ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡಣೆ ಆದಾಯ ತೆರಿಗೆಯಲ್ಲಿ ಹೊಸ ವಿನಾಯಿತಿ ಇಲ್ಲ!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರು ಫೆಬ್ರವರಿ ೧ ರಂದು ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡಿಸಿದರು. ಸಾಮಾನ್ಯವಾಗಿ ಜನರು ನಿರೀಕ್ಷಿಸುವಂತಹ ಆದಾಯ ತೆರಿಗೆಯಲ್ಲಿ ಯಾವುದೇ ಹೊಸ ರಿಯಾಯ್ತಿಯನ್ನು ನೀಡಲಾಗಿಲ್ಲ ಎಂದು ಸಾರ್ವಜನಿಕರು ನಿರಾಶೆಗೊಂಡಿದ್ದಾರೆ; ಆದಾಗ್ಯೂ, ೭೫ ವರ್ಷಕ್ಕಿಂತ ಮೇಲ್ಪಟ್ಟವರಿಗೆ ‘ಐಟಿ ರಿಟರ್ನ್ಸ್’ನಿಂದ ವಿನಾಯಿತಿ ನೀಡಲಾಗಿದೆ.

ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಾಗುವ ಕಾರ್ಯಕ್ರಮಗಳನ್ನು ನಿಯಂತ್ರಿಸಲು ಮಾರ್ಗದರ್ಶಕ ಸೂಚನೆಗಳನ್ನು ನೀಡಲಾಗುವುದು! – ಕೇಂದ್ರ ಸರಕಾರ

ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ಕೆಲವು ವೆಬ್ ಸರಣಿಗಳ ವಿರುದ್ಧ ಹಲವಾರು ದೂರುಗಳು ಬಂದಿವೆ. ಒಟಿಟಿಯಲ್ಲಿ ಪ್ರದರ್ಶಿಸಲಾಗುವ ಚಲನಚಿತ್ರಗಳು ಮತ್ತು ಸರಣಿಗಳು ಡಿಜಿಟಲ್ ಪತ್ರಿಕೆಗಳು, ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳು (ನಿಯಂತ್ರಣ) ಕಾಯ್ದೆ ಅಥವಾ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಇನ್ಸ್‌ಪೆಕ್ಷನ್ (ಸೆನ್ಸಾರ್ ಬೋರ್ಡ್) ವ್ಯಾಪ್ತಿಗೆ ಬರುವುದಿಲ್ಲ.

ದೆಹಲಿಯ ಇಸ್ರೇಲಿ ರಾಯಭಾರಿ ಕಚೇರಿಯ ಬಳಿ ಬಾಂಬ್ ಸ್ಫೋಟಿಸಲು ಸೈನ್ಯವು ಬಳಸುವ ಸ್ಫೋಟಕಗಳ ಬಳಕೆ

ನವ ದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿ ಬಳಿ ನಡೆದ ಬಾಂಬ್ ಸ್ಫೋಟದಲ್ಲಿ ಪಿಇಟಿಎನ್ ಮಾದರಿಯ ಸ್ಫೋಟಕಗಳನ್ನು ಬಳಸಲಾಗಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ.

ರಾಷ್ಟ್ರಧ್ವಜವನ್ನು ಅವಮಾನಿಸಿದವನನ್ನು ಬಂಧಿಸಿ! – ಪ್ರಧಾನಮಂತ್ರಿ ಮೋದಿಗೆ ರಾಕೇಶ್ ಟಿಕೈತ್ ಪ್ರತ್ಯುತ್ತರ

‘ದೇಶದ ರಾಷ್ಟ್ರಧ್ವಜವು ಕೇವಲ ಪ್ರಧಾನಮಂತ್ರಿಯವರಿಗೆ ಮಾತ್ರ ಸೀಮಿತವಾಗಿದೆಯೇ? ಇಡೀ ದೇಶಕ್ಕೆ ರಾಷ್ಟ್ರಧ್ವಜದ ಮೇಲೆ ಪ್ರೀತಿಯಿದೆ. ಹಾಗಾಗಿ ದೇಶದ ಧ್ವಜವನ್ನು ಅವಮಾನಿಸಿದ ವ್ಯಕ್ತಿಯನ್ನು ಬಂಧಿಸಿ’ ಎಂದು ರೈತ ಮುಖಂಡ ರಾಕೇಶ್ ಟಿಕೈತ್ ಇವರು ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಪ್ರತಿಕ್ರಯಿಸಿದ್ದಾರೆ.

ಅನಂತ್‌ನಾಗ್‌ನಲ್ಲಿ ಶಸ್ತ್ರಾಸ್ತ್ರಗಳ ಸಹಿತ ೬ ಭಯೋತ್ಪಾದಕರ ಬಂಧನ

ಲಷ್ಕರ್-ಎ-ಮುಸ್ತಫಾ ಎಂಬ ಹೊಸ ಜಿಹಾದಿ ಸಂಘಟನೆಯ ಇಬ್ಬರು ಉಗ್ರಗಾಮಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ ನಂತರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ೪ ಜೈಶ್-ಎ-ಮೊಹಮ್ಮದ್ ಉಗ್ರರನ್ನು ಬಂಧಿಸಿದ್ದಾರೆ.

