ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ೪ ಸೈನಿಕರಿಗೆ ಗಾಯ

ಕುಲಗಾಮ್ ಜಿಲ್ಲೆಯ ಶಮ್ಸಿಪೋರಾದಲ್ಲಿ ಭಾರತೀಯ ಸೈನಿಕರ ‘ರೋಡ್ ಓಪನಿಂಗ್ ಪಾರ್ಟಿ’ (ಅತಿಗಣ್ಯ ವ್ಯಕ್ತಿಗಳು ಸೂಕ್ಷ್ಮ ಪ್ರದೇಶದಿಂದ ಪ್ರಯಾಣ ಮಾಡುತ್ತಿರುವಾಗ ಅವರ ಭದ್ರತೆಗಾಗಿ ನೇಮಿಸಿದ ಸೈನಿಕರ ದಂಡು) ಮೇಲೆ ಉಗ್ರರು ಗ್ರೆನೇಡ್ ದಾಳಿ ಮಾಡಿದರು. ಈ ದಾಳಿಯಲ್ಲಿ ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ.

ರಾಜಸ್ಥಾನದಲ್ಲಿ ಶ್ರೀ ಮಹಾದೇವ ಮಂದಿರದ ೭೫ ವರ್ಷದ ಸೇವಕನ ಬರ್ಬರ ಹತ್ಯೆ

ಮೆಹ್ರಾ ಸಮುದಾಯದ ರಾಕೇಶ್ವರ ಮಹಾದೇವ ದೇವಾಲಯದ ೭೫ ವರ್ಷದ ವೃದ್ಧ ಸೇವಕ ಗಿರಿರಾಜ್ ಮೆಹ್ರಾ ಅವರನ್ನು ಇಲ್ಲಿ ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಬಾಯಿಗೆ ಬಟ್ಟೆ ಸುತ್ತಿ, ಕೈ- ಕಾಲು ಕಟ್ಟಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ದೆಹಲಿ ಹಿಂಸಾಚಾರ ಪ್ರಕರಣದಲ್ಲಿ ೨೬ ಜನರ ವಿರುದ್ಧ ಅಪರಾಧ ದಾಖಲು

ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ರೈತ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅವರಲ್ಲಿ ರಾಕೇಶ ಟಿಕೈಟ್, ಸರ್ವಾನ್‌ಸಿಂಗ್ ಪಂಡೇರ್, ಸತನಾಮಸಿಂಗ್ ಪನ್ನು ಸಹಿತ ಯೋಗೇಂದ್ರ ಯಾದವ್, ಪಂಜಾಬಿ ನಟ ಮತ್ತು ಗಾಯಕ ದೀಪ ಸಿದ್ಧೂ ಮತ್ತು ಲಖ್ಬೀರ್ ಸಿಂಗ್ ಅಲಿಯಾಸ್ ಲಖಾ ಸಿದ್ಧನಾ ಸೇರಿದ್ದಾರೆ.

ಮುಸಲ್ಮಾನ ಆಡಳಿತಗಾರರ ಕಾಲದ ಭೋಪಾಲ್‌ದಲ್ಲಿರುವ ಎಲ್ಲ ಅಪವಿತ್ರ ಹೆಸರುಗಳನ್ನು ನಾವು ಬದಲಾಯಿಸುತ್ತೇವೆ! – ಭೋಪಾಲ್ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್

ಈ ಹೆಸರುಗಳು ಮತ್ತು ಅವುಗಳ ಹಿಂದಿನ ಇತಿಹಾಸವು ಬಹಳ ಅಪವಿತ್ರವಾಗಿದೆ. ಅಂತಹ ಹೆಸರನ್ನು ಉಚ್ಚರಿಸುವುದು ಅಪವಿತ್ರತೆಯನ್ನು ಹರಡುತ್ತದೆ ಮತ್ತು ನಕಾರಾತ್ಮಕ ಪ್ರಚಾರವನ್ನು ಉತ್ತೇಜಿಸುತ್ತದೆ. ಅಂತಹ ಮುಸ್ಲಿಂ ಆಡಳಿತಗಾರರ ಕಾಲದಲ್ಲಿ ರಕ್ತಸಿಕ್ತ ಇತಿಹಾಸ ಹೊಂದಿರುವ ಭೋಪಾಲ್‌ನ ಎಲ್ಲ ಸ್ಥಳಗಳ ಹೆಸರನ್ನು ನಾವು ಅಳಿಸಲಿದ್ದೇವೆ ಎಂದು ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಇವರು ಇಲ್ಲಿ ಒಂದು ಸಮಾರಂಭದಲ್ಲಿ ಮಾತನಾಡುತ್ತಾ ಹೇಳಿದರು.

