ವಿಧಾನ ಪರಿಷತ್ತಿನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದ ಕಾಂಗ್ರೆಸ್ ಶಾಸಕ !

ರಾಜ್ಯದ ವಿಧಾನ ಪರಿಷತ್ತಿನ ಸಭಾಗೃಹದಲ್ಲಿ ಮೋಬೈಲ್ ಫೋನ್ ನಲ್ಲಿ ಕಾಂಗ್ರೆಸ್ ಶಾಸಕ ಪ್ರಕಾಶ ರಾಠೋಡ ಅಶ್ಲೀಲ ವಿಡಿಯೋ (ಪಾರ್ನ್) ನೋಡುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಸಭಾಗೃಹದಲ್ಲಿ ಕಾರ್ಯಕಲಾಪ ನಡೆಯುತ್ತಿದ್ದ ಸಮಯದಲ್ಲಿ ಛಾಯಾಚಿತ್ರಕಾರನು ತೆಗೆದ ಛಾಯಾಚಿತ್ರಗಳಲ್ಲಿ ರಾಠೋಡ ಅಶ್ಲೀಲ ವಿಡಿಯೋ ನೋಡುತ್ತಿರುವುದು ಕಾಣಿಸುತ್ತಿದೆ.

ಅಮೆಝಾನ್ ಜೊತೆಗಿನ ಎಲ್ಲ ಒಪ್ಪಂದಗಳನ್ನು ರದ್ದುಪಡಿಸಬೇಕು! – ಕೇಂದ್ರ ಸರಕಾರಕ್ಕೆ ಹಿಂದೂ ವಿಧಿಜ್ಞ ಪರಿಷತ್ತಿನಿಂದ ಬೇಡಿಕೆ

ಅಮೇಝಾನ್ ನ ಹತ್ತಿರ ದಿನಸಿ ಸಾಮಾಗ್ರಿಗಳಿಂದ ಹಿಡಿದು ಚಲನಚಿತ್ರಗಳು, ವೆಬ್ ಸಿರೀಸ್, ಪುಸ್ತಕಗಳು, ಆಡಿಯೋ ಪುಸ್ತಕಗಳು ಮುಂತಾದವುಗಳನ್ನು ಮಾರಾಟ ಮಾಡಲು ದೇಶದಾದ್ಯಂತ ವಿವಿಧ ಶಾಖೆಗಳು ಅಸ್ತಿತ್ವದಲ್ಲಿವೆ

೬೦ ವರ್ಷಗಳಿಂದ ಗುಹೆಯಲ್ಲಿದ್ದು ಧ್ಯಾನ ಸಾಧನೆ ಮಾಡುತ್ತಿರುವ ಋಷಿಕೇಶದ ಸಂತರಿಂದ ಶ್ರೀರಾಮ ಮಂದಿರಕ್ಕಾಗಿ ೧ ಕೋಟಿ ರೂಪಾಯಿ ದಾನ!

ಸ್ಥಳೀಯ ೭೩ ವರ್ಷದ ಸ್ವಾಮಿ ಶಂಕರ ದಾಸರು ಶ್ರೀರಾಮಮಂದಿರಕ್ಕಾಗಿ ೧ ಕೋಟಿ ರೂಪಾಯಿಗಳ ದಾನ ನೀಡಿದ್ದಾರೆ. ಸ್ವಾಮಿ ಶಂಕರ ದಾಸರು ಸುಮಾರು ೬೦ ವರ್ಷಗಳಿಂದ ಋಷಿಕೇಶದ ಗುಹೆಯೊಂದರಲ್ಲಿ ಧ್ಯಾನ ಸಾಧನೆಯನ್ನು ಮಾಡುತ್ತಿದ್ದಾರೆ.

