ಪಂಜಾಬನಲ್ಲಿ ಯುವ ಕಾಂಗ್ರೆಸ್ ಮುಖಂಡ ಮೇಲೆ ಅತ್ಯಾಚಾರದ ಅಪರಾಧ ದಾಖಲು

ಓರ್ವ ದಾದಿಯ ಮೇಲೆ ಅತ್ಯಾಚಾರ ಎಸಗಿ ಆಕೆಯ ಫೋಟೋಗಳನ್ನು ಸಾರ್ವಜನಿಕಗೊಳಿಸುವುದಾಗಿ ಬೆದರಿಕೆಯೊಡ್ಡಿ ಆಕೆಯಿಂದ ೪ ಲಕ್ಷ ರೂಪಾಯಿ ಪಡೆಯಲು ಪ್ರಯತ್ನಿಸಿದ ಪ್ರಕರಣದಲ್ಲಿ ಯುವ ಕಾಂಗ್ರೆಸ್ ಮುಖಂಡ ವರುಣ್ ಜೋಶಿ ವಿರುದ್ಧ ಅಪರಾಧ ದಾಖಲಾದ ನಂತರ ಜೋಶಿ ಪರಾರಿಯಾಗಿದ್ದಾನೆ.

ದೆಹಲಿಯ ಶಾಹೀನ್‌ಬಾಗ್‌ದಲ್ಲಿ ಪುನಃ ಕಾನೂನುಬಾಹಿತ ಪ್ರತಿಭಟನೆ ನಡೆಸಲು ಮತಾಂಧರ ಸಂಚು

ಸಂಚಾರ ನಿಷೇಧದ ಮೊದಲು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಶಾಹೀನ್ ಬಾಗ್‌ನಲ್ಲಿ ಮತಾಂಧರು ಕಾನೂನುಬಾಹಿರವಾಗಿ ಪ್ರತಿಭಟನೆಯನ್ನು ನಡೆಸಿದ್ದರು. ಸಂಚಾರ ನಿಷೇಧ ಜಾರಿಯಾದ ಮೇಲೆ ಪೊಲೀಸರು ಈ ಪ್ರತಿಭಟನೆಯನ್ನು ಮೊಟಕುಗೊಳಿಸಿದ್ದರು; ಆದರೆ ಈಗ ಮತಾಂಧರು ಪುನಃ ಇಲ್ಲಿ ಪ್ರತಿಭಟನೆಯನ್ನು ಪ್ರಾರಂಭಿಸುವ ಸಿದ್ಧತೆಯಲ್ಲಿದ್ದಾರೆ.

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಶಿವಾಜಿ ರಾಜ್ಯಾಭಿಷೇಕ ದಿನ’ ನಿಮಿತ್ತ ಹಿಂದಿ ಭಾಷೆಯಲ್ಲಿ ವಿಶೇಷ ‘ಆನ್‌ಲೈನ್’ಕಾರ್ಯಕ್ರಮ !

ಮೊಘಲರ ಅತ್ಯಾಚಾರದಿಂದ ತತ್ತರಿಸಿ ಹೋಗಿದ್ದ ಹಿಂದೂಗಳನ್ನು ಮೊಘಲರ ವಿರುದ್ಧ ಎದ್ದು ನಿಲ್ಲುವ ಅದಮ್ಯ ಸಾಹಸ ತೋರಿದ ಹಾಗೂ ಹಿಂದವಿ ಸ್ವರಾಜ್ಯದ ಬುನಾದಿ ಕಟ್ಟಿದ ಛತ್ರಪತಿ ಶಿವಾಜಿ ಮಹಾರಾಜರ ಶಿವಾಜಿ ರಾಜ್ಯಾಭಿಷೇಕ ದಿನವನ್ನು ಜೂನ್ ೬ ರಂದು ಆಚರಿಸಲಾಗುತ್ತಿದೆ.

ಅಮರನಾಥ ಯಾತ್ರೆ ಜೂನ್ ೨೩ ರಿಂದ ಆರಂಭ

ಹಿಂದೂಗಳ ಪ್ರಸಿದ್ಧ ಅಮರನಾಥ ಯಾತ್ರೆ ಜೂನ್ ೨೩ ರಿಂದ ಆರಂಭವಾಗುತ್ತಿದೆ. ಯಾತ್ರೆಗೆ ಮುಂಚಿತವಾಗಿ, ಅಂದರೆ ಜೇಷ್ಠ ಹುಣ್ಣಿಮೆಯಂದು ಆಗುವ ಮೊದಲ ಪೂಜೆಯು ಈ ವರ್ಷ ಜಮ್ಮುವಿನ ‘ಶ್ರೀ ಅಮರನಾಥ ಶ್ರೈನ್ ಬೋರ್ಡ್’ನ ಕಚೇರಿ ಆವರಣದಲ್ಲಿ ಅಥವಾ ಚಂದನ್‌ಬಾಡಿಯಲ್ಲಿ ನಡೆಯಲಿದೆ. ಇಲ್ಲಿಯವರೆಗೆ ಈ ಪೂಜೆ ದಕ್ಷಿಣ ಕಾಶ್ಮೀರದ ಚಂದನ್‌ಬಡಿಯಲ್ಲಿ ನಡೆಯುತ್ತಿತ್ತು.