ಕೋವಿಡ್ ಲಸಿಕೀಕರಣ : ಸವಿಸ್ತಾರ ಮಾಹಿತಿ !

ಯಾವ ‘ವ್ಯಾಕ್ಸಿನ್ ವು ಸಂಪೂರ್ಣವಾಗಿ ಪರೀಕ್ಷಣೆಗೆ ಒಳಪಟ್ಟಿಲ್ಲವೋ, ಅಂತಹ ‘ವ್ಯಾಕ್ಸಿನ್ ನನ್ನು ಕೋಟ್ಯವಧಿ ಆರೋಗ್ಯವಂತ ಜನರಿಗೆ ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಕೂಡ ತಪ್ಪೇ ! ಇಡನ್ ಇವರ ಹೇಳಿಕೆಯ ಬಗ್ಗೆ ಎರಡು ಮಾತಿಲ್ಲ. ಎಷ್ಟೋ ಡಾಕ್ಟರರೂ ಸಹ ಲಸಿಕೆಯನ್ನು ತೆಗೆದುಕೊಳ್ಳುವ ಸಂದರ್ಭಧಲ್ಲಿ ಸಕಾರಾತ್ಮಕವಾಗಿಲ್ಲ ‘ತಮ್ಮ ಸುರಕ್ಷತೆಗಾಗಿ ಅಲ್ಲ, ಸಮಾಜದ ಸುರಕ್ಷತೆಗಾಗಿ ಲಸಿಕೀಕರಣವನ್ನು ಮಾಡಿರಿ, ಎಂದೂ ಕೆಲವು ಜನರು ರಾಗ ತೆಗೆದಿದ್ದಾರೆ.

ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ಸವಿನಯ ವಿನಂತಿ !

ಮೃತ್ಯುಪತ್ರವನ್ನು ತಯಾರಿಸಿ ತಮ್ಮ ಆಸ್ತಿಯನ್ನು ಒಬ್ಬರ ಹೆಸರಿಗೆ ಮಾಡುವುದಕ್ಕಿಂತ ಬದುಕಿರುವಾಗಲೇ ಆಸ್ತಿಯನ್ನು ಅರ್ಪಿಸುವುದು ಹೆಚ್ಚು ಅನುಕೂಲಕರವಾಗಿದೆ. ಏಕೆಂದರೆ ವ್ಯಕ್ತಿಯ ಮೃತ್ಯುವಿನ ನಂತರ ಅವರ ಮೃತ್ಯುಪತ್ರದಲ್ಲಿ ಉಲ್ಲೇಖಿಸಿದಂತೆ ಅವರು ಸತ್ ಕಾರ್ಯಕ್ಕೆ ಅರ್ಪಣೆ ಮಾಡಿದ ಆಸ್ತಿಯನ್ನು ಸನಾತನ ಸಂಸ್ಥೆಗೆ ದೊರಕಿಸಿಕೊಳ್ಳಲು ಮಾಡಬೇಕಾದ ಕಾನೂನು ಬದ್ಧ ಮತ್ತು ನ್ಯಾಯಾಂಗ ಪ್ರಕ್ರಿಯೆಯು ಅತ್ಯಂತ ಜಟಿಲವಿದೆ.

೫, ೧೦ ಮತ್ತು ೧೦೦ ರೂ.ಗಳ ಹಳೆಯ ನೋಟುಗಳು ಚಲಾವಣೆಯಿಂದ ಹಿಂಪಡೆಯುವ ವಿಚಾರವಿಲ್ಲ ! – ರಿಸರ್ವ್ ಬ್ಯಾಂಕ್‌ನ ಸ್ಪಷ್ಟನೆ

