ತೃಣಮೂಲ ಕಾಂಗ್ರೆಸ್ ವಿರುದ್ಧ ಹಾಗೂ ಬಿಜೆಪಿಗೆ ಮತ ನೀಡಿದರೆ ರಕ್ತಪಾತ ಹರಿಯುತ್ತದೆ ! – ಬಂಗಾಲದಲ್ಲಿ ಗೋಡೆಯ ಮೇಲೆ ಬೆದರಿಕೆ !

ಬಂಗಾಲದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ; ಆದರೆ ಅದಕ್ಕೂ ಮುಂಚೆಯೇ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ರಾಜಕೀಯ ಘರ್ಷಣೆಯು ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ನಾಡಿಯಾ ಜಿಲ್ಲೆಯ ಒಂದು ಗೋಡೆಯ ಮೇಲೆ ನಾಗರಿಕರಿಗೆ ಬೆದರಿಕೆ ಹಾಕುವ ಒಂದು ಸೂಚನೆಯನ್ನು ಬರೆದಿರುವುದು ಕಂಡುಬಂದಿದೆ.

ಜರಾಸಂಧನು ಭಗವಾನ ಶ್ರೀಕೃಷ್ಣನನ್ನು ಸೋಲಿಸಿದನೆಂಬ ತಪ್ಪು ಇತಿಹಾಸ ಕಲಿಸುತ್ತಿರುವ ಗೋರಖಪುರ (ಉತ್ತರಪ್ರದೇಶ)ದ ಒಂದು ಶಾಲೆ !

ಇಲ್ಲಿನ ಸೆಂಟ್ರಲ್ ಸ್ಕೂಲನಲ್ಲಿ ೭ ನೇ ತರಗತಿ ವಿದ್ಯಾರ್ಥಿಗಳಿಗೆ ‘ಬಾಲ ಮಹಾಭಾರತ ಕಥಾ’ ಎಂಬ ಮಹಾಭಾರತದ ಬಗ್ಗೆ ತಪ್ಪುತಪ್ಪು ವಿಷಯವನ್ನು ಎನ್.ಸಿ.ಆರ್.ಟಿ. ಪುಸ್ತಕದ ಮೂಲಕ ಕಲಿಸಲಾಗುತ್ತಿದೆ. ಅದರಲ್ಲಿ ‘ಜರಾಸಂಧನು ಶ್ರೀಕೃಷ್ಣನನ್ನು ಸೋಲಿಸಿದನು ಹಾಗಾಗಿ ಅವರಿಗೆ ಮಥುರಾವನ್ನು ಬಿಟ್ಟು ದ್ವಾರಕೆಗೆ ಹೋಗಬೇಕಾಯಿತು’ ಎಂದು ಬರೆಯಲಾಗಿದೆ.

ಸಂಸ್ಕೃತವನ್ನು ರಾಷ್ಟ್ರೀಯ ಭಾಷೆ ಎಂದು ಘೋಷಿಸುವಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ

ಸಂಸ್ಕೃತ ಭಾಷೆಯನ್ನು ರಾಷ್ಟ್ರೀಯ ಭಾಷೆ ಹಾಗೂ ಹಿಂದಿಯನ್ನು ಅದರ ಅಧಿಕೃತ ಭಾಷೆ ಎಂದು ಘೋಷಿಸುವಂತೆ ಆಗ್ರಹಿಸುವ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ಗುಜರಾತನ ಮಾಜಿ ಹೆಚ್ಚುವರಿ ಕಾರ್ಯದರ್ಶಿ ಕೆ.ಜಿ. ವಂಜಾರಾ ಇವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.