ಕಾಂಗ್ರೆಸ್ ನೇತಾರ ಶಶಿ ತರೂರ, ಪತ್ರಕರ್ತ ರಾಜದೀಪ ಸರದೇಸಾಯಿ ಇವರ ಸಹಿತ ಅನೇಕ ಪತ್ರಕರ್ತರ ಮೇಲೆ ದೇಶದ್ರೋಹದ ಅಪರಾಧ ದಾಖಲು

ಕೇವಲ ಅಪರಾಧವನ್ನು ದಾಖಲಿಸಿ ಪೊಲೀಸರು ಸುಮ್ಮನಿರಬಾರದು, ಇಂತಹವರನ್ನು ಸೆರೆಮನೆಗೆ ತಳ್ಳಬೇಕು ಮತ್ತು ಶೀಘ್ರ ನ್ಯಾಯಾಲಯದಲ್ಲಿ ಖಟ್ಲೆ ನಡೆಸಿ ಅವರಿಗೆ ಕಠೋರ ಶಿಕ್ಷೆಯಾಗುವಂತೆ ಪ್ರಯತ್ನಿಸಬೇಕು

ಸಿಂಗೂ ಗಡಿಯಲ್ಲಿ ಸ್ಥಳೀಯ ನಾಗರಿಕರ ಹಾಗೂ ಆಂದೋಲನಕಾರರ ನಡುವೆ ಸಂಘರ್ಷ!

ಇಲ್ಲಿನ ಸಿಂಗೂ ಗಡಿಯಲ್ಲಿ ೨೯ ಜನವರಿಯಂದು ಮಧ್ಯಾಹ್ನ ಆಂದೋಲನಕಾರರು ಮತ್ತು ಹೆದ್ದಾರಿಯನ್ನು ಖಾಲಿ ಮಾಡಲು ಬೇಡಿಕೆ ಸಲ್ಲಿಸುತ್ತಿದ್ದ ಸ್ಥಳೀಯ ನಾಗರಿಕರ ನಡುವಿನ ಸಂಘರ್ಷದಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿಚಾರ್ಜ ಮಾಡಬೇಕಾಯಿತು.

ಸ್ವಾತಂತ್ರ್ಯದ ಘೋಷಣೆ ಅಂದರೆ ಯುದ್ಧ ಎಂಬರ್ಥ (ಅಂತೆ) – ತೈವಾನ್‌ಗೆ ಚೀನಾದ ಬೆದರಿಕೆ

ತೈವಾನ ಈಗ ಸ್ವಾತಂತ್ರ್ಯದ ಘೋಷಣೆಯನ್ನು ಮಾಡಲು ಸಿದ್ಧವಾಗುತ್ತಿದೆ ಎಂಬ ವಾರ್ತೆಯ ಹಿನ್ನೆಲೆಯಲ್ಲಿ ಚೀನಾವು ಯುದ್ಧದ ಬೆದರಿಕೆಯನ್ನು ಹಾಕಿದೆ. ಚೀನಾ ತೈವಾನ ತನ್ನ ಪ್ರದೇಶ (ಭೂಭಾಗ) ಎಂದು ಹೇಳುತ್ತದೆ.

ಫೆಬ್ರವರಿ ೧ ರಂದು ಸಂಸತ್ತಿನಲ್ಲಿ ನಡೆಸಲಾಗುವ ರೈತರ ಮೊರ್ಚಾವನ್ನು ರದ್ದು

ಫೆಬ್ರವರಿ ೧ರಂದು ಸಂಸತ್ತಿನಲ್ಲಿ ನಡೆಸಲಾಗುವ ರೈತರ ಮೊರ್ಚಾವನ್ನು ರದ್ದುಗೊಳಿಸಲಾಗಿದೆ. ದೆಹಲಿಯಲ್ಲಾದ ಹಿಂಸಾಚಾರದ ನಂತರ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.

