷಯದಲ್ಲಿ ಸದ್ಯ ನಡೆಯುತ್ತಿರುವ ಈ ಘಟನೆಗಳು ಹಿಂದೂಗಳಿಗೆ ಮುಂಬರುವ ಭೀಕರ ಕಾಲದ ಸಂಕೇತವಾಗಿದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಇದರ ಕಾರಣವೇನೆಂದರೆ, ಹಾಥರಸ ಪ್ರಕರಣದಿಂದ ಗಲಭೆಯನ್ನು ಎಬ್ಬಿಸುವ ಷಡ್ಯಂತ್ರ ರೂಪಿಸಿದ್ದಕ್ಕಾಗಿ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ಮತಾಂಧರ ಸಂಘಟನೆಯ ೪ ಕಾರ್ಯಕರ್ತರನ್ನು ಬಂಧಿಸಲಾಗಿದೆ.