ಬಿಹಾರ್‌ನಲ್ಲಿ ಹಿಂದೂ ದೇವತೆಗಳ ಅವಮಾನಿಸುವ ಪೋಸ್ಟಅನ್ನು ಪ್ರಸಾರ ಮಾಡಿದ ಪ್ರಕರಣದಲ್ಲಿ ಓರ್ವ ಮಹಿಳೆಯ ಬಂಧನ

ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧವಾಗಿರುವ ಕಿರಣ ಯಾದವ ಎಂಬ ಮಹಿಳೆಯನ್ನು ಹಿಂದೂ ದೇವತೆಗಳನ್ನು ಅವಮಾನಿಸಿದ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ ೨ ರಂದು ಒಂದು ವಿಡಿಯೋ ಪ್ರಸಾರವಾಗಿತ್ತು. ಅದರಲ್ಲಿ ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಶಬ್ದಗಳನ್ನು ಬಳಸಲಾಗಿತ್ತು.

ರಾಷ್ಟ್ರೀಯ ಕಾಮಧೇನು ಆಯೋಗ, ಯು.ಜಿ.ಸಿ., ಆಲ್ ಇಂಡಿಯಾ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜುಕೇಶನ ಮುಂತಾದ ವಿಭಾಗಗಳಿಂದ ವೆಬಿನಾರ್‌ಗಳ ಆಯೋಜನೆ !

ಇತ್ತೀಚೆಗೆ ರಾಷ್ಟ್ರೀಯ ಕಾಮಧೇನು ಆಯೋಗ, ಯು.ಜಿ.ಸಿ., ಆಲ್ ಇಂಡಿಯಾ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜುಕೇಶನ ಮುಂತಾದ ವಿಭಾಗಗಳಿಂದ ಒಂದು ವೆಬಿನಾರ್‌ನಲ್ಲಿ ಹಸುಗಳನ್ನು ಸಾಕುವ ಬಗ್ಗೆ ಚರ್ಚಿಸಲಾಯಿತು. ಈ ವೆಬಿನಾರ್‌ನಲ್ಲಿ ಕೇಂದ್ರೀಯ ಶಿಕ್ಷಣ ರಾಜ್ಯಮಂತ್ರಿ ಸಂಜಯ ಧೋತ್ರೆ ಉಪಸ್ಥಿತರಿದ್ದರು.

ಸರ್ವೋಚ್ಚ ನ್ಯಾಯಾಲಯವು ಆಯುಷ್ ಮತ್ತು ಹೋಮಿಯೋಪತಿ ವೈದ್ಯರಿಗೆ ಕೊರೋನಾ ಮೇಲಿನ ಔಷಧಿಗಳನ್ನು ಬರೆದು ಕೊಡಲು ಅನುಮತಿ ನೀಡಿದೆ

೨೦೨೦ ರ ಮಾರ್ಚ್ ೬ ರಂದು ಕೇಂದ್ರ ಸರಕಾರದ ಆದೇಶಕ್ಕೆ ಸಮ್ಮತಿ ನೀಡಿರುವ ಸರ್ವೋಚ್ಚ ನ್ಯಾಯಾಲಯ, ಕೊರೋನಾ ರೋಗಿಗಳಿಗೆ ಚಿಕಿತ್ಸೆಗಾಗಿ ಔಷಧಿಗಳನ್ನು ಬರೆದು ಕೊಡಲು ಅರ್ಹ ಆಯುಷ್ ವೈದ್ಯರು ಮತ್ತು ಹೋಮಿಯೋಪತಿ ವೈದ್ಯರಿಗೆ ಅವಕಾಶ ನೀಡಿದೆ.

ಕರ್ನಾಟಕದ ಐಫೋನ್ ಉತ್ಪಾದನೆಯ ಘಟಕ ಧ್ವಂಸ ಮಾಡಿದ ಹಿಂದೆ ಕಮ್ಯುನಿಸ್ಟರ ಕೈವಾಡ !