ಕೆಲವು ದಿನಗಳಿಂದ ೫, ೧೦ ಮತ್ತು ೧೦೦ ರೂ.ಗಳ ಹಳೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲಾಗುವುದು ಎಂಬ ವಾರ್ತೆ ಪ್ರಸಾರಮಾಧ್ಯಮಗಳಲ್ಲಿ ಬಿತ್ತರಿಸಲಾಗುತ್ತಿದೆ. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ೫, ೧೦ ಮತ್ತು ೧೦೦ ಎಲ್ಲ ರೀತಿಯ ಹಳೆಯ ನೋಟುಗಳು ಮಾನ್ಯವಿದ್ದು ಅವು ಶಾಶ್ವತವಾಗಿ ಚಲಾವಣೆಯಲ್ಲಿರಲಿವೆ, ಅವುಗಳನ್ನು ಚಲಾವಣೆಯಿಂದ ತೆಗೆಯುವಂತಹ ಯಾವುದೇ ವಿಚಾರ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ.

೮ ವರ್ಷಗಳಿಗಿಂತ ಹಳೆಯ ವಾಹನಗಳ ಮೇಲೆ ‘ಹಸಿರು ತೆರಿಗೆ’

೮ ವರ್ಷಗಳಿಗಿಂತ ಹಳೆಯದಾಗಿರುವ ವಾಹನಗಳಿಗೆ ಶೀಘ್ರದಲ್ಲಿಯೇ ಈಗ ಹಸಿರು ತೆರಿಗೆಯನ್ನು (ಗ್ರೀನ್ ಟ್ಯಾಕ್ಸ್) ಹೇರಲಾಗುವ ಸಾಧ್ಯತೆಯಿದೆ. ಕೇಂದ್ರಿಯ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು ಗ್ರೀನ್ ಟ್ಯಾಕ್ಸ್ ಹೇರುವ ಪ್ರಸ್ತಾಪಕ್ಕೆ ಒಪ್ಪಿಗೆಯನ್ನುನೀಡಿದೆ.

ಮೊದಲ ಬಾರಿಗೆ ಪಶುಪತಿನಾಥ ಮಂದಿರಕ್ಕೆ ಹೋಗಿ ಪೂಜೆ ಸಲ್ಲಿಸಿದ ನೇಪಾಳದ ಕಮ್ಯುನಿಸ್ಟ ಪ್ರಧಾನ ಮಂತ್ರಿ ಕೆ.ಪಿ. ಶರ್ಮಾ ಒಲಿ!

ನೇಪಾಳ ಕಮ್ಯುನಿಸ್ಟ ಪಕ್ಷದಿಂದ ಹೊರದಬ್ಬಲಾಗಿರುವ ನೇಪಾಳದ ಪ್ರಧಾನಮಂತ್ರಿ ಕೆ.ಪಿ. ಶರ್ಮಾ ಒಲಿ ಇವರು ಮೊದಲ ಬಾರಿಗೆ ಪಶುಪತಿನಾಥ ಮಂದಿರಕ್ಕೆ ಹೋಗಿ ದರ್ಶನ ಪಡೆದು ಪೂಜೆಯನ್ನು ಸಲ್ಲಿಸಿದರು. ಅಲ್ಲಿ ಅವರು ಒಂದೂಕಾಲು ಲಕ್ಷ ದೀಪಗಳನ್ನು ಸಹ ಹಚ್ಚಿದರು.

ದೇಶದಾದ್ಯಂತ ಎಲ್ಲೆಡೆ ೭೨ ನೆಯ ಗಣರಾಜ್ಯೋತ್ಸವದ ಆಚರಣೆ

ಕೊರೊನಾದ ಹಿನ್ನೆಲೆಯಲ್ಲಿಯೂ ದೇಶದಲ್ಲಿ ೭೨ನೆಯ ಗಣರಾಜ್ಯೋತ್ಸವವನ್ನು ಉತ್ಸಾಹದಿಂದ ಆಚರಿಸಲಾಯಿತು. ರಾಜಧಾನಿ ದೆಹಲಿಯ ರಾಜಪಥದಲ್ಲಿ ಸೈನಿಕರ ಪಥಸಂಚಲನ ಸಹಿತ ವಿವಿಧ ರಾಜ್ಯಗಳು ಮತ್ತು ವಿಭಾಗಗಳ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಸಲಾಯಿತು. ಈ ಸಂಚಲನದಲ್ಲಿ ಮೊದಲ ಬಾರಿಗೆ ಬಂಗ್ಲಾದೇಶದ ಸೈನಿಕರ ಒಂದು ತುಕಡಿಯು ಪಾಲ್ಗೊಂಡಿತ್ತು.