ಅಮೇರಿಕಾದಲ್ಲಿಯ ಜಾರ್ಜ್ ಫ್ಲಾಯ್ಡ್‌ನ ಹತ್ಯೆಯ ಬಗ್ಗೆ ಮಾತನಾಡುವ ಭಾರತೀಯ ಚಲನಚಿತ್ರದ ನಟರು ಪಾಲಘರ್‌ನಲ್ಲಿ ಆಗಿದ್ದ ಸಾಧುಗಳ ಹತ್ಯೆಯ ಬಗ್ಗೆ ಮಾತನಾಡುವುದಿಲ್ಲ ! – ನಟಿ ಕಂಗನಾ ರನೌತ್

ಅಮೆರಿಕಾದ ಮಿನ್ನಿಯಾಪೋಲಿಸ್‌ನಲ್ಲಿ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ವರ್ಣೀಯ ವ್ಯಕ್ತಿಯ ಹತ್ಯೆಯ ಬಗ್ಗೆ ಮಾತನಾಡುವ ಭಾರತೀಯ ಚಲನಚಿತ್ರದ ನಟರು ಪಾಲಘರನಲ್ಲಿ ಆಗಿದ್ದ ಸಾಧುಗಳ ಹತ್ಯೆಯ ಬಗ್ಗೆ ಮಾತನಾಡಲಿಲ್ಲ ಎಂದು ನಟಿ ಕಂಗನಾ ರನೌತ್ ಟೀಕಿಸಿದ್ದಾರೆ. ಈ ಹತ್ಯೆಯನ್ನು ಖಂಡಿಸಿ ನಡೆಯುತ್ತಿರುವ ‘ಕಪ್ಪು ವರ್ಣದವರ ಅಸ್ತಿತ್ವದ ಪ್ರಶ್ನೆ’ (‘ಬ್ಲ್ಯಾಕ್ ಲೀವ್ಸ್ ಮ್ಯಾಟರ್’) ಈ ಅಭಿಯಾನವನ್ನು ರನೌತ್ ಬೆಂಬಲಿಸಲಿಲ್ಲ.

ಹಿಂದುತ್ವನಿಷ್ಠ ನಾಯಕ ಭರತ್ ವೈಷ್ಣವ್ ಇವರ ಕೊಲೆ ಪ್ರಕರಣದಲ್ಲಿ ರಶೀದ್ ಖಾನ್ ಮತ್ತು ಅಮ್ಜದ್ ಸೈಯದ್‌ಬಂಧನ

ಹಿಂದುತ್ವನಿಷ್ಠ ನಾಯಕ ಭರತ್ ವೈ?ವ ಇವರನ್ನು ೨೭ ಮೇ ೨೦೨೦ ರಂದು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಶೀದ್ ಖಾನ್ ಮತ್ತು ಅಮ್ಜದ್ ಸೈಯದ್ ಅವರನ್ನು ಬಂಧಿಸಲಾಗಿದೆ ಎಂದು ಸಾದಡಿ ಪೊಲೀಸ ಠಾಣೆಯ ಅಧಿಕಾರಿ ರವೀಂದ್ರ ಪ್ರತಾಪ ಸಿಂಗ್ ಮಾಹಿತಿಯನ್ನು ನೀಡಿದ್ದಾರೆ. ಆರೋಪಿಗಳಿಂದ ಬಂದೂಕು ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಪುಲ್ವಾಮಾದಲ್ಲಿ ಗುಂಡಿನ ಚಕಮಕಿಯಲ್ಲಿ ಜೈಶ್-ಎ-ಮೊಹಮ್ಮದ್‌ನ ಉಗ್ರರ ಹತ್ಯೆ

ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕಂಗನ್ ವಾನಪೊರಾ ಪ್ರದೇಶದಲ್ಲಿ ಜೂನ್ ೨ ರಂದು ಭಾರತೀಯ ಸೈನಿಕರ ಹಾಗೂ ‘ಜೈಶ-ಎ-ಮಹಮ್ಮದ’ನ ಭಯೋತ್ಪಾದಕರ ನಡುವೆ ತಡರಾತ್ರಿವರೆಗೆ ಗುಂಡಿನ ಚಕಮಕಿ ನಡೆಯುತ್ತಿತ್ತು. ಇದರಲ್ಲಿ ೩ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಈ ಕಾರ್ಯಾಚರಣೆಯನ್ನು ಕೇಂದ್ರ ರಾಜ್ಯ ರಿಸರ್ವ್ ಪೊಲೀಸ್ ಪಡೆ ಮತ್ತು ೫೫ ರಾಷ್ಟ್ರೀಯ ರೈಫಲ್ಸ್ ಜಂಟಿಯಾಗಿ ನಡೆಸಿದೆ.