ವೇತನ ಕಡಿತವನ್ನು ವಿರೋಧಿಸಿ ‘ಆಪಲ್’ನ ಐಫೋನ್ ತಯಾರಕ ಸಂಸ್ಥೆ ‘ವಿಂಸ್ಟ್ರಾನ್ ಕಾರ್ಪೊರೇಶನ್’ನ ಕಾರ್ಖಾನೆಯನ್ನು ಡಿಸೆಂಬರ್ ೧೨ ರಂದು ಅದರ ನೌಕರರು ಧ್ವಂಸ ಮಾಡಿದ್ದಾರೆ. ಆದ್ದರಿಂದ ಸಂಸ್ಥೆಗೆ ೪೩೭ ಕೋಟಿ ೪೦ ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಸಂಸ್ಥೆಯು ಹೇಳಿದೆ.

ಮಾದಕ ಪದಾರ್ಥದ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ನಟಿ ಸಂಜನಾ ಗುಲರಾಣಿಯವರ ಬಲವಂತವಾಗಿ ಮತಾಂತರ

ಮಾದಕ ಪದಾರ್ಥದ ಪ್ರಕರಣದಲ್ಲಿ ೩ ತಿಂಗಳು ಸೆರೆಮನೆಯಲ್ಲಿದ್ದು ಅನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟಿ ಸಂಜನಾ ಗುಲ್ರಾನಿ ಇವರ ಇಚ್ಛೆಯ ವಿರುದ್ಧ ಓರ್ವ ಮೌಲ್ವಿಯು ಇಸ್ಲಾಂಗೆ ಮತಾಂತರ ಮಾಡಿದ್ದಾರೆ, ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ನ್ಯಾಯವಾದಿ ಅಮೃತೇಶ ಎನ್.ಪಿ. ಇವರು ಕಾಟನಪೇಟೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

ಭಾರತದ ವಿರುದ್ಧದ ಆಕ್ರಮಣಕಾರಿ ನಿಲುವನ್ನು ನಿಲ್ಲಿಸುವಂತೆ ಅಮೇರಿಕಾದಿಂದ ಚೀನಾಗೆ ಸಲಹೆ

ಅಮೇರಿಕಾದ ಸಂಸತ್ತಿನಲ್ಲಿ ರಕ್ಷಣಾ ಮಸೂದೆಯನ್ನು ಅಂಗಿಕರಿಸಲಾಗಿದ್ದು ಇದರಲ್ಲಿ ಚೀನಾದ ಸರಕಾರದಿಂದ ಪ್ರತ್ಯಕ್ಷ ನಿಯಂತ್ರಣ ರೇಖೆಯ ಬಳಿ ಭಾರತದ ವಿರುದ್ಧ ನಡೆಯುತ್ತಿರುವ ಸೈನ್ಯದ ಆಕ್ರಮಣವನ್ನು ನಿಲ್ಲಿಸುವಂತೆ ಒತ್ತಾಯಿಸಲಾಗಿದೆ.

ಸಿಂಧ್‌ನಲ್ಲಿ ಮತಾಂಧರಿಂದ ಹಿಂದೂಗಳ ಮನೆಗಳ ಮೇಲೆ ದಾಳಿ

ಪಾಕಿಸ್ತಾನದಲ್ಲಿಯ ಮಾನವ ಹಕ್ಕುಗಳ ಕಾರ್ಯಕರ್ತೆ ರಾಹತ ಆಸ್ಟೀನ್ ಇವರು ಒಂದು ವಿಡಿಯೋವನ್ನು ಪೋಸ್ಟ ಮಾಡಿ ಪಾಕಿಸ್ತಾನದ ಸಿಂಧ್‌ನಲ್ಲಿ ಮತಾಂಧರು ಹಿಂದೂಗಳ ಮನೆಗಳ ಮೇಲೆ ನಡೆಸಿದ ದಾಳಿಯ ಹಾಗೂ ಲೂಟಿಯ ಮಾಹಿತಿಯನ್ನು ತಿಳಿಸಿದ್ದಾರೆ.