ಚೀನಾದ ಅಪಪ್ರಚಾರವನ್ನು ಖಂಡಿಸಲು ಭಾರತೀಯ ಸೈನ್ಯಾಧಿಕಾರಿಗಳು ಟಿಬೆಟಿಯನ್ ಸಂಸ್ಕೃತಿಯನ್ನು ಅಭ್ಯಾಸ ಮಾಡಲಿದ್ದಾರೆ

ಚೀನಾದಿಂದಾಗುತ್ತಿರುವ ಅಪಪ್ರಚಾರವನ್ನು ತಡೆಗಟ್ಟಲು ಭಾರತೀಯ ಸೈನ್ಯವು ಟಿಬೇಟ್‌ನ ಇತಿಹಾಸ, ಅಲ್ಲಿನ ಸಂಸ್ಕೃತಿ ಮತ್ತು ಭಾಷೆಯನ್ನು ಅರಿತುಕೊಳ್ಳುವ ರಣನೀತಿಯನ್ನು ರೂಪಿಸಿದೆ. ಪ್ರತ್ಯಕ್ಷ ನಿಯಂತ್ರಣ ರೇಖೆಯ ಎರಡೂ ಬದಿಯಲ್ಲಿರುವ ಟಿಬೇಟ್ ಅನ್ನು ಆಳವಾಗಿ ಅಧ್ಯಯನ ಮಾಡುವಂತೆ ಸೈನಾಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗುವುದು.

ತಾಂಡವ ವೆಬ್ ಸಿರೀಸ್‌ನ ನಿರ್ಮಾಪಕ, ನಿರ್ದೇಶಕ, ಲೇಖಕ, ನಟರ ಬಂಧನಕ್ಕೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದಿಂದ ನಿರಾಕರಣೆ

ವೆಬ್ ಸಿರೀಸ್ ತಾಂಡವದ ನಿರ್ಮಾಪಕ, ಹಿಮಾಂಶು ಮೆಹರಾ, ನಿರ್ದೇಶಕ ಅಬ್ಬಾಸ್ ಜಾಫರ್, ಲೇಖಕ ಗೌರವ ಸೊಳಂಕಿ ಮತ್ತು ನಟ ಮೊಹಮದ್ ಝಿಶಾನ್ ಅಯ್ಯುಬ ಇವರ ಬಂಧನದ ಆದೇಶಕ್ಕೆ ತಡೆ ನೀಡಲು ‘ಅಮೆಝಾನ್ ಇಂಡಿಯಾ’ವು ಮಾಡಿದ ಆಗ್ರಹವನ್ನು ಸರ್ವೋಚ್ಚ ನ್ಯಾಯಾಲಯವು ತಳ್ಳಿಹಾಕಿದೆ.

ಪಾಕಿಸ್ತಾನದ ಗುಪ್ತಚರ ಸಂಘಟನೆ ಐ.ಎಸ್.ಐ. ಮಾಜಿ ಮುಖ್ಯಸ್ಥ ಭಾರತದ ಗುಪ್ತಚರ (ನಂತೆ) ! – ಪಾಕಿಸ್ತಾನದ ಆರೋಪ

ಪಾಕಿಸ್ತಾನದ ಗುಪ್ತಚರ ಸಂಘಟನೆ ಐ.ಎಸ್.ಐ.ನ ಮಾಜಿ ಮುಖ್ಯಸ್ಥ (ಇಂಟರ್ ಸರ್ವಿಸ್ ಇಂಟೆಲಿಜೆನ್ಸ್ ನ) ಜನರಲ್ ಅಸದ ದುರ್ರ‍ಾನಿ ಇವರು ಭಾರತೀಯ ಗುಪ್ತಚರ ಸಂಘಟನೆ ‘ರಾ’ದ (ರಿಸರ್ಚ್ ಆಂಡ್ ಎನಾಲಿಸಿಸ್ ವಿಂಗ್’ನ) ಗುಪ್ತಚರರಾಗಿದ್ದರು ಎಂದು ಪಾಕಿಸ್ತಾನ ಸರಕಾರವು ಹೇಳಿದೆ.