ರಸ್ತೆ ಅಪಘಾತದ ಚಿಕಿತ್ಸೆಗಾಗಿ ಕೇಂದ್ರ ಸರಕಾರದಿಂದ ೧.೫ ಲಕ್ಷ ರೂ. ವರೆಗಿನ ’ನಗದುರಹಿತ’ ಯೋಜನೆ

ದೇಶದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ೧.೫ ಲಕ್ಷ ರೂ.ಗಳವರೆಗೆ ನಗದು ರಹಿತ ನೆರವಿನ ಯೋಜನೆಯನ್ನು ಕೇಂದ್ರ ಸರಕಾರವು ೨೦೨೧-೨೦೨೨ ರಲ್ಲಿ ಜಾರಿಗೆ ತರುವ ಸಾಧ್ಯತೆಯಿದೆ.

ಕೊರೋನಾ ವಿರುದ್ಧದ ಲಸಿಕೆಯನ್ನು ನೀಡುವಲ್ಲಿ ಕರಿಯರಿಗಿಂತ ಬಿಳಿಯರಿಗೆ ಆದ್ಯತೆ ನೀಡುತ್ತಿರುವ ಅಮೇರಿಕಾ

ಅಮೇರಿಕಾದಲ್ಲಿ ಲಸಿಕೆ ನೀಡುವಲ್ಲಿ ವರ್ಣದ್ವೇಷ ಮಾಡಲಾಗುತ್ತಿದೆ ಎಂದು ಕೇಳಿಬರುತ್ತಿದೆ. ಅಮೇರಿಕಾದಲ್ಲಿ ಕೊರೋನಾ ಸೋಂಕು ತಗಲಿದವರಲ್ಲಿ ಕರಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 

ಚೀನಾದಲ್ಲಿ ೨ ಸಾವಿರ ಕೋಟಿ ರೂ. ಭ್ರಷ್ಟಾಚಾರ ಮಾಡಿದ ಬ್ಯಾಂಕ್ ಅಧಿಕಾರಿಗೆ ಗಲ್ಲುಶಿಕ್ಷೆ

೨ ಸಾವಿರ ೧೯ ಕೋಟಿ ೫೩ ಲಕ್ಷ ರೂ.ಗಳ ವಿವಿಧ ಭ್ರಷ್ಟಾಚಾರ ಹಗರಣಗಳಿಗೆ ಸಂಬಂಧಿಸಿದಂತೆ ಮಾಜಿ ಬ್ಯಾಂಕ್ ಅಧಿಕಾರಿಗೆ ಚೀನಾದಲ್ಲಿ ಮರಣದಂಡನೆ ವಿಧಿಸಲಾಗಿದೆ.

ದೆಹಲಿ ಸ್ಫೋಟದ ಹೊಣೆ ಹೊತ್ತ ಜೈಶ್-ಉಲ್-ಹಿಂದ್ ಅಲ್ಲಾಹನ ಕೃಪೆ ಮತ್ತು ಸಹಾಯದಿಂದ ಸ್ಫೋಟ ಮಾಡಲು ಸಾಧ್ಯವಾಯಿತು!

ರಾಜಧಾನಿಯಲ್ಲಿರುವ ಇಸ್ರೇಲಿ ರಾಯಭಾರಿ ಕಚೇರಿಯ ಮುಂದೆ ನಡೆದ ಸ್ಫೋಟವನ್ನು ತಾವೇ ನಡೆಸಿರುವುದಾಗಿ ಜೈಶ್-ಉಲ್-ಹಿಂದ್ ಉಗ್ರ ಸಂಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದೆ.

ದೆಹಲಿಯ ಬಾಂಬ್ ಸ್ಫೋಟ ಪ್ರಕರಣ ‘ಇದು ಕೇವಲ ಟ್ರೈಲರ್’ – ಬೆದರಿಕೆ ಪತ್ರ !

ನವದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿಯ ಬಳಿ ನಡೆದ ಬಾಂಬ್ ಸ್ಫೋಟದ ಸ್ಥಳದಲ್ಲಿ ಪೊಲೀಸರಿಗೆ ಒಂದು ಪತ್ರವು ಸಿಕ್ಕಿದೆ. ಅದರಲ್ಲಿ, ಇರಾನ್‌ನ ‘ರೆವೆಲ್ಯೂಷನರಿ ಗಾರ್ಡ್ ಕಾರ್ಪ್ಸ್’ನ ಮುಖ್ಯಸ್ಥ ಜನರಲ್ ಕಾಸಿಮ್ ಸುಲೈಮಾನಿ ಮತ್ತು ವಿಜ್ಞಾನಿ ಮೊಹ್ಸಿನ್ ಫಖ್ರಿಜಾದೆಹ ಅವರನ್ನು “ಹುತಾತ್ಮ” ಎಂದು ಕರೆದಿದ್ದು, ಮತ್ತು ಇದು ಕೇವಲ ಟ್ರೈಲರ್ ಎಂದು ಬರೆಯಲಾಗಿದೆ.