ದೆಹಲಿಯಲ್ಲಿ ಬಿಜೆಪಿ ನಾಯಕನ ಹಾಡುಹಗಲೇ ಗುಂಡಿಕ್ಕಿ ಹತ್ಯೆ

ಪೂರ್ವ ದೆಹಲಿಯ ಪಶ್ಚಿಮ ವಿನೋದನಗರದಲ್ಲಿ ಬಿಜೆಪಿ ನಾಯಕ ರಾಹುಲ್ ಸಿಂಗ್ ಊರ್ಫ್ ಭೂರು ಸಿಂಗ್‌ನನ್ನು ಅಜ್ಞಾತರು ಗುಂಡಿಕ್ಕಿ ಕೊಂದಿದ್ದರು. ಜೂನ್ ೩ ರ ಬೆಳಿಗ್ಗೆ ರಾಹುಲ್ ಸಿಂಗ್ ಅವರು ವಾಯುವಿಹಾರಕ್ಕಾಗಿ ಹೊರಟಿದ್ದಾಗ ಮಯೂರ್ ಪಬ್ಲಿಕ್ ಸ್ಕೂಲ್ ಬಳಿ ಅಜ್ಞಾತರು ಅವರ ಮೇಲೆ ಆರು ಬಾರಿ ಗುಂಡುಗಳನ್ನು ಹಾರಿಸಿದರು.

ಉತ್ತರಪ್ರದೇಶದಲ್ಲಿ ಹಿಂದೂ ಹೆಸರನ್ನು ಇಟ್ಟುಕೊಂಡು ಹಿಂದೂ ಯುವತಿಯೊಂದಿಗೆ ಮದುವೆಯಾದ ಮತಾಂಧನಿಂದ ಆಕೆಯ ಬರ್ಬರ ಹತ್ಯೆ

ದೌರಾಲಾದ ಲಾಹಿಯಾ ಗ್ರಾಮದಲ್ಲಿ ಶಕೀಬ್ ಎಂಬ ಮತಾಂಧನು ಏಕತಾ ಎಂಬ ಹಿಂದೂ ಯುವತಿಯೊಂದಿಗೆ ಮದುವೆಯಾದನು. ನಂತರ ಅವಳ ಕುಟುಂಬದ ಸಹಾಯದಿಂದ ತಂಪು ಪಾನೀಯದಲ್ಲಿ ಮೂರ್ಛೆಯ ಔಷಧಿಯನ್ನು ನೀಡಲಾಯಿತು. ಆಕೆ ಪ್ರಜ್ಞೆ ತಪ್ಪಿದಾಗ ಅವಳ ದೇಹವನ್ನು ತುಂಡರಿಸಲಾಯಿತು. ಮೃತದೇಹದ ಕೈ, ಕಾಲುಗಳು ಮತ್ತು ತಲೆಯನ್ನು ಸರೋವರಕ್ಕೆ ಎಸೆದರೆ, ಮುಂಡವನ್ನು ಕಾಡಿನಲ್ಲಿ ಎಸೆಯಲಾಯಿತು.

ಅನಾನಸ್ ಮೂಲಕ ಪಟಾಕಿಯನ್ನು ತಿನ್ನಿಸಿದ ಪರಿಣಾಮ ಹೊಟ್ಟೆಯಲ್ಲಿ ಸ್ಫೋಟಗೊಂಡು ಗರ್ಭಿಣಿ ಆನೆಯನ್ನು ಒದ್ದಾಡುತ್ತಾ ಸಾವು

ಕೇರಳದ ಮಲಪ್ಪುರಂನಲ್ಲಿ ಕೆಲವು ನಿರ್ದಯ ಜನರು ಗರ್ಭಿಣಿ ಆನೆಗೆ ಪಟಾಕಿ ತುಂಬಿದ ಅನಾನಸ್ ಅನ್ನು ತಿನ್ನಿಸಿದ್ದರಿಂದ ಗರ್ಭದಲ್ಲಿ ಬೆಳೆಯುತ್ತಿರುವ ಮರಿಆನೆಯೊಂದಿಗೆ ಆ ಆನೆಯೂ ಸಾವನ್ನಪ್ಪಿದ ಘಟನೆ ಇತ್ತಿಚೆಗೆ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ಹಂಚಿಕೊಂಡಾಗ ಜನರು ಆಕ್ರೋಶಗೊಂಡರು.